ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಇಂದು ನಡೆದ ಕಸ್ತೂರಿರಂಗನ್ ವರದಿ ಕುರಿತು ರಾಜ್ಯದ ಮುಖ್ಯಮಂತ್ರಿ ಜೊತೆ ಸಾರ್ವಜನಿಕರ ಸಭಾ ಕಾರ್ಯಕ್ರಮದಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮಾತನಾಡಿ, “ನೂರಾರು ವರ್ಷಗಳಿಂದ ಕೃಷಿ ಮಾಡಿಕೊಂಡು ಬಂದಿದ್ದೇವೆ, ಆದರೇ, ಅರಣ್ಯ ಕಾಯ್ದೆಗಳು ತೂಗುವ ಕತ್ತಿಯ ಹಾಗೆ ನಮ್ಮ ಮೇಲೆ ಇದೆ. ಮಾನವ ಪ್ರಾಣಿ ಸಂಘರ್ಷವಿದೆ. 13ವರ್ಷ ಕೆಳಗೆ ಕಾಡಿನಿಂದ ಎಬ್ಬಿಸಿದವರಿಗೆ ಜೀವನ ಉಪಯೋಗಕ್ಕೆ ಕೂಡ ಕಷ್ಟವಾಗಿದೆ. 138ಹಳ್ಳಿಗಳನ್ನ ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಿದ್ದಾರೆ. ನಮ್ಮ ವಲಯದಲ್ಲಿ 31 ಹಳ್ಳಿಯನ್ನು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸೂಕ್ಷ್ಮ ಪರಿಸರ ವಲಯವೆಂದು ಕಾಡಿನ ಸಮೀಪ ಒಂದು ಕಿಲೋಮೀಟರ್ ಅಂತರವನ್ನು ಪರಿಗಣಿಸಿದ್ದಾರೆ. ಅದೇ ರೀತಿ ಭದ್ರ ಜೋನ್, ಅನೇಕ ವರದಿಗಳು ಜನರನ್ನು ಆತಂಕಗೊಳಿಸಿದೆ. ಇದರಿಂದ ಪುನರ್ವಸತಿ ಕಲ್ಪಿಸಲು ಸಾಧ್ಯವಿಲ್ಲದಾಗಿದೆ. ಕಸ್ತೂರಿರಂಗನ್ ವರದಿ ಜಾರಿ ಆದರೇ ಜನರ ಪರಿಸ್ಥಿತಿ ಏನಾಗಬಹುದು? ಸೆಕ್ಷನ್ 4 ಕಾಯ್ದೆಯಿಂದ ಹೊರಗಡೆ ತರುವುದಕ್ಕೆ ಆಗುವುದಿಲ್ಲ.
ಇದನ್ನೂ ಓದಿದ್ದೀರಾ?ಚಿಕ್ಕಮಗಳೂರು | ಅರಣ್ಯ ಕಾಯ್ದೆ: ಭೂಮಿ, ವಸತಿ ಇಲ್ಲದೆ ಜನರ ಬದುಕು ಕಷ್ಟ; ಟಿ.ಡಿ ರಾಜೇಗೌಡ
ಮಾನ್ಯ ಮುಖ್ಯಮಂತ್ರಿಯವರಿಗೆ ನಾವು ನಿಮ್ಮ ಬಳಿ ಮನವಿ ಮಾಡುತ್ತಿರುವುದೇನೆಂದರೆ ಇಲ್ಲಿನ ಕಾಫಿ ಬೆಳೆಗಾರರನ್ನ, ರೈತರನ್ನು ಉಳಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ತಿಳಿಸಿದರು.




