ಬೀದರ್‌ | ಜ.9ರಿಂದ ಮೂರು ದಿನ ‘ಬಿದರಿ ಉತ್ಸವ’ ಆಚರಣೆಗೆ ನಿರ್ಧಾರ

Date:

ಪ್ರತಿ ವರ್ಷದಂತೆ ಈ ವರ್ಷವೂ ಬಿದರಿ ಉತ್ಸವವನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಬರುವ ಜನವರಿ 9, 10 ಮತ್ತು 11ರಂದು ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಸುಗಮ ಸಂಗೀತ ಸ್ಪರ್ಧೆ, ನೃತ್ಯ, ಸಂಗೀತ ಸಂಜೆಯ ರಸದೌತಣದ ಜೊತೆಗೆ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ನೆರವೇರಿಸಲು ಬಿದರಿ ಉತ್ಸವ ಸಮಿತಿ ನಿರ್ಧರಿಸಿದೆ.

- Advertisement -

ಕಳೆದ 7 ವರ್ಷಗಳಿಂದ ಬಿದರಿ ಉತ್ಸವವನ್ನು ಆಯೋಜಿಸುತ್ತ ಬರುತ್ತಿರುವ ಬಿದರಿ ಸಾಂಸ್ಕೃತಿಕ ವೇದಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬರುವ 2026ರ ಜನವರಿ 9ರಿಂದ 11ರ ವರೆಗೆ 3 ದಿನಗಳ ಕಾಲ ಅದ್ಧೂರಿಯಾಗಿ ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳ ಸಮ್ಮಿಲನವನ್ನು ಜಿಲ್ಲೆಯ ಜನತೆಗೆ ಉಣಬಡಿಸಲಿದೆ ಅಲ್ಲದೆ ಸಂಗೀತ ಕ್ಷೇತ್ರದ ಹಿರಿಯ ಸಾಧಕರಿಗೆ ಕೊಡಮಾಡುತ ರಾಜ್ಯ ಮಟ್ಟದ ಬಿದರಿ ದತ್ತಿ ಪ್ರಶಸ್ತಿಯ ವಿತರಣಾ ಸಮಾರಂಭವನ್ನೂ ನೆರವೇರಿಸಲಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

ಬೆಟ್ಟದಷ್ಟಾದ ಅತ್ಯಾಚಾರ ಪ್ರಕರಣಗಳು – ತೆವಳುತ್ತಿರುವ ನ್ಯಾಯದಾನ

ಪೊಲೀಸರೆಂದು ನಟಿಸಿ ಬೆದರಿಸುವುದು, ನಿರ್ಜನ ಪ್ರದೇಶಗಳಲ್ಲಿ ತೋಳಗಳಂತೆ ಕಾದು ಹಲ್ಲೆಗೈದು ಸಾಮೂಹಿಕ ಅತ್ಯಾಚಾರ ನಡೆಸಿ ಕೊಂದೆಸೆಯುವುದು, ಕಿಂಚಿತ್ತೂ ಭಯವಿಲ್ಲದೆ ಕೃತ್ಯದ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಲ್ಲದೆ, ಸಂತ್ರಸ್ತರ ಗುರುತು ಬಹಿರಂಗಪಡಿಸುವ ಪ್ರವೃತ್ತಿ...

ಶಾಮನೂರು ಫ್ಯಾಮಿಲಿಗೆ ಸಚಿವ ಬಸವಂತಪ್ಪ ಕೈ ಮುಗಿಯುವ ಅಗತ್ಯವಿದೆಯೇ?

ಬಸವಂತಪ್ಪನವರನ್ನು ಗೆಲ್ಲಿಸಿದ್ದು, ಕಾಂಗ್ರೆಸ್ಸಿನ ಸಾಂಪ್ರದಾಯಿಕ ಮತದಾರರು. ಶಾಮನೂರು ಕುಟುಂಬದ ಸುತ್ತ ಕಟ್ಟಿರುವ ಕಲ್ಪಿತ ಬಲವನ್ನು ಮೀರಿ, ಬಸವಂತಪ್ಪ ಬೆಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಪ್ರಾಯ. ಪೌರಕಾರ್ಮಿಕರ ಮಗನಾಗಿ ಹುಟ್ಟಿ, ಸಚಿವ ಸ್ಥಾನದವರೆಗೆ ಬೆಳೆದವರು ಕೆ.ಎಸ್....

ʼಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಅವರೂ ಸೇರಿದಂತೆ ಅನೇಕ ಗಣ್ಯರನ್ನು ಆಹ್ವಾನಿಸಲಾಗಿದೆʼ ಎಂದು ವೇದಿಕೆಯ ಅಧ್ಯಕ್ಷೆ ರೇಖಾ ಅಪ್ಪಾರಾವ್ ಸೌದಿ ತಿಳಿಸಿದರು.

ಬಿದರಿ ಉತ್ಸವ ನಿಮಿತ್ತದ ಸಿದ್ದತಾ ಸಭೆಯಲ್ಲಿ ಅವರು ಈ ವಿವರಗಳನ್ನು ನೀಡಿ, ಜಿಲ್ಲೆಯ 16 ವರ್ಷ ವಯೋಮಿತಿಯೊಳಗಿನ ಪ್ರತಿಭಾನ್ವಿತ ಸಂಗೀತ ಕಲಾವಿದ ಮಕ್ಕಳಿಗೆ ವೇದಿಕೆ ಒದಗಿಸಿಕೊಡುವುದು ಮತ್ತು ಸಂಗೀತಾಸಕ್ತಿಯನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸುವ ಬಿದರಿ ಸುಗಮ ಸಂಗೀತ ಸ್ಪರ್ಧೆಯನ್ನು ಜನವರಿ 9ರಂದು ಶುಕ್ರವಾರ ಬೆಳಿಗ್ಗೆ 9ರಿಂದ ಇಲ್ಲಿನ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕೆ ಗ್ರಾಮೀಣ ಭಾಗದ ಮಕ್ಕಳನ್ನೂ ಸೇರಿಸಿಕೊಳ್ಳೋಣ ಎಂದು ಪ್ರಮುಖರಾದ ಡಾ.ಗೌತಮ ಅರಳಿ, ರಾಜೇಂದ್ರ ಮಣಗೇರಿ, ಜಯದೇವಿ ಯದ್ಲಾಪೂರೆ, ಗೀತಾ ಗಡ್ಡೆ, ವಿದ್ಯಾವತಿ ಬಲ್ಲೂರ್, ಸುಬ್ರಹ್ಮಣ್ಯ ಪ್ರಭು, ಎಸ್ ಪ್ರಬಾಕರ್, ಶ್ರೀಮಂತ ಸಪಾಟೆ, ಡಾ.ಶಿವಕುಮಾರ ಗಡ್ಡೆ, ಸಂತೋಷ ಜೋಳದಾಪಕೆ, ಸುಬ್ಬಣ್ಣ, ಕರಕನಳ್ಳಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜ.10ರಂದು ಜಿಲ್ಲಾ ರಂಗಿಮಂದಿರ ಆವರಣದಲ್ಲಿ ನೃತ್ಯ, ದೇಶಿ ಆಟಗಳನ್ನೂ, ಕೃಷಿ ಸಂಬಂಧಿತ ಪರಿಕರಗಳ ಪ್ರದರ್ಶನವನ್ನೂ ಆಯೋಜಿಸುವ ಕುರಿತಂತೆ ಯೋಜಿಸೋಣ ಎಂದು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನಶೆಟ್ಟಿ, ರಾಣಿ ಸತ್ಯಮೂರ್ತಿ, ವೀರಶೆಟ್ಟಿ ಮೈಲೂರಕರ್, ಆರತಿ ಪಾಟೀಲ್, ಪಾರ್ವತಿ ಸೋನಾರೆ, ಮಲ್ಲಮ್ಮ ಸಂತಾಜಿ, ಶ್ರೇಯಾ ಮಹೇಂದ್ರಕರ್, ಕಸ್ತೂರಿ ಪಟಪಳ್ಳಿ, ಶರತಕುಮಾರ ಅಭಿಮಾನ, ಪುಷ್ಪಾ ಕನಕ ಹಾಗೂ ಸುಧಾ ಭಾರದ್ವಾಜ ಸಲಹೆ ನೀಡಿದರು.

ಜ.11ರಂದು ಜಿಲ್ಲಾ ರಂಗಮಂದಿರದಲ್ಲಿ ಖ್ಯಾತನಾಮ ಕಲಾವಿದರಿಂದ ವಾದ್ಯ ಸಹಿತ ಬಿದರಿ ಸಂಗೀತ ಸಂಜೆ ಹಾಗೂ ಬಿದರಿ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಕ್ಕಳ ನೃತ್ಯದ ಕಾರ್ಯಕ್ರಮಗಳ ಆಯೋಜನೆ, ಗಣ್ಯರಿಗೆ ಮತ್ತು ಸಂಗೀತಗಾರರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಿಕೊಳ್ಳುವ ಕುರಿತಾಗಿ ಲೇಖಕಿಯರ ಸಂಘದ ಅಧ್ಯಕ್ಷೆ ಭಾರತಿ ವಸ್ತ್ರದ, ಹಿರಿಯರಾದ ಬಾಬು ವಾಲಿ, ರಾಮಕೃಷ್ಣನ್ ಸಾಳೆ, ಶರಣಪ್ಪ ಹೋತಪೇಟ್, ಜಯರಾಜ ಖಂಡ್ರೆ, ಆನಂದ ದೇವಪ್ಪ, ಅನೀಲಕುಮಾರ ಬೆಲ್ದಾರ್, ವಿಜಯಕುಮಾರ ಪಾಟೀಲ್ ಯರನಳ್ಳಿ, ದಾನಿ ಬಾಬುರಾವ್, ಹಾವಶೆಟ್ಟಿ ಪಾಟೀಲ್, ವೀರಭದ್ರಪ್ಪ ಉಪ್ಪಿನ್, ಯೋಗೇಶ ಮಠದ, ರತೀನ್ ಕಮಲ್ ಹಾಗೂ ಕಾಮಶೆಟ್ಟಿ ಚಿಕಬಸೆ ಅವರುಗಳು ಪ್ರಸ್ತಾಪಿಸಿದರೆ ಇದಕ್ಕೆ ಸರ್ವರೂ ಸಹಮತಿಸಿದರು.

ಇದನ್ನೂ ಓದಿ : ಬೀದರ್‌ | ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ನಿರ್ಮಿಸುವ ಗುರಿ : ಡಾ.ಮಾನಸ

ಕಾರ್ಯಕ್ರಮದಲ್ಲಿ ದೇವಿದಾಸ ಜೋಶಿ ನಿರೂಪಿಸಿ, ರೇವಣಸಿದ್ದಪ್ಪ ಡೊಂಗರಗಾಂವ್ ಸ್ವಾಗತಿಸಿ ಶಿಖರೇಶ್ವರ ಪಾಟೀಲ್, ಹಾಗೂ ಸುನೀಲ ಭಾವಿಕಟ್ಟಿ, ನಾಗಶೆಟ್ಟಿ ಧರಂಪೂರ್, ಸುನೀಲ ಕುಲಕರ್ಣಿ, ಶ್ರೀಕಾಂತ ಕೋಟಗೆ, ಅಶ್ವಿನಿ ಶ್ರೀಕಾಂತ, ರಾಜೇಶ ಕುಲಕರ್ಣಿ, ಮಹೇಶ ಪಾಟೀಲ್, ನಟರಾಜ ಪಾಟೀಲ್ ಹಾಗೂ ರಾಘವೇಂದ್ರ ಅಡಿಗ ಸೇರಿದಂತೆ ಮತ್ತಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಬರ : ಪ್ರತಿ ಎಕರೆಗೆ ₹50 ಸಾವಿರ ಪರಿಹಾರ, ರೈತರ ಸಾಲ ಮನ್ನಾಗೆ ಆಗ್ರಹಿಸಿ ರೈತರಿಂದ ಬೈಕ್‌ ರ‍್ಯಾಲಿ

ರೈತರು ಬೆಳೆಯುವ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧ...

ಬೀದರ್‌ | ಜ್ಞಾನೇಶಕುಮಾರ ವಜಾಗೊಳಿಸಿ, ಬಂಧಿಸಲು ಆಗ್ರಹಿಸಿ ಕಾಂಗ್ರೆಸ್‌ ಪ್ರತಿಭಟನೆ

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ ವಜಾಗೊಳಿಸಿ ಬಂಧಿಸಬೇಕೆಂದು ಆಗ್ರಹಿಸಿ...

ಬೀದರ್‌ | ಸೆ.29ರಂದು ನೀರು, ಬರ, ಪರಿಸರ ಕುರಿತು ವಿಚಾರ ಸಂಕಿರಣ

ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ, ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಟೀಮ್...

ಬೀದರ್‌ | ಶಿಕ್ಷಕರು ಸಮಾಜದ ಭವಿಷ್ಯ ನಿರ್ಮಿಸುವ ಶಿಲ್ಪಿಗಳು: ಪುಣ್ಯವತಿ ವಿಸಾಜಿ

ಶಿಕ್ಷಕರು ಕೇವಲ ಪಾಠ ಬೋಧಿಸುವವರಲ್ಲ. ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವ ಜೊತೆಗೆ ಸಮಾಜದ...