ಬಿಡುಗಡೆ ದಿನ | ₹38 ಕೋಟಿ ಬಾಚಿದ ಪೊನ್ನಿಯನ್ ಸೆಲ್ವನ್-2

ಪೊನ್ನಿಯನ್ ಸೆಲ್ವನ್-2
  • ತಮಿಳುನಾಡಿನಲ್ಲಿ 25 ಕೋಟಿ ರೂಪಾಯಿ ಗಳಿಕೆ
  • ನೆಗೆಟಿವ್ ರೋಲ್‌ನಲ್ಲಿ ಮಿಂಚಿದ ಐಶ್ವರ್ಯಾ ರೈ ಬಚ್ಚನ್‌

ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್-2’ ಚಿತ್ರ ಶುಕ್ರವಾರ ಭರ್ಜರಿಯಾಗಿ ತೆರೆಕಂಡಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ₹38 ಕೋಟಿ ಗಳಿಕೆ ಮಾಡಿದೆ.

2022ರಲ್ಲಿ ಪೊನ್ನಿಯನ್ ಸೆಲ್ವನ್ ಭಾಗ 1 ಬಿಡುಗಡೆಯಾಗಿತ್ತು. ಎರಡನೇ ಸುರುಳಿಗಾಗಿ ಸಿನಿಮಾ ಪ್ರಿಯರು ಕಾತುರತೆಯಿಂದ ಕಾಯುತ್ತಿದ್ದರು. ಕಡೆಗೂ ಏಪ್ರಿಲ್ 28ರಂದು ಚಿತ್ರ ಬಿಡುಗಡೆಯಾಗಿದ್ದು, ದೇಶದೆಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

‘ಪೊನ್ನಿಯಿನ್ ಸೆಲ್ವನ್-2’ ಸಿನಿಮಾ ಮೊದಲ ದಿನ ಭಾರತದ ಬಾಕ್ಸ್ ಆಫೀಸ್​ನಲ್ಲಿ ₹38 ಕೋಟಿ ಗಳಿಕೆ ಮಾಡಿದೆ. ತಮಿಳುನಾಡಿನಲ್ಲೇ ಚಿತ್ರ ₹25 ಕೋಟಿ ಗಳಿಕೆ ಮಾಡಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ₹3-4 ಕೋಟಿ, ಕರ್ನಾಟಕದಲ್ಲಿ ₹4-5 ಕೋಟಿ ಬಾಚಿಕೊಂಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚೆಗೆ ರಿಲೀಸ್ ಆದ ಸಲ್ಮಾನ್ ಖಾನ್ ನಟನೆಯ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಮೊದಲ ದಿನದ ಗಳಿಕೆಯನ್ನೂ ಪೊನ್ನಿಯನ್ ಸೆಲ್ವನ್-2 ಸಿನಿಮಾ ಹಿಂದಿಕ್ಕಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.

ಈ ಸುದ್ದಿ ಓದಿದ್ದೀರಾ?: ಕಟ್ಟುಪಾಡು ದಾಟಿ ಹೃದಯ ಸ್ಪರ್ಶಿಸುವ ಬ್ರಹ್ಮಚರ್ಯದ ಗೋಳಿನ ಕತೆ ‘ರಾಘವೇಂದ್ರ ಸ್ಟೋರ್ಸ್‌’

ಚಿಯಾನ್ ವಿಕ್ರಂ, ತ್ರಿಷಾ, ಆದಿತ್ಯ ಕರಿಕಾಳನ್, ನಂದಿನಿ, ಎಆರ್ ರೆಹಮಾನ್ ಸಂಗೀತ ನಿರ್ದೇಶನ ಅತ್ಯುತ್ತಮವಾಗಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಿನಿಮಾಗೆ ಕಮ್ ಬ್ಯಾಕ್ ಆಗಿರುವ ಐಶ್ವರ್ಯಾ ರೈ ಬಚ್ಚನ್‌ ಈ ಚಿತ್ರದಲ್ಲಿ ನೆಗೆಟಿವ್ ರೋಲ್ ಮಾಡಿರುವುದು ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ.

‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ತೆಲುಗು, ಮಲಯಾಳಂ, ಕನ್ನಡ, ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಿದೆ. ಮೊದಲ ಭಾಗದಂತೆ ಎರಡನೇ ಭಾಗಕ್ಕೂ ‘ವಿಶೇಷ ಪ್ರದರ್ಶನ’ಗಳನ್ನು ಏರ್ಪಡಿಸಲಾಗಿತ್ತು. ಅಭಿಮಾನಿಗಳು, ವಿಮರ್ಶಕರಿಂದ ಸಿನಿಮಾ ಪಾಸಿಟಿವ್‌ ಪ್ರತಿಕ್ರಿಯೆ ಪಡೆಯುತ್ತಿದೆ.

LEAVE A REPLY

Please enter your comment!
Please enter your name here