ಗುಬ್ಬಿ ತಾಲೂಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಡಾ.ಬಿ.ನಂಜುಂಡಸ್ವಾಮಿ ಆಯ್ಕೆ

Date:

 ವೃತ್ತಿಯಲ್ಲಿ ಆಯುರ್ವೇದ ವೈದ್ಯ ಪ್ರವೃತ್ತಿಯಲ್ಲಿ ಇತಿಹಾಸ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದು ಎಲೆ ಮರೆ ಕಾಯಂತಹ ಸಾಹಿತ್ಯ ಕೃಷಿಕನಿಗೆ ಸಂದ ಗೌರವ ಇದಾಗಿದೆ.

- Advertisement -

ಗುಬ್ಬಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಇದೇ ತಿಂಗಳು 20 ರಂದು ನಡೆಸಿರುವ ಅದ್ದೂರಿ ಸಮ್ಮೇಳನ ಕನ್ನಡ ಹಬ್ಬ ಇಡೀ ತಾಲ್ಲೂಕಿನ ಇತಿಹಾಸದಲ್ಲಿ ಒಂದು ಮೆರೆಗು ಕಟ್ಟಿಕೊಟ್ಟ ಕಾರ್ಯಕ್ರಮವಾಗಿ ಹೊರ ಹೊಮ್ಮಲಿದೆ. ಈ ನಿಟ್ಟಿನಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಹಾಗೂ ತಾಲ್ಲೂಕು ಅಧ್ಯಕ್ಷ ಎಚ್.ಸಿ.ಯತೀಶ್ ತಮ್ಮ ಪದಾಧಿಕಾರಿಗಳೊಂದಿಗೆ ಅವರ ನಿವಾಸಕ್ಕೆ ತೆರಳಿ ಅಧಿಕೃತ ಆಹ್ವಾನ ನೀಡಿ ಡಾ.ನಂಜುಂಡಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಜೊತೆಗೆ ಸಮ್ಮೇಳನದ ಅಧಿಕೃತ ಲೋಗೋ ಕೂಡಾ ಬಿಡುಗಡೆ ಮಾಡಲಾಯಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಂಬಾರಿಯ ಮುಂದೆ ಪೊಲೀಸರು ಸೆಲ್ಫಿ ತೆಗೆದುಕೊಂಡರೆ ಭದ್ರತೆಗೆ ಹೇಗೆ...

ಚಿನ್ನದ ಅಂಬಾರಿಯನ್ನು ಜಂಬೂಸವಾರಿಯ ದಿನ ಬಳಸಿಕೊಳ್ಳಲು ಸರ್ಕಾರ ಅರಸು ಮನೆತನದವರಿಂದ ಪಡೆಯುತ್ತದೆ. ಉಚಿತವಾಗಿ ಅಲ್ಲ; ನಿಗದಿಪಡಿಸಿರುವ ಹಣವನ್ನು ಸಂದಾಯ ಮಾಡಿ. ಅಂಬಾರಿಯ ಭದ್ರತೆಯ ಹೊಣೆ ಸರ್ಕಾರದ ಮೇಲೂ ಇರುತ್ತದೆ. ಪೊಲೀಸರು ಸೆಲ್ಫಿ ತೆಗೆದುಕೊಂಡರೆ...

ಜನತಂತ್ರಕ್ಕೆ ಕುತ್ತು: ‘ಖಾಸಗಿತನ’ದ ನೆಪದಲ್ಲಿ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕಲು...

ಮೋದಿ ಸರ್ಕಾರವು ಈ ಕಾಯ್ದೆಯನ್ನು ಏಕಾಏಕಿ ಜಾರಿಗೊಳಿಸದೆ, ಹಂತ ಹಂತವಾಗಿ ಜಾರಿಗೊಳಿಸುತ್ತಾ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ. ಆರ್‌ಟಿಐ ಕಾಯ್ದೆಯನ್ನು ದುರ್ಬಲಗೊಳಿಸುವ ತಿದ್ದುಪಡಿಯು ಈಗಾಗಲೇ ನವೆಂಬರ್ 2025ರಿಂದಲೇ ಜಾರಿಯಲ್ಲಿದ್ದರೆ, ಡೇಟಾ ಬಳಕೆಯ ಕಠಿಣ ನಿಯಮಗಳು...

ಬೆಂಗಳೂರು ಶಿಕ್ಷಕರ ಕ್ಷೇತ್ರದ ಸೋಲು: ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆಯ...

ಉಳಿದ ಮೂರು ವಿಧಾನ ಪರಿಷತ್‌ ಕ್ಷೇತ್ರಗಳಿಗಿಂತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಫಲಿತಾಂಶ ರಾಜಕೀಯವಾಗಿ ಪರಿಣಾಮ ಬೀರಬಲ್ಲದು. ಡಿ.ಕೆ. ಶಿವಕುಮಾರ್‌ ಅವರ ನಾಯಕತ್ವವನ್ನು ಓರೆಗೆ ಹಚ್ಚಬಲ್ಲದು. ಒಕ್ಕಲಿಗ ಪ್ರಾಬಲ್ಯದ ಪ್ರದೇಶಗಳ ಒಲವು-ನಿಲುವುಗಳನ್ನು ತಿಳಿಸಬಲ್ಲದು. ಆದರೆ,...

ಸಾಹಿತ್ಯದ ನಿರಂತರ ಸಂಶೋಧಕ ಡಾ.ಬಿ.ನಂಜುಂಡಸ್ವಾಮಿ 64 ವರ್ಷ ವಯೋಮಾನದ ನಂಜುಂಡಸ್ವಾಮಿ 1961 ರ ಆಗಸ್ಟ್ 25 ರಂದು ಜನಿಸಿದವರು. ತಂದೆ ಎ.ಬಸವರಾಜು, ತಾಯಿ ಎನ್.ಪಿ.ಶಾರದಮ್ಮ ಅವರ ಗರ್ಭದಲ್ಲಿ ಜನಿಸಿ ಗುಬ್ಬಿ, ಮೈಸೂರು ನಗರದಲ್ಲಿ ಪ್ರಾಥಮಿಕ ಪ್ರೌಢ, ಪಿಯು ಶಿಕ್ಷಣ ಮುಗಿಸಿ ಬಳ್ಳಾರಿಯಲ್ಲಿ ಆಯುರ್ವೇದ ಪದವಿ ಪಡೆದು ತುಮಕೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಶುದ್ಧ ಆಯುರ್ವೇದ ಚಿಕಿತ್ಸಾಲಯ ಮೂಲಕ 1986 ರಲ್ಲಿ ಆರಂಭಿಸಿದರು. ಚಿಕ್ಕ ವಯಸ್ಸಿನಿಂದ ಸಾಹಿತ್ಯಾಸಕ್ತಿ ಬೆಳೆಸಿಕೊಂಡಿದ್ದ ಇವರು ಸಂಶೋಧನೆ ಕಾರ್ಯ ಆರಂಭಿಸಿ ನಿರಂತರ ಸಾಹಿತ್ಯ ಕೃಷಿ ನಡೆಸಿದರು. ಸದಾ ಓದುವ ಹವ್ಯಾಸ ಬೆಳಸಿಕೊಂಡು ಆಳವಾಗಿ ಅಧ್ಯಯನ ಮಾಡುವ ಪ್ರವೃತ್ತಿ ಸಹ ರೂಢಿಸಿಕೊಂಡಿದ್ದರು. ಇದರ ಫಲ ಇಂದಿಗೂ ಅವರ ತುಮಕೂರು ನಿವಾಸದಲ್ಲಿ ಗ್ರಂಥಾಲಯವನ್ನು ಕಾಣಬಹುದಾಗಿದೆ. ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಕಾಳು ಬೇಳೆ ಆಹಾರ ಪದಾರ್ಥ ಕಾಣುವುದು ಸಾಮಾನ್ಯ. ಆದರೆ ಇವರ ಅಡುಗೆಮನೆ ಪುಸ್ತಕಗಳ ಜೋಡಣೆಯ ಕಪಾಟು ಆಗಿರುವುದು ಇವರ ಸಾಹಿತ್ಯಾಸಕ್ತಿ ತೋರುತ್ತದೆ.

ವೀರಶೈವ ಧರ್ಮ-ಸಾಹಿತ್ಯ ಸಂಸ್ಕೃತಿ-ಇತಿಹಾಸ ಕುರಿತು ಆಳವಾಗಿ ಅಧ್ಯಯನ ಮಾಡಿದ ಇವರು ಈ ವಿಚಾರದಲ್ಲಿ ಸ್ಪಷ್ಟ ಮಾಹಿತಿ ನೀಡಬಲ್ಲ ಏಕೈಕ ವಿದ್ವಾಂಸರು ಎಂದರೂ ಅತಿಶಯೋಕ್ತಿಯಲ್ಲ. 50 ಕ್ಕೂ ಅಧಿಕ ಹೆಚ್ಚು ಕೃತಿ ರಚಿಸಿ ಸಂಪಾದಿಸಿದರಲ್ಲಿ ಮಾಗಡಿ ವೀರಪ್ಪಶಾಸ್ತ್ರಿ, ಶಿವಗಂಗಾ ಕ್ಷೇತ್ರ, ವೀರಶೈವ ಮಠಗಳು, ಗೋಸಲ ಶ್ರೀ ಗುಬ್ಬಿ ಚನ್ನಬಸವೇಶ್ವರಸ್ವಾಮಿ, ವಚನ ಪಿತಾಮಹ ಡಾ.ಫಾ.ಗು.ಹಳಕಟ್ಟಿ ಸಮಗ್ರ ಸಾಹಿತ್ಯ ಸಮೀಕ್ಷೆ, ಸಿದ್ಧಾಂತ ಶಿಖಾಮಣಿ, ಸ್ಥಲ ಬೇದಗಳು, ಸೋಮೆಕಟ್ಟೆ ಚೆನ್ನವೀರಸ್ವಾಮಿ ಕೃತಿಗಳು, ಕಾಯಕಯೋಗಿ, ಹೊನ್ನುಡಿಕೆ ದರ್ಶನ, ಕಲ್ಪಸಿರಿ, ಕರ್ನಾಟ ಕಲ್ಯಾಣಕಾರಕಂ ಹೀಗೆ ಅನೇಕ ಖ್ಯಾತ ಕೃತಿಗಳು ಎಂದಿಗೂ ದಾಖಲೆ ರೀತಿ ಪ್ರಕಟಗೊಂಡಿದೆ. 

ತಾಳೆ ಗರಿ ಶಾಸನ ಓದುವ ಏಕೈಕ ಪಂಡಿತ ನಂಜುಂಡಸ್ವಾಮಿ : ತಾಳೆ ಗರಿಗಳನ್ನು ಓದಿ ವಿಸ್ತಾರ ಮಾಹಿತಿ ಒದಗಿಸಿದ ಇತಿಹಾಸ ಸಂಶೋಧಕ ನಂಜುಂಡಸ್ವಾಮಿ ಅವರು ತಾಮ್ರ ಶಾಸನಗಳನ್ನು ಓದಿ ಸರಳ ಕನ್ನಡಕ್ಕೆ ಉಲ್ಲೇಖಿಸಿದ್ದಾರೆ. ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ಅಷ್ಟೇ ಅಲ್ಲದೇ ಪುಸ್ತಕದಲ್ಲಿನ ಕನ್ನಡ ವ್ಯಾಕರಣ ತಪ್ಪಿದ್ದಲ್ಲಿ ಯಾವ ಪುಟದಲ್ಲಿ ತಪ್ಪು ಇದೆ ಎಂಬುದನ್ನು ನೇರ ಲೇಖಕರಿಗೆ ಪತ್ರ ಮುಖೇನ ತಿಳಿಸುವ ವಿಶೇಷ ಪಾಂಡಿತ್ಯ ಇವರಲ್ಲಿದೆ. ಪುರಾತನ ವೀರಶೈವ ಮಠಗಳ ಬಗ್ಗೆ ವಿಶೇಷ ಸಂಶೋಧನೆ ಮಾಡಿದ ಇವರು ಗುಬ್ಬಿ ಹೊಸಹಳ್ಳಿ ಅರಸು ಮನೆತನದ ಕೃತಿ, ಪೂಜಾದತ್ತಿ ತಾಮ್ರ ಶಾಸನ, ಗುಬ್ಬಿ ಮಲ್ಲಣ್ಣಾರ್ಯ ಕೃತಿಯ ಉಲ್ಲೇಖ, ಬಸವಪಥ, ಇತ್ತೀಚಿಗೆ ಹಲಗೆಯಾರನ ಶೋಧನೆಗಳು, 150 ಪುಸ್ತಕ ಹಸ್ತಪ್ರತಿ, ಪುಸ್ತಕ ಪರಿಚಯ, ವ್ಯಕ್ತಿ ಪರಿಚಯ ಹೀಗೆ ಅನೇಕ ಕೃತಿಗಳನ್ನು ರಚಿಸಿ ಜಿಲ್ಲೆಯ ಮೇರು ಸಾಹಿತಿಗಳ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ.

ಡಾ.ಬಿ.ನಂಜುಂಡಸ್ವಾಮಿ ಅವರಿಗೆ ಸಂದ ಪ್ರಶಸ್ತಿಗಳ ಪೈಕಿ ಶಿವಗಂಗಾಶ್ರೀ ಪ್ರಶಸ್ತಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ವೀರಶೈವ ಪ್ರತಿಭಾ ಸಂಪನ್ನ, ಇತಿಹಾಸ ಅಕಾಡೆಮಿಯಿಂದ ನೊಳಂಬ ಶ್ರೇಷ್ಠ ಸಂಶೋಧನಾ ಪ್ರಶಸ್ತಿ ಮುಖ್ಯವಾಗಿದೆ. ಒಟ್ಟಾರೆ ಆರನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಮೆರಗು ತುಂಬಿದ ನಂಜುಂಡಸ್ವಾಮಿ ಅವರಿಗೆ ಇಡೀ ತಾಲ್ಲೂಕು ಜನತೆ ಹೆಚ್ಚಿನ, ಕೆಚ್ಚಿನ, ಮೆಚ್ಚಿನ ಪ್ರಶಂಸೆ ನೀಡಬೇಕಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ |ಕಬ್ಬಿಗೆ ₹5,500 ಬೆಲೆ ನಿಗದಿಪಡಿಸಲು ಭಾರತೀಯ ಕಿಸಾನ ಸಂಘ ಆಗ್ರಹ

ಬರಗಾಲ, ಅಂತರ್ಜಲ ಕುಸಿತ, ಸುಡುಬಿಸಿಲು ಹಾಗೂ ಕೃಷಿ ವೆಚ್ಚ ಹೆಚ್ಚಳದಿಂದ ಸಂಕಷ್ಟದಲ್ಲಿರುವ...

ಮಂಗಳೂರು | ಕಾಂತಪುರಂ ಶೇಖ್ ಅಬೂಬಕರ್ ಅಹ್ಮದ್ ಅವರಿಗೆ ಯೆನೆಪೋಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್

ಪ್ರಸಿದ್ದ ಮುಸ್ಲಿಂ ಧಾರ್ಮಿಕ ಪಂಡಿತ, ಕಲ್ಲಿಕೋಟೆಯ ಮರ್ಕಝ್ ಸಂಸ್ಥೆಗಳ ರೂವಾರಿ ಮುಸ್ಲಿಂ...

ಬಾಗಲಕೋಟೆ | ಪೋಲಿಯೋ ಮುಕ್ತ ಸಮಾಜದ ಸಂಕಲ್ಪ: ಬಾಗಲಕೋಟೆಯಿಂದ ವಿಜಯಪುರದವರೆಗೆ 190 ಕಿ.ಮೀ ಜಾಗೃತಿ ರ್ಯಾಲಿ

ಪೋಲಿಯೋ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ರೋಟರಿ ಕ್ಲಬ್ ಬಾಗಲಕೋಟೆ ವತಿಯಿಂದ...

ಉಡುಪಿ | ಅಗ್ರಿಗೋಲ್ಡ್ ಹಗರಣ: ದಾಖಲೆ ಪರಿಶೀಲನಾ ಕೇಂದ್ರದಲ್ಲಿ ಸಂತ್ರಸ್ತರ ಪರದಾಟ

ಬಹುಕೋಟಿ ರೂ.ಗಳ ಅಗ್ರಿಗೋಲ್ಡ್ ಹಗರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯ...