ಸುದ್ದಿ ವಿವರ | ಹೆಚ್ಚಿದ ತಾಪಮಾನ; ಶಾಖ ಸಂಬಂಧಿತ ಕಾಯಿಲೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ?

Date:

ರಾಜ್ಯದಲ್ಲಿ ಶಾಖದ ತಾಪಮಾನ ಇನ್ನೂ ಏರಿಕೆಯಾಗಲಿದ್ದು, ನಾಡಿನ ಜನತೆಗೆ ಇದರಿಂದ ಹೈರಾಣಾಗಲಿದೆ. ಆರೋಗ್ಯದಲ್ಲುಂಟಾಗುವ ಏರುಪೇರಿನ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಹೇಳಿದೆ. 

ಶಾಖ ಸಂಬಂಧಿತ ಕಾಯಿಲೆ; ಎಚ್ಚರಕ್ಕೆ ಕಾರಣವೇನು?

ಮಾರ್ಚ್‌ನಿಂದ ಆರಂಭವಾಗಬೇಕಿದ್ದ ಬೇಸಿಗೆ ಫೆಬ್ರವರಿಯಿಂದಲೇ ಆರಂಭಗೊಂಡಿತ್ತು. 122 ವರ್ಷಗಳ ನಂತರ ಅಧಿಕ ಶಾಖದ ವಾತಾವರಣ ಕಳೆದ ತಿಂಗಳಲ್ಲಿ ದಾಖಲಾಗಿದೆ. ಏಪ್ರಿಲ್‌ನಲ್ಲಿ ಬಿಸಿಲಿನ ತಾಪಮಾನ ತೀವ್ರವಾಗಿ ಏರಿಕೆಯಾಗಲಿದೆ. ಶಾಖದಿಂದಾಗಿ, ಬರುವ ಅಧಿಕ ಕಾಯಿಲೆಗಳನ್ನು ನಿಭಾಯಿಸಲು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಆರೋಗ್ಯ ಇಲಾಖೆಗೆ ಕರ್ನಾಟಕ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಯಾವೆಲ್ಲ ಕಾಯಿಲೆ ಭಾದಿಸಲಿದೆ?

ಹೆಚ್ಚುತ್ತಿರುವ ತಾಪಮಾನದಿಂದ  ತಲೆನೋವು, ತಲೆ ಸುತ್ತುವಿಕೆ ಸೇರಿದಂತೆ ‘ಸನ್‌ ಸ್ಟ್ರೋಕ್’ ಎಲೆಕ್ಟ್ರೋಲೈಟ್ ಅಸಮತೋಲನ, ಕರಳು ಬೇನೆ, ನಿರ್ಜಲೀಕರಣ, ವಾಂತಿ, ಚರ್ಮ ಒಣಗಿದಂತೆ ಭಾಸವಾಗುವುದು. ಕಾಲಾರ, ಟೈಫಾಯಿಡ್ ಇಂತಹ ಪ್ರಕರಣಗಳು ಹೆಚ್ಚಾಗಲಿದೆ. ವೃದ್ಧರು ಮತ್ತು ಮಕ್ಕಳು, ಅಧಿಕ ರಕ್ತದ ಒತ್ತಡ, ಮಧುಮೇಹಿಯಂತಹ ಸಮಸ್ಯೆಯಿಂದ ಬಳಲುತ್ತಿರುವವರು ಬೇಸಿಗೆ ಪೂರ್ಣಗೊಳ್ಳುವವರೆಗೂ ಜಾಗೃತರಾಗಿರಬೇಕಾಗಿದೆ.  

ಆರೋಗ್ಯ ಇಲಾಖೆಯ ಶಿಫಾರಸ್ಸೇನು?

ಮುಂದಿನ ದಿನಗಳಲ್ಲಿ ನಗರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗುವ ಸಾಧ್ಯತೆ ಇರುವ ಕಾರಣ ಶಾಖ ಸಂಬಂಧಿತ ಕಾಯಿಲೆಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಸರ್ಕಾರಿ ಸ್ವಾಮ್ಯದ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕಲ್ ಮತ್ತು ‘ಎನರ್ಜಿ ಆಡಿಟಿಂಗ್‌’ಗಳು ಕಾರ್ಯರೂಪದಲ್ಲಿರಲು ರಾಜ್ಯದ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಶಿಫಾರಸು ಮಾಡಿದೆ. ಐವಿಎಫ್ ದ್ರವಗಳು ಮತ್ತು ಓರಲ್ ರೀಹೈಡ್ರೇಶನ್ ಸೊಲ್ಯೂಷನ್ಸ್ (ಒಆರ್‍‌ಎಸ್‌) ಜೊತೆಗೆ, ಎಳನೀರು, ಐಸ್‌ ಪ್ಯಾಕ್‌ಗಳು ಸರ್ಕಾರಿ ಸ್ವಾಮ್ಯದ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಆರೋಗ್ಯ ಇಲಾಖೆ ಹೇಳಿದೆ.

ಶಾಖ ಸಂಬಂಧಿತ ಕಾಯಿಲೆಯಿಂದ ತಪ್ಪಿಸಿಕೊಳ್ಳುವುದೇಗೆ?

ಬೇಸಿಗೆಯಾಗಿರುವ ಕಾರಣ ಬೆವರುವಿಕೆ ಹೆಚ್ಚಾಗಲಿದೆ. ಇದರಿಂದ ನಿರ್ಜಲೀಕರಣ ಹೆಚ್ಚಾಗುತ್ತದೆ. ಹೀಗಾಗಿ, ಕುದಿಸಿದ ನೀರನ್ನು ಆರಿಸಿ ಕುಡಿಯಬೇಕು. ಮಧ್ಯಾಹ್ನದ ವೇಳೆ ಹೊರಗೆ ಅಡ್ಡಾಡುವುದನ್ನು ತಪ್ಪಿಸಬೇಕು. ಫ್ಯಾನ್‌ ಮತ್ತು ಎಸಿ ಕೂಲರ್‍‌ಗಳನ್ನು ಬಳಸುವದರಿಂದ ಸುಸ್ತು ಮತ್ತಿತ್ತರ ಕಾಯಿಲೆಗಳನ್ನು ತಪ್ಪಿಸಬಹುದು. 12:00 ರಿಂದ 3:00ರವರೆಗೆ ಅಡುಗೆ ಮಾಡುವುದನ್ನು ತಪ್ಪಿಸಿ, ಕಿಟಕಿ ಬಾಗಿಲುಗಳನ್ನು ಸದಾ ತೆರೆದಿರುವಂತೆ ನೋಡಿಕೊಳ್ಳಬೇಕು.

ವೈದ್ಯರು ಹೇಳೋದೇನು?

“ರಾಯಚೂರು, ಬೀದರ್, ಗುಲ್ಬರ್ಗ, ಯಾದಗಿರಿ ಇಂತಹ ಜಿಲ್ಲೆಗಳಲ್ಲಿ ಹೆಚ್ಚು ಸನ್‌ ಸ್ಟ್ರೋಕ್ ಕಂಡು ಬರುತ್ತದೆ. ಇಂತಹ ತೊಂದರೆಗಳು ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಭೇಟಿಯಾಗುವುದು ಉತ್ತಮ. ತರಕಾರಿ ಮತ್ತು ಹಣ್ಣುಗಳನ್ನು ತೊಳೆದು ಹೆಚ್ಚಾಗಿ ತಿನ್ನುವುದು ಒಳ್ಳೆಯದು. ಚೈನೀಸ್ ಆಹಾರ ಮತ್ತು ಕೆಲಸದ ಒತ್ತಡದಲ್ಲಿ ಕಚೇರಿಗೆ ಬೇಗ ತೆರಳಲು ಹೋಟೆಲ್‌ನಲ್ಲಿ ಆಹಾರ ಸೇವಿಸುವುದನ್ನು ಬೇಸಿಗೆಯವರೆಗೂ ತಪ್ಪಿಸಿದರೆ ಹೆಚ್ಚು ಒಳ್ಳೆಯದು. ಈ ಸಮಯದಲ್ಲಿ ಎಷ್ಟು ನೀರು ಕುಡಿಯುತ್ತೀವೋ ಅಷ್ಟು ಒಳ್ಳೆಯದು” ಎಂದು ಈದಿನ.ಕಾಮ್‌ನ ಸಂಪರ್ಕಕ್ಕೆ ಸಿಕ್ಕ ಆಲೋಪತಿ ವೈದ್ಯ ಮಹೇಶ್‌ ಅವರು ಸಲಹೆ ನೀಡಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೋಗಿಗೆ ಜನೌಷಧವನ್ನೇ ಸೂಚಿಸಿ: ಆರೋಗ್ಯ ಸಚಿವಾಲಯ

ಕೇಂದ್ರ ಸರ್ಕಾರ ನಡೆಸುವ ಎಲ್ಲ ಆಸ್ಪತ್ರೆ ಮತ್ತು ಕೇಂದ್ರದ ಆರೋಗ್ಯ ಯೋಜನೆಗೆ...

ಅಂತಾರಾಷ್ಟ್ರೀಯ ದಾದಿಯರ ದಿನ | ‘ನರ್ಸ್’ ಎಂಬುದು ಹುದ್ದೆಯಲ್ಲ, ಅದೊಂದು ಸೇವೆ

ಜನರ ಪುನರ್ವಸತಿ ಮತ್ತು ಯೋಗಕ್ಷೇಮದಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಎಲೆಮರೆ...

ರೋಗಿಗಳಿಗಿಲ್ಲ ವ್ಯವಸ್ಥಿತ ಚಿಕಿತ್ಸೆ; ವೈದ್ಯರ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ

'ಕರ್ತವ್ಯ ನಿರ್ವಹಿಸದ ವೈದ್ಯಾಧಿಕಾರಿ-ಸಿಬ್ಬಂದಿಗಳ ಮೇಲೆ ಕ್ರಮ' ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿಗಳ ಸಾವು;...

ಸುದ್ದಿವಿವರ | ಸೊಳ್ಳೆಬತ್ತಿಯ ಹೊಗೆ ತಂಬಾಕಿನಷ್ಟೇ ಹಾನಿಕಾರಕ!

ಅಕಾಲಿಕವಾಗಿ ಸುರಿದ ಮಳೆಯಿಂದ ಸೊಳ್ಳೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಅವುಗಳ ಕಾಟವೂ ಹೆಚ್ಚಾಗಿದೆ....