ʼಮೋದಿʼ ಉಪನಾಮ ʼಭ್ರಷ್ಟಾಚಾರʼಕ್ಕೆ ಸಮ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ ಮೇಲೆ ಕ್ರಮ ಏಕಿಲ್ಲ?

Date:

ಮೋದಿ ನವಭಾರತದ ಹಿಟ್ಲರ್‌ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ

ನಟಿಯ ಹಳೆಯ ಟ್ವೀಟ್‌ ಕೆದಕಿ ಪ್ರಶ್ನೆಗಳ ಸುರಿಮಳೆಗೈದ ನೆಟ್ಟಿಗರು

ಮೋದಿ ಉಪನಾಮದ ವಿವಾದಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಆದರೆ, ಇದೇ ಮೋದಿ ಉಪನಾಮ ಭ್ರಷ್ಟಾಚಾರಕ್ಕೆ ಸಮ ಎಂದಿದ್ದ ಬಿಜೆಪಿ ನಾಯಕಿ ಖುಷ್ಬೂ ಸುಂದರ್‌ ಅವರ ಮೇಲೆ ಬಿಜೆಪಿ ವರಿಷ್ಠರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ರಾಹುಲ್‌ ಗಾಂಧಿ ಮೋದಿ ಉಪನಾಮದ ಕುರಿತು ಬಹಿರಂಗ ಟೀಕೆ ಮಾಡಿದ್ದು 2019ರ ಲೋಕಸಭಾ ಚುನಾವಣೆ ವೇಳೆ. ಆದರೆ, ಅದಕ್ಕೂ ಮುನ್ನ ಅಂದರೆ 2018ರ ಫೆಬ್ರವರಿ 15ರಂದು ಟ್ವೀಟ್‌ ಮಾಡಿದ್ದ ಖುಷ್ಬೂ, “ಇಲ್ಲಿ ಮೋದಿ, ಅಲ್ಲಿ ಮೋದಿ, ಎಲ್ಲಿ ನೋಡಿದರೂ ಮೋದಿ. ಪ್ರತಿ ಮೋದಿ ಉಪನಾಮದ ಮುಂದೆ ಭ್ರಷ್ಟಾಚಾರ ಅಂಟಿಕೊಂಡಿದೆ. ಮೋದಿ ಉಪನಾಮದ ಸಮನಾರ್ಥಕವೇ ಭ್ರಷ್ಟಾಚಾರ. ಮೋದಿ ಉಪನಾಮದ ಭಾವಾರ್ಥವನ್ನು ಭ್ರಷ್ಟಾಚಾರ ಎಂದೇ ಬದಲಿಸೋಣ. ನೀರವ್‌, ಲಲಿತ್‌, ನರೇಂದ್ರ ಮೋದಿ ಈ ಹೆಸರುಗಳು ಭ್ರಷ್ಟಾಚಾರಕ್ಕೆ ಸಮ” ಎಂದಿದ್ದರು.

ಹೀಗೆ ಮೋದಿ ಉಪನಾಮವನ್ನು ಭ್ರಷ್ಟಾಚಾರಕ್ಕೆ ಹೋಲಿಸಿ ಟ್ವೀಟ್‌ ಮಾಡಿದ್ದ ಖುಷ್ಬೂ ಅವರ ಮೇಲೆ ಬಿಜೆಪಿ ನಾಯಕರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಖುಷ್ಬೂ ಕೂಡ ಮೋದಿ ಉಪನಾಮವುಳ್ಳ ಎಲ್ಲರ ಅವಹೇಳನ ಮಾಡಿದ್ದಾರೆ. ಅವರಿಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಎಂದು ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ನೆಟ್ಟಿಗರು ಮತ್ತು ಕಾಂಗ್ರೆಸ್‌ ಕಾರ್ಯಕರ್ತರು 5 ವರ್ಷ ಹಳೆಯ ಟ್ವೀಟ್‌ ಕೆದಕಿ ತಮ್ಮ ಮೇಲೆ ಕ್ರಮಕ್ಕೆ ಆಗ್ರಹಿಸುತ್ತಲೇ ಸರಣಿ ಟ್ವೀಟ್‌ ಮೂಲಕ ಆಕ್ಷೇಪ ವ್ಯಕ್ತ ಪಡಿಸಿರುವ ಖುಷ್ಬೂ, “ಆವತ್ತಿಗೆ ಕಾಂಗ್ರೆಸ್‌ ವಕ್ತಾರೆಯಾಗಿ ನಾನು ರಾಹುಲ್‌ ಗಾಂಧಿ ಅವರ ಮಾತುಗಳನ್ನು ಅನುಕರಿಸಿದ್ದೇನೆ. ಭ್ರಷ್ಟ ಮತ್ತು ಕಳ್ಳ ಎಂಬ ಎರಡು ಪದಗಳ ನಡುವಿನ ವ್ಯತ್ಯಾಸ ಅರಿತುಕೊಳ್ಳಿ ಎನ್ನುವ ಮೂಲಕ ಮತ್ತೆ ನಗೆ ಪಾಟಲಿಗೀಡಾಗಿದ್ದಾರೆ.

2018ರ ಹೊತ್ತಿಗೆ ತಮಿಳುನಾಡು ಕಾಂಗ್ರೆಸ್‌ ವಕ್ತಾರೆಯಾಗಿದ್ದ ಖುಷ್ಬೂ, ತಾವು ಮಾಡಿದ್ದ ಟ್ವೀಟ್‌ ತಮ್ಮ ಸ್ವಂತ ಬುದ್ಧಿಯನ್ನು ಬಳಸಿ ಮಾಡಿದ್ದಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಭ್ರಷ್ಟ ಎನ್ನುವುದಕ್ಕೆ ಮತ್ತು ಕಳ್ಳ ಎನ್ನುವುದಕ್ಕೆ ವ್ಯತ್ಯಾಸವಿದೆ ಎಂದು ಹೊಸದಾಗಿ ಟ್ವೀಟ್‌ ಮಾಡುವ ಮೂಲಕ ತಾವು ಆವತ್ತು ಮೋದಿಯವರನ್ನು ಭ್ರಷ್ಟ ಎಂದಿದ್ದು ನಿಜವೆಂದು ನಟಿ ಮತ್ತೊಮ್ಮೆ ಸಾಬೀತು ಮಾಡಿದಂತಾಗಿದೆ.

ಇಷ್ಟಕ್ಕೆ ಸುಮ್ಮನಾಗದ ನೆಟ್ಟಿಗರು ಈ ಹಿಂದೆ ಖುಷ್ಬೂ, “ಪ್ರಧಾನಿ ಮೋದಿ ನವಭಾರತದ ಹೊಸ ಹಿಟ್ಲರ್‌?” ಎಂದಿದ್ದ ಟ್ವೀಟ್‌ ಅನ್ನು ಕೆದಕಿದ್ದಾರೆ. ನಟಿಯ ಹಳೆಯ ಟ್ವೀಟ್‌ನ ಸ್ಕ್ರೀನ್‌ಶಾಟ್‌ ಅನ್ನು ಬಳಸಿ ನಟಿಗೆ ಪ್ರಶ್ನೆ ಹಾಕಿರುವ ಟ್ವಿಟರ್‌ ಬಳಕೆದಾರ ಖಾದರ್‌, “ಈ ಟ್ವೀಟ್‌ ಮಾಡುವಂತೆ ನಿಮಗೆ ರಾಹುಲ್‌ ಗಾಂಧಿಯವರೇ ಹೇಳಿದ್ದರೇ ಎಂದು ವ್ಯಂಗ್ಯವಾಡಿದ್ದಾರೆ.

2019ರ ಲೋಕಸಭಾ ಚುನಾವಣೆಯ ವೇಳೆ ಕರ್ನಾಟಕದ ಕೋಲಾರದಲ್ಲಿ ಬಹಿರಂಗ ಪ್ರಚಾರ ಸಭೆಯಲ್ಲಿ ಬಿಜೆಪಿಗರ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾ, “ಎಲ್ಲಾ ಕಳ್ಳರು ತಮ್ಮ ಹೆಸರಿನ ಹಿಂದೆ ಮೋದಿ ಎಂಬ ಉಪನಾಮನ್ನೇಕೆ ಹೊಂದಿದ್ದಾರೆ” ಎಂದು ವ್ಯಂಗ್ಯವಾಡಿದ್ದರು. ಅವರ ಈ ಹೇಳಿಕೆಯನ್ನು ವಿರೋಧಿಸಿ ಗುಜರಾತ್‌‌ನ ಬಿಜೆಪಿ ಮಾಜಿ ಸಚಿವ ಪೂರ್ಣೇಶ್ ಮೋದಿ ಐಪಿಸಿ ಸೆಕ್ಷನ್ 499 ಮತ್ತು 500 ಅಡಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಇತ್ತೀಚೆಗೆ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ, ಬಳಿಕ ಜಾಮೀನು ಮಂಜೂರು ಮಾಡಿತ್ತು. ಇದಾದ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಲೋಕಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ.

Sanket
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾರಿನೊಳಗೆ ಶವವಾಗಿ ಪತ್ತೆಯಾದ ಮಲಯಾಳಂ ನಟ ವಿನೋದ್ ಥಾಮಸ್

ಮಲಯಾಳಂ ನಟ ವಿನೋದ್ ಥಾಮಸ್ ಕೇರಳದ ಕೊಟ್ಟಾಯಂನ ಪಂಪಾಡಿ ಬಳಿಯ ಹೋಟೆಲ್‌ನಲ್ಲಿ...

ತೆಲಂಗಾಣ ಚುನಾವಣಾ ಹೊಸ್ತಿಲಲ್ಲಿ ಬಿಜೆಪಿಗೆ ರಾಜೀನಾಮೆ ನೀಡಿದ ವಿಜಯಶಾಂತಿ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

ಬಹುಭಾಷಾ ನಟಿ ಹಾಗೂ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ವಿಜಯಶಾಂತಿ ಅವರು...

ಮೊದಲು ಹೊಡೆದು ನಂತರ ಕ್ಷಮೆ ಕೇಳಿದ ನಟ ನಾನಾ ಪಾಟೇಕರ್: ವಿಡಿಯೋ ವೈರಲ್

ಸದಾ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಹಿರಿಯ ನಟ-ನಿರ್ದೇಶಕ ನಾನಾ ಪಾಟೇಕರ್ ಇದೀಗ...

ಬಿಗ್‌ಬಾಸ್ ಶೋನಲ್ಲಿ ಭೋವಿ ಜನಾಂಗಕ್ಕೆ ಅವಹೇಳನ ಆರೋಪ: ಸ್ಪರ್ಧಿ ತನಿಷಾ ವಿರುದ್ಧ ಎಫ್‌ಐಆರ್

ಇತ್ತೀಚೆಗಷ್ಟೇ ಕನ್ನಡದ 'ಬಿಗ್‌ಬಾಸ್ ರಿಯಾಲಿಟಿ ಶೋ'ನಲ್ಲಿ ಸ್ಪರ್ಧಾಳುವಾಗಿದ್ದ ವರ್ತೂರು ಸಂತೋಷ್ ಹುಲಿ...