ಮನುವಾದಿ ಮನಸ್ಸಿನಿಂದ ಟಿ.ನರಸಿಪುರದಲ್ಲಿ ಗಣೇಶ ವಿಸರ್ಜನೆ ವೇಳೆ ದಲಿತ ಸಂಘಟನೆಗಳ ನೀಲಿ ಶಾಲು ಮತ್ತು ಅಂಬೇಡ್ಕರ್ ವಿಚಾರಧಾರೆ ಬಗ್ಗೆ ಡಿಎಸ್ ಎಸ್ ಮುಖಂಡರಿಗೆ ಅರಿವಿಲ್ಲ ಎಂದು ಅವಹೇಳನವಾಗಿ ಮಾತನಾಡಿರುವ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ್ ಅವರ ಮೇಲೆ ಪ್ರಕರಣ ದಾಖಲಿಸಿ ಇನ್ನೂ ಏಕೆ ಬಂದಿಸಿಲ್ಲಾ
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಬಿ.ವಿ. ವೆಂಕಟರಮಣ ಒತ್ತಾಯಿಸಿದ್ದಾರೆ.
ಪಟ್ಟಣದಲ್ಲಿ ಗುರುವಾರ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದಲಿತ ಸಂಘಟನೆಗಳು ಹಾಗೂ ದಲಿತ ಮುಖಂಡರ ಕುರಿತು ಹಗುರವಾಗಿ ಮಾತನಾಡುವುದು ಖಂಡನೀಯ. ಸಾಮಾಜಿಕ ನ್ಯಾಯದ ಸಂಕೇತವಾಗಿರುವ ನೀಲಿ ಶಾಲಿನ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವುದು ದಲಿತ ಸಮುದಾಯದ ಭಾವನೆಗಳಿಗೆ ನೋವುಂಟುಮಾಡಿದೆ. ಹಲವು ದಶಕಗಳಿಂದ ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಶೋಷಿತ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ದಲಿತ ಸಂಘಟನೆಗಳ ಕುರಿತು ಜವಾಬ್ದಾರಿಯಿಲ್ಲದೆ ಮಾತನಾಡುವುದು ಸರಿಯಲ್ಲ ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತಿದೆ.
ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಅರಿತುಕೊಂಡು ಸಾರ್ವಜನಿಕ ಜೀವನದಲ್ಲಿರುವವರು ಜವಾಬ್ದಾರಿಯುತವಾಗಿ ಮಾತನಾಡಬೇಕು. ನೀಲಿ ಬಣ್ಣ ಹಾಗೂ ನೀಲಿ ಶಾಲಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಅರಿತುಕೊಳ್ಳಬೇಕು. ನೀಲಿ ಬಣ್ಣವು ಅಂಬೇಡ್ಕರ್ ಚಳವಳಿಯೊಂದಿಗೆ ಐತಿಹಾಸಿಕವಾಗಿ ಗುರುತಿಸಿಕೊಂಡಿರುವ ಸಂಕೇತವಾಗಿದೆ ಎಂದು ಹೇಳಿದ್ದಾರೆ.
ಸ್ವಾಸ್ಥ್ಯ ಹಾಳು ಮಾಡುವುದೇ ಈ ಮನುವಾದಿ ಕುತಂತ್ರದ ಬುದ್ಧಿ. ಇಂಥ ಕುತಂತ್ರದ ಪರಿವಾರದಿಂದ ಬಂದ ನಿಮ್ಮಿಂದಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯವಿದೆಂದರು.ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಮತ್ತು ದಲಿತರನ್ನು ಅವಮಾನಿಸಿ ಮಾತಾಡಿರುವುದನ್ನು ಹಾಗೂ ಸೌಹಾರ್ದದಿಂದ ಕೂಡಿದ ಟಿ. ನರಸಿಪುರದ ವಾತವಾರಣವನ್ನು ಕಲುಕಿಸುವ ಮತ್ತು ಜಾತಿ-ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವ ಅಲ್ಲದೆ ಕೋಮುವಾದವನ್ನು ಸೃಷ್ಟಿಸುವುದನ್ನು ಸಮಿತಿ ಖಂಡಿಸಲಿದೆ. ದಲಿತರ ಕುರಿತು ಆಡಿದ ಮಾತುಗಳನ್ನು ಹಿಂಪಡೆದು ಕ್ಷಮೆ ಕೇಳಬೇಕು ಎಂದರು
ತಾಲೂಕು ಸಂಚಾಲಕ ಪೈಪಾಳ್ಯ ರವಿ ಮಾತನಾಡಿ
ಪಕ್ಷದೊಳಗೆ ಮೂಲೆ ಗುಂಪಾಗಿರುವ ಪ್ರತಾಪ್ ಸಿಂಹ ಅವರು ಸಮಾಜ ಧರ್ಮ ಹಾಗೂ ಜಾತಿಗಳ ನಡುವಿನ ಸಾಮರಸ್ಯ ಕದಡಿಕೊಂಡೆ ರಾಜಕೀಯ ಮಾಡಿಕೊಂಡು ಬಂದಿದ್ದಾರೆ. ಪ್ರತಿಯೊಂದರಲ್ಲಿ ಕೋಮುವಾದ ಹುಡುಕಿ ಕೆದಕಿ ತನ್ನ ಬೆಳೆ ಬೇಯಿಸಿಕೊಳ್ಳುವ ಪ್ರತಾಪ್ ಸಿಂಹ ಅವರು, ಡಿಎಸ್‌ಎಸ್ ಸೇರಿದಂತೆ ದಲಿತ ಸಂಘಟನೆಗಳ ಬಗ್ಗೆ ನಾಲಿಗೆ ಹರಿ ಬಿಟ್ಟರೆ ಘೇರಾವು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ಚೌಡಯ್ಯ ಮಾತನಾಡಿ ಕರ್ನಾಟಕ ದಲಿತ ಸಂಘರ್ಷ ಸಮಿತಿ 52 ವರ್ಷಗಳಿಂದ ಸಂವಿಧಾನದ ಆಶಯದಂತೆ ದೀನದಲಿತರ ಪರ ಹೋರಾಟ ನಡೆಸುತ್ತಿದೆ. ಸಂಘಟನೆಯ ಕಾರ್ಯಕರ್ತರನ್ನು ಅವಹೇಳನಕಾರಿಯಾಗಿ ನಿಂದಿಸಿರುವುದು ಹಾಗೂ ಕಾರ್ಯಕರ್ತರು ಧರಿಸುವ ನೀಲಿ ಶಾಲಿನ ಕುರಿತು ವ್ಯಂಗ್ಯವಾಗಿ ಮಾತನಾಡಿರುವುದು ಡಾ.ಬಿ.ಆರ್. ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..?ಕೋಲಾರ | ಸಾಲ ಮರುಪಾವತಿಸಿ, ಸಹಕಾರಿ ವ್ಯವಸ್ಥೆ ಉಳಿಸಿ: ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ದ. ಸಂ. ಸ, ತಾಲೂಕು ಸಂಘಟನಾ, ಸಂಚಾಲಕರಾದ, ಸತೀಶ್. ಚೌಢಯ್ಯ, ಶ್ರೀನಿವಾಸ್. ವಿ. ಶ್ರೀನಿವಾಸ, ಸೂರಿ,ಈರಪ್ಪ. ಇಂದ್ರಗೋಪಿ,ಹೊಸಹುಡ್ಯ,ಸೀನ,ವಿನೋದ,ಬುರಗಮಡುಗು, ಸೀನ.ಕಾಗನಪಲ್ಲಿ ಶ್ರೀನಿವಾಸ್. ಜಯಪ್ಪ, ಬಾವಾಜಿ, ಮುನಿರಾಜು,ಘoಟಮವಾರಿಪಲ್ಲಿ ಬಾಬು, ನರಸಿಂಹಪ್ಪ,ರವರು, ಉಪಸ್ಥಿತರಿದ್ದರು.




