ಗ್ರಾಮ ಸ್ವರಾಜ್ಯದ ಆಶಯಕ್ಕೆ ಎಳ್ಳು-ನೀರು ಬಿಟ್ಟ ಸರ್ಕಾರ

Date:

ಮೇಣದ ಬತ್ತಿ ಹಚ್ಚಿಟ್ಟರೆ ದೀಪ ಉರಿದಂತೆ ಮೇಣ ಕರಗಿ ಕೆಳಮುಖವಾಗಿ ಹರಿಯುವಂತೆ, ಅಧಿಕಾರ ಎನ್ನುವುದು ಆಯಾ ಗ್ರಾಮದ ವಾರ್ಡಿನ ಜನವಸತಿಯ ಕಟ್ಟಕಡೆ ವ್ಯಕ್ತಿಯವರೆಗೂ ಹರಿಯಬೇಕಾಗಿದೆ. ಅದಕ್ಕಾಗಿ ಸ್ಥಳೀಯ ಆಡಳಿತಗಳು ಪೂರಕವಾಗಿವೆ. ಇಂತಹ ವಾಸ್ತವ ಸಂಗತಿಯನ್ನು ಜನಸಾಮಾನ್ಯರಿಗೆ ಅರ್ಥೈಸುವಲ್ಲಿ ವಿಫಲವಾಗಿರುವುದೇ ಇಂತಹ ಪ್ರಮಾದಗಳಿಗೆ ಕಾರಣವಾಗಿದೆ. 

ಗ್ರಾಮ ಸ್ವರಾಜ್ಯ ಮಹಾತ್ಮ ಗಾಂಧೀಜಿಯವರ ಆಶಯ ಇಂತಹ ಆಶಯಕ್ಕೆ‌ ಪೂರಕವಾಗಿದ್ದು, ಸಂವಿದಾನದ 73ನೇ ತಿದ್ದುಪಡಿ
ದೇಶಕ್ಕೆ ಸ್ವಾತಂತ್ರ್ಯ ಬಂದ ನಾಲ್ಕು ದಶಕಗಳ ನಂತರ ಅಧಿಕಾರ ವಿಕೇಂದ್ರೀಕರಣದ ಆಲೊಚನೆ ಪ್ರಾರಂಭವಾಗಿ 1993ರಲ್ಲಿ ಇದಕ್ಕೆ‌ ಕಾಯ್ದೆ ಬಲ‌ ದೊರಕಿತು. ಅಲ್ಲಿಯವರೆಗೂ ಗ್ರಾಮೀಣ ಭಾರತದಲ್ಲಿ‌ ಬ್ರಿಟೀಷರು, ರಾಜ‌ಮಹರಾಜರು ಹುಟ್ಟುಹಾಕಿದ ಆಡಳಿತ ಕ್ರಮವೇ ಇತ್ತು.

- Advertisement -

ಸಂವಿದಾನದ 73ನೇ ತಿದ್ದುಪಡಿ ಮೂಲಕ‌ ಸ್ಥಳೀಯ ಆಡಳಿತಕ್ಕೆ‌ ಕಾಯ್ದೆ ಬಲ ದೊರಕಿ ದೇಶಾದ್ಯಂತ ಏಕರೂಪದ ಆಡಳಿತ ವ್ಯವಸ್ಥೆ ಜಾರಿಯಾಯಿತು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿಗಳು ಜಾರಿಗೆ ಬಂದವು.
ಇವುಗಳಿಗೆ ಆಡಳಿತ, ಅಧಿಕಾರ, ಹಣಕಾಸನ್ನು ಹಂಚಿಕೆ ಮಾಡಲಾಯಿತು. ಐದು ವರ್ಷ ಕಾಲಾವಧಿಗೆ ಅನುಗುಣವಾಗಿ ಚುನಾವಣೆ ನಡೆಸಲೆಂದೇ ರಾಜ್ಯ ಚುನಾವಣಾ ಆಯೋಗ ರಚನೆಯಾಯಿತು. ಸಕಾಲಿಕವಾಗಿ ಚುನಾವಣೆ ನಡೆಸಿದರೆ ಮಾತ್ರ ಕೇಂದ್ರ ಹಣಕಾಸು‌ ಆಯೋಗದ ಅನುದಾನ ದೊರೆಯಲಿದೆ‌ ಎಂದು ಕಾಯ್ದೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ದಕ್ಷಿಣ ಆಫ್ರಿಕಾದಲ್ಲಿ ಗಾಂಧಿ ಮೊಳಗಿಸಿದ್ದ ಮತ ಹಕ್ಕಿನ ಕೂಗಿಗೆ...

ಮತದಾನ ಕೇವಲ ಹಕ್ಕಲ್ಲ, ಅದು ಪ್ರಜೆಯೊಬ್ಬನ ಘನತೆ ಹಾಗೂ ಅಸ್ತಿತ್ವದ ಸಂಕೇತ. 131 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಇದೇ ಮತಾಧಿಕಾರಕ್ಕಾಗಿ ಗಾಂಧೀಜಿ ಬ್ರಿಟಿಷರ ವಿರುದ್ಧ ಸಿಡಿದೆದ್ದಿದ್ದರು. ಆದರೆ, ಇಂದು ಸ್ವತಂತ್ರ ಭಾರತದಲ್ಲಿ...

ಆ ಮೂಲಕ‌ ಅಧಿಕಾರ ವಿಕೇಂದ್ರೀಕರಣ, ಗ್ರಾಮ ಸ್ವರಾಜ್ಯ, ಆಡಳಿತದಲ್ಲಿ ಜನಸಹಬಾಗಿತ್ವ, ಗ್ರಾಮಸಭೆ, ಹಳ್ಳಿಯ ವಿಧಾನಸಭೆ ಎಂಬೆಲ್ಲ ಘೋಷವಾಕ್ಯಗಳು ಜೀವತಳೆದವು. ಈ ಎಲ್ಲವನ್ನೂ ಸ್ಥಳೀಯ ಆಡಳಿತಕ್ಕಾಗಿ ಕೊಟ್ಟ ಸರ್ಕಾರ, ಚುನಾವಣೆ ನಡೆಸುವುದು ಮಾತ್ರ ರಾಜ್ಯ ಚುನಾವಣಾ ಆಯೋಗವೇ. ಆದರೆ ಅದಕ್ಕೆ ಬೇಕಾದ ಮೀಸಲು ನಿಗದಿ ನನ್ನದೇ ಎಂದು ಬಿಟ್ಟ ಪರಿಣಾಮ ಕಾಲಕಾಲಕ್ಕೆ‌ ಚುನಾವಣೆ ಆಗಬೇಕೆಂದರೆ ಆಳುವ ಸರ್ಕಾರಗಳ ಅಪ್ಪಣೆಗೆ ಕಾಯಬೇಕಾದ ಅನಿವಾರ್ಯ ಸೃಷ್ಟಿಯಾಯಿತು.

ಪರಿಣಾಮ ರಾಜ್ಯ ಚುನಾವಣಾ ಅಯೋಗ ಹಲ್ಲು ಕಿತ್ತ ಹಾವಿನಂತಾಯಿತು. ಅದಕ್ಕೆಂದೇ ಅದೀಗ ಹೆಡೆ ಎತ್ತಿ ಬುಸ್‌ಗುಡುವುದಕ್ಕೆ‌ ಮಾತ್ರ ಸಾಧ್ಯವಾಗುತ್ತಿದೆ. ಅದನ್ನು ಕ್ರಮವಾಗಿ ಮಾಡುತ್ತಿದೆ ಕೂಡ. ಹೈಕೋರ್ಟ್ ಅಂಗಳಕ್ಕೆ ಜಿಲ್ಲಾ‌ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ವಿಷಯ ಕೊಂಡೊಯ್ದಿದೆ. ಸರ್ಕಾರ ನೆಪಗಳ ಮೇಲೆ ನೆಪಗಳನ್ನು ದಾಖಲಿಸುತ್ತ ಕಾಲಾವಕಾಶ ಪಡೆಯುವಲ್ಲಿಯೇ ಕಾಲಹರಣ ಮಾಡುತ್ತಿದೆ.

ರಾಜ್ಯದಲ್ಲಿ ಸಕಾಲಿಕವಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದೆ ಗ್ರಾಮ ಸ್ವರಾಜ್ ಆಶಯಕ್ಕೆ ಎಳ್ಳು ನೀರು ಬಿಡುತ್ತಿರುವುದರಲ್ಲಿ ಮೂರು ರಾಜಕೀಯ ಪಕ್ಷಗಳ ಪಾತ್ರ ಇರುವುದು ಸ್ಪಷ್ಟ.

ಆಳುವ ಸರ್ಕಾರ ಆಡಳಿತದಲ್ಲಿ ಹಳಿತಪ್ಪಿದಾಗ ಆ ಬಗ್ಗೆ ಎಚ್ಚರಿಸಿ ಸರಿದಾರಿಗೆ ತರಬೇಕಾದ ಹೊಣೆಗಾರಿಕೆ ವಿರೋಧ ಪಕ್ಷದ್ದು.
ಇಷ್ಟು ವರ್ಷಗಳ‌ ಕಾಲ ಜಿಲ್ಲಾ‌ ಪಂಚಾಯತ್‌, ತಾಲೂಕು ಪಂಚಾಯತ್ ಚುನಾವಣೆ ಮಾಡದೆ‌ ಸಬೂಬುಗಳನ್ನು ಹೇಳುತ್ತ ಬರುತಿದ್ದು, ಇದೀಗ ಗ್ರಾಮ ಪಂಚಾಯಿತಿಗೂ ಆಡಳಿತ ಅಧಿಕಾರಿ ನೇಮಕ‌ಮಾಡಿ‌ ಚುನಾವಣೆ ಮುಂದೂಡಿದಾಗಲು‌‌ ಸದನದ ಒಳಗೆ ಹಾಗೂ ಹೊರಗೆ ವಿರೋಧ ವ್ಯಕ್ತಪಡಿಸಿ ಚುನಾವಣೆಗೆ ಆಗ್ರಹ ಮಾಡದೆ ಮುಗಮ್ಮಾಗಿರುವುದು ಮೂರು ಪಕ್ಷಗಳು ಜನರ ಕೈಗೆ ಅಧಿಕಾರ ನೀಡಲು ಮನಸ್ಸಿಲ್ಲ ಎಂಬುದನ್ನು ಸಾಬೀತುಪಡಿಸಿವೆ.

ಪ್ರತಿನಿಧಿಗಳಿಗೆ ಧ್ವನಿ‌ ಇಲ್ಲ; ಜಿಲ್ಲಾ‌ಪಂಚಾಯತ್‌, ತಾಲೂಕು ಪಂಚಾಯತ್‌ಗಳಿಗೆ ಆಯ್ಕೆಯಾಗಿ ಕಾರ್ಯನಿರ್ವಹಿಸಿದ
ಚುನಾಯಿತ‌ ಪ್ರತಿನಿಧಿಗಳಿಗೂ ಈ‌ ಕುರಿತು ಧ್ವನಿ ಎತ್ತಿ ಸಕಾಲಿಕ ಚುನಾವಣೆಗೆ ಆಗ್ರಹಿಸುವ ಮನಸ್ಸು ಹಾಗೂ
ಧ್ವನಿಯೂ ಇಲ್ಲದಂತಾಗಿದೆ. ಕಾರಣ ಇವರುಗಳು ರಾಜಕೀಯ ಪಕ್ಷಗಳ‌ ಮರ್ಜಿಯಲ್ಲಿ ಇರುವುದು ಒಂದು ಅಂಶವಾದರೆ,
ಮತ್ತೊಂದು ಆವರ್ತನ‌ ಪದ್ದತಿಯ ಮೀಸಲು ವ್ಯವಸ್ಥೆಯಿಂದ ಮರಳಿ‌ ಸ್ಪರ್ಧೆಗೆ ಅವಕಾಶ ಸಿಗಲಾರದು ಎಂಬುದಾಗಿದೆ.

ಅಧಿಕಾರ ವಿಕೇಂದ್ರೀಕರಣ ತನ್ನ ಹಂತಕ್ಕೆ‌ ಇರಲಿ ಎನ್ನುವ‌ ಮನಸ್ಥಿತಿ: ಶಾಸಕರು, ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಸದಸ್ಯರು, ಕಡೆಗೆ ಗ್ರಾ ಪಂ ಸದಸ್ಯರೂ ಕೂಡ ಅಧಿಕಾರ ವಿಕೇಂದ್ರೀಕರಣ ತನ್ನ ಹಂತಕ್ಕೇ ನಿಲ್ಲಲಿ ಎಂಬ ಮನಸ್ಥಿತಿ ಹೊಂದಿರುವುದೇ ಇದಕ್ಕೆಲ್ಲ ಕಾರಣವಾಗಿದೆ.

ಸ್ಥಳೀಯ ಆಡಳಿತ ಸಂಸ್ಥೆಗಳು ಸಶಕ್ತಗೊಂಡರೆ ತಮ್ಮ‌ ಕಚೇರಿಗೆ ಎಡತಾಕುವ ಜನದಟ್ಟಣೆ ತಗ್ಗೀತು ಎಂಬ ಆತಂಕ ಶಾಸಕರದು.
ಗ್ರಾಮಸಭೆ, ಸ್ಥಾಯಿಸಮಿತಿ, ಉಪಸಮಿತಿ ಸಶಕ್ತಗೊಂಡರೆ ತಮ್ಮ ಅವಕಾಶ ಮೊಟಕಾದೀತು ಎಂಬ ಚಿಂತೆ ಸ್ಥಳೀಯ ಆಡಳಿತ ಚುನಾಯಿತ‌ ಪ್ರತಿನಿಧಿಗಳದ್ದು. ಅದಕ್ಕೆ ಅವರುಗಳೂ ಕೂಡ ಅವರ ಹಂತದಲ್ಲಿಯೇ ಅಧಿಕಾರ ವಿಕೇಂದ್ರೀಕರಣ ಉಳಿಸಿಕೊಂಡರು. ಈ ಎಲ್ಲದರ ಒಟ್ಟು ಪರಿಣಾಮ ದೊಡ್ಡ ಸಂಖ್ಯೆಯ ಜನರು ಅಥವಾ ಮತದಾರರು ಅಧಿಕಾರ ವಿಕೇಂದ್ರೀಕರಣದ ಸೊಗಸು ಅರಿಯದೆ ಕೇವಲ ಮತದಾನ‌ ಪ್ರಕ್ರಿಯೆಗೆ ಸೀಮಿತರಾಗಿಬಿಟ್ಟರು. ಅದುವೆ ಅವರ ಪಾಲಿನ ಅಧಿಕಾರ ವಿಕೇಂದ್ರೀಕರಣ ಎಂಬಂತೆ ದೊಡ್ಡಮಟ್ಟದ ಫಲಾನುಭವಿ ಎಂಬಂತೆ ಭ್ರಮಿಸಿದರು.

ಅಸಲಿಗೆ ಜನರೇ ಗ್ರಾಮ ಸ್ವರಾಜ್ಯದ ಫಲಾನುಭವಿಗಳು. ಪರಿಸ್ಥಿತಿ ಹೀಗೆ ಬಂಧಿಸಲ್ಪಟ್ಟ ಪರಿಣಾಮ ರಾಜಕೀಯ ಪಕ್ಷಗಳಿಗೆ ಸ್ಥಳೀಯ ಆಡಳಿತ ಸಂಸ್ಥೆಗಳ ಚುನಾವಣೆಗಳನ್ನು ಸಕಾಲಿಕವಾಗಿ ನಡೆಸದೇ ಇದ್ದರೆ, ಗ್ರಾಮೀಣ ಜನರ ಕೆಂಗಣ್ಣಿಗೆ ಗುರಿಯಾಗಬೇಕಾದೀತು‌ ಎಂಬ ಅಂಜಿಕೆ‌ ಇಲ್ಲಾದಂತಾಗಿದೆ.

ಪುಶ್‌-ಪುಲ್‌ ಪ್ರಕ್ರಿಯೆ :

ಇದೀಗ ಗ್ರಾಮ ಸ್ವರಾಜ್ಯ ಬಯಸುವವರು ಹಾಗೂ ಸಕಾಲಿಕವಾಗಿ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಚುನಾವಣೆ ನಡೆದು ಅಧಿಕಾರ ವಿಕೇಂದ್ರೀಕರಣವಾಗಬೇಕು ಎನ್ನುವವರು
ಇದೀಗ ʼಪುಶ್-ಪುಲ್ʼ ಪ್ರಕ್ರಿಯೆ ಮಾಡಬೇಕಾದ ಪರಿಸ್ಥಿತಿ ಇದೆ.

ಮೇಲಿನ ಹಂತದ ಚುನಾಯಿತ‌ ಪ್ರತಿನಿಧಿಗಳನ್ನು ಸಕಾಲಿಕವಾಗಿ ಚುನಾವಣೆಗೆ ಆಗ್ರಹ ಮಾಡಿ ಅದಕ್ಕಾಗಿ ಪುಶ್‌ ಮಾಡಬೇಕು.
ಗ್ರಾಮ ಸ್ವರಾಜ್ಯದ ದೊಡ್ಡ ಫಲಾನುಭವಿಗಳಾದ ಜನರನ್ನು ಈ ಆಗ್ರಹಕ್ಕೆ ಎಳೆಯಬೇಕು(ಪುಲ್ ಮಾಡಬೇಕು).

ಇದನ್ನೂ ಓದಿದ್ದೀರಾ? SIR ಪ್ರಕ್ರಿಯೆಯಲ್ಲಿ ತೀವ್ರ ಪಕ್ಷಪಾತ: ಮಾಜಿ ಚುನಾವಣಾ ಆಯುಕ್ತರು, ಆಡಳಿತಗಾರರು, ಸಾಮಾಜಿಕ ಹೋರಾಟಗಾರರ ಕಳವಳ

ಕೊನೆಯ ಮಾತು : ಅಧಿಕಾರ ವಿಕೇಂದ್ರಿಕರಣ ಎಂದರೆ ಯಾವ ಕೆಲಸವನ್ನು ಯಾವ ಹಂತದಲ್ಲಿ‌ ಪರಿಣಾಮಕಾರಿಯಾಗಿ ಮಾಡಲು‌ ಸಾಧ್ಯವೋ ಆ ಹಂತಕ್ಕೆ ಅಧಿಕಾರ ವರ್ಗಾಯಿಸುವುದೇ ಆಗಿದೆ.

ಮೇಣದ ಬತ್ತಿ ಹಚ್ಚಿಟ್ಟರೆ ದೀಪ ಉರಿದಂತೆ ಮೇಣ ಕರಗಿ ಕೆಳಮುಖವಾಗಿ ಹರಿಯುವಂತೆ, ಅಧಿಕಾರ ಎನ್ನುವುದು ಆಯಾ ಗ್ರಾಮದ ವಾರ್ಡಿನ ಜನವಸತಿಯ ಕಟ್ಟಕಡೆ ವ್ಯಕ್ತಿಯವರೆಗೂ ಹರಿಯಬೇಕಾಗಿದೆ. ಅದಕ್ಕಾಗಿ ಸ್ಥಳೀಯ ಆಡಳಿತಗಳು ಪೂರಕವಾಗಿವೆ. ಇಂತಹ ವಾಸ್ತವ ಸಂಗತಿಯನ್ನು ಜನಸಾಮಾನ್ಯರಿಗೆ ಅರ್ಥೈಸುವಲ್ಲಿ ವಿಫಲವಾಗಿರುವುದೇ ಇಂತಹ ಪ್ರಮಾದಗಳಿಗೆ ಕಾರಣವಾಗಿದೆ.

IMG 20260515 WA0002
ನ.ಲಿ. ಕೃಷ್ಣ
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರ್ನಾಟಕ SIR | ಅರ್ಹರ ಹೆಸರು ಡಿಲೀಟ್‌ ಮಾಡಲು ಬಿಜೆಪಿಗೆ ‘ಫಾರ್ಮ್‌-7’ ಟೂಲ್‌ಕಿಟ್; ಷಡ್ಯಂತ್ರ ಬಹಿರಂಗ

ರಾಜ್ಯದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಿಜೆಪಿಗರು ‘ಫಾರ್ಮ್‌-7’ಅನ್ನು ದುರ್ಬಳಕೆ ಮಾಡಿಕೊಳ್ಳುತತಿದ್ದಾರೆ. ಈ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ ಆಶ್ರಮ’

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ಗಾಂಧಿ ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು...

SIR | ಮತ ಡಿಲೀಟ್‌ ಮಾಡಲು ಒಳಸಂಚು ಆರೋಪ : ಭಾಲ್ಕಿಯಲ್ಲಿ 32 ಜನರ ವಿರುದ್ಧ FIR

ಮತದಾರರ ಪಟ್ಟಿಯ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಯಾವುದೇ ಆಧಾರ...