ನಟನೆಯ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಹಿಮಾಚಲ ಪ್ರದೇಶದ ಸಂಸದೆಯಾಗಿರುವ ಕಂಗನಾ ರನೌತ್ ಅವರು ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್ ಎಂಬ ಮೂವರು ಖಾನ್‌ಗಳನ್ನು ಕೂಡಿಸಿ ನಿರ್ದೇಶಿಸುವ ಆಸೆ ವ್ಯಕ್ತಪಡಿಸಿದ್ದಾರೆ.
ತಮ್ಮ ಮುಂಬರುವ ಚಿತ್ರ ‘ಎಮರ್ಜೆನ್ಸಿ’ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಂಗನಾ, ಮುಂದೊಂದು ದಿನ ಎಲ್ಲ ಮೂವರು ಖಾನ್ಗಳೊಂದಿಗೆ (ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಅಮೀರ್ ಖಾನ್) ಚಿತ್ರ ನಿರ್ದೇಶಿಸಲು ಇಷ್ಟಪಡುತ್ತೇನೆ. ನಾನು ಅವರ ಪ್ರತಿಭಾನ್ವಿತ ಭಾಗವನ್ನು ತೋರಿಸಲು ಇಷ್ಟಪಡುತ್ತೇನೆ. ಅವರು ತುಂಬಾ ಪ್ರತಿಭಾವಂತರು ಮತ್ತು ಉದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ನಾವು ಕೃತಜ್ಞರಾಗಿರಬೇಕು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ನೂರರ ನೆನಪು | ನಗೆರಾಜ ನರಸಿಂಹರಾಜು ಅಜರಾಮರ
ಆಗಸ್ಟ್ 14 ರಂದು ಇಂದು ಕಂಗನಾ ಅವರ ‘ಎಮರ್ಜೆನ್ಸಿ’ ಟ್ರೇಲರ್ ಬಿಡುಗಡೆಯಾಗಿದೆ. ಬಿಡುಗಡೆಗೆ ಹಾಜರಾಗುವ ಮೊದಲು, ಅವರು ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, “ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡುವ ಕಲ್ಪನೆಯ ಪರಿಕಲ್ಪನೆಯಿಂದ, ಚಲನಚಿತ್ರ ನಿರ್ಮಾಪಕರಾಗುವುದಕ್ಕಿಂತ ಹೆಚ್ಚು ಸಂತೋಷಕರವಾದದ್ದು ಯಾವುದೂ ಇಲ್ಲ. ಇಂದು ಬಹಳ ಸಂತೋಷವಾಗಿದೆ. ನಿಮ್ಮೆಲ್ಲರ ಭಾಗವಾಗಲು ಕಾಯುತ್ತಿದ್ದೆ, ಕಥೆಯನ್ನು ಹೇಳುವುದಕ್ಕಿಂತ ಹೆಚ್ಚು ಆಪ್ತವಾದುದೇನೂ ಇಲ್ಲ. ನಿಮ್ಮ ಮನಸ್ಸು ಮತ್ತು ಭಾವನೆಗಳನ್ನು ಪ್ರವೇಶಿಸಿ ನಿಮ್ಮ ಗ್ರಹಿಕೆಯನ್ನು ಹಂಚಿಕೊಳ್ಳಲು ಅವಕಾಶ ನೀಡುವುದಕ್ಕಿಂತ ಹೆಚ್ಚು ಖುಷಿಯ ವಿಚಾರ ಮತ್ಯಾವುದು ಇಲ್ಲ” ಎಂದು ತಿಳಿಸಿದ್ದಾರೆ.
ಕಂಗನಾ ರನೌತ್ ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಪಾತ್ರವನ್ನು ದೊಡ್ಡ ಪರದೆಯ ಮೇಲೆ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ ಮತ್ತು ಶ್ರೇಯಸ್ ತಲ್ಪಾಡೆ ಮುಂತಾದವರು ನಟಿಸಿದ್ದಾರೆ. ಚಿತ್ರ ಸೆಪ್ಟೆಂಬರ್ 6 ರಂದು ಬಿಡುಗಡೆಯಾಗಲಿದೆ.