ದಾವಣಗೆರೆ | ಜೆಸಿಟಿಯು ಕಾರ್ಮಿಕರ ಜಿಲ್ಲಾ ಸಮಾವೇಶ; ಸಾರ್ವತ್ರಿಕ ಮುಷ್ಕರ ಯಶಸ್ಸಿಗೆ ಕರೆ

Date:

ಫೆಬ್ರವರಿ 12 ರಂದು ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಯಶಸ್ಸಿಗಾಗಿ ಜೆಸಿಟಿಯು (JCTU) – ಕಾರ್ಮಿಕ ಸಂಘಗಳ ಜಂಟಿ ಸಮಿತಿಯಿಂದ ದಾವಣಗೆರೆ ನಗರದ ಪಂಪಾಪತಿ ಭವನದಲ್ಲಿ ಮುಷ್ಕರಕ್ಕೆ ಪೂರ್ವಭಾವಿಯಾಗಿ ಜಿಲ್ಲಾ ಮಟ್ಟದ ಕಾರ್ಮಿಕ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಂಡವಾಳಶಾಹಿಗಳ ಪೋಷಿಸುವ, ಕಾರ್ಮಿಕರ ಶೋಷಣೆಯ ವಿರುದ್ಧದ ಕಾರ್ಮಿಕ ವಿರೋಧಿ ಕಾನೂನುಗಳನ್ನು ಹಿಂಪಡೆಯಲು ಆಗ್ರಹ ಕೇಳಿಬಂದಿತು.

- Advertisement -
1003599844

ಸಮಾವೇಶದಲ್ಲಿ ಕಾರ್ಮಿಕ ಸಂಘಗಳ ಜಂಟಿ ಸಮಿತಿಯ ರಾಜ್ಯ ಸಂಚಾಲಕ ಕೆ.ವಿ.ಭಟ್ ಮಾತನಾಡಿ,
“ವಿಸ್ತಾರವಾದ ಮತ್ತು ಕಾರ್ಮಿಕರ ಪರವಾಗಿದ್ದ 29 ಕಾನೂನುಗಳನ್ನು ಸಂಕುಚಿತಗೊಳಿಸಿ 4 ಕೋಡ್‌ಗಳಾಗಿ ಪರಿವರ್ತಿಸಿದ ಕಾರ್ಮಿಕ ವಿರೋಧಿ 4 ಕಾನೂನುಗಳನ್ನು ಹಿಂದಕ್ಕೆ ಪಡೆಯಬೇಕು” ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

History Repeats | ರೋಮ್‌ ಉರಿಯುತ್ತಿದ್ದಾಗ ಪಿಟೀಲು ನುಡಿಸಿದ...

ದೇಶದ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಒಂದೊಂದಾಗಿ ಕುಸಿಯುತ್ತಾ, ಚುನಾವಣಾ ವ್ಯವಸ್ಥೆಯೇ ಅಕ್ರಮ ಎಸಗುತ್ತಿರುವಾಗ, ನಿರುದ್ಯೋಗ-ಬೆಲೆ ಏರಿಕೆಯ ಭಾರದಿಂದ ಜನ ಹೈರಾಣಾಗಿರುವಾಗ ಭಾರತದ ಪ್ರಧಾನಿ ಭಜನೆ ಮಾಡುತ್ತಿದ್ದಾರೆ. ರೋಂ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು...

ಅಪರಾಧಿಗಳ ಪರ ಬಿ ಸಿ ರೋಡ್ ಚಲೋ: ಎಂದಿನಂತೆ...

ಕೊಲೆಯಂತಹ ಗಂಭೀರ ಅಪರಾಧ ಎಸಗಿದ ಆರೋಪ ಹೊತ್ತವರ ಪರವಾಗಿ ಸಂಘಪರಿವಾರ ಬೀದಿಗಿಳಿಯುತ್ತಿರುವುದು ಇದೇ ಮೊದಲೇನಲ್ಲ. ಕರಾವಳಿಯ ಜನತೆ ಇಂತಹ ಪ್ರಚೋದನಾತ್ಮಕ ನಡೆಗಳನ್ನು ತಿರಸ್ಕರಿಸಿ, ಸತ್ಯ ಮತ್ತು ನ್ಯಾಯದ ಪರವಾಗಿ ನಿಲ್ಲಬೇಕಾಗಿದೆ. ಕರಾವಳಿ ಕರ್ನಾಟಕವಾಗಲಿ...

14 ಆಕ್ಷೇಪಗಳಿಂದ SIT ಬೇಡಿಕೆಯವರೆಗೆ: ಗ್ಯಾನೇಶ್‌ ಕುಮಾರ್ ಸುತ್ತ...

ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡ ಬೆನ್ನಲ್ಲೇ ಎಸ್‌ಐಆರ್‌ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್‌ ಕುಮಾರ್ ಅವರ ನಿರ್ಧಾರಗಳ ಕುರಿತು ಚುನಾವಣಾ ಆಯುಕ್ತರಾದ ಸುಖಬೀರ್‌ ಸಿಂಗ್‌ ಸಂಧು ಮತ್ತು...

“ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೆಸರನ್ನು ವಿಬಿ ಜಿ.ರಾಮ್.ಜಿ ಎಂದು ಬದಲಾಯಿಸಿದರೆ ಕೃಷಿ ಕೂಲಿಕಾರ್ಮಿಕರ ಜೀವನ ಹಸನಾಗುವುದಿಲ್ಲ. ಜೊತೆಗೆ ಯೋಜನೆಯ ಭಾರವನ್ನು ರಾಜ್ಯ ಸರಕಾರಗಳಿಗೆ ವರ್ಗಾಯಿಸಿದೆ. ಇದರಿಂದ ಯೋಜನೆಯನ್ನು ದುರ್ಬಲಗೊಳಿಸಿ ಹಳ್ಳಿಗಳಲ್ಲಿ ವಾಸಿಸುತ್ತಿರುವ ಬಡ ಕೃಷಿಕೂಲಿ ಕಾರ್ಮಿಕರ ಜೀವನವನ್ನು ದುಸ್ತರಗೊಳಿಸುವ ಹುನ್ನಾರ ಅಡಗಿದೆ. ಇದು ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ಪರಿಕಲ್ಪನೆಗೆ ಸಂಪೂರ್ಣ ವಿರುದ್ಧವಾಗಿದೆ. ಎಪಿಎಂಸಿ ಕಾಯಿದೆ ತಿದ್ದುಪಡಿ ಬಿಲ್, ವಿದ್ಯುತ್ ಕಾಯಿದೆ ತಿದ್ದುಪಡಿ ಬಿಲ್, ವಿದೇಶಿ ನೇರ ಬಂಡವಾಳದ ನಿಯಮ ಪರಿಷ್ಕರಣೆ ಸೇರಿದಂತೆ ಅನೇಕ ಕಾರ್ಮಿಕ ವಿರೋಧಿ ಧೋರಣೆಗಳನ್ನು ಖಂಡಿಸಿ ದೇಶದ ಕೋಟ್ಯಾಂತರ ಕಾರ್ಮಿಕರು ಮತ್ತು ರೈತರು ಫೆಬ್ರವರಿ 12 ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರವನ್ನು ಮಾಡಲಿದ್ದಾರೆ. ಸಾರ್ವಜನಿಕರು, ವ್ಯವಹಾರಸ್ಥರು ಸ್ವಯಂ ಪ್ರೇರಣೆಯಿಂದ ಮುಷ್ಕರದಲ್ಲಿ ಭಾಗವಹಿಸಬೇಕು” ಎಂದು ಕರೆ ನೀಡಿದರು.

1003599851

ಕಾರ್ಮಿಕರ ಜಿಲ್ಲಾ ಸಮಾವೇಶದ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ “ಆಳುವ ಸರಕಾರಗಳು ಸಂಪೂರ್ಣವಾಗಿ ರೈತಕಾರ್ಮಿಕರ ವಿರುದ್ಧವಾದ ಧೋರಣೆಗಳನ್ನು ಅನುಸರಿಸುತ್ತಿವೆ‌. ಬಂಡವಾಳಶಾಹಿಗಳಿಗೆ ರಕ್ಷಣೆ ನೀಡುವುದಕ್ಕಾಗಿ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿಯನ್ನು ತಂದು ಕಾರ್ಮಿಕರ ಶೋಷಣೆ ಮಾಡುತ್ತಿದೆ. ಶತಮಾನಗಳಿಂದ ತ್ಯಾಗ, ಬಲಿದಾನ, ಹೋರಾಟಗಳಿಂದ ಗಳಿಸಿದ ಸೌಲಭ್ಯಗಳನ್ನು ಕೇಂದ್ರ ಸರಕಾರ ಕಸಿಯಲು ಯತ್ನಿಸುತ್ತಿದೆ. ಈ ಹುನ್ನಾರವನ್ನು ಹಿಮ್ಮೆಟ್ಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಕರೆ ನೀಡಿದ ಈ ಐತಿಹಾಸಿಕ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಬ್ಯಾಂಕ್ ವಲಯದ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ, ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ ಮತ್ತು ಬೆಫಿ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿವೆ” ಎಂದು ತಿಳಿಸಿದರು.

ರೈತಸಂಘದ ಮುಖಂಡ ಕುರುಡಿ ಅರುಣ್ ಕುಮಾರ್ ಮಾತನಾಡಿ “ರೈತರು ಕಾರ್ಮಿಕರು ಒಂದಾಗಿ ಕೇಂದ್ರ ಸರಕಾರದ ರೈತಕಾರ್ಮಿಕ ವಿರೋಧಿ ನೀತಿಗಳನ್ನು ಸೋಲಿಸಬೇಕಾಗಿದೆ. ಕೇಂದ್ರ ಸರಕಾರ ಏನೇ ಮಾಡಿದರೂ ಬಹುಪರಾಕ್ ಹೇಳುವ ಗುಲಾಮ ಸಂಸ್ಕೃತಿ ಹೆಚ್ಚುತ್ತಿರುವುದು ದೇಶದ ದೃಷ್ಟಿಯಿಂದ ಅಪಾಯಕಾರಿಯಾಗಿದೆ. ದೆಹಲಿಯಲ್ಲಿ ನಡೆದ ರೈತ ಹೋರಾಟ ಮತ್ತು ಇತ್ತೀಚೆಗೆ ನಡೆದ ಬ್ಯಾಂಕ್ ಮಷ್ಕರದ ಮಾದರಿಯಲ್ಲಿ ಫೆಬ್ರವರಿ 12 ರ ಮುಷ್ಕರವನ್ನು ಯಶಸ್ವಿಗೊಳಿಸಿ ಸರಕಾರಕ್ಕೆ ಸ್ಪಷ್ಟ ಸಂದೇಶ ನೀಡುವ ಅಗತ್ಯವಿದೆ” ಎಂದರು.

ಜೆಸಿಟಿಯು ಜಿಲ್ಲಾ ಸಂಚಾಲಕ ಹೆಚ್‌.ಜಿ‌.ಉಮೇಶ್ ಅವರಗೆರೆ ಮಾತನಾಡಿ “ದಾವಣಗೆರೆ ಜಿಲ್ಲೆಯಲ್ಲಿ ಮಾದಕ ದ್ರವ್ಯಗಳ ಮಾರಾಟವು ಅವ್ಯಾಹತವಾಗಿ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳ, ಯುವಜನತೆಯ ಬದುಕು ದುಸ್ತರವಾಗುತ್ತಿದೆ. ಇದನ್ನು ಜಿಲ್ಲಾಡಳಿತ ಈ ಕೂಡಲೇ ನಿರ್ಬಂಧಿಸಿ ಸೂಕ್ತವಾದ ಕ್ರಮವನ್ನು ಕೈಗೊಳ್ಳಬೇಕು. ಇಲ್ಲವಾದರೆ ರೈತಕಾರ್ಮಿಕ ಜಂಟಿ ಸಮಿತಿಯ ವತಿಯಿಂದ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಪ್ರಜಾಪ್ರಭುತ್ವ ಗಣರಾಜ್ಯ ಕುರಿತು ವಿಚಾರ ಸಂಕಿರಣ ಹಾಗೂ ಮಕ್ಕಳ ಕಲಾ ಪ್ರತಿಭೆ ಕಾರ್ಯಕ್ರಮ

ಸಮಾವೇಶವನ್ನು ಉದ್ದೇಶಿಸಿ ಎಐಟಿಯುಸಿ ಅವರಗೆರೆ ಚಂದ್ರು, ಸಿಐಟಿಯು ಆನಂದರಾಜು, ರೈತ ನಾಯಕ ಹೊನ್ನೂರು ಮುನಿಯಪ್ಪ, ಎಐಯುಟಿಯುಸಿ ಕೈದಾಳೆ ಮಂಜುನಾಥ್, ರೈತ ನಾಯಕ ಗುಮ್ಮನೂರು ಬಸವರಾಜ್, ಜನಶಕ್ತಿ ಪವಿತ್ರಾ, ಅಂಗನವಾಡಿ ಫೆಡರೇಶನ್‌ನ ಎಸ್.ಎಸ್.ಮಲ್ಲಮ್ಮ, ಆಶಾ ಸಂಘಟನೆಯ ಇಂದಿರಾ, ಬಿಸಿಯೂಟದ ರುದ್ರಮ್ಮ ಮುಂತಾದವರು ಮಾತನಾಡಿದರು. ರೈತ ನಾಯಕ ಬುಳ್ಳಾಪುರದ ಹನುಮಂತಪ್ಪ, ಕಂಪ್ಲೇಶ್, ಪರಮೇಶಪ್ಪ, ಕುಕ್ಕವಾಡ ಮಂಜುನಾಥ್, ಸಿಪಿಐ ಯಲ್ಲಪ್ಪ, ಸಿಪಿಐಎಮ್ ಶ್ರೀನಿವಾಸ್, ಇಪ್ಟಾ ಐರಣಿ ಚಂದ್ರು, ಹೊಸಳ್ಳಿ ಮಂಜುಳಾ, ಸರೋಜ, ರಂಗನಾಥ್, ಸಿ.ರಮೇಶ್, ಸತೀಶ್ ಅರವಿಂದ್, ಸುರೇಶ್ ಅವರಗೊಳ್ಳ, ಕೆ.ಮಹೇಶ್ವರಪ್ಪ ಹಾಗೂ ನೂರಾರು ರೈತ ಕಾರ್ಮಿಕರು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಕೇಳಿದ್ದನ್ನು ಕೊಡುವ ಏಕೈಕ ಕಾಮಧೇನು ಪುಸ್ತಕ: ಡಾ. ಮಹಾಂತೇಶ ಪಾಟೀಲ

"ಅವಮಾನ ಕೀಳರಿಮೆ ಸಂಕೋಚ ಸ್ವಭಾವ ಎಲ್ಲವನ್ನು ನೀಗುವ ಶಕ್ತಿ ಪುಸ್ತಕಗಳಲ್ಲಿದೆ. ಜಗತ್ತಿಗೆ...

ಅನುಮೋದನೆ ಇಲ್ಲದೆ 8 ಸ್ನಾತಕೋತ್ತರ ಪದವಿ ಕೋರ್ಸ್‌ ಆರಂಭ: ಜಾನಪದ ವಿವಿಗೆ ಉನ್ನತ ಶಿಕ್ಷಣ ಇಲಾಖೆ ನೋಟಿಸ್‌

ಪ್ರಸ್ತುತ ಬ್ಯಾಚ್‌ಗಳ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸುವುದು, ಪರೀಕ್ಷೆ ಬರೆಯುವುದು ಹಾಗೂ ಪದವಿ...

ಅನುಮತಿ ಇಲ್ಲದೆ 4 ಬಾರಿ ವಿದೇಶಿ ಪ್ರವಾಸ; ಕುವೆಂಪು ವಿವಿ ಕುಲಪತಿ ಶರತ್ ಅನಂತಮೂರ್ತಿಗೆ ರಾಜ್ಯಪಾಲರ ನೋಟಿಸ್

ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಕುಲಾಧಿಪತಿಗಳ ಪೂರ್ವಾನುಮತಿ ಪಡೆಯದೆ ಕುವೆಂಪು ವಿವಿ ಕುಲಪತಿ...

ಮಾತೃಭಾಷೆಯೇ ಜ್ಞಾನಭಾಷೆ: ಶಿಕ್ಷಣ ಯಾರ ಹಕ್ಕು?

ಶಿಕ್ಷಣ ಅಂಕಗಳಿಗಾಗಿ ಅಲ್ಲ; ಮನುಷ್ಯನನ್ನು ರೂಪಿಸುವುದಕ್ಕಾಗಿ. ಅದು ಮಾರುಕಟ್ಟೆಯ ಸರಕಲ್ಲ; ಪ್ರತಿಯೊಂದು...