ಸತ್ಯ ಅರ್ಥೈಸಿಕೊಳ್ಳುವಲ್ಲಿ ರಾಜಕಾರಣ & ಮಾಧ್ಯಮ ವಿಫಲವಾದರೆ ಸಮಾಜದಲ್ಲಿ ಕತ್ತಲು: ಯು ಟಿ ಖಾದರ್‌

Date:

ರಾಜಕಾರಣ ಮತ್ತು ಮಾಧ್ಯಮ ಸಮಾಜದ ಎರಡು ಕಣ್ಣುಗಳಂತೆ. ಇವುಗಳೆರಡು ಸಮಾನವಾಗಿ, ಸಾಮರಸ್ಯದಿಂದ ಕೆಲಸ ಮಾಡಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನಸಭೆ ಸ್ಪೀಕರ್‌ ಯು ಟಿ ಖಾದರ್‌ ಹೇಳಿದರು.

- Advertisement -

ಬೆಂಗಳೂರಿನ ಪ್ರೆಸ್‌ ಕ್ಲಬ್‌ ಆವರಣದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪ್ರೆಸ್‌ ಕ್ಲಬ್‌ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

“ಮಾಧ್ಯಮ ಮತ್ತು ರಾಜಕಾರಣ ಎಂಬ ಎರಡು ಕಣ್ಣುಗಳು ಸತ್ಯವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾದರೆ ಸಮಾಜ ಕತ್ತಲೆಗೆ ಜಾರುತ್ತದೆ. ಒಂದು ಕಣ್ಣು ಸಮಾಜದ ಸಮಸ್ಯೆಗಳನ್ನು ತಿಳಿಸುತ್ತದೆ. ಆಗ ಇನ್ನೊಂದು ಕಣ್ಣು ಅದಕ್ಕೆ ಪರಿಹಾರ ಒದಗಿಸುತ್ತದೆ. ಇವುಗಳು ಜೊತೆ ಜೊತೆಯಾಗಿ ಇದ್ದರೆ ಸಮಾಜದಲ್ಲಿ ಶಾಂತಿ ಇರುತ್ತದೆ. ಆಗ ಮಾತ್ರ ಶುದ್ಧ ಭಾರತ ನಿರ್ಮಾಣ ಮಾಡಬಹುದು. ನಮ್ಮ ಸಮಾಜದಲ್ಲಿ ಏಕತೆ ಮತ್ತು ಸಾಮರಸ್ಯ ಕಾಪಾಡಲು ಹಿಂದೆಯೂ ಮಾಧ್ಯಮಗಳು ಕೊಡುಗೆ ನೀಡಿದ್ದವು. ಈಗಲೂ ಕೊಡುಗೆ ನೀಡುತ್ತಿವೆ” ಎಂದರು.

“ಸಮಾಜದ ಅಭಿಪ್ರಾಯ ರೂಪಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿ ದೊಡ್ಡದು. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಜವಾಬ್ದಾರಿಯುತ ಮಾಧ್ಯಮಗಳ ಇಂದಿನ ಅಗತ್ಯ. ಜನ ಸಾಮಾನ್ಯರಿಗೆ ತೊಂದರೆ ಬಂದಾಗ ಮಾಧ್ಯಮಗಳು ಮಾನವೀಯತೆ ಉಳಿಸುಕೊಂಡು ಹೋಗಬೇಕು. ದೇಶದ ಸಂಸೃತಿ, ಏಕತೆಯನ್ನು ಉಳಿಸಿಕೊಂಡು ಬಲಿಷ್ಠ ದೇಶ ನಿರ್ಮಿಸುವ ಜವಾಬ್ದಾರಿ ಸಹ ಮಾಧ್ಯಮಗಳ ಮೇಲಿದೆ” ಎಂದು ಹೇಳಿದರು.

“ಮಾಧ್ಯಮಗಳಿಗೆ ದೊಡ್ಡ ಜವಾಬ್ದಾರಿ ಇರುವುದರಿಂದ ಪ್ರಜಾಪ್ರಭುತ್ವ ನಾಲ್ಕನೇ ಅಂಗ ಎಂದು ಹೇಳಿರುವುದು. ಆದ್ದರಿಂದ ಮಾಧ್ಯಮಗಳಿಗೆ ವಿಶೇಷ ಸ್ಥಾನ ಕೊಟ್ಟಿದ್ದೇವೆ. ರಾಜಕಾರಣ ಮಾಧ್ಯಮ ಬಿಟ್ಟಿರಲು ಸಾಧ್ಯವಿಲ್ಲ. ಜವಾಬ್ದಾರಿಯುತ ಆಡಳಿತವನ್ನು ಸರ್ಕಾರ ನೀಡಲು ಮಾಧ್ಯಮ ಬೇಕು. ಸಮಾಜಕ್ಕೆ ಕಂಟಕ ಎದುರಾದಾಗ ಮಾಧ್ಯಮಗಳು ನೆರವಿಗೆ ಬರಬೇಕು. ಜನರಿಗೆ ವಿಶ್ವಾಸ ಬರುವ ರೀತಿ ಮಾಧ್ಯಮಗಳು ಕೆಲಸ ಮಾಡಬೇಕು. ಸ್ವಸ್ಥ ಸಮಾಜ ನಿರ್ಮಿಸಲು ಮುಂದಾಗಬೇಕು” ಎಂದು ಕರೆ ನೀಡಿದರು.

“ಇಂದು ಮಾಧ್ಯಮಗಳು ಸಂದಿಗ್ಧ ಪರಿಸ್ಥಿತಿಗೆ ಬಂದಿವೆ. ಮಾಧ್ಯಮವನ್ನು ಉಳಿಸಬೇಕಾಗಿದೆ. ಮುದ್ರಣ ಮತ್ತು ಪ್ರಸಾರ ಮಾಧ್ಯಮ ಉಳಿಯಬೇಕಾಗಿದೆ. ಟಿಆರ್‌ಪಿ ಮುಖ್ಯಗಿಂತ ಸಮಾಜದ ಒಳಿತು ಮುಖ್ಯವಾಗಬೇಕು. ಜನಪ್ರತಿನಿಧಿಗಳಿಗೆ ಖುಷಿ ಪಡುವ ವಿಚಾರ ಮಾತ್ರ ಬರೆಯಬಾರದು. ಟೀಕೆ ಟಿಪ್ಪಣಿಗಳೂ ಬೇಕು. ಎಲ್ಲವನ್ನೂ ನಾವು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಸತ್ಯ ದಾಖಲೆಯಲ್ಲಿ ಇರುತ್ತದೆ” ಎಂದರು.

ಪತ್ರಕರ್ತರಿಗೆ ತರಬೇತಿಗೆ ಅವಕಾಶ

“ಪತ್ರಕರ್ತರಿಗೆ ತರಬೇತಿ ನೀಡಲು ಸರ್ಕಾರದಿಂದ ಕಾರ್ಯಕ್ರಮ ರೂಪಿಸಲಾಗುವುದು. ವಿಧಾನಸಭೆ ಕಲಾಪಗಳ ವೀಕ್ಷಣೆಗೆ. ಪೂರ್ಣ ದಿನ ವರದಿ ಮಾಡಲು ಅವಕಾಶ ನೀಡಲಾವುದು. ಹೊಸ ಪತ್ರಕರ್ತರಿಗೆ, ಕಲಾಪವನ್ನು ನೇರವಾಗಿ ವೀಕ್ಷಿಸಿ ವರದಿ ಮಾಡಲು ಅವಕಾಶ ನೀಡಲಾಗುವುದು” ಎಂದು ಖಾದರ್‌ ತಿಳಿಸಿದರು.

ಶಾಸಕರಾದ ರಿಜ್ವಾನ್‌ ಅರ್ಷದ್‌ ಮಾತನಾಡಿ “ಆರೋಗ್ಯವಂತ ಪ್ರಜಾಪ್ರಭುತ್ವಕ್ಕೆ ಸ್ವತಂತ್ರ ಮಾಧ್ಯಮ ಬೇಕು. ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರ ಆರೋಗ್ಯವಾಗಿರುವುದಿಲ್ಲ. ಭಾರತೀಯ ಮಾಧ್ಯಮಗಳನ್ನು ಕಾರ್ಪೋರೇಟ್‌ ಜಗತ್ತು ಆಳುತ್ತಿದೆ. ಮಾಧ್ಯಮಗಳಿಗೆ ಸ್ವತಂತ್ರ ಇಲ್ಲದಿದ್ದರೆ ಹೆಸರಿಗೆ ಮಾತ್ರ ಮಾಧ್ಯಮ ಆಗುತ್ತದೆ. ಸರ್ಕಾರವನ್ನು ಪ್ರಶ್ನೆ ಮಾಡದಿದ್ದರೆ ಪ್ರಯೋಜನವಿಲ್ಲ. ಮಾಧ್ಯಮಗಳ ಸಂಪಾದಕರು ಹಾಗೂ ಮಾಲೀಕರಿಗೆ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಕೆಲಸ ಮಾಡಲಿ” ಎಂದು ಹೇಳಿದರು.

“ಇಂದು ಸುದ್ದಿಗಳ ಪ್ರವಾಹವೇ ಇದೆ. ಈ ಪ್ರವಾಹದಲ್ಲಿ ವಿಶ್ವಾಸಾರ್ಹ ಸುದ್ದಿ ಯಾವುದು ಎಂಬುದೇ ಗೊಂದಲ. ಫೇಕ್‌ ಜರ್ನಲಿಸಂ ಬೆಳೆಯಲು ಬಿಡಬಾರದು. ಮಾಧ್ಯಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯವಾಗಬೇಕು” ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷೆ ಆಯೇಷಾ ಖಾನಂ ಹೇಳಿದರು.

ಹಿರಿಯ ಪತ್ರಕರ್ತೆ ಆರ್‌ ಪೂರ್ಣಿಮಾ ಮಾತನಾಡಿ, “ಸುಳ್ಳು ಸುದ್ದಿಗಳ ನಡುವೆ ವಿಶ್ವಸಾರ್ಹ ಸುದ್ದಿ ಹೇಗೆ ಮಾಡುವುದು ಎಂಬ ಆತಂಕ ಇದು ಇದೆ. ಇದರ ಬಗೆಗೆ ಭಯ ಪಡಬೇಕಾದ ಸನ್ನಿವೇಶದಲ್ಲಿ ನಾವು ಇದ್ದೇವೆ. ಮಾಧ್ಯಮಗಳ ವಿಶ್ವಾಸಾರ್ಹತೆ ರಕ್ಷಿಸಬೇಕಾಗಿದೆ. ಇದರ ಬಗ್ಗೆ ಯೋಚಿಸದಿದ್ದರೆ ಭವಿಷ್ಯದಲ್ಲಿ ಅನಾಹುತಗಳ ನಡೆಯುತ್ತವೆ” ಎಂದರು.

ಸಮಾರಂಭದಲ್ಲಿ ಪ್ರೆಸ್‌ ಕ್ಲಬ್‌ ಅಧ್ಯಕ್ಷ ಶ್ರೀಧರ್‌, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಅಕಾಡೆಮಿ ಕಾರ್ಯದರ್ಶಿ ಸಹನಾ ಎಂ, ಅಕಾಡೆಮಿಯ ಸದಸ್ಯರು, ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರು, ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಕಲಿ ಔಷಧ ಜಾಲ ಭೇದಿಸಿದ ಎಸ್‌ಐಟಿ: ಅಜರ್‌ಬೈಜಾನ್‌ಗೆ ಪರಾರಿಯಾಗಿದ್ದ ಕಿಂಗ್‌ಪಿನ್‌ ಪ್ರಶಾಂತ್‌ ಸೆರೆ

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧ...

ರಾಜ್ಯದಲ್ಲಿ 1.07 ಕೋಟಿ ಮತದಾರರ ಹೆಸರು ಡಿಲೀಟ್: ಮರು ಸೇರ್ಪಡೆಗೆ ಕೇವಲ 7.7 ಲಕ್ಷ ಅರ್ಜಿ

ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ ಬರೋಬ್ಬರಿ...