ಮೈದುಂಬಿ ಹರಿಯುತ್ತಿರುವ ರಾಮಸಾಗರ ಕೆರೆ

Date:

ಬೇತಮಂಗಲ: ಕೋಲಾರ ಜಿಲ್ಲೆಯ ಕೆರೆಗಳಲ್ಲಿಯೇ ಬಹುದೊಡ್ಡ ಕೆರೆ ಎನಿಸಿಕೊಂಡಿರುವ ಬೇತಮಂಗಲ ಬಳಿಯ ರಾಮಸಾಗರ ಕೆರೆ ಧಾರಾಕಾರ ಮಳೆಯಿಂದಾಗಿ ಕೋಡಿ ಹರಿದಿದ್ದು, ಈ ಭಾಗದ ಜನತೆಯ ಮೊಗದಲ್ಲಿ ಹರ್ಷ ಮೂಡಿದೆ.

- Advertisement -

ಜಿಲ್ಲೆಯ ಮುದುವಾಡಿ ಹೊಲಾಲಿ ಬೇತ್ಮಂಗಳ ಪಾಲಾರ್ ಕೆರೆ ಸೇರಿದಂತೆ 999 ಕೆರೆಗಳ ತುಂಬಿ ಹರಿದಿದೆ 1000ನೇಯಾದಾಗಿ ಇದೀಗ ರಾಮಸಾಗರ ಕೆರೆ ಭರ್ತಿಯಾಗಿ ಕೋಡಿ ಹರದಿದ್ದು ಈ ಕೆರೆ ಸುಮಾರು 1264 ಎಕರೆ ವಿಸ್ತೀರ್ಣವಿದ್ದು, ಅಂದಾಜು 25 ಅಡಿಗಳ ಅಳವಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ಪಾಕ್‌ಗೆ ತಕ್ಕ ಉತ್ತರ ನೀಡಿದ್ದಾಗಿ ಎದೆ ತಟ್ಟಿಕೊಳ್ಳುವ ಮೋದೀಜಿ,...

ಬಾಲಾಕೋಟ್‌ನಿಂದ ಇತ್ತೀಚಿನ 'ಆಪರೇಷನ್ ಸಿಂಧೂರ್'ವರೆಗೆ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಾಗಿ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎದೆ ತಟ್ಟಿಕೊಳ್ಳುತ್ತಿದೆ. ಶತೃ ದೇಶವನ್ನು ಮಣಿಸುವುದು ಯಾರಿಗಾದರೂ ಹೆಮ್ಮೆಯೇ. ಆದರೆ, ದೇಶದ ಅಖಂಡತೆಗೆ ಅತಿ...

1 ಕೋಟಿ ರೂ., ವೆಚ್ಚದಲ್ಲಿ ಕೆರೆ ಕಟ್ಟೆ ದುರಸ್ತಿ : ರಾಮಸಾಗರ ಕೆರೆ ಕೋಡಿ ಹರಿಯುವ ನಿರೀಕ್ಷೆಯಿಂದ ಶಾಸಕಿ ರೂಪಕಲಾ ಅವರು ಸಣ್ಣ ನೀರಾವರಿ ಇಲಾಖೆ ಮೂಲಕ 1. ಕೋಟಿ ರೂ ವೆಚ್ಚದಲ್ಲಿ ತೂಬು ಮತ್ತು ಕಟ್ಟೆ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಕೆರೆ ಮೈದುಂಬಿ ಹರಿಯುತ್ತಿರುವ ಹಿನ್ಕೆನೆಲೆಯಲ್ಲಿ ಕೆರೆಯನ್ನು ನೋಡಲು ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

ರಾಜ್ಯದ ಮೊದಲ ಮುಖ್ಯಮಂತ್ರಿ ಕೆ ಸಿ ರೆಡ್ಡಿ ಅವರ ಹುಟ್ಟೂರಾದ ಕ್ಯಾಸಂಬಳ್ಳಿ ಹೋಬಳಿಗೆ ಸೇರಿದ ರಾಮಸಾಗರ ಕೆರೆ ಈ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ನೀಗಿಸುತ್ತಾ ಬಂದಿದೆ ಅಲ್ಲದೆ ರೈತರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತಾ ಬಂದಿದೆ.1000 ದಿಂದ 1500 ಅಡಿಗಳ ಆಲದವರೆಗೂ ಕೊಳವೆ ಕೊರೆದರು ನೀರು ಸಿಗದ ಪರಿಸ್ಥಿತಿಯಲ್ಲಿದ್ದ ಬೋರ್ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ.

ನಂದಿ ಬೆಟ್ಟದಿಂದ ಹರಿದು ಬರುವ ನೀರು: ನಂದಿ ಬೆಟ್ಟದಿಂದಲೂ ನೀರು ಇತಿಹಾಸ ಪುಟಗಳಲ್ಲಿ ದಾಖಲಾಗಿರುವಂತೆ, ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಿಂದ ಹರಿದು1000 ಕೆರೆಗಳನ್ನು ದಾಟಿ ರಾಮಸಾಗರ ಕೆರೆಗೆ ನೀರು ಹರಿಯಲಿದೆ ನಂತರ ಆಂಧ್ರ ಪ್ರದೇಶ ಮೂಲಕ ತಮಿಳುನಾಡು ಕಡಲ ಹತ್ತಿರ ಸೇರಲಿದೆ ಎಂಬ ಇತಿಹಾಸವಿದೆ.

ವರುಣದೇವನ ಆರ್ಭಟಕ್ಕೆ ರೈತರ ಬೆಳೆದಿದ್ದ ಕಡಲೆ ರಾಗಿ ಬೆಲೆಗಳು ನೆಲಕಚ್ಚಿ ಅನೇಕ ರೈತರಿಗೆ ನಷ್ಟ ಉಂಟಾಗಿದೆ ಆದರೆ ಜಿಲ್ಲೆ ಅತಿದೊಡ್ಡ ಕೆರೆಯಾದ ರಾಮಸಾಗರ ಕೆರೆ ಭರ್ತಿಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಪ್ರವಾಸಿಗರ ಹೆಚ್ಚಳ: ಕಳೆದ ವಾರವಷ್ಟೇ ಬೇತಮಂಗಲ ಪಾರ್ಲರ್ ಕೆರೆ ತುಂಬಿ ಕೋಡಿ ಹರಿದಿದ್ದು ರಾಮ್ ಸಾಗರ ಕೆರೆ ಸಹ ತುಂಬಿ ಕೋಡಿ ಹರಿದ ಪ್ರಯುಕ್ತ ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಸಾಲು ಸಾಲು ರಜೆಗಳ ಪ್ರಯುಕ್ತ ಬೆಂಗಳೂರು ಉತ್ತರ ಕಡೆಗಳಿಂದ ಬಂದಿದ್ದ ಪ್ರವಾಸಿಗರು ಕೆರೆಗಳತ್ತ ಸಾಗುತ್ತಿದ್ದು ಮೈದುಂಬಿ ಹರಿಯುತ್ತಿರುವ ಕರೆಗಳನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದಾರೆ.

ಇದನ್ನು ಓದಿದ್ದೀರಾ…? ಕೋಲಾರ | ವಕ್ಫ್ ಆಸ್ತಿಗಳ ನೋಂದಣಿಗೆ ರಾಜ್ಯಾದ್ಯಂತ ಹೆಲ್ಪ್‌ಡೆಸ್ಕ್‌ ಸ್ಥಾಪಿಸಲು ಕರೆ

ಶುಕ್ರವಾರ ಬಾಗಿನಕ್ಕೆ ಸಿದ್ಧತೆ: ಬೇತಮಂಗಲ ಪಾಲಾರ್ ಕೆರೆಗೆ ಶಾಸಕಿ ಎಂ.ರೂಪಕಲಾ, ಸ್ಥಳೀಯ ಜನಪ್ರತಿನಿಧಿಗಳ, ಮುಖಂಡರ ಅನುಪ ಸ್ಥಿತಿಯಲ್ಲಿ ಬಾಗಿನ ಅರ್ಪಿಸಿದ್ದು, ರಾಮಸಾಗರ (ಬುಕ್ಕು ಸಾಗರ) ಕೆರೆಗೆ ಅ.24ರ ಶುಕ್ರವಾರ ಬಾಗಿನ ಅರ್ಪಿಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ತೆರಿಗೆ ವಸೂಲಾತಿಯಲ್ಲಿ ಲೋಪ: ಇಬ್ಬರು ಪಿಡಿಓ ಅಮಾನತು, ಮೂವರು ಕರವಸೂಲಿಗಾರರ ವಜಾಕ್ಕೆ ವಿಚಾರಣೆ

ತೆರಿಗೆ ವಸೂಲಾತಿಯಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ...

ಹಾವೇರಿ | ಪುಸ್ತಕ ಓದಿನ ಪರಂಪರೆಯನ್ನು ಮರು ಕಟ್ಟಬೇಕಾಗಿದೆ: ಶೋಭಾ ಜಾಗಟಗೇರಿ

"ಮುಷ್ಠಿಯಲ್ಲಿ ಇರುವ ಮೊಬೈಲ್ ಜೀವನ ಪಾಠವನ್ನ್ನು ಕಲಿಸುವುದಕ್ಕಿಂತ ದಾರಿ ತಪ್ಪಿಸುವ ಕೆಲಸ...

ಉತ್ತರ ಕನ್ನಡ | 3.24 ಲಕ್ಷ ಪಡಿತರ ಚೀಟಿ ಸದಸ್ಯರ ಇ-ಕೆವೈಸಿ ಬಾಕಿ; ಅಕ್ಟೋಬರ್ 20ರೊಳಗೆ ಪೂರ್ಣಗೊಳಿಸಲು ಮನವಿ

ಉತ್ತರ ಕನ್ನಡ ಜಿಲ್ಲೆಯ ಪಡಿತರ ಚೀಟಿಗಳಲ್ಲಿರುವ 5,69,044 ಸದಸ್ಯರು ಐದು ವರ್ಷಗಳ...

ಉಡುಪಿ | ಇಂದ್ರಾಳಿ ಮಂಚಿ ನೂರಾನಿ ಮಸೀದಿಗೆ ನೂತನ ಆಡಳಿತ ಸಮಿತಿ ರಚನೆ

ಉಡುಪಿ ತಾಲೂಕಿನ ಇಂದ್ರಾಳಿ ಮಂಚಿ ನೂರಾನಿ ಮಸೀದಿಯ ಆಡಳಿತ ಸಮಿತಿಗೆ ನೂತನ...