ತಾಲ್ಲೂಕು ಮಳೆ ಅಭಾವದ ನಡುವೆಯೂ ವರಮಹಾಲಕ್ಷ್ಮಿ ಹಬ್ಬದ ಖರೀದಿ ಅದ್ಧೂರಿಯಾಗಿ ನಡೆಯುತ್ತಿದೆ. ಅದರಲ್ಲೂ ಮಾರ್ಕೆಟ್‌ನಲ್ಲಿ ಸೀರೆ ಮೇಳಗಳು, ಲಕ್ಷ್ಮಿ ಮುಖವಾಡ, ಅಲಂಕಾರಿಕ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತಿದೆ. ಇದರ ನಡುವೆ ಮಾರುಕಟ್ಟೆಯಲ್ಲಿ ಕನಕಾಂಬರ, ಮಲ್ಲಿಗೆ, ಸೇಬು, ಏಲಕ್ಕಿ ಬಾಳೆ ಹಾಗೂ ಸಿಹಿ ತಿನಿಸುಗಳ ಬೆಲೆ ಸಾಮಾನ್ಯ ದಿನಗಳಿಗಿಂತ ಶೇ.30 ರಿಂದ 50 ರಷ್ಟು ಏರಿಕೆಯಾಗಿದ್ದು, ಗ್ರಾಹಕರು ಬೆಲೆ ಏರಿಕೆಗೆ ದಂಗಾಗಿದ್ದಾರೆ. ಈ ಹಿನ್ನಲೆಯಲ್ಲಿ ಅಳೆದು ತೂಗಿ ಅಗತ್ಯ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾರೆ.
ಬೆಲೆ ಏರಿಕೆ ಹಾಗೂ ಬರದ ಛಾಯೆ ಆವರಿಸಿದರೂ ಸಹ ವರಮಹಾಲಕ್ಷ್ಮಿಹಬ್ಬದ ಆಚರಣೆಗೆ ಅಗತ್ಯವಿರುವ ಹಣ್ಣು ಹೂ ಇನ್ನಿತರೆ ಪದಾರ್ಥಗಳನ್ನು ಕೊಳ್ಳಲು ಮಹಿಳೆಯರು ಮುಂದಾಗಿದ್ದಾರೆ ಬೆಲೆ ಏರಿಕೆ ನಡುವೆಯೂ ಸಹ ವರಮಹಾಲಕ್ಷ್ಮಿ ಹಬ್ಬವನ್ನು ಶ್ರದ್ಧಾ ಭಕ್ತಿ ಸಡಗರದಿಂದ ಮನೆ ಮನೆಯಲ್ಲಿಯೂ ಆಚರಣೆ ಮಾಡುತ್ತಿದ್ದಾರೆ ಎನ್ನುತ್ತಾರೆ ಗ್ರಾಹಕ ಲಕ್ಷ್ಮಣ ರೆಡ್ಡಿ
ಹೆಣ್ಣುಮಕ್ಕಳು ಹಾಗೂ ಮಹಿಳೆಯರಿಗೆ ಅತ್ಯಂತ ಪ್ರೀತಿಗೆ ಪಾತ್ರವಾದ ವರಮಹಾಲಕ್ಷ್ಮಿಹಬ್ಬವನ್ನು ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲಿಯೂ ಆಚರಣೆ ಮಾಡುತ್ತಾರೆ. ವರಮಹಾಲಕ್ಷ್ಮಿ ಹಬ್ಬ ಶುಕ್ರವಾರ ಆಚರಣೆ ಮಾಡಲು ಮಹಿಳೆಯರು ಮನೆಗಳ ಶುದ್ಧೀಕರಣ ಮಾಡಿ ಹಬ್ಬಕ್ಕೆ ಅಗತ್ಯವಿರುವ ಹಣ್ಣುಗಳು ಹೂವು ಬೆಲೆ ಗಗನಕೇರಿದೆ ದಿನಸಿ ಪದಾರ್ಥಗಳು ಕೊಳ್ಳಲು ಮುಂದಾಗಿದ್ದು ಹಬ್ಬದ ಆಚರಣೆಗೆ ಬೆಲೆ ಏರಿಕೆ ಹಾಗೂ ಬರದ ಛಾಯೆ ಬಿದ್ದಿದೆ. ಆದರೂ ಸಹ ಮಾರುಕಟ್ಟೆಯಲ್ಲಿ ಹೂವು ಹಣ್ಣು ಪೂಜಾ ಸಾಮಗ್ರಿಗಳು ಬಾಳೆದಿಂಡು ಕೊಂಡುಕೊಳ್ಳಲು ನಗರದಲ್ಲಿ ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿ ಕಂಡುಬಂದಿತ್ತು.
ಸಂಸ್ಕೃತಿ ಸಂಪ್ರದಾಯದಂತೆ ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡುವ ಮಹಿಳೆಯರು ಮನೆಯಲ್ಲಿ ಕಳಸ ಪ್ರತಿ ಸ್ಥಾಪಿಸಿ ಲಕ್ಷ್ಮಿಯ ಮುಖವಲ್ಲ ಬೆಳ್ಳಿ ಮುಖವಾಡ ತೊಡಿಸಿ ವಿಶೇಷ ಆಭರಣ ಹೂವಿನ ಸಮೇತ ಅಲಂಕಾರವನ್ನು ಮಾಡಿ ಮೂರು ದಿನಗಳ ಕಾಲ ವಿಶೇಷ ಪೂಜೆಗಳನ್ನು ಸಲ್ಲಿಸುತ್ತಾರೆ. ಮನೆಮನೆಯಿಂದ ಮಹಿಳೆಯರನ್ನು ಆಹ್ವಾನಿಸಿ ಅರಿಶಿನ ಕುಂಕುಮ ನೀಡುವ ಮೂಲಕ ವರಮಹಾಲಕ್ಷ್ಮಿಹಬ್ಬವನ್ನು ಶ್ರದ್ಧಾ ಭಕ್ತಿ ಸಡಗರದಿಂದ ಆಚರಣೆ ಮಾಡುತ್ತಾರೆ.
ಇದನ್ನು ಓದಿದ್ದೀರಾ..?ಚಿಕ್ಕಬಳ್ಳಾಪುರ | ಆಗಸ್ಟ್ 22ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಉಪಮುಖ್ಯಮಂತ್ರಿಗಳಿಂದ ಚಾಲನೆ
ಹೂ ದುಬಾರಿ ಮಲ್ಲಿಗೆ ಮಾರಿಗೆ 250-350 ರೂ., ಕನಕಾಂಬರ ಕೆಜಿಗೆ 3,000-5,000 ರೂ., ಸೇವಂತಿಗೆ ಕೆಜಿಗೆ 300-500 ರೂ., ಗುಲಾಬಿ ಕೆಜಿಗೆ 250-300 ರೂ., ಚೆಂಡು ಹೂ ಕೆಜಿಗೆ 50-80 ರೂ. ಇದೆ. ಬಟನ್ಸ್ ಹೂಗಳ ಕಟ್ಟು 100-150, ಮಾವಿನ ಎಲೆ 20-40 ರೂ., ಬಾಳೆ ಕಂದು 50 ರೂ., ಕಬ್ಬಿನ ಸಸಿ 50 ರೂ., ಬೇವಿನ ಸೊಪ್ಪು ಕಟ್ಟಿಗೆ 30 ರೂ., ತುಳಸಿ ತೋರಣ ಮಾರಿಗೆ 50 ಹೀಗೆ ಬೆಲೆ ಏರಿಕೆ ಪಟ್ಟಿ ದೊಡ್ಡದಿದೆ.




