ಔರಾದ್‌ | ಫ್ಯಾಶನ್ ಹೆಸರಿನಲ್ಲಿ ನಾಡಿನ ಸಂಸ್ಕೃತಿ ಹಾಳು : ನಿಜಗುಣಾನಂದ ಸ್ವಾಮೀಜಿ

Date:

ಯುವಕರು ಬದುಕನ್ನು ಕೇವಲ ಮನರಂಜನೆಗೆ ಸೀಮಿತ ಮಾಡಿಕೊಂಡು ಮೊಬೈಲ್, ಸಾಮಾಜಿಕ ಜಾಲತಾಣ, ವಾಟ್ಸಪ್‌ಗಳಿಗೆ ಮಾರಿ ಹೋಗಿದ್ದು ದುರಂತ. ಫ್ಯಾಶನ್ ಹೆಸರಿನಲ್ಲಿ ಯುವ ಸಮೂಹ ನಮ್ಮ ನಾಡಿನ ಸಂಸ್ಕೃತಿ ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ನುಡಿದರು.

- Advertisement -

ಔರಾದ್ ಪಟ್ಟಣದ ಪತ್ರಿಸ್ವಾಮಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಸಂಭ್ರಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ ಬೀದರ ವತಿಯಿಂದ ನಡೆದ ಅಮರವಾಡಿ ಸಂಸ್ಕೃತಿ ಚಿಂತನ ಹಾಗೂ ಅಮರವಾಡಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ʼಹಣವಿದ್ದವರೂ ದೊಡ್ಡವರಲ್ಲ ಗುಣವಿದ್ದವರೂ ದೊಡ್ಡವರು. ಪ್ರಶಸ್ತಿ ಸ್ವೀಕರಿಸಿದ ಹಿರಿಯರು ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಅವರಲ್ಲಿ ಹಣವಿಲ್ಲ ಆದರೆ ಗುಣ ಇಡೀ ಪ್ರಪಂಚವೇ ಮೆಚ್ಚುವಂತಿದೆ. ಹರಿದ ಬಟ್ಟೆಗಳ ಜೊತೆ ಬದುಕು ಕಟ್ಟಿಕೊಂಡ ಅಂದಿನ ಹಿರಿಯರು ಮತ್ತು ಉದ್ದೇಶಪೂರ್ವಕವಾಗಿ ಹರಿದ ಬಟ್ಟೆಗಳು ಹಾಕಿಕೊಂಡು ಓಡಾಡುತ್ತಿರುವ ಇಂದಿನ ಯುವಕರ ನಡುವೆ ದೊಡ್ಡ ವ್ಯತ್ಯಾಸ ಇದೆ ಎಂದು ತಿಳಿಯಬೇಕಿದೆʼ ಎಂದರು.

ʼಕಾಂಕ್ರೀಟ್ ನಾಡಿಗೆ ಮಹತ್ವ ನೀಡಿ ಕೃಷಿಯನ್ನು ಮರೆತಿದ್ದು ಅಪಾಯಕಾರಿ ನಡೆಯಾಗಿದೆ. ಬಡತನ ಸಿರಿತನದ ವ್ಯತ್ಯಾಸದ ಅರಿಬೇಕು, ಸೌಹಾರ್ದತೆ, ಸಾಮರಸ್ಯದಿಂದ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ. ಬಸವಾದಿ ಶರಣರು ನಿರ್ಮಿಸಿದ ಕಾಯಕ ಪ್ರಧಾನ ಸಮಾಜವೇ ಸುಂದರ ಸಮಾಜ. ಇಂದಿನ ಕಾರ್ಯಕ್ರಮ ಅರ್ಥಪೂರ್ಣ ವಿಚಾರಗಳಿಂದ ಕೂಡಿದ್ದು ಹೆತ್ತವರಿಗೆ ನೀಡುವ ಸಾರ್ಥಕ ಗೌರವ ಇದಾಗಿದೆʼ ಎಂದರು.

ಮಾಜಿ ಶಾಸಕ ಗುಂಡಪ್ಪ ವಕೀಲ ಮಾತನಾಡಿ, ʼಮೌಲ್ಯಗಳಿಂದ ತುಂಬಿರುವ ಅಂದಿನ ಕಳೆದು ಹೋದ ಜೀವನ ಪುನಃ ಸೃಷ್ಟಿಸುವ ಅಗತ್ಯತೆ ಇದೆ. ನಾವು ಸಂಸ್ಕಾರ, ಸಂಸ್ಕೃತಿ ಮರೆತರೆ ಒಳಿತಲ್ಲ. ಸಾಮಾನ್ಯರಂತೆ ಬದುಕಿ ಸಾರ್ಥಕ ಜೀವನ ನಡೆಸಿದ ತನ್ನ ತಂದೆ ಭೀಮಗೊಂಡ ಅವರ ಸ್ಮರಣಾರ್ಥ ಅಮರವಾಡಿ ರತ್ನ ಪ್ರಶಸ್ತಿ ನೀಡುತ್ತಿರುವ ಬಾಲಾಜಿ ಹಾಗೂ ಅವರ ಕುಟುಂಬದ ಕಾರ್ಯ ಅನುಕರಣೀಯ. ಇಂದು ನಮ್ಮ ಕಾಲೇಜಿನಲ್ಲಿ ಇಂತಹ ಸ್ಪೂರ್ತಿದಾಯಕ ಕಾರ್ಯಕ್ರಮ ಇಟ್ಟುಕೊಂಡಿದ್ದು ಸಂತಸ ತಂದಿದೆʼ ಎಂದರು.

WhatsApp Image 2026 03 30 at 11.49.10 AM

ಪಟ್ಟಣದ ಹಿರಿಯ ಜೀವಿ ಭೀಮಗೊಂಡ ಅಮರವಾಡಿ ಸ್ಮರಣಾರ್ಥ ಜಾನಪದ ಕಲಾವಿದ ಬಸವಣಪ್ಪ ಮುಕ್ತೆದಾರ, ಕೃಷಿ ಕಾರ್ಮಿಕ ನಾಮದೇವ ಆಡೆ, ವಚನ ಸಾಹಿತ್ಯ ಪ್ರಸಾರಕ ಮನ್ಮತಪ್ಪ ಹುಗ್ಗೆ, ಸರ್ವಧರ್ಮ ಸಮಭಾವಿ ನಸೀಮಾ ಬೇಗಂ, ಸಾಹಿತ್ಯಿಕ ಸಾಂಸ್ಕೃತಿಕ ಚಿಂತಕ ಜಗನ್ನಾಥ ಮೂಲಗೆ, ನಾಟಿ ವೈದ್ಯ ಬಸವರಾಜ ಘುಳೆ, ನಿವೃತ್ತ ಸರ್ಕಾರಿ ನೌಕರ ಪಾಂಡುರಂಗ ವಾಘಮಾರೆ ಅವರಿಗೆ ಅಮರವಾಡಿ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇದನ್ನೂ ಓದಿ : ಬಿಜೆಪಿ ಸೇರಿದ್ದು ನಾನು ಮಾಡಿದ ಐತಿಹಾಸಿಕ ಪ್ರಮಾದ: ಸುಭಾಷ್ ಚಂದ್ರ ಬೋಸ್ ‘ಮೊಮ್ಮಗ’

ಕಸಾಪ ಜಿಲ್ಲಾ ಅಧ್ಯಕ್ಷ ಸುರೇಶ ಚನ್ನಶೆಟ್ಟಿ, ಕೋಶಾಧ್ಯಕ್ಷ ಶಿವಶಂಕರ ಟೋಕರೆ, ಮಹಿಳಾಪರ ಚಿಂತಕಿ ಸುನೀತಾ ಮುದ್ದಾ, ಪ್ರಾಚಾರ್ಯ ಎಸ್.ಕೆ ಅಖೀಲ್, ಪ್ರಾಂಶುಪಾಲ ಧನಾಜಿ ರೋಡೆ, ಸಂಸ್ಥೆ ಅಧ್ಯಕ್ಷ ಅಂಜನಾಬಾಯಿ ಉಪಸ್ಥರಿದ್ದರು. ಕಸಾಪ ಅಧ್ಯಕ್ಷ ಬಾಲಾಜಿ ಅಮರವಾಡಿ ಪ್ರಾಸ್ತಾವಿಕ ಮಾತನಾಡಿದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಕಲ್ಯಾಣ ಕರ್ನಾಟಕದ ಪ್ರಗತಿಗೆ ಗುಣಮಟ್ಟದ ಶಿಕ್ಷಣ ಅಗತ್ಯ : ಮೀನಾಕ್ಷಿ ಬಿರಾದರ್

ಕಲ್ಯಾಣ ಕರ್ನಾಟಕ ಭಾಗ ಆರ್ಥಿಕ , ಔದ್ಯೋಗಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ...

ಬೀದರ್‌ | ಹಾಲಿಗಿಂತ ನೀರು ದುಬಾರಿಯಾಗುವ ಕಾಲ ದೂರವಿಲ್ಲ: ಮಾರುತಿ ಬೌದ್ಧೆ

ನಿಸರ್ಗದತ್ತವಾಗಿ ಉಚಿತವಾಗಿ ದೊರೆಯಬೇಕಾದ ನೀರು ಮುಂದೊಂದು ದಿನ ಹಾಲಿನ ದರಕ್ಕಿಂತಲೂ ದುಬಾರಿಯಾಗಿ...

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಬೀದರ್ ಕಾರುಣ್ಯ ಸೌಹಾರ್ದ ಸಹಕಾರಿ ಸಂಘದಿಂದ 2025-26ನೇ ಸಾಲಿನಲ್ಲಿ 1,970 ಮಂದಿಗೆ...

ಬಸವಕಲ್ಯಾಣ | ಅಲ್ಲಮ ಜಗತ್ತಿನ ಶ್ರೇಷ್ಠ ಅನುಭಾವಿ

ಅಲ್ಲಮಪ್ರಭು ಅವರು ಜಗತ್ತಿನ ಶ್ರೇಷ್ಠ ಅನುಭಾವಿಗಳಾಗಿದ್ದು, ಅವರ ಚಿಂತನೆ ಹಾಗೂ ವಚನಗಳ...