ಅಂದು ಲಂಚ ಪಡೆವಾಗ ಸಿಕ್ಕಿಬಿದ್ದ ನಾಯಕನೇ ಇಂದು ಸಿಎಂ ಸುವೇಂದು: ಬಂಗಾಳ ರಾಜಕೀಯದ ಕರಾಳ ದಿನ

Date:

ದೇಶದಲ್ಲಿಯೇ ಪಶ್ಚಿಮ ಬಂಗಾಳ ದೊಡ್ಡ ರಾಜ್ಯವಾಗಿದೆ. ಜನಸಂಖ್ಯೆಯೂ ಸಹ ಇದೇ ಮಟ್ಟದಲ್ಲಿದೆ. ಅಂತಹ ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಒಂದು ಮಹತ್ತರ ಬದಲಾವಣೆಯಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಗ್ರ ಹಿಂದುತ್ವದ ಹೊಸ ಮುಖವಾಗಿ ಹೊರಹೊಮ್ಮಿರುವ ಸುವೇಂದು ಅಧಿಕಾರಿ, ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಬೆಳವಣಿಗೆಯು ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆದಿದ್ದರೂ, ಅದರ ಬೆನ್ನಲ್ಲೇ ಸುವೇಂದು ಅಧಿಕಾರಿಯವರ ರಾಜಕೀಯ ಪಲ್ಲಟಗಳು, ಭ್ರಷ್ಟಾಚಾರದ ಆರೋಪಗಳು ಮತ್ತು ಬಿಜೆಪಿಯ ನೈತಿಕ ನಿಲುವುಗಳ ಕುರಿತು ಗಂಭೀರ ಚರ್ಚೆಗಳು ಆರಂಭವಾಗಿವೆ.

- Advertisement -

ಸುವೇಂದು ಅಧಿಕಾರಿ: ಕಾಂಗ್ರೆಸ್‌ನಿಂದ ಕೇಸರಿ ಪಾಳೆಯದವರೆಗೆ ಸುವೇಂದು ಅಧಿಕಾರಿ ಮೂಲತಃ ರಾಜಕೀಯ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದವರು. ಅವರ ರಾಜಕೀಯ ಜೀವನ ಆರಂಭವಾಗಿದ್ದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೂಲಕ. ಅಪ್ಪಟ ಕಾಂಗ್ರೆಸ್ಸಿಗನಾಗಿ ಗುರುತಿಸಿಕೊಂಡಿದ್ದ ಸುವೇಂದು, ನಂತರ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದರು. ನಂದಿಗ್ರಾಮದ ಭೂಸ್ವಾಧೀನ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದ ಇವರು, ದೀದಿಯ ಅತ್ಯಂತ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...
image 129

ಆದರೆ, 2021ರ ಚುನಾವಣೆಗೆ ಮುನ್ನ ದೀದಿಯ ಕಟ್ಟಾ ಶಿಷ್ಯನಾಗಿದ್ದ ಸುವೇಂದು ತೃಣಮೂಲ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿ ಬಿಜೆಪಿ ಸೇರಿದರು. ಬಿಜೆಪಿಗೆ ಸೇರಿದ ಕೇವಲ ಐದಾರು ವರ್ಷಗಳಲ್ಲಿಯೇ ಅವರು “ಹಿಂದೂ ರಕ್ಷಕ” ಎಂಬ ಬಿರುದನ್ನು ಹೊತ್ತು, ಮುಸ್ಲಿಂ ವಿರೋಧಿ ಭಾಷಣಗಳ ಮೂಲಕ ಉಗ್ರ ಹಿಂದುತ್ವದ ಹೊಸ ಚಹರೆಯಾಗಿ ಬದಲಾದರು. ಇಂದು ಅದೇ ಚಹರೆಯ ಬಲದ ಮೇಲೆ ಅವರು ಮುಖ್ಯಮಂತ್ರಿ ಪೀಠವನ್ನೂ ಏರಿದ್ದಾರೆ.

ನಾರದ ಸ್ಟಿಂಗ್ ಆಪರೇಷನ್ ಮತ್ತು ಮೋದಿಯವರ ಟೀಕೆ:
ಸುವೇಂದು ಅಧಿಕಾರಿಯವರ ರಾಜಕೀಯ ಜೀವನದಲ್ಲಿ ಅಳಿಸಲಾಗದ ಕಪ್ಪು ಚುಕ್ಕೆಯೆಂದರೆ ಅದು ‘ನಾರದ ಸ್ಟಿಂಗ್ ಆಪರೇಷನ್’. 2016ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ವಿಡಿಯೋದಲ್ಲಿ, ಸುವೇಂದು ಅಧಿಕಾರಿ ಕ್ಯಾಮೆರಾ ಮುಂದೆಯೇ ಲಂಚವನ್ನು ಸ್ವೀಕರಿಸುತ್ತಿರುವುದು ಸೆರೆಯಾಗಿತ್ತು. ಸುವೇಂದು ಅಧಿಕಾರಿ, ಮುಕುಲ್ ರಾಯ್, ಮದನ್ ಮಿತ್ರಾ, ಸುಬ್ರತಾ ಮುಖರ್ಜಿ ಮತ್ತು ಫಿರ್ಹಾದ್ ಹಕೀಮ್ ಸೇರಿದಂತೆ ಸುಮಾರು 12 ಪ್ರಮುಖ ನಾಯಕರು ಇದರಲ್ಲಿ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆರಂಭದಲ್ಲಿ ಈ ಸ್ಟಿಂಗ್ ಆಪರೇಷನ್ ಬಗ್ಗೆ ವಿವಾದ ಎದ್ದಾಗ, ಕಲ್ಕತ್ತಾ ಹೈಕೋರ್ಟ್ ಮಧ್ಯಪ್ರವೇಶಿಸಿ ತನಿಖೆಗೆ ಆದೇಶಿಸಿತು. ವಿಡಿಯೋ ತುಣುಕುಗಳು ಅಸಲಿ ಎಂದು ವಿಧಿವಿಜ್ಞಾನ ಪ್ರಯೋಗಾಲಯ (CFSL) ದೃಢಪಡಿಸಿದ ನಂತರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. 2017ರಲ್ಲಿ ಸಿಬಿಐ (CBI) ನಾಯಕರ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿತು. ಜಾರಿ ನಿರ್ದೇಶನಾಲಯ (ED) ಕೂಡ ಹಣದ ದುರ್ಬಳಕೆಯ ಬಗ್ಗೆ ತನಿಖೆ ಆರಂಭಿಸಿತು. ಆರಂಭದಲ್ಲಿ ಬಿಜೆಪಿ ಈ ಹಗರಣವನ್ನು ಬಳಸಿ ಮಮತಾ ಬ್ಯಾನರ್ಜಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿತು. ಆದರೆ, ಈ ಹಗರಣದ ಪ್ರಮುಖ ಆರೋಪಿಯಾಗಿದ್ದ ಸುವೇಂದು ಅಧಿಕಾರಿ 2021ರಲ್ಲಿ ಬಿಜೆಪಿ ಸೇರಿದರು. ಗಮನಾರ್ಹ ಸಂಗತಿಯೆಂದರೆ, 2021ರಲ್ಲಿ ಸಿಬಿಐ ಕೆಲವು ಟಿಎಂಸಿ ನಾಯಕರನ್ನು ಬಂಧಿಸಿತು. ಆದರೆ, ಬಿಜೆಪಿ ಸೇರಿದ್ದ ಸುವೇಂದು ಅಧಿಕಾರಿ ಮತ್ತು ಮುಕುಲ್ ರಾಯ್ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿಲ್ಲ. ಸುವೆಂದು ಅಧಿಕಾರಿ ಟಿಎಂಸಿಯಿಂದ ಬಿಜೆಪಿಗೆ ಸೇರಿದ ನಂತರ, ಈ ಸ್ಟಿಂಗ್‌ ಆಪರೇಷನ್‌ ವಿಡಿಯೋಗಳನ್ನು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಿಂದ ತೆಗೆದುಹಾಕಲಾಗಿತ್ತು, ಇದು ಭಾರಿ ಟೀಕೆಗೆ ಕಾರಣವಾಗಿತ್ತು.

Advertisements

https://www.facebook.com/share/v/18n8qhTVsF/?mibextid=wwXIfr

ಗಮನಾರ್ಹ ಸಂಗತಿಯೆಂದರೆ, ಅಂದು ಪ್ರಧಾನಿ ನರೇಂದ್ರ ಮೋದಿಯವರು ಚುನಾವಣಾ ರ‍್ಯಾಲಿಗಳಲ್ಲಿ ಇದೇ ವಿಡಿಯೋವನ್ನು ಉಲ್ಲೇಖಿಸಿ ಟಿಎಂಸಿ ನಾಯಕರನ್ನು ಲೇವಡಿ ಮಾಡಿದ್ದರು. “ಕ್ಯಾಮೆರಾ ಮುಂದೆ ಹಣ ಪಡೆಯುವಾಗ ಇವರಿಗೆ ನಾಚಿಕೆಯಾಗುವುದಿಲ್ಲವೇ?” ಎಂದು ಪ್ರಶ್ನಿಸಿದ್ದ ಮೋದಿ, ಸುವೇಂದು ಅಧಿಕಾರಿಯವರ ಭ್ರಷ್ಟಾಚಾರವನ್ನು ಅಣಕಿಸಿದ್ದರು. ಆದರೆ, ಕಾಲಚಕ್ರ ಉರುಳಿದಂತೆ ಅದೇ ‘ಭ್ರಷ್ಟ’ ಎಂದು ಬಿಂಬಿತವಾಗಿದ್ದ ವ್ಯಕ್ತಿ ಇಂದು ಮೋದಿಯವರ ಆಶೀರ್ವಾದದೊಂದಿಗೆ ಮುಖ್ಯಮಂತ್ರಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಎಥಿಕ್ಸ್ ಕಮಿಟಿ (Ethics Committee) ರಚನೆಯಾಗಿದ್ದರೂ, ಅದರ ವಿಚಾರಣೆಗಳು ಕುಂಟುತ್ತಾ ಸಾಗಿವೆ. ತನಿಖಾ ಸಂಸ್ಥೆಗಳು ಇಂದಿಗೂ ಪ್ರಕರಣದ ಆಳವಾದ ತನಿಖೆ ನಡೆಸುತ್ತಿವೆ ಎಂದು ಹೇಳುತ್ತವೆಯಾದರೂ, ರಾಜಕೀಯ ಲಾಭ-ನಷ್ಟದ ಆಧಾರದ ಮೇಲೆ ಬಂಧನಗಳು ಮತ್ತು ವಿಚಾರಣೆಗಳು ನಡೆಯುತ್ತಿವೆ. ಹೀಗಾಗಿ, ನಾರದ ಹಗರಣವು ಕೇವಲ ಭ್ರಷ್ಟಾಚಾರದ ಪ್ರಕರಣವಾಗಿಯಲ್ಲದೆ, ಭಾರತೀಯ ರಾಜಕಾರಣದಲ್ಲಿ ನೈತಿಕತೆ ಮತ್ತು ಅಧಿಕಾರಕ್ಕಾಗಿ ಸಿದ್ಧಾಂತಗಳ ಬದಲಾವಣೆಯ ಸಾಕ್ಷಿಯಾಗಿ ಇತಿಹಾಸದಲ್ಲಿ ಉಳಿದುಕೊಂಡಿದೆ.

ಬಿಜೆಪಿಯ ‘ವಾಷಿಂಗ್ ಮೆಷಿನ್’ ರಾಜಕಾರಣ:-
ಬಿಜೆಪಿಯ ಬಳಿ ವಿರೋಧ ಪಕ್ಷವನ್ನ ನಡುಗಿಸಲು ಅಸ್ತ್ರವೊಂದಿದೆ – ಅದುವೇ ‘ಬಿಜೆಪಿ ವಾಷಿಂಗ್ ಮೆಷಿನ್’. ಯಾವುದೇ ವ್ಯಕ್ತಿ ಎಷ್ಟೇ ದೊಡ್ಡ ಭ್ರಷ್ಟಾಚಾರದ ಆರೋಪ ಹೊತ್ತಿದ್ದರೂ, ಅವರು ಬಿಜೆಪಿಗೆ ಸೇರಿದ ತಕ್ಷಣ ಆ ಕೇಸುಗಳು ಮೆತ್ತಗಾಗುತ್ತವೆ ನಂತರ ಆ ವ್ಯಕ್ತಿ ‘ಪರಿಶುದ್ಧ’ರಾಗಿ ಹೊರಬರುತ್ತಾರೆ. ಸುವೇಂದು ಅಧಿಕಾರಿ ವಿಷಯದಲ್ಲಿ ಇದು ಅಕ್ಷರಶಃ ನಿಜವಾಗಿದೆ.

2016: ಸುವೇಂದು ಅಧಿಕಾರಿ ಲಂಚ ಪಡೆಯುವ ವಿಡಿಯೋವನ್ನು ಮೋದಿ ಮತ್ತು ಬಿಜೆಪಿ ಟೀಕಿಸುತ್ತದೆ.
2021: ಸುವೇಂದು ಅಧಿಕಾರಿ ಬಿಜೆಪಿ ಸೇರುತ್ತಾರೆ.
2021-2026: ಐದು ವರ್ಷಗಳ ಕಾಲ ಬಿಜೆಪಿ ಎಂಬ ‘ವಾಷಿಂಗ್ ಮೆಷಿನ್’ನಲ್ಲಿ ಅಧಿಕಾರಿಯ ಇಮೇಜ್ ಅನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆ ನಡೆಯುತ್ತದೆ.
2026: 10 ವರ್ಷಗಳ ಹಿಂದೆ ಯಾವ ವ್ಯಕ್ತಿಯನ್ನು ಭ್ರಷ್ಟ ಎಂದು ಮೋದಿ ಕರೆದಿದ್ದರೋ, ಇಂದು ಅದೇ ವ್ಯಕ್ತಿಯನ್ನು ಬಂಗಾಳದ ಆಡಳಿತ ಚುಕ್ಕಾಣಿ ಹಿಡಿಯಲು ನೇಮಿಸುತ್ತಾರೆ.

ಹತ್ತು ವರ್ಷಗಳ ಹಿಂದೆ ಲಂಚದ ಪ್ರಕರಣದಲ್ಲಿ ತನಿಖೆ ಎದುರಿಸಬೇಕಿದ್ದ ವ್ಯಕ್ತಿ, ಇಂದು ಅದೇ ವ್ಯವಸ್ಥೆಯ ಮುಖ್ಯಸ್ಥರಾಗಿರುವುದು ಬಿಜೆಪಿಯ ರಾಜಕೀಯ ನೈತಿಕತೆಯನ್ನು ಪ್ರಶ್ನಿಸುವಂತೆ ಮಾಡಿದೆ.

ಹಿಂದುತ್ವದ ಮುಖವಾಡ ಮತ್ತು ಮತಗಳ ಧ್ರುವೀಕರಣ:-
ಸುವೇಂದು ಅಧಿಕಾರಿ ಟಿಎಂಸಿಯಲ್ಲಿದ್ದಾಗ ಜಾತ್ಯತೀತ ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದರು. ಆದರೆ ಬಿಜೆಪಿಗೆ ಬಂದ ನಂತರ ಅವರ ಭಾಷೆ ಸಂಪೂರ್ಣ ಬದಲಾಯಿತು. ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷದ ಕಿಡಿ ಉಗುಳುವ ಮೂಲಕ ಬಹುಸಂಖ್ಯಾತ ಮತಗಳನ್ನು ಕ್ರೋಢೀಕರಿಸುವುದು ಅವರ ಮುಖ್ಯ ತಂತ್ರವಾಯಿತು.
ಬಂಗಾಳದಂತಹ ಸಾಂಸ್ಕೃತಿಕವಾಗಿ ಶ್ರೀಮಂತ ಮತ್ತು ವೈವಿಧ್ಯಮಯ ರಾಜ್ಯದಲ್ಲಿ, “ಮುಸ್ಲಿಂ ವಿರೋಧಿ” ಅಸ್ತ್ರವನ್ನು ಬಳಸಿ ಅಧಿಕಾರಕ್ಕೆ ಏರಿರುವುದು ಅಲ್ಲಿನ ಸಾಮಾಜಿಕ ಸಾಮರಸ್ಯದ ಮೇಲೆ ಯಾವ ಪರಿಣಾಮ ಬೀರಬಹುದು ಎಂಬ ಆತಂಕ ಸೃಷ್ಟಿಯಾಗಿದೆ. ಸುವೇಂದು ಅವರ ಈ ರೂಪಾಂತರವು ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಹೇಗೆ ಬೇಕಾದರೂ ಬದಲಿಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ.

ಭಾರತೀಯ ಜನತಾ ಪಕ್ಷವು ಸದಾ ಕಾಲ ತನ್ನನ್ನು “ಶಿಸ್ತಿನ ಸಿಪಾಯಿಗಳ ಪಕ್ಷ” ಮತ್ತು “ಭ್ರಷ್ಟಾಚಾರ ಮುಕ್ತ ಭಾರತದ ಹರಿಕಾರ” ಎಂದು ಕರೆದುಕೊಳ್ಳುತ್ತದೆ. ಆದರೆ, ಕಳೆದ ಹತ್ತು ವರ್ಷಗಳ ರಾಜಕೀಯ ಪಲ್ಲಟಗಳನ್ನು ಗಮನಿಸಿದರೆ, ಪಕ್ಷದ ಈ ಮಾತುಗಳಿಗೂ ಮತ್ತು ಕೃತಿಗೂ ಅಜಗಜಾಂತರ ವ್ಯತ್ಯಾಸವಿರುವುದು ಎದ್ದು ಕಾಣುತ್ತದೆ. ಪ್ರತಿಪಕ್ಷದ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಬಂದಾಗ ಗುಡುಗುವ ಬಿಜೆಪಿ, ಅದೇ ನಾಯಕರು ಕೇಸರಿ ಶಾಲು ಹೊದ್ದು ತಮ್ಮ ಪಕ್ಷಕ್ಕೆ ಬಂದ ಕೂಡಲೇ ಅವರ ಪಾಪಗಳನ್ನೆಲ್ಲ ತೊಳೆದು ‘ಪವಿತ್ರ’ಗೊಳಿಸುವ ಅದ್ಭುತ ಮಾಯಾಜಾಲವನ್ನು ಪ್ರದರ್ಶಿಸುತ್ತಿದೆ. ಇದನ್ನೇ ಇಂದು ದೇಶದ ಜನತೆ “ಬಿಜೆಪಿ ವಾಷಿಂಗ್ ಮೆಷಿನ್ ರಾಜಕಾರಣ” ಎಂದು ವ್ಯಂಗ್ಯವಾಡುತ್ತಿದ್ದಾರೆ. ಬಿಜೆಪಿಯ ಹೈಪೋಕ್ರಸಿಯು ಎಷ್ಟು ಭೀಕರವಾಗಿದೆ ಎಂದರೆ, ಯಾವ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿಯವರು ವೇದಿಕೆಗಳ ಮೇಲೆ “ಭ್ರಷ್ಟರು” ಎಂದು ಜರೆದಿದ್ದರೋ, ಇಂದು ಅಂತಹವರೇ ಆಯಾ ರಾಜ್ಯಗಳಲ್ಲಿ ಬಿಜೆಪಿಯ ಆಧಾರಸ್ತಂಭಗಳಾಗಿದ್ದಾರೆ. ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದಿದೆ.

ಅಜಿತ್ ಪವಾರ್ (ಮಹಾರಾಷ್ಟ್ರ) :- ಎನ್‌ಸಿಪಿ (NCP) ನಾಯಕರಾಗಿದ್ದ ಇವರ ಮೇಲೆ ಸುಮಾರು 70,000 ಕೋಟಿ ರೂಪಾಯಿಗಳ ನೀರಾವರಿ ಹಗರಣದ ಆರೋಪವಿತ್ತು. ಬಿಜೆಪಿ ಇವರನ್ನು ಅತಿ ದೊಡ್ಡ ಭ್ರಷ್ಟ ಎಂದು ಕರೆದಿತ್ತು. 2023ರಲ್ಲಿ ಇವರು ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಿ ಉಪಮುಖ್ಯಮಂತ್ರಿಯಾದರು. ಇವರು ಸರ್ಕಾರ ಸೇರಿದ ಕೆಲವೇ ದಿನಗಳಲ್ಲಿ, ಇಡಿ ತನಿಖೆ ಏನಾಗಿದೆ ಎಂಬ ಮಾಹಿತಿಯೂ ಇಲ್ಲದಂತಾಗಿದೆ.

photo 6057741549707137478 m

ಹಿಮಂತ ಬಿಸ್ವಾ ಶರ್ಮಾ (ಅಸ್ಸಾಂ) :- ಕಾಂಗ್ರೆಸ್‌ನಲ್ಲಿದ್ದಾಗ ಇವರ ಮೇಲೆ ಶಾರದಾ ಚಿಟ್ ಫಂಡ್ ಹಗರಣ ಮತ್ತು ಲೂಯಿಸ್ ಬರ್ಗರ್ ಲಂಚ ಪ್ರಕರಣದ ಆರೋಪವಿತ್ತು. ಬಿಜೆಪಿ ಆಗ ಇವರ ವಿರುದ್ಧ ಕಿರುಪುಸ್ತಕವನ್ನೇ ಬಿಡುಗಡೆ ಮಾಡಿತ್ತು. 2015ರಲ್ಲಿ ಇವರು ಬಿಜೆಪಿ ಸೇರಿದರು. ಬಿಜೆಪಿ ಸೇರಿದ ನಂತರ ಇವರ ವಿರುದ್ಧದ ತನಿಖೆಗಳು ಪ್ರಗತಿ ಕಾಣಲಿಲ್ಲ. ಇಂದು ಇವರು ಅಸ್ಸಾಂನ ಮುಖ್ಯಮಂತ್ರಿಯಾಗಿದ್ದಾರೆ ಮತ್ತು ಬಿಜೆಪಿಯ ಪ್ರಭಾವಿ ನಾಯಕರಾಗಿದ್ದಾರೆ.

photo 6057741549707137481 y

ನಾರಾಯಣ್ ರಾಣೆ (ಮಹಾರಾಷ್ಟ್ರ) :- ಶಿವಸೇನೆ ಮತ್ತು ಕಾಂಗ್ರೆಸ್‌ನಲ್ಲಿದ್ದಾಗ ಇವರ ಮೇಲೆ ಹಣ ವರ್ಗಾವಣೆ (Money Laundering) ಮತ್ತು ಭೂ ಹಗರಣದ ಆರೋಪಗಳಿದ್ದವು. ಇಡಿ ಇವರ ಕಂಪನಿಗಳಿಗೆ ನೋಟಿಸ್ ನೀಡಿತ್ತು. ಇವರು 2019ರಲ್ಲಿ ಇವರು ಬಿಜೆಪಿ ಸೇರಿದರು. ಬಿಜೆಪಿ ಸೇರಿದ ನಂತರ ಇವರ ಮೇಲಿನ ಕೇಂದ್ರ ತನಿಖಾ ಸಂಸ್ಥೆಗಳ ಒತ್ತಡ ಮಾಯವಾಯಿತು. ನಂತರ ಇವರು ಕೇಂದ್ರ ಸಚಿವರೂ ಆದರು.

photo 6057741549707137482 y

ಪ್ರಫುಲ್ ಪಟೇಲ್ (ಮಹಾರಾಷ್ಟ್ರ):- ಎನ್‌ಸಿಪಿ ನಾಯಕರಾಗಿದ್ದ ಇವರ ಮೇಲೆ ಏರ್ ಇಂಡಿಯಾ ಹಗರಣ ಮತ್ತು ಭೂಗತ ಮಾಫಿಯಾದ ಲಿಂಕ್ ಇರುವ ಆಸ್ತಿ ಖರೀದಿ ಆರೋಪವಿತ್ತು. ಇಡಿ ಇವರ ಆಸ್ತಿಗಳನ್ನು ಜಪ್ತಿ ಮಾಡಿತ್ತು. ಅಜಿತ್ ಪವಾರ್ ಜೊತೆ ಇವರೂ ಬಿಜೆಪಿ ಮೈತ್ರಿಕೂಟ ಸೇರಿದರು. ಇತ್ತೀಚೆಗೆ ಸಿಬಿಐ ಇವರ ವಿರುದ್ಧದ ಏರ್ ಇಂಡಿಯಾ ಭ್ರಷ್ಟಾಚಾರ ಪ್ರಕರಣದಲ್ಲಿ ‘ಕ್ಲೋಸರ್ ರಿಪೋರ್ಟ್’ (ಪ್ರಕರಣ ಮುಕ್ತಾಯದ ವರದಿ) ಸಲ್ಲಿಸಿದೆ.

photo 6057741549707137484 y

ಅಶೋಕ್ ಚವಾಣ್ (ಮಹಾರಾಷ್ಟ್ರ) :- ಮಾಜಿ ಕಾಂಗ್ರೆಸ್ ಮುಖ್ಯಮಂತ್ರಿ. ಇವರ ಮೇಲೆ ಆದರ್ಶ್ ಹೌಸಿಂಗ್ ಹಗರಣದ ಆರೋಪವಿತ್ತು. ಈ ಪ್ರಕರಣ ಸುಪ್ರೀಂ ಕೋರ್ಟ್‌ವರೆಗೂ ಹೋಗಿತ್ತು. 2024ರ ಲೋಕಸಭಾ ಚುನಾವಣೆಗೆ ಮುನ್ನ ಬಿಜೆಪಿ ಸೇರಿದರು. ಇವರು ಬಿಜೆಪಿ ಸೇರಿದ ತಕ್ಷಣವೇ ಇವರಿಗೆ ರಾಜ್ಯಸಭಾ ಟಿಕೆಟ್ ನೀಡಲಾಯಿತು ಮತ್ತು ಹಳೆಯ ಪ್ರಕರಣಗಳೂ ಮುಚ್ಚಿಹೋಯ್ತು.

ಇತ್ತೀಚಿನ ಒಂದು ವರದಿಯ ಪ್ರಕಾರ, 2014ರ ನಂತರ ವಿರೋಧ ಪಕ್ಷಗಳಿಂದ ಬಿಜೆಪಿ ಸೇರಿದ 25 ಪ್ರಮುಖ ನಾಯಕರ ಪೈಕಿ, 23 ನಾಯಕರ ಮೇಲಿನ ಪ್ರಕರಣಗಳು ಬಿಜೆಪಿ ಸೇರಿದ ಸೈಲೆಂಟ್‌ ಆಗಿದೆ. ಇದರಲ್ಲಿ 3 ಪ್ರಕರಣಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಉಳಿದ ಪ್ರಕರಣಗಳಲ್ಲಿ ಯಾವುದೇ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಅಥವಾ ತನಿಖೆ ಸ್ಥಗಿತಗೊಂಡಿದೆ.

ಹೈಪೋಕ್ರಸಿಯ ಪರಾಕಾಷ್ಠೆ:-
ಬಿಜೆಪಿಯು ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡುತ್ತದೆ. ಆದರೆ ಸುವೇಂದು ಅಧಿಕಾರಿಯವರ ನೇಮಕವು ಪಕ್ಷದ ಆಂತರಿಕ ವಿರೋಧಾಭಾಸಗಳನ್ನು ಎತ್ತಿ ತೋರಿಸುತ್ತದೆ. ಒಂದು ಕಡೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಎಂದು ಹೇಳುತ್ತಾ, ಮತ್ತೊಂದು ಕಡೆ ಸ್ಟಿಂಗ್ ಆಪರೇಷನ್‌ನಲ್ಲಿ ಸಿಕ್ಕಿಬಿದ್ದ ವ್ಯಕ್ತಿಗೆ ಮುಖ್ಯಮಂತ್ರಿ ಪಟ್ಟ ನೀಡುವುದು ಹೈಪೋಕ್ರಸಿಯಲ್ಲದೆ ಮತ್ತೇನು? ತನಿಖಾ ಸಂಸ್ಥೆಗಳಾದ ಇಡಿ (ED) ಮತ್ತು ಸಿಬಿಐ (CBI) ನಾರದ ಹಗರಣವನ್ನು ತನಿಖೆ ಮಾಡುತ್ತಿದ್ದರೂ, ಸುವೇಂದು ಬಿಜೆಪಿ ಸೇರಿದ ನಂತರ ಆ ತನಿಖೆಯ ವೇಗ ಕುಂಠಿತವಾಗಿರುವುದು ಎಲ್ಲರಿಗೂ ತಿಳಿದಿರುವ ಸತ್ಯ.

photo 6057741549707137488 y

ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಸುವೇಂದು ಅಧಿಕಾರಿ ಈಗ ಅತ್ಯಂತ ಪ್ರಭಾವಿ ವ್ಯಕ್ತಿ. ಆದರೆ ಅವರ ಈ ಏಳಿಗೆಯು ಹಲವಾರು ಪ್ರಶ್ನೆಗಳನ್ನು ಬಿಟ್ಟು ಹೋಗಿದೆ. ಹತ್ತು ವರ್ಷಗಳ ಹಿಂದೆ ಯಾರನ್ನು ಭ್ರಷ್ಟರೆಂದು ಮೋದಿ ಜರೆದಿದ್ದರೋ, ಇಂದು ಅವರನ್ನೇ ಅಪ್ಪಿಕೊಳ್ಳುವ ಮೂಲಕ ಬಿಜೆಪಿ ತನ್ನ “ಪರಿಶುದ್ಧ ರಾಜಕಾರಣ”ದ ದಾರಿಯಿಂದ ದೂರ ಸರಿದಿದೆ.
ಅಧಿಕಾರಕ್ಕಾಗಿ ಭ್ರಷ್ಟಾಚಾರದ ಆರೋಪಗಳನ್ನು ಮರೆತು, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸುವ ತಂತ್ರಗಾರಿಕೆಯೇ ಬಿಜೆಪಿಯ ಮೂಲಮಂತ್ರವಾಗಿದೆ. ಸುವೇಂದು ಅಧಿಕಾರಿಯವರ ಪ್ರಮಾಣ ವಚನ ಸ್ವೀಕಾರವು ಕೇವಲ ಒಬ್ಬ ವ್ಯಕ್ತಿಯ ಅಧಿಕಾರ ಸ್ವೀಕಾರವಲ್ಲ, ಅದು ಭಾರತೀಯ ರಾಜಕಾರಣದ ನೈತಿಕತೆಯ ಕುಸಿತದ ಪ್ರತಿಬಿಂಬವೂ ಹೌದು. ಮುಂದಿನ ದಿನಗಳಲ್ಲಿ ಬಂಗಾಳ ಅಭಿವೃದ್ಧಿಗಿಂತ ಹೆಚ್ಚಾಗಿ, ಈ ರಾಜಕೀಯ ವಿರೋಧಾಭಾಸಗಳು ಮತ್ತು ಸುವೇಂದು ಅವರ ಆಡಳಿತ ವೈಖರಿ ದೇಶದ ಗಮನ ಸೆಳೆಯಲಿವೆ.

WhatsApp Image 2025 09 25 at 3.16.47 PM e1758793879498
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ ಅಮಾನವೀಯ ಕೊಲೆಗಡುಕರ ಬೆಂಬಲಕ್ಕೆ ನಿಂತ ಸಂಘಪರಿವಾರ

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ ಬಿಗಿಯಾಗುತ್ತಿರುವ ಬಿಕ್ಕಟ್ಟು!

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು...

ಮೋದಿ ಜನ್ಮದಿನದ ನಾಟಕದಲ್ಲಿ ಅಭಿನಯಿಸಲು ನಕಾರ; ವಿದ್ಯಾರ್ಥಿಗೆ ‘ಅಂಕ ಕಡಿತ’ದ ಬೆದರಿಕೆ

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿರುವ ನಾಟಕದಲ್ಲಿ ಅಭಿನಯಿಸಲು ನಿರಾಕರಿಸಿದ ವಿದ್ಯಾರ್ಥಿಗಳಿಗೆ...