ಚಿಂತಾಮಣಿ | ಸಾಲ ಮರುಪಾವತಿ,ಮರುಸಾಲ ನೀಡದಿದ್ದಕ್ಕೆ ರೈತರ ಆಕ್ರೋಶ: ಕುರುಬೂರು ಸಹಕಾರ ಸಂಘದ ಸಭೆಯಲ್ಲಿ ಗದ್ದಲ

Date:

ಚಿಂತಾಮಣಿ ತಾಲೂಕಿನ ಕುರುಬೂರು ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ 2025-26 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಸಂಘದ ಸಭಾಂಗಣದಲ್ಲಿ ನಡೆಯಿತು.ಈ ಮಹಾಸಭೆಯಲ್ಲಿ ಸಂಘದ ಸಾಲ ಮರುಪಾವತಿ ಹಾಗೂ ಹಣಕಾಸಿನ ವಸೂಲಾತಿ ವಿಚಾರವಾಗಿ ರೈತರು ಹಾಗೂ ಆಡಳಿತ ಮಂಡಳಿಯ ನಡುವೆ ತೀವ್ರ ವಾಗ್ವಾದ ನಡೆಯಿತು.

- Advertisement -

ಸಭೆಯಲ್ಲಿ ಭಾಗವಹಿಸಿದ್ದ ರೈತ ಸದಸ್ಯರು,ಸಂಘದ ಮೂಲಕ ನೀಡಲಾದ ಸಾಲಗಳ ವಸೂಲಾತಿ ಪ್ರಕ್ರಿಯೆ ಮತ್ತು ಹಣದ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

ನೂರು ಡಿ ಕೆ ಶಿವಕುಮಾರ್‌ ಹೆಗ್ಗಡೆಯವರೊಂದಿಗಿದ್ದಾರೆ- ಹಳೆಯ ಹೇಳಿಕೆಗೆ...

ಅಕ್ರಮ ಶವ ಹೂತ ಪ್ರಕರಣದ ಎಸ್‌ಐಟಿ ತನಿಖೆ ನಡೆಯುತ್ತಿದ್ದಾಗ "ಇದು ಧರ್ಮಸ್ಥಳದ ವಿರುದ್ಧದ ಷಡ್ಯಂತ್ರ" ಎಂದು ಸದನದಲ್ಲಿ ವಿಪಕ್ಷಗಳು ಗದ್ದಲ ಮಾಡುತ್ತಿದ್ದಾಗ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರು "ಧರ್ಮಸ್ಥಳದ ವಿರುದ್ಧ ಯಾರೆಲ್ಲ...

​ಸ್ತ್ರೀ ಶಕ್ತಿ ಸಂಘಗಳಿಂದ ಎಷ್ಟು ಸಾಲ ವಸೂಲಾತಿಯಾಗಿದೆ ಮತ್ತು ಇನ್ನೂ ಎಷ್ಟು ಬಾಕಿ ಇದೆ?”ಎಂದು ರೈತರು ಪ್ರಶ್ನಿಸಿದರು. ಇದಕ್ಕೆ ಸಂಘದ ಕಡೆಯಿಂದ “ಹಿಂದೆ ನೀಡಲಾಗಿದ್ದ 14 ಕೋಟಿ ರೂ.ಗಳಲ್ಲಿ ಸುಮಾರು 10 ಕೋಟಿ ರೂ.ಗಳಷ್ಟು ಬಾಕಿ ಇದೆ” ಎಂಬ ಮಾಹಿತಿ ಬಂದಾಗ,ರೈತರು”ವಸೂಲಿಯಾದ ಹಣವನ್ನು ಸರಿಯಾಗಿ ಮರುಪಾವತಿಸದೆ ರೈತರಿಗೆ ತೊಂದರೆ ನೀಡಲಾಗುತ್ತಿದೆ”ಎಂದು ಆಕ್ರೋಶ ವ್ಯಕ್ತಪಡಿಸಿದರು.

​”ವರ್ಷ, ಒಂದೂವರೆ ವರ್ಷ ಅಥವಾ ಎರಡು ವರ್ಷಗಳಿಂದ ನಿಯಮಿತವಾಗಿ ಕಂತುಗಳನ್ನು ಕಟ್ಟುತ್ತಿರುವ ರೈತರಿಗೆ ಮರುಸಾಲ ನೀಡಲು ಯಾಕೆ ಸಾಧ್ಯವಾಗುತ್ತಿಲ್ಲ?ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ ಸಂಘದಿಂದ ನ್ಯಾಯ ಸಿಗುತ್ತಿಲ್ಲ” ಎಂದು ರೈತ ಸದಸ್ಯರು ಏರಿದ ಧ್ವನಿಯಲ್ಲಿ ಆಡಳಿತ ಮಂಡಳಿಯನ್ನು ತೊಳಲಿ ತುಳಿದರು.

Advertisements

ರೈತರ ಸಾಲು ಸಾಲು ಪ್ರಶ್ನೆಗಳು ಹಾಗೂ ಆಕ್ರೋಶಕ್ಕೆ ಸ್ಪಂದಿಸಿದ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಸಾಲ ಮರುಪಾವತಿ ಪ್ರಕ್ರಿಯೆಯಲ್ಲಿ ಉಂಟಾಗಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಡಕುಗಳ ಬಗ್ಗೆ ವಿವರಣೆ ನೀಡಿದರು.

​”ಬ್ಯಾಂಕ್‌ಗಳಿಂದ ಹಣ ಬಿಡುಗಡೆಯಾಗುವಲ್ಲಿ ಹಾಗೂ ಮರುಪಾವತಿ ಪ್ರಕ್ರಿಯೆಯಲ್ಲಿ ಕೆಲವೊಂದು ತೊಂದರೆಗಳು ಎದುರಾಗಿವೆ.ಇದರಿಂದಾಗಿ ಸಕಾಲದಲ್ಲಿ ಮರುಸಾಲ ನೀಡಲು ಸಾಧ್ಯವಾಗಿಲ್ಲ.ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಬ್ಯಾಂಕ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ.ಈ ತಿಂಗಳ 30ನೇ ತಾರೀಖಿನ ಒಳಗಾಗಿ ಸಾಲ ಮರುಪಾವತಿ ಹಾಗೂ ಹೊಸ ಸಾಲದ ಪ್ರಕ್ರಿಯೆಗಳನ್ನು ಕ್ಲಿಯರ್ ಮಾಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು”ಎಂದು ಅಧ್ಯಕ್ಷರಾದ ದೊಡ್ಡ ಬೊಮ್ಮನಹಳ್ಳಿ ವೆಂಕಟರೆಡ್ಡಿ ಎಂ ಸಭೆಗೆ ಭರವಸೆ ನೀಡಿ,ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಇದನ್ನು ಓದಿದ್ದೀರಾ..?ಕೋಲಾರ | ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ: ಡಾ. ನಾಗರಾಜ್

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಕೃಷ್ಣಪ್ಪ ಕೆ ಎಂ, ಮಂಜುನಾಥ ಕೆ ಎಂ,ನಟರಾಜ್ ಕೆ ಎಂ,ಶಿವರೆಡ್ಡಿ ಎಂ, ಶ್ರೀನಿವಾಸ್ ಗೌಡ,ನೇತಾ ಗೌಡ,ವಿಶ್ವನಾಥ್ ರೆಡ್ಡಿ, ಮುನಿವೆಂಕಟಪ್ಪ,ಕೃಷ್ಣಪ್ಪ,ಚಂದ್ರಕಳ,ಗಂಗಮ್ಮ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶ್ ಮೂರ್ತಿ,ಸೇರಿದಂತೆ ಮತ್ತಿತರರು ಇದ್ದರು

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾಸನ | ‘ಪ್ರಜಾಸೇವಾ’ ಇಬ್ಬರ ಅಧಿಕಾರಿಗಳು ಅಮಾನತು; ಡಿಸಿ ಆದೇಶ 

ಹಾಸನ ಜಿಲ್ಲೆ  ಸಕಲೇಶಪುರ ತಾಲೂಕಿನಲ್ಲಿ ನಡೆದ ‘ಪ್ರಜಾಸೇವಾ’ ಆಂದೋಲನದಲ್ಲಿ ಸಾರ್ವಜನಿಕರಿಂದ ಸಾಲು...

ಸಿದ್ದಾಪುರ | ಜನರ ಸಮಸ್ಯೆಗಳಿಗೆ ಸ್ಪಂದಿಸಲು ‘ಅನಂತ ಜನ ಸ್ಪಂದನ ಕೇಂದ್ರ’ ಆರಂಭ

ಸಿದ್ದಾಪುರ: ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಪಡೆಯಲು ಜನರು ಎದುರಿಸುತ್ತಿರುವ...

ಗದಗ | ಅನುದಾನ ಬಾರದೆ ಕಿರುಕುಳ ಆರೋಪ: KRDIL ಎಂಜಿನಿಯರ್ ನಾಪತ್ತೆ

ಗದಗ ಜಿಲ್ಲೆಯ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತದ (ಕೆಆರ್ ಡಿಐಎಲ್)...

ಬೆಳಗಾವಿ | 200 ಪ್ಲೇಟ್‌ಗೆ ಸೀಮಿತವಾದ ಇಂದಿರಾ ಕ್ಯಾಂಟಿನ್: 500ಕ್ಕೆ ಹೆಚ್ಚಿಸಲು ಆಗ್ರಹ

ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದಲ್ಲಿ ಬಡವರು, ಕೂಲಿ ಕಾರ್ಮಿಕರು, ಕಾಲೇಜು ವಿದ್ಯಾರ್ಥಿಗಳು...