ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದಾಗ ವಿನಯದಿಂದ ಇರಬೇಕು. ಕಷ್ಟಗಳು ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ, ವೈಫಲ್ಯ ಎದುರಾದರೆ ಮತ್ತೆ ಯಶಸ್ಸಿನತ್ತ ಸಾಗಲು ನಿರಂತರ ಪ್ರಯತ್ನಿಸಬೇಕು ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಬೆಳಗಾವಿ ವಿಟಿಯು ಘಟಿಕೋತ್ಸವದಲ್ಲಿ ಸಲಹೆ ನೀಡಿದರು.
ವಿಟಿಯುನ 26ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಗೊಂದಲ ಎದುರಾದಾಗ, ತಮ್ಮ ಜ್ಞಾನ ಮತ್ತು ಸಾಮರ್ಥ್ಯದಿಂದ ದೇಶ ಹಾಗೂ ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಆಲೋಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದರು.
ಕರ್ನಾಟಕ ನವೋದ್ಯಮ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖ ಕೇಂದ್ರವಾಗಿದೆ. ವಿಟಿಯು ವಿದ್ಯಾರ್ಥಿಗಳು ಉದ್ಯೋಗ ಹುಡುಕುವವರಾಗುವುದಕ್ಕಿಂತ ಉದ್ಯೋಗ ಸೃಷ್ಟಿಸುವವರಾಗಬೇಕು. ಯಶಸ್ವಿ ಸ್ಟಾರ್ಟ್ಅಪ್ ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವುದರಿಂದ ವೈಯಕ್ತಿಕ ಯಶಸ್ಸಿನ ಜತೆಗೆ ದೇಶದ ಆರ್ಥಿಕ ಶಕ್ತಿಗೂ ಕೊಡುಗೆ ನೀಡಬಹುದು ಎಂದರು.
ಜಲ ಸಂರಕ್ಷಣೆ, ಸ್ವಚ್ಛ ಇಂಧನ, ಸುಸ್ಥಿರ ಕೃಷಿ, ಗ್ರಾಮೀಣ ತಂತ್ರಜ್ಞಾನ, ಆರೋಗ್ಯ ಸೇವೆ, ಸ್ಮಾರ್ಟ್ ಮೊಬಿಲಿಟಿ, ಸೈಬರ್ ಭದ್ರತೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ದೇಶದ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
‘ರಿಸರ್ಚ್ ಪೇಪರ್ ಮುಖ್ಯ, ಆದರೆ ಸಂಶೋಧನೆಯ ನೈಜ ಜಗತ್ತಿನ ಮೇಲಿನ ಪರಿಣಾಮ ಅದಕ್ಕಿಂತಲೂ ಮುಖ್ಯ’ ಎಂದು ಗೆಹ್ಲೋಟ್ ಹೇಳಿದರು.
ಸರ್ ಎಂ. ವಿಶ್ವೇಶ್ವರಯ್ಯ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಂದ ವಿದ್ಯಾರ್ಥಿಗಳು ಪ್ರೇರಣೆ ಪಡೆದು ಜ್ಞಾನ, ಆತ್ಮವಿಶ್ವಾಸ ಹಾಗೂ ಜವಾಬ್ದಾರಿಯೊಂದಿಗೆ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಜಲ ಸಂರಕ್ಷಣೆ, ಸ್ವಚ್ಛ ಇಂಧನ, ಸುಸ್ಥಿರ ಕೃಷಿ, ಗ್ರಾಮೀಣ ತಂತ್ರಜ್ಞಾನ, ಆರೋಗ್ಯ ಸೇವೆ, ಸ್ಮಾರ್ಟ್ ಮೊಬಿಲಿಟಿ, ಸೈಬರ್ ಭದ್ರತೆ ಹಾಗೂ ಹವಾಮಾನ ಬದಲಾವಣೆ ಸೇರಿದಂತೆ ದೇಶದ ನೈಜ ಸಮಸ್ಯೆಗಳಿಗೆ ಪರಿಹಾರ ನೀಡುವ ಸಂಶೋಧನೆಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
‘ರಿಸರ್ಚ್ ಪೇಪರ್ ಮುಖ್ಯ, ಆದರೆ ಸಂಶೋಧನೆಯ ನೈಜ ಜಗತ್ತಿನ ಮೇಲಿನ ಪರಿಣಾಮ ಅದಕ್ಕಿಂತಲೂ ಮುಖ್ಯ’ ಎಂದು ಗೆಹೋಟ್ ಹೇಳಿದರು.