ಔರಾದ್ ತಾಲೂಕಿನ ಸೋರಳ್ಳಿ ಗ್ರಾಮದ ಸಮೀಪ ಭೀಕರ ಅಪಘಾತವೊಂದು ಸಂಭವಿಸಿದ್ದು, ಅದರಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ ಓರ್ವ ತನ್ನ ಬರ್ತ್‌ಡೇ ಆಚರಿಸಿಕೊಂಡು ಮರಳುತ್ತಿದ್ದ ಎಂದು ತಿಳಿದು ಬಂದಿದೆ.
ಔರಾದ್ ತಾಲೂಕಿ ಬೇಲೂರ್ (ಎನ್) ಗ್ರಾಮದ ಹಣಮಂತ ಚನ್ನಪ್ಪ (20), ಗಣೇಶ ಧನರಾಜ್ (19) ಮೃತರು.
ಹಣಮಂತ ಎಂಬ ಯುವಕನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಜಂಬಗಿ ಗ್ರಾಮದಲ್ಲಿ ಬರ್ತಡೇ ಪಾರ್ಟಿ ಮುಗಿಸಿ ಇಬ್ಬರೂ ಬೈಕ್‌ನಲ್ಲಿ ವಾಪಸ್ಸಾಗುತ್ತಿದ್ದರು. ಈ ಸಂದರ್ಭದಲ್ಲಿ ಅತಿ ವೇಗದಲ್ಲಿದ್ದ ಬೈಕ್ ನಿಯಂತ್ರಣ ತಪ್ಪಿ ಗಿಡಕ್ಕೆ ಢಿಕ್ಕಿ ಹೊಡೆದಿದ್ದರಿಂದ ಇಬ್ಬರೂ ಹಾರಿ ರಸ್ತೆ ಪಕ್ಕದ ಕಂದಕದಲ್ಲಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಬ್ಬರು ಯುವಕರು ಬೀದರ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಸ್ನೇಹಿತರು ಸೇರಿ ಆಯೋಜಿಸಿದ್ದ ಬರ್ತಡೇ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ವಾಪಸ್ಸು ಬರುವ ವೇಳೆ ದುರ್ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಬಸ್-ಆಟೋ ಮಧ್ಯೆ ಭೀಕರ ಅಪಘಾತ; ತಾಯಿ, ಇಬ್ಬರು ಮಕ್ಕಳ ಸಾವು
ಈ ಸಂಬಂಧ ಸಂತಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.