ಅರಣ್ಯಜೀವಿ ಶೇಷಾದ್ರಿ ರಾಮಸ್ವಾಮಿ ಆಡಿಯೊ ಸಂದರ್ಶನ | ‘ಅರಣ್ಯ ಭವನಕ್ಕೆ ಹಸು ಕರೆಸಿ ಸಂಜೆವರೆಗೂ ಮೇಯ್ಸಿದ್ರು ನೇಗಿನಾಳ್ ಸರ್‍ರು!’

Date:

ನಮ್ಮಲ್ಲಿ ಬಹಳಷ್ಟು ಜನರಿಗೆ ಒಂದು ಮೂಢನಂಬಿಕೆ ಉಂಟು; ಅದೇನೆಂದರೆ, ಕಾಡನ್ನು ಸುತ್ತೋದು ಮತ್ತು ಕಾಡಿನ ಚಿತ್ರಗಳನ್ನು ಸೆರೆಹಿಡಿಯೋದು ಕೂಡ ಕಾಡನ್ನು ಕಾಪಾಡುವ ಕೆಲಸ ಅಂತ! ಇದು ಎಷ್ಟು ದೊಡ್ಡ ಮೌಢ್ಯ ಅಂತ ಗೊತ್ತಾಗಬೇಕು ಅಂದ್ರೆ, ನೀವು ಶೇಷಾದ್ರಿ ರಾಮಸ್ವಾಮಿ ಅವರ ಮಾತುಗಳನ್ನು ಕೇಳಬೇಕು. 

ಬೆಂಗಳೂರಿನವರಾದ ಶೇಷಾದ್ರಿ ಅವರು ಓದಿದ್ದು ಎಂಜಿನಿಯರಿಂಗ್. ಆದ್ರೆ, ಅದನ್ನು ಅನಾಮತ್ತಾಗಿ ಎತ್ತಿ ಒಗೆದು, ಅರಣ್ಯ ಸಂರಕ್ಷಣೆಯ ಚಟುವಟಿಕೆಗಳಿಗೆ ತಮ್ಮ ಬದುಕನ್ನು ಮೀಸಲಿಡ್ತಾರೆ. ಎಲ್ಲರೂ ಸಹಜವಾಗಿ ಬಯಸುವ ಆರಾಮದಾಯಕ ಮತ್ತು ಸವಲತ್ತಿನ ಬದುಕು ಕಟ್ಟಿಕೊಳ್ಳುವ ಅವಕಾಶಗಳಿದ್ರೂ, ಆ ದಾರಿ ಬಿಟ್ಟು ನಾಡಿನಿಂದ ಕಾಡಿನ ಕಡೆ ಮುಖ ಮಾಡ್ತಾರೆ.

ಕಾಡುಮರಗಳ ಬಗ್ಗೆ ಇವರಿಗಿರುವ ತಿಳಿವಳಿಕೆ, ಜ್ಞಾನ ಬೆರಗು ಮೂಡಿಸುವಂಥದ್ದು. ಮರವನ್ನು ನೋಡುತ್ತಲೇ ಅದರ ಸಂಪೂರ್ಣ ಜಾತಕ ಬಿಚ್ಚಿಡುವಲ್ಲಿ ಪರಿಣಿತರು. ಕರ್ನಾಟಕ ಕಂಡ ಅಪೂರ್ವ ಐಎಫ್‌ಎಸ್ ಅಧಿಕಾರಿ ಎಸ್ ಜಿ ನೇಗಿನಾಳ ಅವರ ಶಿಷ್ಯ ತಾವು ಅನ್ನೋದನ್ನು ಶೇಷಾದ್ರಿ ಅವರು ಬಹಳ ಅಕ್ಕರೆಯಿಂದ ಹೇಳಿಕೊಳ್ತಾರೆ.

ಇತ್ತೀಚೆಗಷ್ಟೇ ಲೋಕಸಭೆಯಲ್ಲಿ ಪಾಸಾದ ಜೀವವೈವಿಧ್ಯ ಮತ್ತು ಅರಣ್ಯ ಕಾಯ್ದೆಗಳ ತಿದ್ದುಪಡಿ ಮಸೂದೆ, ತಾವು ಕಟ್ಟಲುಹೊರಟ ಪರ್ಯಾಯ ಅರಣ್ಯ ಇಲಾಖೆ, ಎಸ್ ಜಿ ನೇಗಿನಾಳರ ಜೊತೆಗಿನ ಒಡನಾಟ, ತುಮಕೂರು ಜಿಲ್ಲೆಯ ಕೊನೇಹಳ್ಳಿ ಕಾವಲಿನ ಅವನತಿಯ ಕತೆ, ಆಗುಂಬೆಯಲ್ಲಿ ರೂಪಿಸಿದ ಕಾಡುಮರಗಳ ನರ್ಸರಿ, ಬೆಂಗಳೂರಿನಂತಹ ಮಹಾನಗರದ ಯುವಜನರಲ್ಲಿ ಮರಗಳ ಬಗ್ಗೆ ಆಸಕ್ತಿ ಮೂಡಿಸುವ ಜರೂರು... ಹೀಗೆ ಅತ್ಯಂತ ವೈವಿಧ್ಯಮಯ ವಿಷಯಗಳ ಕುರಿತು ಈ ಆಡಿಯೊ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ.

ಈ ಸಂದರ್ಶನ ಕೇಳಿದ್ದೀರಾ?: ನಾಟಕಕಾರ ಕೆ ವೈ ನಾರಾಯಣಸ್ವಾಮಿ ಸಂದರ್ಶನ | ‘ವಿದ್ಯಾರ್ಥಿಯೊಬ್ಬ ನಾಡಬಾಂಬ್ ತಂದು ಟೇಬಲ್ ಮೇಲೆ ಇಟ್ಟುಬಿಟ್ಟಿದ್ದ!’

- Advertisement -

ಈ ಸಂದರ್ಶನ ಕೇಳಿದ್ದೀರಾ?: ಸಿ ಎಸ್ ದ್ವಾರಕಾನಾಥ್ ಆಡಿಯೊ ಸಂದರ್ಶನ | ‘ಹೈಕೋರ್ಟ್ ನ್ಯಾಯಮೂರ್ತಿಯ ಇನ್ನೊಂದು ಮೂತಿ’ ಅಂತ ಹೆಡ್ಡಿಂಗ್ ಕೊಟ್ಟಿದ್ದರು ಲಂಕೇಶ್!

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಂಜಾಬ್ ಆಪ್ ಸರ್ಕಾರ ಉರುಳಿಸಲು ಮೋದಿ ಮಹಾಸಂಚು?

ಈ ಸಂಪೂರ್ಣ ರಾಜಕೀಯ ಬಿಕ್ಕಟ್ಟಿಗೆ ಕೇವಲ ಆಪ್‌ನ ಆಂತರಿಕ ದೌರ್ಬಲ್ಯಗಳಷ್ಟೇ ಕಾರಣವಲ್ಲ;...

ಟ್ರಂಪ್ ಆಡಳಿತದಿಂದ ಅಮೆರಿಕ ಬಿಡಲು ಮುಂದಾದ ಶೇ. 40ರಷ್ಟು ಭಾರತೀಯರು; ಸಮೀಕ್ಷೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ಟ್ರಂಪ್ ಆಡಳಿತದ 'ಅಮೆರಿಕನ್ನರಿಗೆ ಮಾತ್ರ ಅಮೆರಿಕ' ಎಂಬ ಉಗ್ರ ರಾಷ್ಟ್ರೀಯವಾದಿ ನಿಲುವು...

ಕಿಂಗ್ ಕೊಹ್ಲಿ ಜರ್ಸಿ ನಂಬರ್ 18ರ ಹಿಂದಿದೆ ಕಣ್ಣೀರಿನ ಕಥೆ; ಕರ್ನಾಟಕಕ್ಕೂ ಇದಕ್ಕೂ ಏನು ನಂಟು?

ಇಂದಿನ ಯುವಕರು ವಿರಾಟ್ ಕೊಹ್ಲಿ ಅವರ ಕೇವಲ ಅಭಿಮಾನಿಗಳಾಗುವುದಲ್ಲ. ಅವರು ಹೇಗೆ...

ಉದ್ಯೋಗದ ಹಕ್ಕು ಕಸಿದುಕೊಳ್ಳದಿರಿ; ಬೈಕ್ ಟ್ಯಾಕ್ಸಿ ಚಾಲಕರಿಗೆ ಬೇಕಿದೆ ಸರ್ಕಾರದ ಆಸರೆ

ರಸ್ತೆಗಳಲ್ಲಿ ಆಟೋ ಚಾಲಕರು ಮತ್ತು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಪದೇ...