ಬ್ಯಾಂಕ್‌ಗಳು ಪಾಸ್‌ಪೋರ್ಟ್, ಒಸಿಐ ಕಾರ್ಡ್ಅನ್ನು ಒತ್ತೆ ಇಟ್ಟುಕೊಳ್ಳುವಂತಿಲ್ಲ: ಹೈಕೋರ್ಟ್

Date:

anಒಬ್ಬ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ನೀಡಿದರೂ ಸಹ ಪಾಸ್‌ಪೋರ್ಟ್‌ ಮತ್ತು ಭಾರತೀಯ ಸಾಗರೋತ್ತರ ನಾಗರಿಕ (ಒಸಿಐ) ಕಾರ್ಡ್‌ಗಳನ್ನು ಬ್ಯಾಂಕ್‌ಗಳು ಸಾಲದ ಭದ್ರತೆಗಾಗಿ ಒತ್ತೆ ಇರಿಸಿಕೊಳ್ಳುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಭಾರತದಲ್ಲಿ ಹುಟ್ಟಿದ್ದು, ಭಾರತದ ಒಸಿಐ ಕಾರ್ಡ್ ಹೊಂದಿರುವ ಯುನೈಟೆಡ್ ಕಿಂಗ್‌ಡಂ ಪ್ರಜೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದಾರೆ. ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಇಬ್ಬರು ವಸತಿ ಸಾಲ ಪಡೆದಿದ್ದರು. ಸಾಲದ ಭದ್ರತೆಗಾಗಿ ಅವರು ತಮ್ಮ ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಬ್ಯಾಂಕ್‌ ನೀಡಿದ್ದರು. ಆದರೆ, ಸಾಲವನ್ನು ಪಾವತಿಸದ ಆರೋಪದ ಮೇಲೆ ಬ್ಯಾಂಕ್‌ ವಂಚನೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಿತ್ತು. ಬ್ಯಾಂಕ್‌ ನಡೆ ಪ್ರಶ್ನಿಸಿ ಅರ್ಜಿದಾರರು ಕೋರ್ಟ್‌ ಮೆಟ್ಟಿಲೇರಿದ್ದರು.

ಯುನೈಟೆಡ್ ಕಿಂಗ್‌ಡಂ ಪ್ರಜೆಯ ಪರವಾಗಿ ವಾದ ಮಂಡಿಸಿದ ವಕೀಲರು, “ಪಾಸ್‌ಪೋರ್ಟ್‌ ಮತ್ತು ಒಸಿಐ ದಾಖಲೆಗಳನ್ನು ಬ್ಯಾಂಕ್‌ ತನ್ನ ಬಳಿ ಇಟ್ಟುಕೊಳ್ಳಲು ಅಧಿಕಾರವಿಲ್ಲ. ಯುಕೆ ಸರ್ಕಾರ ನೀಡಿದ ಪಾಸ್‌ಪೋರ್ಟ್ಅನ್ನು ತಡೆಹಿಡಿಯುವ ಅಥವಾ ಇಟ್ಟುಕೊಳ್ಳುವ ಅಧಿಕಾರ ಬ್ಯಾಂಕ್‌ಗಳಿಗೆ ಇಲ್ಲ. ಅಂತೆಯೇ, ಒಸಿಐ ಕಾರ್ಡ್‌ಗಳು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪ್ತಿಯಲ್ಲಿವೆ. ಅವುಗಳನ್ನು ಬ್ಯಾಂಕ್‌ ನಿಯಂತ್ರಿಸಲಾಗದು” ಎಂದು ವಾದಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಬ್ಯಾಂಕ್ ವಕೀಲರು, “ಸಾಲಗಾರರೇ ಸ್ವಯಂಪ್ರೇರಣೆಯಿಂದ ತಮ್ಮ ದಾಖಲೆಗಳನ್ನು ಸಾಲದ ಭದ್ರತೆಗಾಗಿ ಒತ್ತೆ ಇಟ್ಟಿದ್ದಾರೆ” ಎಂದು ವಾದಿಸಿದರು.

ಈ ಸುದ್ದಿ ಓದಿದ್ದೀರಾ?: ಜ.19ರಂದು ಕರ್ನಾಟಕಕ್ಕೆ ಮೋದಿ ಭೇಟಿ; ‘ನಿದ್ದೆಯಿಂದ ಎದ್ದೇಳಿ ಮೋದಿ’ ಪೋಸ್ಟರ್‌ಗಳು ವೈರಲ್

ವಾದ ಪ್ರತಿಪಾದಗಳನ್ನು ಗಮನಿಸಿದ ನ್ಯಾಯಾಲಯವು, “ಯುಕೆ ಪ್ರಜೆಗೆ ಯುಕೆ ಸರ್ಕಾರ ಪಾಸ್‌ಪೋರ್ಟ್ ನೀಡಿದ್ದು, ಅದನ್ನು ಭಾರತದ ಯಾವುದೇ ಕಾನೂನಿನ ಅಡಿಯಲ್ಲಿ ನೀಡಲಾಗಿಲ್ಲ. ಇನ್ನು, ಅರ್ಜಿದಾರರು ಭಾರತದಲ್ಲಿ ಉಳಿದುಕೊಳ್ಳಲು ಒಸಿಐ ಕಾರ್ಡ್ ನೀಡಲಾಗಿದೆ. ಒಸಿಐ ಕಾರ್ಡ್ ಮತ್ತು ಪಾಸ್‌ಪೋರ್ಟ್ ಅನ್ನು ಬ್ಯಾಂಕ್ ಅಧಿಕಾರಿಗಳಲ್ಲಿ ಒತ್ತೆ ಇಡುವುದಾಗಿ ಅರ್ಜಿದಾರರು ಒಪ್ಪಂದದ ಮೂಲಕ ನೀಡಿದ್ದರೂ ಸಹ, ಅವುಗಳನ್ನು 15 ದಿನಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವ ಯಾವುದೇ ಅಧಿಕಾರ ಬ್ಯಾಂಕ್‌ಗೆ ಇಲ್ಲ” ಎಂದು ಹೇಳಿದೆ.

“ಇನ್ನೊಂದು ವಿಚಾರವೆಂದರೆ, ಒಸಿಐ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಆರ್‌ಒ) ಆಸ್ತಿಯಾಗಿದೆ. ಆ ಕಾರ್ಡ್‌ಅನ್ನು ಸುರಕ್ಷಿತವಾಗಿ ಇರಿಸಲು ಅದನ್ನು ಎಫ್‌ಆರ್‌ಆರ್‌ಒಗೆ ನ್ಯಾಂಕ್‌ ರವಾನಿಸಬೇಕಿತ್ತು. ಒಂದು ವೇಳೆ, ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ಎಫ್‌ಆರ್‌ಆರ್‌ಒಗೆ ಸಂಬಂಧಿತ ಪ್ರಕ್ರಿಯೆಗಳನ್ನು ನಡೆಸಬೇಕಿತ್ತು. ಆದರೆ, ಈ ಪ್ರಕರಣದಲ್ಲಿ ಯಾವುದೂ ನಡೆದಿಲ್ಲ,” ಎಂದು ನ್ಯಾಯಾಲಯ ಗಮನಿಸಿದೆ.

ಪಾಸ್‌ಪೋರ್ಟ್ ಮತ್ತು ಒಸಿಐ ಕಾರ್ಡ್ಅನ್ನು ಅವುಗಳ ಮಾಲೀಕರಿಗೆ ಹಿಂತಿರುಗಿಸುವಂತೆ ಆದೇಶಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿದ್ದರಾಮಯ್ಯ ಅವರಷ್ಟು ನೀಚತನಕ್ಕೆ ನಾವು ಇಳಿಯುವುದಿಲ್ಲ: ಪ್ರಲ್ಹಾದ ಜೋಶಿ ಕಿಡಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಂತೂ ಮಾನ, ಮರ್ಯಾದೆ ಇಲ್ಲ. ಹಾಗಂತ ಬೇರೆಯವರಿಗೂ ಇಲ್ಲ...

ಕನ್ನಡಿಗರ ತೆರಿಗೆ ಹಣ ಬೇಕಾಬಿಟ್ಟಿ ಖರ್ಚು ಮಾಡುವುದೇ ಮಜಾವಾದಿ ಸರ್ಕಾರದ ಅಜೆಂಡಾ: ಬಿಜೆಪಿ ಟೀಕೆ

"ಇಡೀ ಸಮಸ್ತ ಕರ್ನಾಟಕದ ಜನತೆಯ ಕಿವಿ ಮೇಲೆ ಹೂವಿಟ್ಟು ಅಧಿಕಾರಕ್ಕೆ ಬಂದ‌...

ರಾಜ್ಯ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎ. ವಿ. ಅಂಜಾರಿಯಾ ಪ್ರಮಾಣ ವಚನ ಸ್ವೀಕಾರ

ರಾಜ್ಯ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನಿಲಯ್ ವಿಪಿನ್‌ಚಂದ್ರ ಅಂಜಾರಿಯಾ ಅವರು...