ದಾವಣಗೆರೆ | ಪೌರ ಕಾರ್ಮಿಕರ ಮೇಲೆ ಹಲ್ಲೆ: ರಕ್ಷಣೆ ಸೂಕ್ತ ಕ್ರಮಕ್ಕೆ ದಲಿತ ಸಂಘರ್ಷ ಸಮಿತಿ ಆಗ್ರಹ

Date:

ದಾವಣಗೆರೆ ಜಿಲ್ಲೆ ಮಹಾನಗರ ಪಾಲಿಕೆಯ 4ನೇ ವಾರ್ಡ್ ಕಸ ಸಂಗ್ರಹಣೆ ಸಮಯದಲ್ಲಿ ವಾಹನದ ಚಾಲಕ ಮತ್ತು ಪೌರ ಕಾರ್ಮಿಕರ ಮೇಲೆ ಹಲ್ಲೆ ಮಾಡಲು ಮುಂದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಾರ್ವಜನಿಕವಾಗಿ ಹಾನಿಗೊಳಿಸಿ ಗಲಾಟೆ ಮಾಡಿದವರ ವಿರುದ್ದ ಸೂಕ್ತ ಕ್ರಮ ಹಾಗೂ ಪಾಲಿಕೆಯ ಎಲ್ಲಾ ವಿಭಾಗದ ಕಾರ್ಮಿಕರಿಗೆ ಸೂಕ್ತ ಕಾನೂನು ರಕ್ಷಣೆ ನೀಡುವಂತೆ ಕೋರಿ ಮನವಿ ದಲಿತ ಸಂಘರ್ಷ ಸಮಿತಿಯ ಮುಖಂಡರು ದಾವಣಗೆರೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.‌

- Advertisement -

ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು “ದಾವಣಗೆರೆ ನಗರದ ಮೆಹಬೂಬ್ ನಗರದಲ್ಲಿ 4ನೇ ಕ್ರಾಸಿನಲ್ಲಿ ದಿನನಿತ್ಯದಂತೆ ಮನೆ-ಮನೆ ಕಸ ಸಂಗ್ರಹಣೆಗಾಗಿ ಪಾಲಿಕೆ ಕಸ ಸಂಗ್ರಹಣೆ ವಾಹನವು ಕೆಲಸ ನಿರ್ವಹಿಸಲು ಹೋಗಿದೆ. ಆ ಸಮಯದಲ್ಲಿ ಹಸಿ ಕಸ-ಒಣ ಕಸ ಹಾಗೂ ಹಾನಿಕಾರಕ ಕಸಗಳನ್ನು ಬೇರ್ಪಡಿಸಿ ನೀಡುವುದು ಪ್ರತಿನಿತ್ಯ ಕಸ ಸಂಗ್ರಹಣ ವಾಹನದಲ್ಲಿ ಧ್ವನಿವರ್ಧಕಗಳ ಮೂಲಕ ಹೇಳುತ್ತಿರುತ್ತಾರೆ. ಕೃಷಿ ಬೇರ್ಪಡಿಸಲು ಹೇಳಿದ ಕಾರಣಕ್ಕೆ ಅಲ್ಲಿನ ನಿವಾಸಿಗಳಾದ ನೂರು ಮತ್ತು ಅಜ್ಜು ಮತ್ತು ಇತರರು ಸೇರಿದಂತೆ ಬಂದು ಚಾಲಕನನ್ನು ದೊಣ್ಣೆಗಳಿಂದ ಹಲ್ಲೆ ಮಾಡಲು ಮುಂದಾಗಿ ಸರ್ಕಾರಿ ವಾಹನದ ಮೇಲೆ ಹೊಡೆದು ಮೀಟರ್ ಮುರಿದು ವಾಹನಕ್ಕೆ ಘಾಸಿಗೊಳಿಸಿರುತ್ತಾರೆ. ಕಸ ಸಂಗ್ರಹಿಸುವ ಸಹಾಯಕ ಕಾರ್ಮಿಕರಿಗೆ ಬಾಯಿಗೆ ಬಂದಂತೆ ಬೈದು ಮೈಮೇಲೆ ಕೈ ಹಾಕಿ ಬಟ್ಟೆಗಳನ್ನು ಹರಿದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

“ದಾವಣಗೆರೆ ಜಿಲ್ಲೆಯಲ್ಲಿ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿರುವ ಆಡಳಿತ ವಿಭಾಗ ಮತ್ತು ಪಾಲಿಕೆಯ ಅಧಿಕಾರಿಗಳು ನೀಡಿದ ಆದೇಶದ ಮೇರೆಗೆ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸಿರುತ್ತಾರೆ. ಇಂತಹ ಅಹಿತಕರ ಘಟನೆಗಳು ನಡೆದಾಗ ಕಾರ್ಮಿಕರ ಮೇಲೆ ಹಲ್ಲೆಗೆ ಮುಂದಾದಾಗ ನೇರವಾಗಿ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕರ್ತವ್ಯ ನಿರತ ಕಾರ್ಮಿಕರಿಗೆ ಮತ್ತು ಪಾಲಿಕೆ ಎಲ್ಲಾ ಹೊರಗುತ್ತಿಗೆ ಮತ್ತು ಗುತ್ತಿಗೆಯ, ಯು.ಜಿ.ಡಿ. ಕಾರ್ಮಿಕರಿಗೂ ರಕ್ಷಣಾತ್ಮಕ ನಿಯಮಗಳನ್ನು
ಜಾರಿಗೊಳಿಸುವುದು ಅನಿವಾರ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.‌

“ಪೌರ ಕಾರ್ಮಿಕರು ಹಾಗೂ ಹೊರಗುತ್ತಿಗೆ ನೌಕರರು ಸಮಾಜದ ಗಲೀಜನ್ನು ತಮ್ಮ ಮನೆಯ ಮಕ್ಕಳು ಮಾಡಿರುವ ಗಲೀಜು ಎಂಬ ಮನೋಭಾವದೊಂದಿಗೆ ಸ್ವಚ್ಚಗೊಳಿಸುತ್ತಿರುವುದು ನಮ್ಮ ಕಣ್ಣಿಗೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಪೌರ ಕಾರ್ಮಿಕರಿಗೆ ಸೂಕ್ತವಾದ ಕಾನೂನು ಮತ್ತು ನಿಯಮಗಳನ್ನು ರೂಪಿಸಿ ಅವರಿಗೆ ರಕ್ಷಣೆ ನೀಡಬೇಕು”ಎಂದು ಒತ್ತಾಯಿಸಿದರು.‌

“ಕಾಂಟ್ರಾಕ್ಟ್ ಲೇಬರ್ ಅಬೋಲೇಷನ್ ಆಕ್ಟ್ 1970 ರ ಪ್ರಕಾರ ಗುತ್ತಿಗೆ ಪೌರ ಕಾರ್ಮಿಕರ ರಕ್ಷಣೆ ಸರಿಯಾದ ವೇತನ ನೀಡುವುದು, ವಿಶ್ರಾಂತಿ ಅವರ ಸುರಕ್ಷತೆಯನ್ನು ಕಾಪಾಡುವುದು ಈ ಕಾನೂನಿನ ಕರ್ತವ್ಯವಾಗಿದೆ.‌ ಪೌರ ಕಾರ್ಮಿಕರ ರಕ್ಷಣೆ ಮ್ಯಾನುವಲ್ ಸ್ಯಾವೆಂಜರ್ ಆಕ್ಟ್, ಎಸ್.ಸಿ./ಎಸ್.ಟಿ. ಆಕ್ಟ್, ಲೇಬರ್ ಲಾ, ಮಿನಿಮಮ್ ವೇಜಸ್ ಆಕ್ಟ್, ಇ.ಎಸ್.ಐ./ಪಿ.ಎಫ್. ಮತ್ತು ಅಕ್ಯೂಪೇಷನಲ್ ಸೇಫ್ಟಿ ಕೋಡ್ ಕಾನೂನುಗಳು ಅನ್ವಯಿಸುತ್ತಿದ್ದು ಸಮಾಜದಲ್ಲಿ ಘನತೆ ಮತ್ತು ಗೌರವದಿಂದ ಶಾಂತಿಯುತವಾಗಿ ಕರ್ತವ್ಯ ನಿರ್ವಹಿಸಲು ಈ ಮೇಲಿನ ಕಾನೂನುಗಳ ಬಗ್ಗೆ ಜನಸಾಮಾನ್ಯರಲ್ಲಿ ಮತ್ತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಬೇಕು ಮತ್ತು ಪಾಲಿಕೆಯ ಕಾರ್ಮಿಕರ ಮೇಲೆ ಹಲ್ಲೆ ಮಾಡಿದಂತಹ ನೂರು ಮತ್ತು ಅಜ್ಜು ಇತರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅಹಿತಕರ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಮೆರಿಕ ಕೃಷಿ ವ್ಯಾಪಾರ ಒಪ್ಪಂದದ ಪ್ರತಿ ಸುಟ್ಟು ರೈತ ಸಂಘ ವಿರೋಧ

ಮನವಿ ಸಲ್ಲಿಸುವ ವೇಳೆ ದಸಂಸ ಮುಖಂಡರಾದ ಲಿಂಗರಾಜು ಗಾಂಧಿನಗರ, ಆದಿಲ್ ಖಾನ್, ಅರುಣ್ ಕುಮಾರ್, ಅಜಯ್ ಕುಮಾರ್, ನಾಗೇಶ್ ಹಾಜರಿದ್ದರು.‌

IMG 20250205 WA0034
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದಸಂಸ ನೇತೃತ್ವದಲ್ಲಿ ಗೂಡ್ಸ್ ಚಾಲಕರ ಹಾಗೂ ಮಾಲೀಕರ ಸಂಘ ಉದ್ಘಾಟನೆ

ದಾವಣಗೆರೆ ನಗರದ ಚಾಮರಾಜಪೇಟೆಯ ಹಳೆಯ ಸರ್ಕಾರಿ ಹೆರಿಗೆ ಹಾಗೂ ಮಹಿಳಾ ಮತ್ತು...

ದಾವಣಗೆರೆ | ವರದಿಗಾರರ ಕೂಟದಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತರಿಗೆ ಮಾಧ್ಯಮ ಪ್ರಶಸ್ತಿ

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ ಪತ್ರಿಕಾ ದಿನಾಚರಣೆ ಹಾಗೂ 2025-26ನೇ ಸಾಲಿನ...

ದಾವಣಗೆರೆ | ಟೋಲ್ ಬಳಿ ಅಂಗಡಿ ತೆರವು; ಸಂತ್ರಸ್ತರೊಂದಿಗೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ದಾವಣಗೆರೆ ತಾಲೂಕಿನ ಹೆಬ್ಬಾಳು ಟೋಲ್‌ಗೇಟ್ ಬಳಿ ಸಣ್ಣಪುಟ್ಟ ಅಂಗಡಿಗಳನ್ನು ತೆರವುಗೊಳಿಸಿದ್ದನ್ನು ವಿರೋಧಿಸಿ...

ದಾವಣಗೆರೆ | ನೀಟ್ ರದ್ದುಗೊಳಿಸಿ, ಸಿಇಟಿ ಜಾರಿಗೆ ಎನ್.ಎಸ್.ಯು.ಐ ಕಾಂಗ್ರೆಸ್ ಆಗ್ರಹ

ವಿದ್ಯಾರ್ಥಿಗಳ ಭವಿಷ್ಯ, ಸಮಾನ ಶಿಕ್ಷಣಾವಕಾಶ ಹಾಗೂ ನ್ಯಾಯಸಮ್ಮತ ಪ್ರವೇಶ ವ್ಯವಸ್ಥೆಯನ್ನು ಕಾಪಾಡುವ...