ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದಿದ್ದರೆ ಎಂಎಲ್‌ಎ, ಎಂಪಿಗಳಿಗೆ ಅನುಕೂಲವಷ್ಟೇ: ಬಿ.ಎಲ್.ಶಂಕರ್‌

Date:

“ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯದಿದ್ದರೆ ಎಂಎಲ್‌ಎ, ಎಂಪಿಗಳಿಗೆ ಅನುಕೂಲವಾಗುತ್ತದೆಯೇ ಹೊರತು, ಇನ್ಯಾರಿಗೂ ಅಲ್ಲ” ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್‌ ಹೇಳಿದರು.

ಪೂರ್ಣ ಸ್ವರಾಜ್ ಫೌಂಡೇಷನ್‌ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಡಾ.ಶಂಕರ ಕೆ. ಪ್ರಸಾದ್ ಅವರ ’21ನೇ ಶತಮಾನದ ಆತ್ಮನಿರ್ಭರ ಗ್ರಾಮ ಪಂಚಾಯಿತಿ’ ಕೃತಿ ಬಿಡುಗಡೆಯಲ್ಲಿ ಅವರು ಮಾತನಾಡಿದರು.

ಬಿಬಿಎಂಪಿ ಅವಧಿ ಮುಗಿದು ಎರಡೂವರೆ ವರ್ಷಗಳೇ ಆದವು. ಜಿಲ್ಲಾ, ತಾಲ್ಲೂಕು ಪಂಚಾಯಿತಿಗಳ ಅವಧಿ ಮುಗಿದು ಎರಡು ವರ್ಷಗಳಾದವು. ಆದರೆ ನ್ಯಾಯಾಲಯದಲ್ಲಿ ಪ್ರಕರಣಗಳಿರುವುದರಿಂದ ಚುನಾವಣೆಗಳು ನಡೆಯುತ್ತಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ ಎಂದು ಕೋರ್ಟ್‌ಗಳು ಮಧ್ಯಪ್ರವೇಶ ಮಾಡುತ್ತಿವೆ. ಕೋರ್ಟ್‌ಗಳು ಮಧ್ಯಪ್ರವೇಶ ಮಾಡಲೆಂದೇ ನಿಯಮಗಳನ್ನು ರೂಪಿಸಿದರೆ ಏನು ಮಾಡುವುದು? ಈಗ ಆಗುತ್ತಿರುವುದು ಅದೇ ಸಮಸ್ಯೆ. ಬುದ್ಧಿಪೂರ್ವಕವಾಗಿಯೇ ಈ ಪ್ರಮಾದ ಎಸಗಲಾಗುತ್ತಿದೆ ಎಂದು ದೂರಿದರು.

ಇರುವಂತಹ ಸ್ಥಿತಿಯಲ್ಲಿಯೇ ಚುನಾವಣೆ ಮಾಡಿ ಎಂದು ಹೇಳಲೂ ಆಗುವುದಿಲ್ಲ. ನ್ಯಾಯಾಲಯಗಳು ಅಡ್ಡಬರುತ್ತವೆ. ಸಂವಿಧಾನ ಬಲ, ಕಾನೂನಿನ ರಕ್ಷೆ ಇದ್ದರೂ ಗ್ರಾಮ ಪಂಚಾಯಿತಿಗಳು ಕೈತಪ್ಪುತ್ತಿವೆ. ಚುನಾವಣೆ ನಡೆಯದಿದ್ದರೆ ಶಾಸಕರಿಗೆ, ಸಂಸದರಿಗೆ, ಅಧಿಕಾರಿಗಳಿಗೆಯೇ ಅನುಕೂಲ ಹೊರತು, ಇನ್ನಾರಿಗೂ ಅಲ್ಲ. ಯಾಕೆಂದರೆ ಎಲ್ಲರೂ ಇವರ ಹತ್ತಿರವೇ ಬರುತ್ತಾರೆ. ಇವರಿಂದಲೇ ಎಲ್ಲವನ್ನೂ ಮಾಡಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಲ್ಲಿಯವರೆಗೆ ಅಧಿಕಾರ ಕೇಂದ್ರಿತವಾದ ಮನಸ್ಥಿತಿ ಶಾಸಕರು, ಸಂಸದರಲ್ಲಿ ದೂರ ಆಗುವುದಿಲ್ಲವೋ ಅಲ್ಲಿಯವರೆಗೆ ಗ್ರಾಮ ಪಂಚಾಯಿತಿ ವ್ಯವಸ್ಥೆ ಯಶಸ್ವಿಯಾಗುವುದಿಲ್ಲ. ಬದ್ಧತೆ, ಸೇವೆ, ಹೋರಾಟದ ಕಾರಣಕ್ಕೆ ಜನಪ್ರತಿನಿಧಿಗಳಾಗುವವರು ಕಡಿಮೆಯಾಗಿ, ಚುನಾವಣೆ ಗೆಲ್ಲುವುದನ್ನು ಕರಗತ ಮಾಡಿಕೊಂಡವರು ಮೇಲುಗೈ ಸಾಧಿಸುತ್ತಿದ್ದಾರೆ. ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾಗದು.

ಅರಣ್ಯದಲ್ಲಿ ಪರಿಶಿಷ್ಟ ಪಂಗಡದವರು ಪರಂಪರಗತವಾಗಿ ಕನಿಷ್ಠ 70 ವರ್ಷಗಳಿಂದ ವಾಸವಿದ್ದರೆ ಅವರಿಗೆ ಅರಣ್ಯ ಹಕ್ಕುಗಳನ್ನು ನೀಡಬೇಕು. ಅರಣ್ಯದಲ್ಲಿ ವಾಸ ಮಾಡಲು, ವಸ್ತುಗಳನ್ನು ಬಳಸಲು ಅವಕಾಶ ನೀಡಬೇಕು ಎಂದು ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಕಾನೂನು ಮಾಡಲಾಯಿತು. ಇಂತಹ ನಿರ್ಧಾರಗಳು ಗ್ರಾಮಸಭೆಯಲ್ಲೇ ತೀರ್ಮಾನ ಆಗಬೇಕು, ಒಂದೇ ಒಂದು ದಾಖಲೆ ಇದ್ದರೆ ಸಾಕು, ಅವರಿಗೆ ಹಕ್ಕುಗಳನ್ನು ನೀಡಬೇಕು ಎನ್ನುತ್ತದೆ ಕಾನೂನು. ಆದರೆ ಆದಿವಾಸಿಗಳು ನೀಡುವ ದಾಖಲೆಗಳನ್ನು ಅಧಿಕಾರಿಗಳು ಒಪ್ಪದೆ ಇರುವ ಘಟನೆಗಳು ವರದಿಯಾದವು ಎಂದು ವಿಷಾದಿಸಿದರು.

ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳು, ಕೋ ಆಪರೇಟಿವ್ ಬ್ಯಾಂಕ್‌ಗಳು ಇರುತ್ತವೆ. ಒಂದು ಗ್ರಾಮಕ್ಕೆ ಅಗತ್ಯವಾಗಿ ಬೇಕಾದ ಬೇರೆ ಬೇರೆ ಸಂಸ್ಥೆಗಳು ಕೆಲಸ ಮಾಡುತ್ತಿರುತ್ತವೆ. ಒಂದು ಗ್ರಾಮ ಪಂಚಾಯಿತಿಯನ್ನು ಒಂದು ಯೂನಿಟ್ ಆಗಿ ರೂಪಿಸಿ, ಎಲ್ಲವೂ ಈ ಗ್ರಾಪಂ ಒಳಗೆ ಬರಬೇಕೆಂಬ ನೀತಿ ತಂದು, ಅಲ್ಲಿಯೇ ರೆಸಿಡೆನ್ಸಿ ಶಾಲೆಯನ್ನು ತೆರೆದರೆ ಗ್ರಾಮವು ಅಭಿವೃದ್ಧಿ ಹೊಂದುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಪ್ರೊ.ಬಿ.ಕೆ.ಚಂದ್ರಶೇಖರ್‌ ಮಾತನಾಡಿದರು

ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌ ಮಾತನಾಡಿ, “ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಳ್ಳಿಯಲ್ಲೇ ಹುಟ್ಟಿ ಬೆಳೆದವರು. ಬದ್ಧತೆ ಇರುವ ವ್ಯಕ್ತಿ. ಗ್ರಾಮ ಪಂಚಾಯಿತಿಗಳ ಸುಧಾರಣೆಯನ್ನು ಅವರು ನಿಧಾನಕ್ಕಾದರೂ ಮಾಡಬಹುದು. ಆದರೆ, ಯಾಕೆ ಆಗುತ್ತಿಲ್ಲ. ಯಾಕೆಂದರೆ ಇವುಗಳ ಅಧಿಕಾರವನ್ನು ಎಂಎಲ್‌ಎಗಳು ಚಲಾಯಿಸುತ್ತಿದ್ದಾರೆ. ಅವರಿಂದ ತೆಗೆದುಕೊಂಡು ಹಂಚಬೇಕಿದೆ. ಆಗುತ್ತಾ? ಇಷ್ಟು ಗಟ್ಟಿ ಇರುವ ಸಿದ್ದರಾಮಯ್ಯನವರು ಮಾಡಲಿ” ಎಂದು ಹೇಳಿದರು.

“ಶಕ್ತಿ ರಾಜಕಾರಣ ನಡೆಯುತ್ತಿದೆ ನಡೆಯುತ್ತಿದೆ. ವಿಕೇಂದ್ರೀಕರಣ ಆಗಬೇಕು. ದೆಹಲಿಯಲ್ಲಿರುವವರ ಉದ್ದೇಶವೇ ಕೇಂದ್ರೀಕರಣ. ಆದರೆ ರಾಜ್ಯಗಳಲ್ಲಿ ಯಾಕೆ ಸಾಧ್ಯವಾಗುತ್ತಿಲ್ಲ. ಪಂಚಾಯತ್‌ ರಾಜ್ ಸುಧಾರಣೆಗೆ ಸಂಘಟನೆ ಆಗಬೇಕಿದೆ” ಎಂದು ತಿಳಿಸಿದರು.

ಅಬ್ದುಲ್ ನಜೀರ್‌ ಸಾಬ್ ಪೀಠದ ಮಾಜಿ ಅಧ್ಯಕ್ಷ ಪ್ರೊ.ಸದಾನಂದ ಜಾನೆಕೆರೆ, ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ಯಾಮ್ ಕಶ್ಯಪ್‌, ಕೃತಿಯ ಲೇಖಕರಾದ ಡಾ.ಶಂಕರ ಕೆ.ಪ್ರಸಾದ್‌ ಹಾಜರಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ ಪಿ ನಂಜುಂಡಿ ಕಾಂಗ್ರೆಸ್‌ ಸೇರ್ಪಡೆ

ವಿಧಾನ ಪರಿಷತ್ ಸ್ಥಾನಕ್ಕೆ ಮತ್ತು ಬಿಜೆಪಿಯ ಪಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ...

ಸುಳ್ಳು ಹೇಳುವವರನ್ನು ತಿರಸ್ಕರಿಸಿ, ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ ತೀರ್ಮಾನ ಮಾಡಿ: ಸಿಎಂ ಸಿದ್ದರಾಮಯ್ಯ

ಸುಳ್ಳು ಹೇಳುವವರನ್ನು ತಿರಸ್ಕರಿಸಿ, ಮುಂದಿನ ಐದು ವರ್ಷದವರೆಗೆ ಯಾವ ಪಕ್ಷ ಅಧಿಕಾರದಲ್ಲಿರಬೇಕೆಂಬ...

ಯಾದಗಿರಿ | ಈಜಲು ಹೋಗಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಸಾವು

ಕೆರೆಯಲ್ಲಿ ಈಜಾಡಲು ತೆರಳಿದ್ದ ಮೂವರು ಬಾಲಕರು ಕೆಸರಿನಲ್ಲಿ ಸಿಲುಕಿ ಮೃತಪಟ್ಟ ಹೃದಯವಿದ್ರಾವಕ...