ಬೆಂಗಳೂರು | SIR ವಿರುದ್ಧ ನಾಳೆ ಬೃಹತ್ ಪ್ರತಿರೋಧ ಸಮಾವೇಶ: ನೂರ್ ಶ್ರೀಧರ್

Date:

ಎಸ್‌ಐಆರ್‌ಅನ್ನು ಯಾರೂ ತಡೆಯಲಾಗುತ್ತಿಲ್ಲ ಎಂಬ ಭ್ರಮೆ ಬಿಜೆಪಿಗಿದೆ. ಆದರೆ, ಅವರನ್ನು ಕರ್ನಾಟಕ ತಡೆಯಲಿದೆ. ಬಿಜೆಪಿಯ ಅಶ್ವಮೇಧ ಯಾಗವನ್ನು ಕರ್ನಾಟಕ ಕಟ್ಟಿಹಾಕಿಲಿದೆ. ಬಿಜೆಪಿಯ ಭ್ರಮೆಯನ್ನು ಒಡೆದು ಹಾಕುವ, ಎಸ್‌ಐಆರ್‌ ಎಂಬ ಅಸಂವಿಧಾನಿಕ ಧೋರಣೆಯನ್ನು ಕರ್ನಾಟಕ ಹೇಗೆ ಹಿಮ್ಮೆಟ್ಟಲಿದೆ ಎಂಬುದರ ‘ಟ್ರೇಲರ್‌’ ಶನಿವಾರ (ಜೂನ್‌ 20) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಕಾಣಲಿದೆ ಎಂದು ‘ಎಸ್‌ಐಆರ್‌ ವಿರೋಧಿ ಕರ್ನಾಟಕ’ ವೇದಿಕೆಯ ನಾಯಕ ನೂರ್‌ ಶ್ರೀಧರ್ ಹೇಳಿದ್ದಾರೆ.

- Advertisement -

‘ಎಸ್‌ಐಆರ್‌ ವಿರೋಧಿ ಕರ್ನಾಟಕ’ ವೇದಿಕೆಯು ಜೂನ್ 20ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿರೋಧ ಸಮಾವೇಶವನ್ನು ಆಯೋಜಿಸಿದೆ. ಈ ಸಮಾವೇಶದ ಕುರಿತು ಬೆಂಗಳೂರಿನಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ನೂರ್‌ ಶ್ರೀಧರ್ ಮಾತನಾಡಿದರು. “ಜನರು SIRನ ಅಪಾಯ ಹಾಗೂ ಅದರ ಹಿಂದಿನ ಷಡ್ಯಂತ್ರವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಆದರೆ. ಇದೇ ಸಮದಯಲ್ಲಿ ಎಸ್‌ಐಆರ್‌ ವಿರುದ್ಧದ ಅಭಿಯಾನವನ್ನು ಇನ್ನಷ್ಟು ವ್ಯಾಪಗೊಳಿಸುವ ಅಗತ್ಯವಂತೂ ಇದೆ. ನಾಳಿನ (ಶನಿವಾರ) ಸಮಾವೇಶದಲ್ಲಿ ಬಿಜೆಪಿ, ಜೆಡಿಎಸ್, ಸಂಘಪರಿವಾರವನ್ನು ಹೊರತುಪಡಿಸಿ, ಉಳಿದೆಲ್ಲ ಸುಮಾರು 200ಕ್ಕೂ ಹೆಚ್ಚು ಸಂಘಟನೆಗಳು, ರಾಜಕೀಯ ಪಕ್ಷಗಳ ಮುಖಂಡರು ಪ್ರತಿಭಟನೆಯ ವೇದಿಕೆಯಲ್ಲಿರುತ್ತಾರೆ” ಎಂದು ತಿಳಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10...

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ ಅದು ಆಗಿಲ್ಲ. ಬರಪೀಡಿತ ತಾಲೂಕು ಎಂದು ಘೋಷಣೆ ಮಾಡಲು ಇನ್ನೂ ಅವಕಾಶವಿದೆ" ಎಂದು ಕೃಷಿ ಅಧಿಕಾರಿಗಳು ಹೇಳಿದರು. ಮುಂಗಾರು ಆರಂಭದಲ್ಲಿ ಉತ್ತಮ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ...

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ, ಆಹಾರ ಭದ್ರತೆ ಮತ್ತು ಶಕ್ತಿ ಭದ್ರತೆಯ ತಾಣ. ಇಂದಿನ ಜಾಗತಿಕ ತಾಪಮಾನ ಏರಿಕೆಯ ಸವಾಲನ್ನು ಭಾರತವು ಕೇವಲ ಪರಿಸರ ಸಮಸ್ಯೆಯಾಗಿ...

ಈ ದಿನ ಕವಿತೆ | ಇಸ್ರೇಲಿನ ವಾಯುದಾಳಿಯ ರಾತ್ರಿಯಲಿ...

ಈ ಬಾರಿ ಪ್ಯಾಲೆಸ್ತೀನ್‌ನ ಕವಿ ಮೊಸಾಬ್ ಅಬು ತೋಹಾ ಅವರ ಕವನವನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ತಂದಿದ್ದಾರೆ ಸಿ ಎಚ್‌ ಭಾಗ್ಯ ಅವಳು ತನ್ನ ಹಾಸಿಗೆಯ ಸುತ್ತಾ ಇರುವ ಮಕ್ಕಳನ್ನು ಒಟ್ಟೈಸುವಳು.ಹೊಟೇಲ್ ಬಿಡುವ...

“ಕರ್ನಾಟಕದ ಎಲ್ಲ ಸಂವಿಧಾನ ಪ್ರೇಮಿಗಳು ದೊಡ್ಡ ಸಂಖ್ಯೆಯಲ್ಲಿ ನಾಳೆಯ ಸಮಾವೇಶಕ್ಕೆ ಆಗಮಿಸಬೇಕೆಂದು ವಿನಂತಿಸಿಕೊಳ್ಳುತ್ತಿದ್ದೇವೆ. SIR ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲೇಬೇಕಿರುವುದರಿಂದ ಈ ಮಹಾ ಕಾಯಕದಲ್ಲಿ ನಾವು, ‘ಇದು ಕರ್ನಾಟಕ – ನಡೆಯದು ಇಲ್ಲಿ ಯಾವುದೇ ರೀತಿಯ ದುಷ್ಟ ಆಟ’ ಎಂಬುದನ್ನು ಒಟ್ಟಾಗಿ ಘೋಷಿಸಬೇಕಿದೆ” ಎಂದು ಕರೆಕೊಟ್ಟರು.

“ಸಮಾವೇಶಕ್ಕೆ ಚುನಾವಣಾ ಅಯೋಗ ಮತ್ತು ಸರ್ಕಾರವನ್ನು ಆಹ್ವಾನಿಸಿದ್ದೇನೆ. ಇಬ್ಬರಿಂದಲೂ ನಾಡಿನ ಜನತೆಗೆ ಉತ್ತರ ಬೇಕಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ‌ ಹಾಗೂ ಪ್ರಿಯಾಂಕ್ ಖರ್ಗೆ ಅವರು ಸಮಾವೇಶಕ್ಕೆ ಬರುವುದಾಗಿ ಖಚಿತ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನಿರಂತರವಾಗಿ ಪತ್ರಗಳನ್ನು ಬರೆದಿದ್ದೇವೆ. ಆದರೆ, ಅವರು ಯಾವುದೇ ಉತ್ತರ ಕೊಟ್ಟಿಲ್ಲ. ನಾಳೆ ಅವರು ಬರಬೇಕು. ಉತ್ತರ ಕೊಡಬೇಕು” ಎಂದು ಆಗ್ರಹಿಸಿದರು.

“ಈವರೆಗೆ ಎಸ್‌ಐಆರ್‌ ನಡೆದಿರುವ ರಾಜ್ಯಗಳಲ್ಲಿ ಒಟ್ಟು 6.5 ಕೋಟಿ ಮತದಾರರು ಹೊರಹಾಕಲಾಗಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರು. ಮಹಿಳೆಯರೇ ಯಾಕೆ ಹೊರಗುಳಿದರು? ಮತಪಟ್ಟಿಯಿಂದ ಹೊರಹಾಕಲಾದ ಅಲ್ಪಸಂಖ್ಯಾತರಿಗೆ ನುಸುಳುಕೋರರು ಎಂಬ ಹಣೆಪಟ್ಟಿ ಕಟ್ಟಿ ಅವರು ಸಮರ್ಥನೆ ಮಾಡಿಕೊಳ್ಳಬಹುದು. ಆದರೆ, ಮಹಿಳೆಯರಿಗೆ ಏನೆಂದು ಹೇಳುತ್ತಾರೆ. ಅವರ ಪ್ರಕಾರ, ಮಹಿಳೆಯರೇ ಹೆಚ್ಚು ನುಸುಳುಕೋರರೇ” ಎಂದು ನೂರ್‌ ಶ್ರೀಧರ್ ಪ್ರಶ್ನಿಸಿದರು.

“ಕರ್ನಾಟಕದ ಎಸ್‌ಐಆರ್ ಪ್ರಕ್ರಿಯೆಯಲ್ಲಿ ‘ಲಾಜಿಕಲ್‌ ಡಿಸ್ಕ್ರಿಪೆನ್ಸಿ’ ಎಂಬ ಸಾಫ್ಟ್‌ ವೇರ್‌ ಅನ್ನು ಬಳಸಬಾರದು. ಯಾಕೆಂದರೆ, ಇದು ಚುನಾವಣಾ ಮ್ಯಾನ್ಯುಯಲ್‌ ನಲ್ಲಿ ಇಲ್ಲ. ಪ್ರಕಟಿತ SIR ನಿಯಮಗಳಲ್ಲೂ ಇರಲಿಲ್ಲ. ಈ ಸಾಪ್ಟ್‌ ವೇರ್‌ ಯಾವುದೇ ವಿಶ್ವಾಸಾರ್ಹ ಸಂಸ್ಥೆಯಿಂದ ಪರೀಕ್ಷಿಸಲ್ಪಟ್ಟು ಅನುಮೋದನೆ ಪಡೆದಿಲ್ಲ. ಬಂಗಾಳದಲ್ಲಿ ಅವಾಂತರ ಸೃಷ್ಟಿಸಿದ್ದೆ ಈ ಸಾಫ್ಟ್‌ ವೇರ್. ಇದರಿಂದಾಗಿ 27 ಲಕ್ಷ ಜನರ ಬಳಿ ದಾಖಲೆಗಳಿದ್ದರೂ ಓಟು ಹಾಕಲು ಅವಕಾಶ ಕೊಡಲಿಲ್ಲ.  ಸ್ಪೆಲ್ಲಿಂಗ್‌ ವ್ಯತ್ಯಾಸ ಮತ್ತು ವಯಸ್ಸಿನ ಅಂತರಗಳು ಮತದ ಹಕ್ಕನ್ನೇ ನಿರಾಕರಿಸುವ ಮಾನದಂಡವಾಗಬಾರದು” ಎಂದು ಆಗ್ರಹಿಸಿದರು.

“ಕರಡು ಮತದಾರರ ಪಟ್ಟಿಯನ್ನು ‘ಗ್ರಾಮ/ವಾರ್ಡ್‌ ಸಭೆ’ಗಳಲ್ಲಿ ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಬೇಕು. ಗ್ರಾಮ/ವಾರ್ಡ್‌ ಪ್ರದೇಶದ ಸಭೆಗಳನ್ನು ಕರೆದು, ಕರಡು ಮತದಾರರ ಪಟ್ಟಿಯಲ್ಲಿನ ಆ ಪ್ರದೇಶದ ಭಾಗವನ್ನು ಓದಬೇಕು. ಮತದಾರರ ಪಟ್ಟಿಯಲ್ಲಿ ಆಗಿರುವ ಸೇರ್ಪಡೆ ಹಾಗೂ ನಿರಾಕರಣೆಯನ್ನು ಗಮನಕ್ಕೆ ತಂದು ಅಗತ್ಯ ತಿದ್ದುಪಡಿಗಳನ್ನು ಮಾಡಲು ಇದು ಅಗತ್ಯ. ಇದು ಚುನಾವಣಾ ಆಯೋಗದ ಮ್ಯಾನ್ಯೂಯಲ್‌ನಲ್ಲಿಯೇ ಇದೆ” ಎಂದು ತಿಳಿಸಿದರು.

ಈ ಲೇಖನ ಓದಿದ್ದೀರಾ?: ಮುಖವಾಡ ಮತ್ತು ಜಂಟಿ ಹೊಣೆಗಾರಿಕೆಯ ಇಕ್ಕಟ್ಟು: ಸಂಘಕ್ಕೊಂದು ಸಾಂವಿಧಾನಿಕ ಪಾಠ

“ಅಪೀಲ್‌ ಸಲ್ಲಿಸಲು ಕನಿಷ್ಟ 6 ತಿಂಗಳ ಸಮಯವಕಾಶ ಇರಬೇಕು. ಲಕ್ಷಾಂತರ ಜನರು ಡಿಲೀಟ್‌ ಆಗಲು ಈ ಪ್ರಕ್ರಿಯೆಯಲ್ಲಿರುವ ಗಡಿಬಿಡಿಯೂ ಒಂದು ಮುಖ್ಯ ಕಾರಣ. ಜನರ ಬಳಿ ಇರುವ ದಾಖಲೆಗಳನ್ನು ಆಯೋಗ ಒಪ್ಪುತ್ತಿಲ್ಲ. ಆಯೋಗ ಕೇಳುವ ದಾಖಲೆಗಳು ಸಾಮಾನ್ಯವಾಗಿ ಜನರ ಬಳಿ ಇಲ್ಲ. ದಾಖಲೆಗಳನ್ನು ಹೊಂದಿಸಿಕೊಳ್ಳಲು ಸಮಯವಕಾಶ ಬೇಕೇಬೇಕು. ವಲಸೆ ಎಂಬುದು ಇಂದು ಸರ್ವೆಸಾಮಾನ್ಯ ವಿದ್ಯಮಾನ. ದುಡಿಯಲು ಹೋದ ಪ್ರದೇಶಗಳಿಂದ ಮರಳಿ ಬಂದು ದಾಖಲೆ ಸಿದ್ಧಮಾಡಿಕೊಡುವುದು ಸುಲಭವಲ್ಲ. ಅಲ್ಲದೆ ಕರ್ನಾಟಕದ ಚುನಾವಣೆಗಳೂ ತಕ್ಷಣದಲ್ಲೇನೂ ಇಲ್ಲ. ವ್ಯವಧಾನದ ಜೊತೆ ಪ್ರಕ್ರಿಯೆ ನಡೆಸಬೇಕು” ಎಂದು ಒತ್ತಾಯಿಸಿದರು.

 “ಮತದಾರರ ಕರಡು ಪಟ್ಟಿಯನ್ನು ರೀಡಬಲ್‌ ಫಾರ್ಮ್ಯಾಟಿನಲ್ಲಿ ಕೊಡಬೇಕು. ಈಗ ಆಯೋಗದ ವೆಬ್‌ ಸೈಟಿನಲ್ಲಿ ವ್ಯಕ್ತಿ ತನ್ನ ವಿವರ ಹಾಕಿ ವ್ಯಕ್ತಿಗತ ಓಟಿನ ಸ್ಥಿತಿಗತಿ ನೋಡಿಕೊಳ್ಳಬಹುದು. ಆದರೆ ಎಲ್ಲರ ಓಟಿನ ಸ್ಥಿತಿಗತಿಯನ್ನು ಪರಿಶೀಲಿಸಲು ಆಗುತ್ತಿಲ್ಲ. ಇಡೀ ಮತದಾರರ ಪಟ್ಟಿಯನ್ನೇ ಹೊಸದಾಗಿ ನೊಂದಾವಣೆ ಮಾಡುತ್ತಿರುವಾಗ ನಮ್ಮ ನಮ್ಮ ಊರಿನ, ನಮ್ಮ ಸಮುದಾಯಗಳ, ನಮ್ಮ ನಮ್ಮ ಪಕ್ಷದ ಮತದಾರರ ಓಟುಗಳ ಸ್ಥಿತಿ ತಿಳಿದುಕೊಳ್ಳಲು ಅವಕಾಶ ಪ್ರತಿಯೊಬ್ಬರಿಗೂ ಇರಬೇಕು. ಮತದಾರರ ಪಟ್ಟಿ ಎಂಬುದು ಸಾರ್ವಜನಿಕ ದಾಖಲೆ ಅದು ಗೌಪ್ಯ ದಾಖಲೆ ಅಲ್ಲ. ಆದರೆ, ಈ ಪಟ್ಟಿಯನ್ನು ಪಾರದರ್ಶಕವಾಗಿರಲು ಚುನಾವಣಾ ಆಯೋಗ ಏಕೆ ಹೆದರುತ್ತಿದೆ” ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವೀರಸಂಗಯ್ಯ, ತಾರಾರಾವ್, ಅಮ್ಜದ್ ಪಾಷಾ, ಬಿ.ಟಿ ಲಲಿತಾ ನಾಯಕ್, ಮೊಹಮದ್ ಯೂಸಫ್ ಕನ್ನಿ ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂದಿಗ್ರಾಮ ಉಪಚುನಾವಣೆ: ಟಿಎಂಸಿ ಅಭ್ಯರ್ಥಿ ನಾಮಪತ್ರ ವಾಪಸ್; ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ನಂದಿಗ್ರಾಮ ವಿಧಾನಸಭಾ ಕ್ಷೇತ್ರದ...

‌ಮೈಸೂರು ವಿವಿ ಸಂಜೆ ಕಾಲೇಜು: ಸಾಂಸ್ಕೃತಿಕ ಹಾಗೂ NSS ಚಟುವಟಿಕೆಗಳಿಗೆ ಚಾಲನೆ

ಮೈಸೂರು ವಿವಿ ಸಂಜೆ ಕಾಲೇಜಿನ ಪಠ್ಯೇತರ ಚಟುವಟಿಕೆಗಳ ಸಮಿತಿಯಿಂದ 2026-27ನೇ ಶೈಕ್ಷಣಿಕ...

ರಾಮದುರ್ಗ, ಸವದತ್ತಿ ಬರ ಘೋಷಣೆಗೆ ರೈತರ ಆಗ್ರಹ: 10 ದಿನಗಳಲ್ಲಿ ಘೋಷಣೆ – ಶಾಸಕ ಅಶೋಕ ಪಟ್ಟಣ

"ಬರಪೀಡಿತ ತಾಲೂಕು ಘೋಷಣೆಯಾಗುತ್ತದೆಂಬ ವಿಶ್ವಾಸದಲ್ಲಿ ಗ್ರೌಂಡ್ ಟ್ರೂಥಿಂಗ್ ಮಾಡಲು ಸಿದ್ಧರಾಗಿದ್ದೆವು. ಆದರೆ...

ಕರಗುವ ಹಿಮಾಲಯ, ಕುಸಿಯುವ ಆರ್ಥಿಕತೆ: ಹಿಮಪ್ರಳಯದ ಹಾದಿಯಲ್ಲಿ ಭಾರತದ ಭವಿಷ್ಯ!

ಹಿಮಾಲಯವು ಕೇವಲ ಮಂಜಿನ ಬೆಟ್ಟಗಳ ಸಮೂಹವಲ್ಲ; ಅದು ಭಾರತದ ಆರ್ಥಿಕ ಸ್ಥಿರತೆ,...