ಮುಂದಿನ 25 ವರ್ಷಗಳಲ್ಲಿ ಭಾರತ ʼನಂಬರ್‌ 1ʼ ಆಗಲಿದೆ: ಪ್ರಧಾನಿ

Date:

  • ಕರ್ನಾಟಕದ ಜನ ಬದಲಾವಣೆಯನ್ನು ಬಯಸಿದ್ದಾರೆ
  • ಕರುನಾಡಿನ ಅಭಿವೃದ್ದಿಗೆ ನಾನು ಸದಾ ಸಿದ್ದನಿರುತ್ತೇನೆ

ಭಾರತದ ಅಭಿವೃದ್ಧಿ ಪಥದಲ್ಲಿ ದೊಡ್ಡದೊಡ್ಡ ಹೆಜ್ಜೆಗಳನ್ನಿಡುತ್ತಿದೆ. ಇದರ ಪರಿಣಾಮ ಮುಂದಿನ 25ವರ್ಷಗಳಲ್ಲಿ ನಾವು ಜಗತ್ತಿನ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿಗರಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶನಿವಾರ ರಾಜ್ಯ ಪ್ರವಾಸದ ಅಂಗವಾಗಿ ಚಿಕ್ಕಬಳ್ಳಾಪುರಕ್ಕೆ ಬಂದಿಳಿದ ಪ್ರಧಾನಿ, ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಜನ್ಮಸ್ಥಳ ಮುದ್ದೇನಹಳ್ಳಿ ಗ್ರಾಮದಲ್ಲಿನ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಅವರ ಸಾಮಾಜಿಕ ಮತ್ತು ಧಾರ್ಮಿಕ ಸಂಸ್ಥೆಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಈ ಸಂಸ್ಥೆಗಳು ಕೇವಲ ಧರ್ಮ ಮತ್ತು ನಂಬಿಕೆಯ ಸಂದೇಶವನ್ನು ಹರಡಲು ಸಹಾಯ ಮಾಡಿಲ್ಲ.

ಬದಲಿಗೆ ಬಡವರು, ಹಿಂದುಳಿದವರು,ಮಹಿಳೆಯರು, ಬುಡಕಟ್ಟು ಮತ್ತು ಸಮಾಜದ ಇತರ ಅಶಕ್ತ ವರ್ಗಗಳನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿವೆ ಎಂದು ಪ್ರಧಾನಿಗಳು ಹೇಳಿದರು.

ಇಲ್ಲಿನ ಸಮಾರಂಭದ ಬಳಿಕ ಬೆಂಗಳೂರಿಗೆ ತೆರಳಿದ ಪ್ರಧಾನಿ ವೈಟ್ ಫೀಲ್ಡ್ -ಕೆಆರ್ಪುರಂ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದರು.

ನಂತರ ದಾವಣಗೆರೆಯಲ್ಲಿ ನಡೆದ ವಿಜಯಸಂಕಲ್ಪ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಿ ರೋಡ್ ಶೋ ನಡೆಸಿದರು.
ನಂತರ ಸಮಾವೇಶದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು

ಕಾಂಗ್ರೆಸ್ ಪಾಲಿಗೆ ಕರ್ನಾಟಕ ತಿಜೋರಿಯಲ್ಲಿ ಹಣ ಇಡುವ ಜಾಗವಾಗಿದೆ. ಕಾಂಗ್ರೆಸ್ ನವರು ಬರೀ ಸುಳ್ಳು ಹೇಳಿ ಜನರನ್ನ ದಾರಿ ತಪ್ಪಿಸುತ್ತಿದ್ದಾರೆ. ಕರ್ನಾಟಕದ ಅಭಿವೃದ್ದಿಗಾಗಿ, ಇಲ್ಲಿನ ಜನರ ಸೇವೆಗೆ ಬದ್ಧನಾಗಿದ್ದೇನೆ ಎಂದು ಮೋದಿ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಬಿಜೆಪಿಯ ಕುತಂತ್ರಕ್ಕೆ ನಾವು ಹೆದರುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ

ಪ್ರತಿ ಬಿಜೆಪಿ ಕಾರ್ಯಕರ್ತ ನನ್ನ ಮಿತ್ರನಂತೆ, ಸಹೋದರನಿದ್ದಂತೆ ಎಂದ ಪ್ರಧಾನಿಗಳು, ನನಗೆ ಹಲವು ಬಾರಿ ದಾವಣಗೆರೆಗೆ ಬರುವ ಅವಕಾಶ ಸಿಕ್ಕಿದೆ ಪ್ರತಿಬಾರಿ ಬಂದಾಗಲೂ ನಿಮ್ಮ ಆಶೀರ್ವಾದ ಹೆಚ್ಚಾಗುತ್ತಾ ಹೋಗುತ್ತದೆ ಎಂದರು.

ಕಲಬುರಗಿ ಪಾಲಿಕೆ ಚುನಾವಣೆಯಲ್ಲಿನ ಜಯಭೇರಿ ಉಲ್ಲೇಖಿಸಿದ ನರೇಂದ್ರ ಮೋದಿ ಎಐಸಿಸಿ ಅಧ್ಯಕ್ಷರ ತವರು ಕ್ಷೇತ್ರದಲ್ಲೇ ಬಿಜೆಪಿ ಜಯಭೇರಿ ಬಾರಿಸಿದೆ.

ಮೇಯರ್ ಉಪಮೇಯರ್ ಎರಡೂ ಸ್ಥಾನ ಬಿಜೆಪಿ ಗೆದ್ದಿದೆ , ಇದು ಜನ ಯಾವ ಪಕ್ಷ ಬೆಂಬಲಿಸುತ್ತಾರೆ ಎನ್ನುವದಕ್ಕೆ ಇರುವ ಸಾಕ್ಷಿ ಎಂದು ಹೇಳಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭ್ರೂಣ ಲಿಂಗ ಪತ್ತೆ ಪ್ರಕರಣ: ಸಿಐಡಿ ತನಿಖೆಗೊಪ್ಪಿಸಿದ ರಾಜ್ಯ ಸರ್ಕಾರ

ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ಭ್ರೂಣ ಲಿಂಗ ಪತ್ತೆ ಪ್ರಕರಣವನ್ನು ರಾಜ್ಯ...

ಆಸ್ಟ್ರೇಲಿಯನ್ ಹೂಡಿಕೆದಾರರಿಗೆ ಸಿಎಂ ಸಿದ್ದರಾಮಯ್ಯ ಆಹ್ವಾನ

ರಾಜ್ಯದ ಮೂಲಸೌಕರ್ಯ ಅಭಿವೃದ್ಧಿ ವಲಯದಲ್ಲಿ ಹೂಡಿಕೆ ಗ್ರೀನ್ ಫೀಲ್ಡ್...

ಸರ್ಕಾರದ ಉಚಿತ ಕೊಡುಗೆಗಳು ಜನರಲ್ಲಿ ಖರೀದಿಸುವ ಶಕ್ತಿ ಹೆಚ್ಚಿಸುತ್ತವೆ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಇನ್ಫೋಸಿಸ್‌ ಸ್ಥಾಪಕಾಧ್ಯಕ್ಷ ನಾರಾಯಣ ಮೂರ್ತಿ...

ಅನ್ ಬಾಕ್ಸಿಂಗ್ ಬಿಎಲ್‌ಆರ್‌ ಹಬ್ಬಕ್ಕೆ ಚಾಲನೆ ನೀಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಅನ್‌ಬಾಕ್ಸಿಂಗ್ ಬೆಂಗಳೂರು ಫೌಂಡೇಷನ್’ ವತಿಯಿಂದ ಡಿಸೆಂಬರ್‌ 1ರಿಂದ...