ಸಾಮಾಜಿಕ ಜಾಲತಾಣದಲ್ಲಿನ ವ್ಯೂವ್ಸ್‌ಗಾಗಿ ದಲಿತ ಸಮುದಾಯದ ಕುರಿತ ಅವಹೇಳನಕಾರಿ ಖಂಡಿಸಿದ್ದು, ರಾಣಿಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ವಕೀಲ ನಾಗರಾಜ್ ಕುಡುಪಲಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಕೃಷ್ಣ ಎಚ್ ಎಂಬುವವರು ಡಿಎಸ್‌ಎಸ್ ಅಂಬೇಡ್ಕರ್ ಧ್ವನಿ(ಚಂದ್ರಕಾಂತ್ ಕಾದ್ರೊಳ್ಳಿ ಬಣ) ಪರವಾಗಿ ವಕೀಲನ ವಿರುದ್ಧ ಪ್ರಕರಣ ದಾಖಲಿಸಿ, “ನಾಗರಾಜ್ ಕುಡುಪಲಿ ಅವರನ್ನು ಪೊಲೀಸ್ ಇಲಾಖೆ ಕೂಡಲೇ ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷೆಯನ್ನು ಕೊಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ನಮ್ಮ ಸಂಘಟನೆಯ ಪರವಾಗಿ ಜಿಲ್ಲಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ” ಎಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಕೋಲಾರ | ನೆಲ ಸಂಸ್ಕೃತಿಯ ತಂಗುದಾಣ ʼಆದಿಮʼ
ಸಂಘಟನೆಯ ರಾಣಿಬೆನ್ನೂರು ತಾಲೂಕು ಅಧ್ಯಕ್ಷರು ಹೊನ್ನಪ್ಪ ಮಾದರ್, ತಾಲೂಕು ಪ್ರಧಾನ ಕಾರ್ಯದರ್ಶಿ, ರಮೇಶ್ ಪೂಜಾರ್, ರಾಣಿಬೆನ್ನೂರು ತಾಲೂಕು ಕಾರ್ಯಾಧ್ಯಕ್ಷ ಮಲ್ಲೇಶ್ ಹರಿಜನ, ದಾವಣಗೆರೆ ಜಿಲ್ಲಾಧ್ಯಕ್ಷ ಮಂಜುನಾಥ ಕೊಪ್ಪಳ ಇದ್ದರು