ಬೆಳಗಾವಿ : ನವೆಂಬರ್ 7ರಿಂದ ಏಣಗಿ ಬಾಳಪ್ಪ ಸ್ಮರಣೋತ್ಸವ ನಾಟಕೋತ್ಸವ

Date:

ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ (ರಿ) ಸವದತ್ತಿಯು ರಂಗಭೂಮಿಗೆ ಅಮೂಲ್ಯ ಕೊಡುಗೆ ನೀಡಿದ ದಿವಂಗತ ನಾಟ್ಯಭೂಷಣ ಏಣಗಿ ಬಾಳಪ್ಪ ಅವರ ಸ್ಮರಣಾರ್ಥವಾಗಿ ಮೂರು ದಿನಗಳ ಸ್ಮರಣೋತ್ಸವ ನಾಟಕೋತ್ಸವವನ್ನು ಬೆಳಗಾವಿಯ ಕನ್ನಡ ಭವನದಲ್ಲಿ ಆಯೋಜಿಸಿದೆ.

- Advertisement -

ಈ ನಾಟಕೋತ್ಸವವು ನವೆಂಬರ್ 7ರಿಂದ 9ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ನೆಹರು ನಗರದ ರಾಮದೇವ್ ಹೋಟೆಲ್ ಹಿಂಭಾಗದಲ್ಲಿರುವ ಕನ್ನಡ ಭವನದಲ್ಲಿ ನಡೆಯಲಿದ್ದು, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ, ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಂಗಸೃಷ್ಟಿ ಕಲಾತಂಡ ಹಾಗೂ ಕನ್ನಡ ಭವನದ ಸಹಯೋಗದಲ್ಲಿ ನಡೆಯಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ರಂಗಭೂಮಿಯ ದಿವಂಗತ ದಿಗ್ಗಜರಾದ ಸಾಹಿತಿ ಎಸ್‌.ಎಲ್‌. ಭೈರಪ್ಪ, ರಂಗಕರ್ಮಿಗಳು ಯಶವಂತ ಸರದೇಶಪಾಂಡೆ, ರಾಜು ತಾಳಿಕೋಟಿ, ಡಿ. ಹಣುಮಕ್ಕ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಅನ್ನಪೂರ್ಣ ಅಶೋಕ ಮಳಗಲಿ ಇವರಿಗೆ ಈ ಉತ್ಸವವನ್ನು ಅರ್ಪಿಸಲಾಗಿದೆ.

ನವೆಂಬರ್ 7ರಂದು ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿಗಳು ನೀಲಗಂಗಾ ಚರಂತಿಮಠ, ಡಾ. ಗುರುದೇವಿ ಹುಲೆಪ್ಪನವರಮಠ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್. ಚನ್ನೂರ, ಸುಭಾಸ್ ಏಣಗಿ, ಸರ್ಜೂ ಕಾಟ್ಕರ್, ವಿದ್ಯಾವತಿ ಭಜಂತ್ರಿ, ಮಂಗಲಾ ಮೆಟಗುಡ್ಡ, ಶೈಲಜಾ ಭಿಂಗೆ, ಅರವಿಂದ ಕುಲಕರ್ಣಿ, ಸವಿತಾ ಭೈರಪ್ಪ, ರತ್ನಪ್ರಭಾ ಬೆಲ್ಲದ ಹಾಗೂ ವಿದ್ಯಾ ಗೌಡರ ಮೊದಲಾದ ಗಣ್ಯರು ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಝಕೀರ ನದಾಫ ಅವರ ‘ನೆಲಮುಗಿಲು’ ಮತ್ತು ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕ ಕೃತಿಗಳ ಲೋಕಾರ್ಪಣೆ ನಡೆಯಲಿದೆ. ನಂತರ ರಂಗಸಂಪದ ಬೆಳಗಾವಿ ಅವರಿಂದ ಸಂಧ್ಯಾ ಎಸ್. ರಚಿಸಿದ, ಸವಿತಾ ಭೈರಪ್ಪ ನಿರ್ದೇಶನದ ‘ನಕ್ಷತ್ರ ಯಾತ್ರಿಕರು’ ನಾಟಕ ಪ್ರದರ್ಶನಗೊಳ್ಳಲಿದೆ.

ನವೆಂಬರ್ 8ರಂದು ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆಯವರಿಂದ ಝಕೀರ ನದಾಫ ಅವರ ರಚನೆ ಮತ್ತು ನಿರ್ದೇಶನದ ‘ಹಾಲು ಬಟ್ಟಲದೊಳಗಿನ ಪಾಲು’ ನಾಟಕ ಪ್ರದರ್ಶನಗೊಳ್ಳಲಿದೆ.
ನವೆಂಬರ್ 9ರಂದು ಸಮಾರೋಪ ಸಮಾರಂಭದಲ್ಲಿ ಎಲ್.ಎಸ್. ಶಾಸ್ತ್ರಿ, ಯ.ರು. ಪಾಟೀಲ, ಬಸವರಾಜ ರೊಟ್ಟಿ, ಮಧುಕರ ಗುಂಡೇನಟ್ಟಿ, ರವಿ ಕೊಟಾರಗಸ್ತಿ, ಆನಂದ ಪುರಾಣಿಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.
ಅದಾದ ನಂತರ ಅದೇ ಸಂಘಟನೆಯಿಂದ ಝಕೀರ ನದಾಫ ನಿರ್ದೇಶನದ ‘ನೆಲಮುಗಿಲು’ ನಾಟಕ ಪ್ರದರ್ಶನಗೊಳ್ಳಲಿದೆ.

ಸಾಂಸ್ಕೃತಿಕ ವೈಭವದಿಂದ ಕೂಡಿದ ಈ ನಾಟಕೋತ್ಸವಕ್ಕೆ ರಂಗಭೂಮಿ ಕಲಾಭಿಮಾನಿಗಳನ್ನು ಸಂಘಟನೆಯು ಆಹ್ವಾನಿಸಿದೆ.

IMG 20251111 WA0000
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳಗಾವಿ | ಸಾವಿನ ಕದ ತಟ್ಟಿ ಬಂದ ರೈತನ ಮಗನಿಗೆ 12 ಚಿನ್ನದ ಪದಕ

ಬದುಕು ಮುಗಿಯಿತು ಎಂದುಕೊಂಡಿದ್ದ ಕ್ಷಣದಿಂದಲೇ ಹೊಸ ಬದುಕಿನತ್ತ ಹೆಜ್ಜೆ ಇಟ್ಟರು. ಸಾವಿನ...

ಬೆಳಗಾವಿ | ವಿಫಲತೆಯಿಂದ ಕುಗ್ಗದೆ ಯಶಸ್ಸಿನತ್ತ ಸಾಗಿರಿ: ರಾಜ್ಯಪಾಲ ಗೆಹ್ಲೋಟ್

ವಿದ್ಯಾರ್ಥಿಗಳು ಯಶಸ್ಸು ಸಾಧಿಸಿದಾಗ ವಿನಯದಿಂದ ಇರಬೇಕು. ಕಷ್ಟಗಳು ಎದುರಾದಾಗ ತಾಳ್ಮೆ ಕಳೆದುಕೊಳ್ಳದೆ,...

ಬೆಳಗಾವಿ | ವಿಟಿಯುನಲ್ಲಿ ಏವಿಯೇಷನ್, ರೈಲ್ವೆ ಎಂಜಿನಿಯರಿಂಗ್ ಕೋರ್ಸ್: ಸಚಿವ ಬಸವರಾಜ ರಾಯರೆಡ್ಡಿ

ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ...

ಬೆಳಗಾವಿ | ಬರ ಪರಿಸ್ಥಿತಿ ನಿರ್ವಹಣೆ: ಅಧಿಕಾರಿಗಳಿಂದ ಮಾಹಿತಿ ಪಡೆದ ಡಿಸಿಎಂ ಪರಮೇಶ್ವರ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಉಪಮುಖ್ಯಮಂತ್ರಿ...