ಮಂಗಳೂರು ಜೈಲು ತಪಾಸಣೆ ವೇಳೆ ನಿಷೇಧಿತ ವಸ್ತುಗಳ ಪತ್ತೆ: 2 ಮೊಬೈಲ್, ಸಿಮ್ ಕಾರ್ಡ್, ಚಾರ್ಜರ್ ವಶ

Date:

ಮಂಗಳೂರು ನಗರ ಕಾರಾಗೃಹದ ಅಧೀಕ್ಷಕ ಶರಣ ಬಸಪ್ಪ ಅವರ ನೇತೃತ್ವದಲ್ಲಿ ಸೋಮವಾರ ತಡರಾತ್ರಿ ದಿಢೀರ್ ಜೈಲು ತಪಾಸಣೆ ನಡೆಸಿದ್ದು, ಈ ಸಂದರ್ಭ 2 ಮೊಬೈಲ್‌ಗಳು, 1 ಸಿಮ್ ಕಾರ್ಡ್ ಮತ್ತು 1 ಕೇಬಲ್ ರಹಿತ ಮೊಬೈಲ್ ಚಾರ್ಜರ್‌ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಳ್ಳಲಾಗಿದೆ.

- Advertisement -

ಇವುಗಳು ಕಾರಾಗೃಹದಲ್ಲಿ ನಿಷೇಧಿತ ವಸ್ತುಗಳಾಗಿರುವುದರಿಂದ ಮಂಗಳೂರು ಬರ್ಕೆ ಪೊಲೀಸ್ ಠಾಣೆಗೆ ನೀಡಿ ಪ್ರಕರಣ ದಾಖಲಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ವಿಶೇಷ | ಗಾಂಧೀ ಎಂದರೆ ಏನು?

ಇಂದು ಮಹಾತ್ಮಾ ಗಾಂಧೀಜಿಯವರ ಜನ್ಮದಿನ. ಅವರ ವಿಚಾರ, ಚಿಂತನೆ, ನಡೆ-ನುಡಿ... ಅವರನ್ನು ಗ್ರಹಿಸಲು ಅವರ ದಿನಚರಿಯ ಭಾಗವೇ ಆಗಿದ್ದ ಕೆಲವು ತುಣುಕುಗಳು ನಿಮ್ಮ ಓದಿಗಾಗಿ... ಆರೆಸ್ಸೆಸ್‌ಗೊಂದು ಕಿವಿಮಾತುಅದು ದೇಶ ವಿಭಜನೆಯ ಕಾಲ. ಎಲ್ಲೆಲ್ಲೂ ಹಿಂದೂ-ಮುಸ್ಲಿಂ...

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

“ಇಲಾಖೆಯ ಮುಖ್ಯಸ್ಥರಾದ ಐಪಿಎಸ್‌ ಅಲೋಕ್ ಕುಮಾರ್, ಕರ್ನಾಟಕ ಕಾರಾಗೃಹ ಮಹಾನಿರ್ದೇಶಕರು ಮತ್ತು ಸುಧಾರಣಾ ಸೇವೆ ಬೆಂಗಳೂರು ಇವರಿಗೆ ದೂರವಾಣಿ ಮುಖಾಂತರ ವಿಷಯವನ್ನು ತಿಳಿಸಲಾಗಿದೆ” ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹ ಅಧೀಕ್ಷಕ ಶರಣ ಬಸಪ್ಪ ತಿಳಿಸಿದ್ದಾರೆ.

ಈ ವೇಳೆ ಕಾರಾಗೃಹದ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.

ಕಾರಾಗೃಹಗಳು ಕೈದಿಗಳ ಸುಧಾರಣೆಗೆ ಮೀಸಲಾದ ಸ್ಥಳಗಳು. ಆದರೆ, ನಿಷೇಧಿತ ವಸ್ತುಗಳು ಒಳಹೊಕ್ಕುವುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದು ಕೈದಿಗಳು ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿ ಅಪರಾಧ ಚಟುವಟಿಕೆಗಳನ್ನು ಮುಂದುವರೆಸುವ ಅಪಾಯವನ್ನು ಹೆಚ್ಚಿಸುತ್ತದೆ.

ಈ ಸುದ್ದಿ ಓದಿದ್ದೀರಾ? ಜಿಂದಾಲ್ ಟೌನ್‌ಶಿಪ್‌ನಲ್ಲಿ ರೋಹಿಣಿ ಸಿಂಧೂರಿ ವಾಸ್ತವ್ಯ; ತನಿಖೆಗೆ ರೈತರ ಆಗ್ರಹ

ಈ ರೀತಿಯ ಘಟನೆಗಳು ಮಂಗಳೂರು ಜೈಲಿನಲ್ಲಿ ಹೊಸದಲ್ಲ. ಕಳೆದ ಡಿಸೆಂಬರ್‌ನಲ್ಲೇ ಗಲಾಟೆಯ ನಂತರ 4 ಮೊಬೈಲ್‌ಗಳು ಪತ್ತೆಯಾಗಿದ್ದವು ಮತ್ತು ಹಿಂದಿನ ವರ್ಷಗಳಲ್ಲೂ ಮಾದಕ ವಸ್ತುಗಳು, ಫೋನ್‌ಗಳು ಜಪ್ತಿಯಾಗಿರುವ ಉದಾಹರಣೆಗಳಿವೆ. ಜೈಲು ಸಿಬ್ಬಂದಿ, ಭದ್ರತಾ ವ್ಯವಸ್ಥೆಯನ್ನು ಬಲಪಡಿಸುವುದು, ಮೊಬೈಲ್‌ಗಳ ಸಮರ್ಪಕ ಬಳಕೆ ಮತ್ತು ನಿಗಾವಣೆಯನ್ನು ಹೆಚ್ಚಿಸುವುದು ಅತ್ಯಗತ್ಯ. ಇಂತಹ ಕ್ರಮಗಳು ಇಲ್ಲದಿದ್ದರೆ ಕಾರಾಗೃಹಗಳು ಸುಧಾರಣಾ ಕೇಂದ್ರಗಳಾಗದೆ ಅಪರಾಧ ಕೇಂದ್ರಗಳಾಗಿ ಪರಿವರ್ತನೆಯಾಗುವ ಅಪಾಯವಿದೆ.

ಕಾರಾಗೃಹ ಇಲಾಖೆಯು ಈ ಘಟನೆಯಿಂದ ಪಾಠ ಕಲಿತು ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಇಂತಹ ಪುನರಾವರ್ತನೆ ತಡೆಯಲು ಕಠಿಣ ನಿಯಮಗಳನ್ನು ಜಾರಿಗೊಳಿಸಿದರೆ ಒಳಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ | ಸೌಜನ್ಯ ಕೊಲೆ‌ ಪ್ರಕರಣದ ಮರು ತನಿಖೆ: ಎಸ್ಐಟಿಗೆ 16 ಮಂದಿ ಸಹಾಯಕ ಅಧಿಕಾರಿಗಳ ನೇಮಕ

ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಕೊಲೆ ಪ್ರಕರಣ ಸಂಬಂಧ ಸುಪ್ರೀಂಕೋರ್ಟ್ ಮರು ತನಿಖೆಗೆ...

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ದಕ್ಷಿಣ ಕನ್ನಡ | ಕೃಷಿ ಜಮೀನಿನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ!

ದಕ್ಷಿಣ ಕನ್ನಡ ಜಿಲ್ಲೆಯ ನಲ್ಕೂರು ಗ್ರಾಮದ ಬಳಿ ಸೋಮವಾರ ಸಂಜೆ ಮನುಷ್ಯನ...