ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರಿನಲ್ಲಿ ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕರ ಸಭಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿಯವರು ಆಗಮಿಸಿದ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕರಾದ ಟಿ.ಡಿ ರಾಜೇಗೌಡ ಮಾತನಾಡಿ, ಮಲೆನಾಡಿನಲ್ಲಿ ಅತ್ಯಂತ ಶ್ರಮ ಜೀವಿಗಳು ಬದುಕನ್ನ ಕಟ್ಟಿಕೊಂಡು ಬಂದವರು, ಕಾಫಿ ಬೆಳೆಯು ದೇಶದಲ್ಲಿ ಹೆಸರು ಮಾಡಿದೆ. ನಮ್ಮ ಜಿಲ್ಲೆಯಲ್ಲಿ ಹೆಚ್ಚಿನದಾಗಿ ಸಾಂಬಾರ್ ಪದಾರ್ಥ ಬೆಳೆಯುತ್ತಾರೆ.
ಫಾರಂ 50, 53, 94, 94(cc) 23,448 ಅರ್ಜಿಗಳು ಹಾಗೆ ಉಳಿದಿವೆ. ಭೂಮಿ, ವಸತಿ ಇಲ್ಲದೆ ಇಲ್ಲಿನ ಜನರು ಪರದಾಡುತ್ತಿದ್ದಾರೆ. ಪರಿಸರ ಸಂರಕ್ಷಣೆ ಹೆಸರಲ್ಲಿ ಅನೇಕ ವರದಿ ಜಾರಿ ಮಾಡಿ ಕಸ್ತೂರಿರಂಗನ್ ಎಂಬ ವರದಿ ಕುರಿತು 6 ಬಾರಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ, ಈಗ 7ನೇ ಬಾರಿ ಅಧಿಸೂಚನೆ ಹೊರಡಿಸಿದೆ ಎಂದು ತಿಳಿಸಿದರು.
ಇದನ್ನೂ ಓದಿದ್ದೀರಾ?ಕಸ್ತೂರಿರಂಗನ್ ವರದಿ: ಕೇಂದ್ರ ಸರ್ಕಾರ ವಜಾ ಗೊಳಿಸದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ; ಮಲೆನಾಡಿನ ಜನತೆ
ಕಸ್ತೂರಿರಂಗನ್ ವರದಿ ನಮ್ಮ ಭಾಗದಲ್ಲಿ ರಸ್ತೆ ಅಭಿವೃದ್ಧಿ, ಮರಗಸಿ, ಹೊಸ ಮನೆ ನಿರ್ಮಾಣ ಮಾಡಬಾರದು ಎಂಬ ಅಡೆತಡೆ ಇದೆ. 20 ಸಾವಿರ ಚ. ಕಿಮೀ ಅಷ್ಟು ವಿಸ್ತೀರ್ಣವಿದೆ. ಮನೆ ಮುಂದೆ ತೆಂಗಿನ ಮರ ಹಾಕಿರುವುದನ್ನು ಕಸ್ತೂರಿರಂಗನ್ ವರದಿಯಲ್ಲಿ ಕಾಡು ಎಂದು ಉಲ್ಲೇಖವಾಗಿದೆ ಎಂದು ಶಾಸಕರಾದ ಟಿ.ಡಿ ರಾಜೇಗೌಡ ತಿಳಿಸಿದರು.




