ಬಾಗಲಕೋಟೆ | ಎಸ್‌ಐಆರ್ ವಿರುದ್ಧ ಜಾಥಾ: ಹಕ್ಕಿಗಾಗಿ ಬೀದಿಗಿಳಿದ ಮತದಾರ

Date:

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಬಾಗಲಕೋಟೆ ನಗರದ ವಿವಿಧ ಭಾಗಗಳಲ್ಲಿ ಭಾನುವಾರ (ಜೂ.14) ಜಾಗೃತಿ ಜಾಥಾ ನಡೆಯಿತು. ತಮ್ಮ ಹಕ್ಕಿಗಾಗಿ ಮತದಾರರು ತಮ್ಮ ಹಕ್ಕಿಗಾಗಿ ಬೀದಿಗಿಳಿದು ಜಾಗೃತಿ ಮೂಡಿಸಲು ಮುಂದಾದರು.

- Advertisement -

ನವನಗರದ ವಿದ್ಯಾಗಿರಿ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜು ಸರ್ಕಲ್‌ನಿಂದ ಪ್ರಾರಂಭವಾದ ಜಾಥಾ ಮುನ್ಸಿಪಾಲಿಟಿ ಸರ್ಕಲ್, ಎಲ್‌ಐಸಿ ಸರ್ಕಲ್‌, ಅಂಬೇಡ್ಕರ್ ಭವನ, ವಾಂಬೆ ಕಾಲೋನಿ, ಇಲ್ಯಾಸ್ ಮಸೀದಿ ಏರಿಯಾಗಳಲ್ಲಿ ಸಾಗಿ ಪಂಕಾ ಮಸೀದಿ ಬಳಿ ಸಮಾಪ್ತಿಯಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘Epstein’ ವಿವಾದದ ನಡುವೆಯೂ ಹರದೀಪ್ ಪುರಿಗೆ ಮಣೆ: ಸಿಖ್...

'Epstein files' ವಿವಾದವು ಹರದೀಪ್ ಸಿಂಗ್ ಪುರಿ ಅವರ ರಾಜಕೀಯ ಬದುಕಿನಲ್ಲಿ ಸಣ್ಣದೊಂದು ಬಿರುಗಾಳಿ ಎಬ್ಬಿಸಿದ್ದು ಸುಳ್ಳಲ್ಲ. ವಿರೋಧ ಪಕ್ಷಗಳ ಟೀಕೆಗಳು ಮತ್ತು ನೈತಿಕ ಹೊಣೆಗಾರಿಕೆಯ ಪ್ರಶ್ನೆಗಳು ಅವರನ್ನು ಸಂಪುಟದಿಂದ ಹೊರಗಟ್ಟುವ ಹಂತಕ್ಕೆ...

ಅಮೆರಿಕದಲ್ಲಿ ನೋಂದಾಯಿಸಿಕೊಂಡ RSS Friends; RSS ಜೊತೆ ಮೌಖಿಕ...

RSS Friends ಎಂಬ ಸಂಘಟನೆಯು ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ವಿದೇಶಿ ಏಜೆಂಟ್ ಆಗಿ ನೋಂದಾಯಿಸಿಕೊಂಡಿದೆ. ತನ್ನ ಉದ್ದೇಶಿತ ಚಟುವಟಿಕೆಗಳು ಮುಖ್ಯವಾಗಿ ಮಾಹಿತಿ ಪ್ರಸಾರ, ಶೈಕ್ಷಣಿಕ ಕಾರ್ಯಗಳು, ಸಾರ್ವಜನಿಕ ಸಂಪರ್ಕ ಮತ್ತು ಸಮುದಾಯದೊಂದಿಗಿನ ತೊಡಗಿಸಿಕೊಳ್ಳುವಿಕೆಯನ್ನು ಒಳಗೊಂಡಿರುತ್ತವೆ...

ಕುರ್ಚಿಗಾಗಿ ನಿಲುವುಗಳೇ ಬಲಿ; ವಿಶ್ವಾಸಾರ್ಹತೆಯನ್ನೇ ಕಳೆದುಕೊಳ್ಳುತ್ತಿರುವ ಎಚ್‌ಡಿಕೆ

ಕರ್ನಾಟಕ ರಾಜಕಾರಣದಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಷ್ಟು ವೇಗವಾಗಿ ತಮ್ಮ ರಾಜಕೀಯ ನಿಲುವುಗಳನ್ನು ಬದಲಿಸಿಕೊಳ್ಳುವ ಮತ್ತೊಬ್ಬ ನಾಯಕ ಸಿಗುವುದು ಕಷ್ಟ. ನಿನ್ನೆ ವಿರೋಧಿಸಿದವರನ್ನು ಇಂದು ಸಮರ್ಥಿಸಿಕೊಳ್ಳುವುದು, ಹಿಂದೆ ಜೊತೆಗಿದ್ದವರನ್ನೇ ಇಂದು ದೂರುವುದು,...

“ಮುನ್ಸಿಪಾಲಿಟಿ ಸರ್ಕಲ್‌ನಲ್ಲಿ ವಿವಿಧ ಜನಸಂಘಟನೆಗಳು, ವೆಲ್ಫೇರ್ ಪಕ್ಷ, ಕಾಂಗ್ರೆಸ್ ಪಕ್ಷಗಳ ಸಹಯೋಗದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಉಮೇಶ್ ಮೇಟಿ ಪಾಲ್ಗೊಂಡು ಜಾಥಾಗೆ ಶುಭ ಕೋರಿದರು. ಎಸ್‌ಐಆರ್ ಕುತಂತ್ರದ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆ ಇದೆ. ಕಾಂಗ್ರೆಸ್ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ ಮಾಡಬೇಕು” ಎಂದು ಕರೆ ನೀಡಿದರು.

ee9c7f07 0f66 4ae5 9dae 930fa0bb6c1f 1

ಕಾಂಗ್ರೆಸ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಎಸ್‌.ಜಿ ನಂಜಯ್ಯಮಠ ಅವರು ಮಾತನಾಡಿ, “ಎಸ್‌ಐಆರ್‌ ಮೂಲಕ ಜನರ ಮತ ಕಡಿತಗೊಳಿಸಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿದರು. ನೊಬೆಲ್ ಪುರಸ್ಕೃತ ಅಮರ್ತ್ಯಸೇನ್ ಅವರ ಮತದಾನದ ಹಕ್ಕು ಕಿತ್ತುಕೊಳ್ಳಲು ನೋಡಿದರು. ದೇಶಕ್ಕಾಗಿ ಸೇವೆ ಸಲ್ಲಿಸಿರುವ ಯೋಧನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಿದ್ದಾರೆ” ಎಂದರು.

“ಜನರು ಎಸ್‌ಐಆರ್ ಬಗ್ಗೆ ಎಚ್ಚರಗೊಂಡು ಮತ ಹಕ್ಕು ಉಳಿಸಿಕೊಳ್ಳಿ. ಕಾರ್ಯಕರ್ತರು, ಮುಖಂಡರು ಬೀದಿಗಿಳಿದು ಜನರ ಹಕ್ಕು ಉಳಿಸಲು ಪ್ರಯತ್ನಿಸಿ. ಎಸ್‌ಐಆರ್‌ ಮೂಲಕ ಅಂಬೇಡ್ಕರ್ ಅವರು ಕೊಟ್ಟ ಸಾಂವಿಧಾನಿಕ ಹಕ್ಕು ಮೊಟಕುಗೊಳಿಸುವುದು ಬಿಜೆಪಿಯ ಕುತಂತ್ರವಾಗಿದೆ. ನಮ್ಮ‌ ರಾಜ್ಯದಲ್ಲಿ 91 ಕಾಂಗ್ರೆಸ್ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದಾರೆ. ಸಾಂಪ್ರಾದಯಿಕ ಮತ ಕದಿಯಲು ತಂತ್ರ ರೂಪಿಸಿದ್ದಾರೆ” ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಹೋರಾಟಗಾರ ಹೆಚ್‌ ಎನ್‌ ನೀಲ್ ನಾಯಕ, ಎದ್ದೇಳು ಕರ್ನಾಟಕದ ಪವಿತ್ರಾ ಜಕ್ಕಪ್ಪನವರ್, ಬಿಎಸ್ ಬಾಬಾ ಖಾನ್, ಸ್ಥಳೀಯ ನಾಯಕ ಹಾಜಿ ಸಾಬ್ ದಂಡಿನ್, ವೆಲ್ಫೇರ್ ಪಾರ್ಟಿ ಮತ್ತು ಕಾಂಗ್ರೆಸ್ ಪಾರ್ಟಿಯ ಸ್ಥಳೀಯ ಮುಖಂಡರು ಹಾಗೂ ನೂರಾರು ಮಂದಿ ಸಾರ್ವಜನಿಕರು ಇದ್ದರು.

ಮುನ್ಸಿಪಾಲಿಟಿ ಸರ್ಕಲ್‌ನಲ್ಲಿ ಸಭಾ ಕಾರ್ಯಕ್ರಮದ ಬಳಿಕ, ಎಸ್‌ಐಆರ್ ವಿರುದ್ಧ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಜಾಥಾದಲ್ಲಿ ಪಾಲ್ಗೊಂಡರು. ಚುನಾವಣಾ ಆಯೋಗ, ಎಸ್‌ಐಆರ್ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ವಾಂಬೆ ಕಾಲೋನಿ, ಇಲ್ಯಾಸ್ ಮಸೀದಿ ಮತ್ತು ಪಂಕಾ ಮಸೀದಿ ಪ್ರದೇಶಗಳಲ್ಲಿ ಎಸ್‌ಐಆರ್ ವಿರೋಧಿ ಒಕ್ಕೂಟದ ಪ್ರಮುಖರಾದ ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನ ಯೂಸುಫ್ ಕನ್ನಿ, ಆರಿಫುಲ್ಲಾ ಖಾನ್, ಸರೋವರ್ ಬೆಂಕಿಕೆರೆ ಜಾಗೃತಿ ಭಾಷಣಗಳನ್ನು ಮಾಡಿದರು. ಜನರಲ್ಲಿ ಎಸ್‌ಐಆರ್ ಕುರಿತು ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಕರಪತ್ರಗಳನ್ನು ಹಂಚಲಾಯಿತು.

ಇದಕ್ಕೂ ಮುನ್ನ ನಗರದ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ವಿಎಸ್ ಉಗ್ರಪ್ಪ ಅವರನ್ನು ಭೇಟಿಯಾದ ಜಾಥಾ ತಂಡ ಮಾತುಕತೆ ನಡೆಸಿತು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮದುವೆ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಬೆದರಿಕೆ? ₹42.97 ಲಕ್ಷ ವಂಚನೆ ಆರೋಪ; ಇಬ್ಬರ ಬಂಧನ

ಮದುವೆ ಪ್ರಸ್ತಾಪದ ವಿಚಾರವಾಗಿ ಪರಿಚಯವಾಗಿದ್ದ ಮಹಿಳೆಯೊಬ್ಬರು ಹಾಗೂ ಇತರರು ಸೇರಿ ಬೆದರಿಕೆ...

ಉಡುಪಿ | ಪಕ್ಷ ಸಂಘಟನೆ ಜತೆಗೆ ಜನಸೇವೆಯಲ್ಲೂ ರಮೇಶ್ ಕಾಂಚನ್ ಮುಂಚೂಣಿ: ಸೊರಕೆ

ಕಾಂಗ್ರೆಸ್ ಪಕ್ಷದ ಸಂಘಟನೆಗೆ ನಿರಂತರವಾಗಿ ಶ್ರಮಿಸುತ್ತಿರುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ...

ಸೌಜನ್ಯ ಪ್ರಕರಣ: ಎಸ್‌ಐಟಿ ಮುಖ್ಯಸ್ಥರನ್ನು ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ಗೆ ದೂರು

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸುತ್ತಿರುವ...

ಚಿಕ್ಕಮಗಳೂರು | ಭದ್ರಾ ಉಪಕಣಿವೆ ಯೋಜನೆ: ತುರ್ತಾಗಿ ತುಂಬಿಸಿ; ರೈತ ಸಂಘ ಗುರುಶಾಂತಪ್ಪ

ಅಜ್ಜಂಪುರ ತಾಲ್ಲೂಕಿನಲ್ಲಿ ಬರಗಾಲ ಅನುಭವಿಸುತ್ತಿರುವ  ಜನರ ಒಳಿತಿಗೆ ಭದ್ರಾ ಉಪಕಣಿವೆ ಯೋಜನೆ...