ಕೈಗೆ ಸಿಗದ ಪಿಎ, ಫೋನಿಗೆ ಸಿಗದ ಎಂಪಿ; ಸಂಸದ ಅನಂತಕುಮಾರ್​ ಹೆಗಡೆ ವಿರುದ್ಧ ಕಾರ್ಯಕರ್ತರ ಅಸಮಾಧಾನ

Date:

ಕಳೆದ ಹಲವು ವರ್ಷಗಳಿಂದ ಕಾರ್ಯಕರ್ತರ ಕೈಗೆ ನೀವು ಸಿಕ್ಕಿಲ್ಲ. ನಿಮ್ಮ ಪಿಎಗಳು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಹೀಗಾದ್ರೆ ನಾವು ಹೇಗೆ ಮಾಡಬೇಕು? ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಕುಂಠಿತಗೊಂಡಿವೆ ಎಂದು ಬಿಜೆಪಿ ಕಾರ್ಯಕರ್ತರು ಸಂಸದ ಅನಂತಕುಮಾರ್​ ಹೆಗಡೆ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ನಡೆದ ಸಭೆಯಲ್ಲಿ ಅನಂತಕುಮಾರ್ ಹೆಗಡೆಗೆ ಕ್ಲಾಸ್ ತೆಗೆದುಕೊಂಡ ಕಾರ್ಯಕರ್ತರು ಖಾನಾಪುರದಲ್ಲಿ ಸಂಸದರ ಕಾರ್ಯಾಲಯ ಓಪನ್​ ಮಾಡಿ ಎಂದು ಆಗ್ರಹಿಸಿದ್ದಾರೆ.

ಕ್ಷೇತ್ರದಲ್ಲಿನ ಸಮಸ್ಯೆಗಳ ಪಟ್ಟಿಯನ್ನೇ ಸಂಸದರ ಮುಂದಿಟ್ಟು ಅಸಮಾಧಾನ ಹೊರ ಹಾಕಿದ ಕಾರ್ಯಕರ್ತರು, “ಖಾನಾಪುರ ತಾಲೂಕಿನ ಜನ ಬೆಳಗಾವಿಗೆ ಹೋದರೆ, ಕಾರವಾರಕ್ಕೆ ಹೋಗಿ ಅಂತಾರೆ. ಕಾರವಾರಕ್ಕೆ ಹೋದರೆ ನೀವು ಬೆಳಗಾವಿ ಜಿಲ್ಲೆಯವರು ಅಲ್ಲಿಗೆ ಹೋಗಿ ಅಂತಾರೆ. ಖಾನಾಪುರ ತಾಲೂಕಿನ ಜನ ನಡುವಿನಲ್ಲಿ ಸಿಕ್ಕಿ ಒದ್ದಾಡುತ್ತಿದ್ದಾರೆ. ಆರು ಬಾರಿ ಸಂಸದರಾಗಿದ್ದೀರಿ ಖಾನಾಪುರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಯಾವುವೂ ಜಾರಿಯಾಗಿಲ್ಲ, ಜನರಿಗೆ ತಲುಪಿಲ್ಲ” ಎಂದು ಬೇಸರ ವ್ಯಕ್ತಪಡಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಕಾರ್ಯಕರ್ತರಿಗೆ ನಿಮ್ಮ ಕಡೆಯಿಂದ ಉತ್ತಮ ಸ್ಪಂದನೆ ಸಿಗುತ್ತಿಲ್ಲ. ಅನಂತಕುಮಾರ್ ಹೆಗಡೆ ಎಲ್ಲಿದ್ದಾರೆ ಅಂತ ಜನ ಪ್ರಶ್ನೆ ಮಾಡುತ್ತಿದ್ದಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಗಾಂಧಿ ಪ್ರಣೀತ ರಾಮನೇ ಬೇರೆ; ಮೋದಿ ರಾಮನೇ ಬೇರೆ

ಯಾರಿಗೆ ಟಿಕೆಟ್​ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಬೇಕು

”ಚುನಾವಣೆ ಬಗ್ಗೆ ಮುಂದೆ ಏನಾಗುತ್ತೆ ಅನ್ನೋದು ನನಗೆ ಗೊತ್ತಿಲ್ಲ. ಸ್ಪರ್ಧಿಸ್ತೇನೆ ಅಂತಾ ಬಂದಿಲ್ಲ, ಬಿಜೆಪಿ ಗೆಲ್ಲಿಸಿ ಅಂತಾ ಹೇಳಲು ಬಂದಿದ್ದೇನೆ. ಪಕ್ಷ ಯಾರಿಗೆ ಟಿಕೆಟ್​ ಕೊಟ್ಟರೂ ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ. ಖಾನಾಪುರದಲ್ಲಿ ಸಂಸದರ ಕಚೇರಿ ತೆರೆಯಲು ಯೋಚನೆ ಮಾಡಿದ್ದೇವೆ” ಎಂದರು.

ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಅವರನ್ನು

”ಮೋದಿಯನ್ನು ಮತ್ತೆ ಗೆಲ್ಲಿಸಬೇಕೆಂಬುದು ದೇವರ ನಿರ್ಣಯವಾಗಿದೆ. ಅಡ್ವಾಣಿ, ವಾಜಪೇಯಿ ರಾಮ ಮಂದಿರಕ್ಕಾಗಿ ಯಾತ್ರೆ ಮಾಡಿದ್ರು. ಅಂದು ಯಾತ್ರೆಯಲ್ಲಿ ಕೋಟ್ಯಂತರ ಜನ ಭಾಗಿಯಾಗಿದ್ದರು. ಆದರೆ ರಾಮ ಆಯ್ಕೆ ಮಾಡಿಕೊಂಡಿದ್ದು ಮೋದಿ ಕೈಯಲ್ಲಿ ಪ್ರತಿಷ್ಠಾಪಿಸಲು. ಇದು ದೇವರ ನಿರ್ಣಯ. ಮೋದಿಯನ್ನು ಮತ್ತೆ ಗೆಲ್ಲಿಸಬೇಕು ಇದು ಕೂಡ ದೇವರ ನಿರ್ಣಯ. ಕಳೆದ ಎಂಪಿ ಚುನಾವಣೆಯಲ್ಲಿ ಹೆಚ್ಚಿನ ಲೀಡ್​ನಲ್ಲಿ ನನ್ನನ್ನು ಗೆಲ್ಲಿಸಿದ್ರಿ. ಈ ಬಾರಿಯೂ ನನ್ನನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು” ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ ತಿಳಿಸಿದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಜನರ ಮತ್ತು ಕ್ಷೇತ್ರದ ಅಹವಾಲು ಬಗ್ಗೆ ಕೇಳದೆ,,,, ಕೋಮು ಗಲಭೆ ಎಬ್ಬಿಸಲು ಭಾಷಣಗಳ ಮಾಡುವವರ ಅವಶ್ಯಕತೆ ಇದೆ ಎಂದು ಒಂದು ಜಾಹಿರಾತು ಕೊಡಿ ,, ಹುಡುಕಿಕೊಂಡು ಓಡಿ ಬರುವ ಎಷ್ಟೋ ಜನ ಇದ್ದಾರೆ,,,ಕಳೆದ ಹತ್ತು ವರ್ಷಗಳಲ್ಲಿ ಇದೊಂದು ತುಂಬಾ ಲಾಭದಾಯಕ ದಂಧೆಯಾಗಿ ಬಳಸಿಕೊಳ್ಳಲಾಗುತ್ತಿದೆ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ | ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರದ ತಡೆ

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಬೇಕಿದ್ದ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್...

ಗ್ಯಾರಂಟಿಗಳಿಂದ ನೆಮ್ಮದಿ ಗಳಿಸಿರುವ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ: ಸಿದ್ದರಾಮಯ್ಯ ಕಿಡಿ

ಗ್ಯಾರಂಟಿಗಳಿಂದ ನೆಮ್ಮದಿ ಗಳಿಸಿರುವ ಫಲಾನುಭವಿಗಳ ಗಮನ ಬೇರೆಡೆ ಸೆಳೆಯಲು ಬಿಜೆಪಿ ಡ್ರಾಮಾ...

ಜಾತಿ ಸಮೀಕ್ಷೆ ವರದಿ ಸ್ವೀಕಾರ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ: ಮಾಜಿ ಸಿಎಂ ಬೊಮ್ಮಾಯಿ

ರಾಜ್ಯ ಸರ್ಕಾರ ಜಾತಿ ಸಮೀಕ್ಷೆ ವರದಿ ಪಡೆದಿರುವುದು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ....

ಗ್ಯಾರಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ವಾರ್ಷಿಕ 50 ರಿಂದ 60 ಸಾವಿರ ಉಳಿತಾಯ: ಡಿ.ಕೆ.ಶಿವಕುಮಾರ್

"ಗ್ಯಾರಂಟಿ ಯೋಜನೆಗಳಿಂದ ಒಂದು ಬಡ ಕುಟುಂಬಕ್ಕೆ ವಾರ್ಷಿಕ 50-60 ಸಾವಿರ ಉಳಿತಾಯವಾಗುತ್ತಿದೆ....