ಚಿಕ್ಕಬಳ್ಳಾಪುರ | ಸಿ ಮತ್ತು ಡಿ ಗುಂಪಿನ ಹುದ್ದೆಗಳ ನೌಕರರಿಗೆ ಪ್ರತಿ ತಿಂಗಳು ನಿರಂತರ ವೇತನ ಪಾವತಿಯಾಗುತ್ತಿಲ್ಲಾ : ಎಸ್ ವರಲಕ್ಷ್ಮಿ

Date:

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿಗಳಲ್ಲಿ, ವಿವಿಧ ಯೋಜನೆಗಳಲ್ಲಿ ಲಕ್ಷಾಂತರ ವಿದ್ಯಾವಂತ ಯುವಕ-ಯುವತಿಯರನ್ನು ವೀರ್ಘಕಾಲಿಕವಾಗಿ ದುಡಿಸಲಾಗುತ್ತಿದೆ. ಮಾದರಿ ವ್ಯವಸ್ಥಾಪಕನಾಗಬೇಕಾದ ರಾಜ್ಯ ಸರ್ಕಾರ ಅಗತ್ಯವಿದ್ದಾಗ ಬಳಸಿ ಬಿಸಾಡುವ ನೀತಿಯನ್ನು ಅನುಸರಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಖಾಯಮೇತರರ ನೌಕರರ ಒಕ್ಕೂಟ (ಸಿಐಟಿಯು) ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆರೋಪಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಸಿ ಮತ್ತು ಡಿ’ ಗುಂಪಿನ ಹುದ್ದೆಗಳ ಕೆಲಸಗಳನ್ನು ಸಂಪೂರ್ಣವಾಗಿ ಮದ್ಯವರ್ತಿಗಳ ಮುಖಾಂತರ ದುಡಿಸಿಕೊಳ್ಳುತ್ತಿದೆ. ಈ ನೌಕರರಿಗೆ ಪ್ರತಿ ತಿಂಗಳು ನಿರಂತರವಾಗಿ ವೇತನ ಪಾವತಿಯಾಗುವುದಿಲ್ಲ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಬಳಿ ಕೇಳಿದರೆ ಗುತ್ತಿಗೆದಾರರ ಮೇಲೆ ಹೇಳುವುದು. ಗುತ್ತಿಗೆದಾರರನ್ನು ಕೇಳಿದರೆ ಅಧಿಕಾರಿಗಳ ಮೇಲೆ ಹೇಳುವುದು ನಿರಂತರವಾಗಿ ನಡೆದಿದೆ ಎಂದರು.

- Advertisement -

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಚೈಲ್ಡ್ ಲೈನ್, ಪೋಷಣ್ ಟ್ರ್ಯಾಕರ್ ಸಿಬ್ಬಂದಿಗಳ ಕಡಿತ ಮಾಡುತ್ತಿರುವುದು, ಹಂಪಿ ಅಭಿವೃದ್ಧಿ ಪ್ರಾಧಿಕಾರ, ವಿಶ್ವವಿದ್ಯಾನಿಲಯಗಳು. ಬಿ.ಬಿ.ಎಂ.ಪಿ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯನ್ನು ಕಡಿತ ಮಾಡಲಾಗುತ್ತಿದೆ. ಹಾಸ್ಟೆಲ್‌ಗಳಲ್ಲಿ ಹಲವು ವರ್ಷಗಳ ಕಾಲ ದುಡಿಯುತ್ತಿರುವ ನೌಕರರಿಗೆ ಕನಿಷ್ಠ ವೇತನ ಪರಿಷ್ಕರಣೆ ಮಾಡದೇ ಶೋಷಿಸುತ್ತಿದೆ. ರಾಜ್ಯದಲ್ಲಿ ‘ಸಿ ಮತ್ತು ಡಿ’ ಗುಂಪಿನ ಎಲ್ಲಾ ಹುದ್ದೆಗಳ ಕರ್ತವ್ಯಗಳನ್ನು ಇವರು ನಿರ್ವಹಿಸುತ್ತಿದ್ದಾರೆ. ಆದರೆ ಪ್ರತಿ ವರ್ಷ ಗುತ್ತಿಗೆದಾರರ ಟೆಂಡರ್ ಬದಲಾದಾಗಲೂ ಈ ನೌಕರರೂ ಕೆಲಸ ಕಳೆದು ಕೊಳ್ಳುವ ಭೀತಿಯನ್ನು ಎದುರಿಸಬೇಕು ಇಲ್ಲದಿದ್ದರೆ ಗುತ್ತಿಗೆದಾರರಿಗೆ ಲಂಚಕೊಟ್ಟು ಕೆಲಸದಲ್ಲಿ ಮುಂದುವರೆಯಬೇಕು. ಕೆಲವೆಡೆ ಸ್ಥಳೀಯ ಜನಪ್ರತಿನಿಧಿಗಳನ್ನು ಒಲೈಸಬೇಕು ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳುವ ಭೀತಿ ಇದೆ. “ಸಮಾನ ಕೆಲಸಕ್ಕಾಗಿ ನೇಮಕಗೊಂಡಿರುವ ಒಬ್ಬ ನೌಕರನಿಗೆ ಅದಕ್ಕೆ ಸಮಾನವಾದ ಕರ್ತವ್ಯ ಮತ್ತು ಜವಾಬ್ದಾರಿ ನಿರ್ವಹಿಸುತ್ತಿರುವ ಮೊತ್ತೊಬ್ಬನಿಗಿಂತ ಕಡಿಮೆ ವೇತನ ನೀಡುವುದು, ಕಲ್ಯಾಣ ರಾಜ್ಯದಲ್ಲಿ ಸರಿಯಲ್ಲ ಎಂದು” ಅಭಿಪ್ರಾಯ ಪಟ್ಟಿದೆ. ಅಂತಹ ಕ್ರಮ ಹೀನಾಯವಾಗಿರುವಂತಹುದು ಮಾತ್ರವಲ್ಲ, ಅದು ಮನುಷ್ಯನ ಘನತೆಯ ತಳ ಹದಿಯ ಮೇಲೆ ದಾಳಿ ಮಾಡುವಂತಹದ್ದಾಗಿದೆ. ಎಂಬುದಾಗಿ ಹಲವು ಬಾರಿ ಸರ್ವೋಚ್ಚ ನ್ಯಾಯಲಯ ತೀರ್ಪುಗಳನ್ನು ನೀಡಿದೆ.ಆದರೆ ರಾಜ್ಯ ಸರ್ಕಾರ ಕೋರ್ಟ್‌ಗಳ ತೀರ್ಪನ್ನು ಸಂಪೂರ್ಣವಾಗಿ ಜಾರಿ ಮಾಡದಿದ್ದರೂ ಈ ನೌಕರರ ಬಗ್ಗೆ ಕನಿಷ್ಠ ಬದ್ಧತೆಯನ್ನು ವ್ಯಕ್ತಪಡಿಸುತ್ತಿಲ್ಲ ಎಂದರು.

2025 ಏಪ್ರಿಲ್‌ನಲ್ಲಿ ಸಿಐಟಿಯು ಮತ್ತು ಮತ್ತಿತರ ಸಂಘಟನೆಗಳ ನಿರಂತರ ಒತ್ತಡ ಮತ್ತು ಒತ್ತಾಯದ ಮೇರೆಗೆ ಕನಿಷ್ಠ ವೇತನದ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಇದುವರೆಗೂ ಅದನ್ನು ಜಾರಿ ಮಾಡದೇ ರಾಜ್ಯದಲ್ಲಿ 1 ಕೋಟಿ 77 ಲಕ್ಷ ಕಾರ್ಮಿಕರು ಕಷ್ಟ ಪಡುವಂತಾಗಿದೆ. 2022-23 ರಿಂದಲೇ ಕನಿಷ್ಠ ವೇತನ ಅನ್ವಯಿಸಿ ಜಾರಿ ಮಾಡಬೇಕು. ಕರ್ನಾಟಕ ರಾಜ್ಯ ಸಿವಿಲ್ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು. ಹುದ್ದೆಗಳನ್ನು ತುಂಬುವಾಗ ಗುತ್ತಿಗೆ ಕಾರ್ಮಿಕರಿಗೆ ಶೇ 50 ಮೀಸಲಾತಿ ನೀಡಬೇಕು. ಖಾಯಂ ಮಾಡುವ ತನಕ ನೇರ ವೇತನ ಪಾವತಿಯಡಿ ತರಬೇಕು. ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ. ಮೇ 25 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ..? ದೊಡ್ಡಬಳ್ಳಾಪುರ |ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಕೆಐಎಡಿಬಿ ಹಾಗೂ ಸರ್ಕಾರದ ವಿರುದ್ಧ ಆಕ್ರೋಶ


ಎಲ್ಲಾ ಗುತ್ತಿಗೆ ನೌಕರರಿಗೆ ತಿಂಗಳಿಗೆ ಸರಿಯಾಗಿ ವೇತನ. ಇಖು, ಈ, ಪಾವತಿಯನ್ನು ಖಾತ್ರಿ ಪಡಿಸಬೇಕು. ಎಲ್ಲಾ ಗುತ್ತಿಗೆ, ಆರೋಗ್ಯ. ಸಂಜೀವಿನಿ ಮತ್ತು ಮಹಿಳಾ ನೌಕರರಿಗೆ ಮುಟ್ಟಿನ ರಜೆಯನ್ನು ಇಲಾಖಾವಾರು ಪ್ರತ್ಯೇಕ ಆದೇಶ ನೀಡಬೇಕು. ಸರ್ಕಾರದ ಆದೇಶ ಸಂಖ್ಯೆ ಸಿಆಸುಇ 184 ಎಎಂಸಿ 2024 ಬೆಂಗಳೂರು ದಿನಾಂಕ 20/12/2024. ಆದೇಶವನ್ನು ಎಲ್ಲಾ ಖಾಯಂಮೇತರರ ನೌಕರರಿಗೂ ವಿಸ್ತರಿಸಬೇಕು. ಖಾಯಂ ಮಾಡುವ ತನಕ ಎಲ್ಲರಿಗೂ ಕೆಲಸದ ಭದ್ರತೆಯನ್ನು ಖಾತ್ರಿ ಪಡಿಸಬೇಕು. ಖಾಯಂಮೇತರರ ನೌಕರರನ್ನು ವೇತನ ಆಯೋಗದಡಿ ಪ್ರತ್ಯೇಕ ಕ್ಯಾಟಗಿರಿಯನ್ನು ನಿಗದಿ ಮಾಡಬೇಕು. ಹೊರಗುತ್ತಿಗೆ ನೌಕರರನ್ನು ಖಾಯಂ ಮಾಡುವ ಬದಲಿಗೆ ಸರ್ಕಾರ ಸೊಸೈಟಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಮಾಡಲಾಗುತ್ತಿದೆ ಕೆಲಸದ ಭದ್ರತೆ ಇಲ್ಲದಿರುವ ಒಬ್ಬ ನೌಕರ ಜಿಲ್ಲಾಧಿಕಾರಿಯನ್ನು ಪ್ರಶ್ನೆ ಮಾಡಲು ಸಾಧ್ಯವೇ? ಪ್ರಾಯೋಗಿಕವಾಗಿ ಸಾಧ್ಯತೆ ಇಲ್ಲದಿರುವುದರಿಂದ ಸೊಸೈಟಿಯ ಪರಿಕಲ್ಪನೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಎಸ್‌ಐಆರ್ ರದ್ದತಿಗೆ ಆಗ್ರಹ: ಅ.9ರಂದು ಮತ ಕಾವಲು ಸಮಿತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ

ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶಕುಮಾರ್ ಅವರನ್ನು ವಜಾಗೊಳಿಸಬೇಕು ಹಾಗೂ ಎಸ್‌ಐಆರ್...

ಉಡುಪಿ | SIR ಫಾರಂ–7 ದುರ್ಬಳಕೆ ತಡೆಗೆ ಮುಸ್ಲಿಮ್ ಒಕ್ಕೂಟ ಆಗ್ರಹ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಲ್ಲಿ ಮತದಾರರ ಹೆಸರುಗಳನ್ನು ತೆಗೆದುಹಾಕಲು...

ವಿಜಯಪುರ | ಬರಪೀಡಿತ ಪ್ರದೇಶಗಳಿಗೆ ಡಿಸಿಎಂ ಪರಮೇಶ್ವರ್‌ ಭೇಟಿ

ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಅವರು ಅ.8 ಹಾಗೂ 9ರಂದು ವಿಜಯಪುರ ಮತ್ತು...

ಗದಗ | ಬಂಜಾರ ಸಮುದಾಯ ಒಗ್ಗಟಾದರೆ ನಮ್ಮ ಹಕ್ಕು ಪಡೆಯಲು ಸಾಧ್ಯ: ವಿಜಯ ಜಾಧವ

"ಆಲ್ ಇಂಡಿಯಾ ಬಂಜಾರ ಸೇವಾ ಸಂಘ ಏಕೈಕ ಗಟ್ಟಿಯಾದ ಸಂಘಟನೆ ಇದಾಗಿದೆ....