ಓದುಗರ ಪತ್ರ | ನಿಷೇಧ, ದಾಳಿ – ಫ್ಯಾಶಿಸ್ಟರ ವರಸೆಯೇ ಹೊರತು ಧೀಮಂತರದ್ದಲ್ಲ

Date:

‘ಹಮಾರೆ ಬಾರಹ್’ ಎಂಬ ಹೆಸರಿನ ಹಿಂದೂಸ್ತಾನೀ ಚಲನಚಿತ್ರವನ್ನು ಕರ್ನಾಟಕ ಸರ್ಕಾರ ನಿಷೇಧಿಸಿದೆ ಎಂದು ವರದಿಯಾಗಿದೆ (ಪ್ರಜಾವಾಣಿ 8 ಜೂನ್ 2024). ಕಳೆದೊಂದು ದಶಕದಲ್ಲಿ, ಸಂಘ ಪರಿವಾರದ ‘ಸಾಂಸ್ಕೃತಿಕ’ ಕಾರ್ಖಾನೆಯು ಹಲವು ಫ್ಯಾಶಿಸ್ಟ್ ಸಿನಿಮಾ ಕೃತಿಗಳನ್ನು ಹೊರಡಿಸಿದ್ದು, ಅವುಗಳ ಗುಣಮಟ್ಟವು ಸಹಜವಾಗಿಯೇ ಎಲ್ಲ ರೀತಿಯಲ್ಲಿಯೂ ಕಳಪೆಯಾದದ್ದಿತ್ತು ಅನ್ನುವುದು ಸೂಕ್ಷ್ಮಜ್ಞರು ಬಲ್ಲ ವಿಷಯ. ಆ ಕಾರ್ಖಾನೆಯ ಸಿನಿಮಾಗಳಂತೆ ನೇರನೇರ ಫ್ಯಾಶಿಸ್ಟ್ ಪ್ರಚಾರಕ್ಕೆ ಇಳಿಯದಿದ್ದರೂ, ಸ್ಥೂಲವಾಗಿ ಅವುಗಳಂಥದೇ ಮನೋಭೂಮಿಕೆಯ ಸಿನಿಮಾಗಳು (ಮತ್ತು ಬಹಳ ದೊಡ್ಡ ಬಂಡವಾಳದ ಹಿನ್ನೆಲೆಯುಳ್ಳವು) ಕನ್ನಡ-ತೆಲುಗು ಸಿನಿಮಾ ಉದ್ಯಮಗಳವರಿಂದಲೂ ಬಂದಿವೆ; ದೊಡ್ಡ ಖ್ಯಾತಿಯನ್ನು ಗಳಿಸಿವೆ; ಹಾಗೂ  ನೂರಾರು ಕೋಟಿ ಆದಾಯ ಮಾಡಿಕೊಂಡಿವೆ.

ಆ ಬಗೆಯ ಕೃತಿಗಳನ್ನು ಕಟುವು-ಮೊನಚಾದ ವೈಚಾರಿಕ ವಿಮರ್ಶೆಯ ಮೂಲಕ, ಹಾಗೂ ಜನರ ಸಂವೇದನೆಯ ಸೂಕ್ಷ್ಮಜ್ಞತೆಯನ್ನೂ, ಅವರ ವೈಚಾರಿಕತೆಯನ್ನೂ ಬೆಳಸುವುದರ ಮೂಲಕ ಎದುರಿಸಬೇಕೇ ಹೊರತು ನಿಷೇಧಿಸುವುದರ ಮೂಲಕ ಅಲ್ಲ. ನಿಷೇಧಿಸಿವುದು, ಬೆದರಿಸುವುದು, ದಾಳಿ ಮಾಡುವುದು, ದ್ವೇಷ ಮತ್ತು ಅಸಹನೆಯನ್ನು ಹರಡುವುದು – ಇದೆಲ್ಲ ಫ್ಯಾಶಿಸ್ಟರ ವರಸೆಯೇ ಹೊರತು ಧೀಮಂತರದ್ದಲ್ಲ. ಕರ್ನಾಟಕ ಸರ್ಕಾರ ಮತ್ತು ರಾಜ್ಯದ ಸಮಾಜವು ಹಿಂದೂತ್ವದ ಫ್ಯಾಶಿಸ್ಟರು, ಇಸ್ಲಾಮೀಯ ತಾಲಿಬಾನಿಗಳು ಹಾಗೂ ಖೊಮೇನಿಗರ ಹಾದಿಯನ್ನು ತುಳಿಯದಿರಲಿ; ಧೀಮಂತಿಕೆಯನ್ನು ತೋರಲಿ, ಬೆಳೆಸಿಕೊಳ್ಳಲಿ.


– ರಘುನಂದನ
ಕವಿ, ರಂಗ ನಿರ್ದೇಶಕ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

 

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕುರ್ಆನಿನಲ್ಲಿ ಈ ರೀತಿ ಹೇಳಲಾಗಿದೆಯೆಂಬುದು ಖಂಡಿತಾ ಸುಳ್ಳು… ಸಿನಿಮಾದಲ್ಲಿ ತೋರಿಸಲಾಗಿರುವುದು ಬರೀ ಸುಳ್ಳೆಂಬುದನ್ನು ಟ್ರೇಲರ್ ನೋಡಿಯೇ ಅಂದಾಜಿಸಬಹುದು… ಯಾವುದೇ ಧರ್ಮವನ್ನು ವಿಕ್ರತವಾಗಿ ತೋರಿಸುವ ಸಿನಿಮಾಗಳನ್ನು ಖಂಡಿತವಾಗಿಯೂ ನಿಷೇಧಿಸಬೇಕು…

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ದುನಿಯಾ ವಿಜಯ್​​​​​​ ವಿಚ್ಛೇದನ ಅರ್ಜಿ ವಜಾಗೊಳಿಸಿದ ಕೋರ್ಟ್

ನಟ ದರ್ಶನ್​​ ವಿವಾದದ ನಡುವೆ ಇದೀಗ ಸ್ಯಾಂಡಲ್​​​​ವುಡ್‌ನ ಮತ್ತೋಬ್ಬ​​​​​ ನಟ ದುನಿಯಾ...

ನಟ ದರ್ಶನ್ ಬಂಧನ | ಸಾಮಾಜಿಕ ಜಾಲತಾಣ, ನಾಗರಿಕ ಸಮಾಜ ಮತ್ತು ಕಾನೂನು ವೈಫಲ್ಯ

ಸದ್ಯ ರಾಜ್ಯದಲ್ಲಿ ನಟ ದರ್ಶನ್ ಅವರ ಬಂಧನ ಸುದ್ದಿಯಲ್ಲಿದೆ. ತಮ್ಮ ಆಪ್ತೆ...

ಮೈಸೂರು | ಕೊಲೆ ಪ್ರಕರಣ; ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಸೇರಿ 10...

ಪ್ರಮಾಣವಚನ ಸ್ವೀಕರಿಸಿದ ಗಂಟೆಯಲ್ಲೇ ನನಗೆ ಕೇಂದ್ರ ಮಂತ್ರಿ ಸ್ಥಾನ ಬೇಡವೆಂದ ಸುರೇಶ್ ಗೋಪಿ

ನರೇಂದ್ರ ಮೋದಿ ಮೂರನೇ ಸರ್ಕಾರದಲ್ಲಿ ರಾಜ್ಯ ಖಾತೆಯ ಮಂತ್ರಿಯಾಗಿ ಪ್ರಮಾಣ ವಚನ...