ಧಾರವಾಡ | ಗ್ರಾಕೂಸ್ ಹೋರಾಟಕ್ಕೆ ಮಣಿದ ಗ್ರಾಪಂ; 3 ತಿಂಗಳಿಂದ ಕೂಲಿ ಕಾರ್ಮಿಕರನ್ನು ಸತಾಯಿಸಿದ್ದ ಆರೋಪ

Date:

ಮನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ಕೊಡದೆ ಇದ್ದಾಗ; ಕಳೆದ ಮೂರು ತಿಂಗಳಿನಿಂದ ಕೂಲಿ ಕಾರ್ಮಿಕರು ನಿರಂತರ ಪ್ರತಿಭಟಿಸಿ, ಅಧಿಕಾರಿಗಳನ್ನು ಒತ್ತಾಯಸುತ್ತಾ ಬಂದಿದ್ದು, ಇದೀಗ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮತ್ತಗಟ್ಟಿ ಗ್ರಾಮದ ಕಾರ್ಮಿಕರಿಗೆ ಕೆರೆ ಹೂಳೆತ್ತುವ ಕೆಲಸ ಕೊಟ್ಟಿದ್ದು, ಕಾರ್ಮಿಕರು ಸಂತಸಪಟ್ಟಿದ್ದಾರೆ.

- Advertisement -

ಈ ಕುರಿತು ಹಿರಿಯ ಕೂಲಿ ಕಾರ್ಮಿಕ ರುದ್ರಪ್ಪ ಸುತಗಟ್ಟಿ ಮಾತನಾಡಿ, ಕಳೆದ ಮೂರು ತಿಂಗಳಿಂದ ಕೆಲಸಕ್ಕಾಗಿ ನಾವು ಹೋರಾಟ ನಡೆಸಿದ್ದೇವೆ. ಆದರೆ; ನಮ್ಮ ಮನವಿಗೆ ಗ್ರಾಪಂ ಸ್ಪಂದಿಸದೇ ಸತಾಯಿಸಿದ್ದಾರೆ. ಮತ್ತು ನಮಗೆ ಕೆಲಸ ಕೊಡದೆ ಹೆಬ್ಬೆಟ್ಟು ತಗದುಕೊಂಡು, ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR ವಿರೋಧಿ ಹೋರಾಟ: ಡಿಕೆಶಿ–ಮಮತಾ ತೋರಿದ ದಾರಿ ವಿಪಕ್ಷಗಳಿಗೆ...

ಭಾರತದ ಪ್ರಜಾಪ್ರಭುತ್ವದ ಅಡಿಪಾಯವೇ ನ್ಯಾಯಯುತ, ಸ್ವತಂತ್ರ ಹಾಗೂ ಪಾರದರ್ಶಕ ಚುನಾವಣೆ. ಆದರೆ, ಅಧಿಕಾರದ ಗದ್ದುಗೆ ಏರಿರುವ ಮೋದಿ-ಶಾ ಜೋಡಿ, ಈ ಅಡಿಪಾಯವನ್ನೇ (ಚುನಾವಣಾ ಆಯೋಗವನ್ನೇ) ತಮ್ಮ ಸೂತ್ರದ ಬೊಂಬೆ ಮಾಡಿಕೊಂಡಿದೆ. ಎಸ್‌ಐಆರ್‌ ಹೆಸರಿನಲ್ಲಿ...

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಕಳೆದ ಒಂದು ವರ್ಷದಿಂದ ಹೆಬ್ಬೆಟ್ಟು ತೆಗೆದುಕೊಂಡು 200 ಕೊಟ್ಟು ಕಳಿಸುತ್ತಾ ಬಂದಿದ್ದಾರೆ. ಕೆಲಸದ ಬಗ್ಗೆ ನಮಗೆ ಗೊತ್ತಿಲ್ಲ. ಇದೀಗ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ನಮಗೆ ನ್ಯಾಯ ಸಿಕ್ಕಿದೆ ಎನ್ನುತ್ತಾರೆ ಎಲ್ಲವ್ವ ಹುಬ್ಬಳ್ಳಿ. ನಮ್ಮಲ್ಲಿ ಕೆಲಸ ಮಾಡಬೇಕು ಎಂಬ ಛಲವಿದೆ. ಆದರೆ ಗ್ರಾಮ‌ ಪಂಚಾಯತಿಯವರು ನಮಗೆ ಕೆಲಸ ಕೊಟ್ಟಿಲ್ಲ. ಇವತ್ತು ಕೆಲಸ ಕೊಟ್ಟಿದ್ದಾರೆ. ಮತ್ತು ಮುಖ್ಯವಾಗಿ ಕಾರ್ಮಿಕರು ಕೂಲಿ ಮಾಡುವ ಸಂದರ್ಭದಲ್ಲಿ ಅನಾಹುತಗಳಾದರೆ; ನಮಗೆ ಆರೋಗ್ಯ ಕಿಟ್‌ಗಳನ್ನು ಕೊಡಬೇಕು ಎಂದು ಒತ್ತಾಯಿಸಿದರು.

IMG 20250521 144525

ಈ ಕುರಿತು ಗ್ರಾಕೂಸ್ ಸಂಘಟನೆಯ ಸಂಚಾಲಕಿ ನಿಂಗಮ್ಮ ಸವಣೂರ ಮಾತನಾಡಿ, ಕಳೆದ ಮೂರು ತಿಂಗಳಿಂದ ಕೂಲಿ ಕಾರ್ಮಿಕರನ್ನು ಅಧಿಕಾರಿಗಳು ಸತಾಯಿಸಿದ್ದಾರೆ. ಇತ್ತೀಚಿಗೆ ಕೆಲಸ ಕೊಟ್ಟರೂ ಎರಡು ದಿನ ಗುಡ್ಡದಲ್ಲಿ ಕೆಲಸ ಕೊಟ್ಟಿದ್ದರು. ನಂತರ ಎನ್ಎಮ್ಆರ್ ಕೊಡದೆ ಕಾರ್ಮಿಕರನ್ನು ಮನೆಯಿಂದ-ಪಂಚಾಯತಿ ಹೀಗೆ ಅಲೆದಾಡಿಸಿದ್ದಾರೆ. ಕೊನೆಗೆ ಎಲ್ಲ ಕೂಲಿ‌ಕಾರ್ಮಿಕರು ಒಂದಾಗಿ ಸೆಲಕಿ, ಬುಟ್ಟಿ ತೆಗೆದುಕೊಂಡು ತಾಲೂಕು ಪಂಚಾಯತಿ ಮುತ್ತಿಗೆ ಹಾಕಲು ಮುಂದಾದಾಗ; ಗ್ರಾಮ‌ ಪಂಚಾಯತಿಯವರು ಕೆಲಸ ಕೊಟ್ಟಿದ್ದಾರೆ. ಆದರೆ; ಎನ್ಎಮ್ಆರ್ ಕೊಡಬೇಕು ಎಂದು ಒತ್ತಾಯಿಸಿದರು. ಮತ್ತು ಗ್ರಾಮೀಣ ಕೂಲಿ ಕಾರ್ಮಿಕರಾದ ನಾವು 24 ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದ್ದರಿಂದ ದುಡಿಯು ಜನರಿಗೆ ಅನ್ಯಾಯ ಮಾಡದಿರಿ ಎಂದು ಅಧಿಕರಿಗಳಿಗೆ ಎಚ್ಚರಿಕೆ ನೀಡಿದರು.

ಇದನ್ನು ಓದಿದ್ದೀರಾ? ಧಾರವಾಡ | ಸಿಡಿಲು ಬಡಿದು ಯುವಕ‌ ಸಾವು

ಗ್ರಾಪಂ ಅಭಿವೃದ್ಧಿ ಅಧಿಕಾರಿ ಮರಿಗೌಡ ಪಾಟೀಲ್ ಮಾತನಾಡಿ, ಪ್ರತಿ ವರ್ಷವೂ ಜಲ ಮೂಲಗಳಿಗೆ ಸಂಬಂಧಿಸಿದ ಕೆಲಸಗಳಿಗೆ ಮೊದಲ ಪ್ರಾಧ್ಯಾನ್ಯತೆ ಕೊಡಬೇಕು. ಅನಂತರ ರಸ್ತೆ ನಿರ್ಮಾಣದಂತ ಯೋಜನೆಗಳಿಗೆ ಮುಂದಾಗಬೇಕು. ಹೀಗಾಗಿ ಬದುವು, ಕೆರೆ ನಿರ್ಮಾಣದ ಕ್ರಿಯಾ ಯೋಜನೆಗಳನ್ನು ರೂಪಿಸಿ, ಕಾಮಗಾರಿಗಳನ್ನು ಶುರುಮಾಡಲಾಗಿದೆ. ಕೂಲಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಕೇಳಿಕೊಂಡು ಬಂದಿರುವುದು ಖುಷಿ ತಂದಿದೆ ಎಂದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಸಾರಿಗೆ ಬಸ್ ಟಾಯರ್ ಸ್ಪೋಟ ಪರಿಣಾಮ ಕಂಡಕ್ಟರ್ ಕಾಲಿಗೆ ಗಾಯ

ಲಕ್ಷ್ಮೇಶ್ವರ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ (ಸಂಖ್ಯೆ:...

ಉಡುಪಿ | ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಘಟಕದಿಂದ ಅರ್ಥಪೂರ್ಣ ಗಾಂಧಿ ಜಯಂತಿ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿಯ ಅಂಗವಾಗಿ ತುಳುನಾಡ ರಕ್ಷಣಾ ವೇದಿಕೆ (ರಿ.)...

ಉಡುಪಿ | ಸಮುದಾಯದ ಅಭಿವೃದ್ಧಿಗೆ ಉದ್ಯಮಿಗಳ ಒಗ್ಗಟ್ಟು ಅಗತ್ಯ: ಮುಮ್ತಾಜ್ ಮನ್ಸೂರಿ

ನಮ್ಮ ಸಮುದಾಯದ ದುರ್ಬಲ ವರ್ಗಗಳನ್ನು ಮೇಲಕ್ಕೆತ್ತಲು ಎಲ್ಲರೂ ಬೆಂಬಲ ಮತ್ತು ಸಹಕಾರದೊಂದಿಗೆ...