ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಮಲೆನಾಡು, ಕರಾವಳಿ ಜನಪರ ಒಕ್ಕೂಟ ವತಿಯಿಂದ ಮೇ 3ರಂದು ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಸರ್ವ ಸಮಾಜೋತ್ಸವ ಬೃಹತ್ ಕಾರ್ಯಕ್ರಮ ಆಯೋಜಿಸಲಾಗಿದೆ.

ಒಡೆದು ಹೋದ ಮನಸ್ಸುಗಳನ್ನ ಒಗ್ಗೂಡಿಸುವುದೇ ಸರ್ವ ಸಮಜೋತ್ಸವದ ಉದ್ದೇಶವಾಗಿದೆ. ಭಾರತದ ಸೌಂದರ್ಯ ಇರುವುದೇ ವೈವಿದ್ಯತೇಯಲ್ಲೇ ಕೊಡಿ ಬಾಳುವುದರಲ್ಲಿ ಇವತ್ತು ದೇಶ ಹಾಗು ನಮ್ಮೂರುಗಳಲ್ಲಿ ಪ್ರತಿ ನಿತ್ಯ ಜನರ ಮನಸ್ಸುಗಳಲ್ಲಿ ದ್ವೇಷ ಅಸೂಯೆ ಬಿತ್ತಿ ಈ ಭವ್ಯ ಭಾರತವನ್ನು ಒಡೆದು ಆಳುವ ಕೆಲಸ ನಡೆಯುತ್ತಿದ್ದು ಈ ಹೊತ್ತಿನಲ್ಲಿ ಸರ್ವ ಸಮಾಜೋತ್ಸವದಂತಹ ಕಾರ್ಯಕ್ರಮ ಕೂಡಿ ಬಾಳುವ ಸಂದೇಶವನ್ನು ಕೊಡುವ ಉದ್ದೇಶ ಹೊಂದಿದೆ ಎಂದು ಮಲೆನಾಡು, ಕರಾವಳಿ ಜನಪರ ಒಕ್ಕೂಟದ ಮುಖಂಡರಾದ ಅನಿಲ್ ಹೊಸಕೊಪ್ಪ ತಿಳಿಸಿದರು.
ಇದನ್ನೂ ಓದಿದ್ದೀರಾ?ಬೇಲೂರು | ರಸ್ತೆ ಅಪಘಾತ; ಅರ್ಚಕ ಸಾವು
ಈ ಸಂದರ್ಭದಲ್ಲಿ ಸರ್ವ ಸಮಾಜ್ಯೋತ್ಸವ ಕಾರ್ಯಕ್ರಮಕ್ಕೆ ಶ್ರಮಿಸುತ್ತಿರುವ ಕಾರ್ಯಕರ್ತರು, ಮಲೆನಾಡು, ಜನಪರ ಚಳುವಳಿ ಒಕ್ಕೂಟ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.





