ನಮ್ಮಲ್ಲಿ ಬಹುತೇಕರು ತಾವು ಯಾವ ನಿಲುವಿನಲ್ಲಿ ಇದ್ದೇವೆಂದು ಹೇಳಿಕೊಳ್ಳಲು ಸಂಕೋಚ ಪಡುತ್ತಾರೆ ಎಂದು ಪ್ರಗತಿಪರ ಚಲನಚಿತ್ರ ನಿರ್ದೇಶಕ ಬಿ ಸುರೇಶ್ ಅವರು ಕಳವಳ ವ್ಯಕ್ತಪಡಿಸಿದರು.
ಧಾರವಾಡ ಪಟ್ಟಣದ ಕರ್ನಾಟಕ ವಿದ್ಯಾ ವರ್ದಕ ಸಂಘದ ಡಾ. ಪಾಟೀಲ್ ಪುಟ್ಟಪ್ಪ ಸಭಾಭವನದಲ್ಲಿ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ, ಸಮುದಾಯ -50 ಸಮಾರೋಪ ಸಮಾರಂಭ ಕಾರ್ಯಕ್ರಮದ ಎರಡನೇ ಗೋಷ್ಠಿ : ಭವಿಷ್ಯ ಭಾರತದ ಯುವ ಪೀಳಿಗೆಯ ಮುಂದಿರುವ ಸವಾಲುಗಳು ವಿಷಯ ಕುರಿತು ಮಾತನಾಡಿದರು.
“ಒಬ್ಬ ಹೆಣ್ಣುಮಗಳು ತನ್ನ ಸುತ್ತ ಏನಿಲ್ಲದಿದ್ದರೂ ಚಾಟ್ ಜಿಪಿಟಿ ಇದ್ದರೆ ಸಾಕು ಎಂದರೆ, ಇನ್ನೊಂದೆಡೆ ಆ್ಯಪಲ್ ಮೊಬೈಲ್ ಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳುವ ಯುವಜನರನ್ನು ನೋಡುತ್ತಿದ್ದೇವೆ. ತನ್ನನ್ನು ತಾನು ಯಾವುದೋ ಕಾಲದಲ್ಲಿ ಆ್ಯಪ್ ಮೂಲಕ ಗುರುತಿಸಿಕೊಳುವುದು, ಹೊಸ ತಲೆಮಾರು ದಾರಿಯೇ ತೋರಿಸದ ಗೂಗಲ್ ಮ್ಯಾಪ್ ಹಿಂದೆ ಹೋಗುತ್ತಿರುವ ಸಂಗತಿಗಳನ್ನು ನೋಡಬಹುದು” ಎಂದು ಹೇಳಿದರು.
“ನಮ್ಮ ಯುವಜನರ ಮುಂದೆ ಇರುವ ಸವಾಲುಗಳು ಎಂದರೆ, ಮೊದಲು ಈವರೆಗೂ ಯಾವ ಭಾಷೆಯನ್ನು ಕಲಿತು ಬಂದಿರುವರೋ, ಆ ಭಾಷೆಗಿಂತ ಭಿನ್ನವಾಗಿ ಬಳಸುವ, ಪ್ರತಿಭೆಗಳು ಇದ್ದಾರೆ. ಉದಾಹರಣೆಗೆ ಜಂತರ್ ಮಂತರ್ನಲ್ಲಿ ಈ ಭಾಷೆಯನ್ನು ಬಳಸಿ ಕವಿತೆ ಸೃಜಿಸಿರುವುದು ಹೊಸ ತಲೆಮಾರಿನ ಸೃಜನಶಿಲ ಭಾಷೆ. ಅವರ ಸೃಜನಶೀಲ ಭಾಷೆಗೆ ಯಾವಾಗಲೂ ಮೊಬೈಲ್ ಬೇಕು ಎನ್ನುವ ಯುವಜನರು ನಮಗೆ ಕಾಣುತ್ತಾರೆ” ಎಂದು ನಿರ್ದೇಶಕ ಬಿ ಸುರೇಶ್ ಹೇಳಿದರು.
“ಭಾಷೆಯನ್ನು ನಮ್ಮ ಮುಂದಿನ ತಲೆಮಾರಿಗೆ ದಾಟಿಸಬೇಕಿದೆ. ಅವರ ಮನ್ನಸ್ಸಿನ ಒಳಗೆ ಇಳಿಯುವ ನಮ್ಮ ಸಂವಹನ ಭಾಷೆ ಮೂಲಕ ಅವರ ಮನಸ್ಸಿನಲ್ಲಿ ಇಳಿಸುವುದೇ ನಮ್ಮ ಸವಾಲು. ಇವರಿಗೆ ಗೊತ್ತಿರುವ ನಮ್ಮ ಟೂಲ್ಗಳನ್ನು ಬಳಿಸಿ ಅವರಿಗೆ ಸಂಹನ ನಡೆಸುವಂತೆ ಮಾಡುವ ಅವಶ್ಯಕತೆ ಇದೆ” ಎಂದರು.
“ಜಾಗತೀಕರಣದಲ್ಲಿ ಎಲ್ಲ ಮಕ್ಕಳು ಸ್ಥಳೀಯ ಅಸ್ಮಿತೆಯನ್ನು ಬಿಟ್ಟು ಒಬ್ಬ ವ್ಯಕ್ತಿಯನ್ನು ಬಿಂಬಿಸುವುದನ್ನು ಕಾಣುತ್ತಿದ್ದೇವೆ. ಯಾವುದೇ ಊರಿಗೆ ಹೋದರೂ, ಅದೇ ತರಹದ ರಸ್ತೆ, ಅದೇ ಬಸ್ ಹೀಗೆ ಎಲ್ಲ ನಗರಗಳು ಒಂದೇ ರೀತಿ ಕಾಣುವಂತೆ ನಿರ್ಮಾಣವಾಗಿವೆ. ಹಾಗಾಗಿ ಸ್ಥಳೀಯ ಗ್ರಾಮೀಣ ಸಂಸ್ಕೃತಿಯನ್ನು ತಲುಪಿಸುವುದು ನಮ್ಮ ಯುವಜನರಿಗೆ ಸವಾಲಾಗಿದೆ” ಎಂದು ಹೇಳಿದರು.
“ಸಾಂಸ್ಕೃತಿಕ ಏಕೀಕರಣ ದಾಟುವುದು ಒಂದು ಸವಾಲು. ನಮ್ಮ ಸಿನಿಮಾಗಳು ಒಂದೇ ರೀತಿಯ ನಾಯಕನನ್ನು ವೈಭವೀಕರಿಸಿರುವ ಕಥೆ ಕಟ್ಟುವುದನ್ನು ನೋಡುತ್ತೇವೆ. ಇದನ್ನು ಮಾಡದೆ ಇಡೀ ಜಗತ್ತನನ್ನು ಒಳಗೊಳ್ಳುವ ಹಾಗೆ ಕಥೆ ಕಟ್ಟುವುದೇ ನಮ್ಮ ಮುಂದಿರುವ ಸವಾಲು” ಎಂದು ಹೇಳಿದರು.
“ಹೊಸ ತಲೆಮಾರು ಸಿಕ್ಕಾಪಟ್ಟೆ ಜಾಣರು, ಸ್ಮಾರ್ಟ್ ತಲೆಮಾರಿನ ಜೊತೆಗೆ ಹಳೆಯ ಬ್ಯಾನರ್ಗಳನ್ನು ಹಿಡಿದು ಸಂವಾದ ಮಾಡುವುದಕ್ಕಿಂತ ಅವರೊಂದಿಗೆ ಹೊಂದಿಕೊಂಡು ಕಟ್ಟುವುದು ಮುಖ್ಯ ಸವಾಲಾಗಿದೆ. ಇವತ್ತಿನ ಭಾಷೆಯ ಜತೆಗೆ ಸಂಸ್ಕೃತಿಯನ್ನೂ ದಾಟಿಸುವುದು ಮುಖ್ಯ. ಅಂದರೆ ಕನ್ನಡ ಭಾಷೆ ಅಷ್ಟೇ ಅಲ್ಲ ಎಲ್ಲವೂ ಶಿಕ್ಷಣ, ರಂಗಭೂಮಿ, ದಾಟಿಸುವುದು ಅಗತ್ಯವಾಗಿದೆಯಾದರೂ, ಇದು ಸವಾಲಿನ ಕೆಲಸವಾಗಿದೆ. ಇದೆಲ್ಲದರ ಜತೆಗೆ ನಮ್ಮದು ಎನ್ನುವ ಭಾಷೆ ಸೊಗಡುಗಳನ್ನು ಕಾಪಾಡುವುದಕ್ಕೆ ಇವತ್ತಿನ ನಮ್ಮ ತೆಲೆಮಾರಿಗೆ ಇವುಗಳನ್ನು ಮುಟ್ಟಿಸುವುದು ಸವಾಲಾಗಿದೆ” ಎಂದರು.
“ಗ್ರಾಮೀಣ ಮತ್ತು ನಗರದಲ್ಲಿ ಇರುವ ಯುವಜನರಲ್ಲಿ ಪಲ್ಲಟಗಳನ್ನು ಗುರುತಿಸಬೇಕಿದೆ. ನಗರದಿಂದ ಮತ್ತೆ ಯುವಜನರು ಕೃಷಿ ಕಡೆಗೆ ಸಾಗುತ್ತಿದ್ದಾರೆ. ಇದರ ಜತೆಗೆ ಯುವಜನರಲ್ಲಿ ಸಾಂಸ್ಕೃತಿಕ, ಭಾಷಾ ಸಂಸ್ಕೃತಿ ಕಟ್ಟುತ್ತ ಹಲವು ಸಂಸಸ್ಕೃತಿಗಳು ನಮ್ಮ ಮುಂದಿವೆ. ಹಿರಿಯರು ಕಿರಿಯರ ಜತೆಗೆ ಸಮಾಲೋಚೆನೆ, ಚರ್ಚೆಯ ಮೂಲಕ ಸಂವಾದ ನಡೆಸುವ ಅಗತ್ಯವಿದೆ” ಎಂದು ನಿರ್ದೇಶಕ ಬಿ ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ. ಎಸ್. ವೈ. ಗುರುಶಾಂತ್ ಮಾತನಾಡಿ, “ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿಜಂತರ್ ಮಂತರ್ನಲ್ಲಿ ನಡೆದ ಹೋರಾಟ, ನಮ್ಮ ಯುವ ಸಮುದಾಯ ಹೇಗೆ ಪ್ರತಿಭಟಿಸುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ನಮ್ಮ ದೇಶದ ವಿದ್ಯಾರ್ಥಿಗಳು, ಯುವಜನರು ಈ ಪ್ರಭುತ್ವಕ್ಕೆ ಪ್ರತಿರೋಧ ಒಡ್ಡಿದರು. ಜವಾಹರ ಲಾಲ್ ವಿಶ್ವವಿದ್ಯಾಲ ಮದ್ರಾಸ್ ವಿ ವಿ ಹೋರಾಟ ಫ್ಯಾಸಿಸ್ಟ್ ದಬ್ಬಾಳಿಕೆಯನ್ನು ವಿರೋಧಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಇಂದು ಜೆನ್ ಜಿ ಈ ಹೊಸ ಪೀಳಿಗೆ ಜಾಗತೀಕರಣ ಪರಿಸ್ಥಿತಿಯಲ್ಲಿ ಆಧುನಿಕ ತಂತ್ರಜ್ಞಾನದಲ್ಲಿ ಇಂದು ಪುನರ್ ರಚಿಸುವ ನಿಟ್ಟಿನಲ್ಲಿ ಯುವಕರು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ” ಎಂದರು.
“ಜಂತರ್ ಮಂತರ್ನಲ್ಲಿ ನಡೆದ ಚಳವಳಿಯನ್ನು ಹತ್ತಿಕ್ಕಲು, ಮೀಸಲಾತಿ ಪ್ರಶ್ನೆ ಎತ್ತಿದ್ದಾರೆ. ಈ ಹೊಸ ಚಳವಳಿಗೆ ಒಡಕು ಬೀರುವ ಹೊಸ ಸವಾಲುಗಳು ಕಾಣುತ್ತವೆ. ಲಿಂಗ, ದಲಿತ ದೌರ್ಜನ್ಯ, ಆದಿವಾಸಿ ಯುವಕರ ಕುರಿತು ಚರ್ಚಿಸುವ ಅಗತ್ಯವಿದೆ” ಎಂದರು.
“ಸಾಹಿತ್ಯ ಮತ್ತುಸಂಸ್ಕೃತಿಕ ಲೋಕ ಜನ ಚಳವಳಿ ಜೊತೆ ಇದೇಯೇ ಹೊರತು ಸಾವಯವ ರೂಪದಲ್ಲಿ ಇಲ್ಲ. ಸಾಹಿತ್ಯದಲ್ಲಿ ಗ್ರಾಮೀಣ ಪ್ರದೇಶದ ಶ್ರಮ ಜೀವಿಗಳ ಸಾಹಿತ್ಯ ಬರಲಿಲ್ಲ. ಸಮಾಜದ ಮೂಲಭೂತ ತಳಹದಿಗಳು, ವರ್ತಮಾನದ ಮೂಲಕ ತಿರುಗುವ ಅಗತ್ಯತೆ ಇದೆ” ಎಂದು ಹೇಳಿದರು.
ಶಿಕ್ಷಣದಲ್ಲಿ ರಂಗ ಶಿಜ್ಷಣದ ಅವಶ್ಯಕತೆ : ಶಿಕ್ಷಣ ತಜ್ಞರು ಡಾ. ಬಿ. ಶ್ರೀಪಾದ್ ಭಟ್ ಮಾತನಾಡಿ, “ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಪೆಡಂಬೂತವಾಗಿ ಬೆಳೆದುನಿಂತಿದೆ. ಇದು ಈ ದೇಶದ ಜನತೆಗೆ, ಯುವ ಜನತೆಗೆ ದೊಡ್ಡ ಅಪಾಯ. ನೀತಿ ಆಯೋಗ ನೀಡಿದ ವರದಿ ಪ್ರಕಾರ ಎಂಟನೇ ಕ್ಲಾಸ್ ಫೇಲಾದ 8.2ರಷ್ಟು ಜನರಿಗೆ ಉದ್ಯೋಗ ಸಿಗುತ್ತಿದೆ. ಓದಿಗೆ ತಕ್ಕಂತೆ ಉದ್ಯೋಗ ಸಿಗುತ್ತಿದೆ. ಉಳಿದ ಜನೆತೆಗೆ ಓದಿದ ಕೋರ್ಸಿಗೆ ತಕ್ಕ ಉದ್ಯೋಗ ಸಿಗುತ್ತಿಲ್ಲ. 140 ಕೋಟಿ ಜನಸಂಸ್ಯಯಲ್ಲಿ ಇಪ್ಪತೈದು ವರ್ಷದವರು ನಲವತ್ತೈದು ಕೋಟಿ ಮಂದಿ ಇದ್ದಾರೆ. ಇವರೆಲ್ಲರೂ ಅಭದ್ರತೆಯಲ್ಲಿ ಇದ್ದಾರೆ. ಈ ಅಭದ್ರತೆಯಲ್ಲಿ ಇರುವವರು ಯಾಕೆ ಸಂಘಟನೆಗಳ ಕಡೆಗೆ ಬರುತ್ತಿಲ್ಲವೆಂಬ ಪ್ರಶ್ನೆ ಕಾಡುತ್ತಿದೆ” ಎಂದು ಕಳವಳ ವ್ಯಕ್ತಪಡಿಸಿದರು.

“ಎಂಟನೇ ತರಗತಿ ಓದಿ 8.2 ರಷ್ಟು ಉದ್ಯೋಗ ಪಡೆಯುವವರ ನಡುವೆ ಪದವಿ, ಪಿಎಚ್ಡಿ ಪದವಿ ಪಡೆದವರಲ್ಲಿ ಅತಿ ಹೆಚ್ಚು ನೀರುದ್ಯೋಗಿಗಳು ಇದ್ದಾರೆ ಎಂದು ವರದಿ ಹೇಳುತ್ತಿದೆ. ಅಂದರೆ ಉನ್ನತ ಶಿಕ್ಷಣ ಕಲಿಯಬೇಡಿ ಎಂದು ಹೇಳುತ್ತಿದ್ದಾರೆ. ಈ ಮೂಲಕ ಉದ್ಯೋಗ ಮತ್ತು ಶಿಕ್ಷಣದ ನಡುವೆ ದೊಡ್ಡ ಬಿಕ್ಕಟ್ಟು ಸೃಷ್ಟಿಯಾಗಿದೆ” ಎಂದರು.
ಶಿಕ್ಣಣದಲ್ಲಿ ರಂಗ ಶಿಕ್ಷಣದ ಅವಶ್ಯ: ಡಾ. ಮಲ್ಲೇಶ ವಿಷಯ ಮಂಡನೆ ಮಾಡಿ ಮಾತನಾಡಿ, “ನಮ್ಮ ಶಾಲೆಯಲ್ಲಿಯೇ ಅಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹಿಂದಿ ವಿಷಯವನ್ನು ಹಿಂದಕ್ಕೆ ಸರಿಸಲಾಗಿದೆ. ಬದಲಿಗೆ ಎಐ ಪರಿಚಯ ಮಾಡಲಾಗುತ್ತಿದೆ. ಇದಕ್ಕೆ ಅರ್ಹತೆ ಕಂಪ್ಯೂಟರ್ ಮಾಡಿದವರು ಇರಬೇಕು. ನೂರಕ್ಕೆ ನೂರು ಅಂಕ ತಗೆಯಬೇಕು ಎಂದು ಹೇರುವ ಸಂದರ್ಭದಲ್ಲಿ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
“ರಂಗಭೂಮಿಯಲ್ಲಿ ದೃಶ್ಯ ಶ್ರವ್ಯದ ಮೂಲಕ ಕಾಣಬಹುದು. ನೋಡುವುದರ ಮೂಲಕ, ಕೇಳುವುದರ ಮೂಲಕ ಮಗು ಶಿಕ್ಷಣ ಕಲಿಯಬಹುದು. ರಂಗ ಭೂಮಿಯಿಂದ ಕೌಶಲ್ಯಗಳನ್ನು ಕಲಿಯಬಹುದು. ಭಾಷಾ ಪ್ರೌಢಿಮೆಯನ್ನು ರಂಗ ಶಿಕ್ಷಣದ ಮೂಲಕ ಮಕ್ಕಳು ಕಲಿಯುವರು” ಎಂದು ಹೇಳಿದರು.
“ಶಿಕ್ಷಕರೂ ಕೂಡ ರಂಗ ಶಿಕ್ಷಣ ಪಡೆಯಬೇಕು. ಬಿ.ಎಡ್ ವಿದ್ಯಾರ್ಥಿಗಳಿಗೆ ಹಳೆಗನ್ನಡ ಪಾಠ ಮಾಡುವಂತೆ ಹೇಳಿದರೆ, ಬರುದಿಲ್ಲವೆಂದು ಹೇಳುತ್ತಾರೆ. ಇದರಿಂದ ಬಿಎಡ್ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಕಲಿಸುವ ಅವಶ್ಯಕತೆ ಇದೆ” ಎಂದರು.
“ಪೋಷಕರು ತಮ್ಮ ಮಕ್ಕಳು ಅಂಕ ಆಧಾರಿತ ಶಿಕ್ಷಣ ಕಲಿತರೇ ಮಾತ್ರ ಉದ್ಯೋಗ ಸಿಗುತ್ತದೆ ಎನ್ನುವ ಮನೋಭಾವ ಹೊಂದಿದ್ದಾರೆ. ಕಲೆ, ರಂಗ ಶಿಕ್ಷಣದ ಮೂಲಕ ಬದುಕು ಕಟ್ಟಿಕೊಳ್ಳಬಹುದು ಎಂಬ ಮನೋಭಾವವನ್ನು ಪೋಷಕರಲ್ಲಿ ಮೂಡಿಸಬೇಕಿದೆ” ಎಂದು ಹೇಳಿದರು.
ಇದನ್ನೂ ಓದಿದ್ದೀರಾ? ಧಾರವಾಡ | ಮೊಟ್ಟಮೊದಲು ಸಮುದಾಯ ಪ್ರಜ್ಞೆ ಹುಟ್ಟುಹಾಕಿದ್ದೇ ಬಸವಣ್ಣ: ಸಾಹಿತಿ ರಂಜಾನ್ ದರ್ಗಾ
“ಹದಿನೈದು ವರ್ಷಗಳಿಂದ ಪಾಠ ಮಾಡುತ್ತ ಬಂದಿರುವೆ, ಈವರೆಗೂ ಕೂಡ ರಂಗ ಶಿಕ್ಷಣಕ್ಕೆ ಒಂದು ಪಠ್ಯಪುಸ್ತಕವಿಲ್ಲ. ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ಮಾಡಲು ಸರ್ಕಾರ ಪಠ್ಯಪುಸ್ತಕ ತಯಾರು ಮಾಡಬೇಕು” ಎಂದರು.
ಎರಡನೇ ಗೋಷ್ಟಿಯ ಡಾ.ಬಿ.ಆರ್ ಮಂಜುನಾಥ ಅಧ್ಯಕ್ಷೀಯ ಮಾತುಗಳನ್ನಾಡಿದರು. ವಾಸುದೇವ ರಂಗೇರ, ಬಸವರಾಜ ಪೂಜಾರ, ಬಸವರಾಜ್ ಎಸ್ ಪ್ರತಿಕ್ರಿಯೆ ನೀಡಿದರು. ಡಾ. ಸಂಜೀವ ಕುಲಕರ್ಣಿ, ವಿ.ಡಿ.ಕಾಮರೆಡ್ಡಿ, ಯಮುನಾ ಗಾವ್ಕರ್, ಅನಂತ ಕಾಂಬಳೆ, ಡಾ. ಇಸಾಬೇಲ್ಲಾ ಝೇವಿಯರ್, ಬಿ.ಎನ್ ಪೂಜಾರಿ, ಮಹೇಶ ಪತ್ತಾರ ಉಪಸ್ಥಿತರಿದ್ದರು. ಗಣೇಶ ಶೆಟ್ಟಿ ಸ್ವಾಗತ ಮಾಡಿದರು, ಅನಂತ ಸಾಂದ್ರೇಯ್ ನಿರೂಪಣೆ ಮಾಡಿದರು.




