“ಹಸಿರೇ ನಮ್ಮ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಸಿಗಳನ್ನು ನೆಡುವುದು, ಪೋಷಿಸುವ ಮೂಲಕ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿಯನ್ನು ಎಸ್ಎಫ್ಐ ಕಾರ್ಯಕರ್ತರು ಮೂಡಿಸಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದಲ್ಲಿ ಎಸ್ಎಫ್ಐ ನೇತೃತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಕಾರ್ಯಮವನ್ನು ಹಮ್ಮಿಕೊಳ್ಳಲಾಯಿತು.
ಈ ಸಮಯದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡ ಅರುಣ್ ನಾಗವತ್ ಮಾತನಾಡಿ, “ಪ್ರಕೃತಿಯನ್ನು ನಾವು ರಕ್ಷಿಸಿದರೆ, ಪರಿಸರ ನಮ್ಮನ್ನು ಪೋಷಿಸುತ್ತದೆ. ಅರಣ್ಯ ನಾಶದಿಂದ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಕೇವಲ ಅರಣ್ಯ ಮಾತ್ರವಲ್ಲದೆ ಹಲವು ಅಪರೂಪದ ಸಸ್ಯ ಹಾಗೂ ಪ್ರಾಣಿ ಸಂಕುಲಗಳು ಅಳಿವಿನಂಚಿಗೆ ಬಂದಿವೆ. ಪರಿಸರ ನಾಶವಾಗಲು ನಮ್ಮಲ್ಲಿರುವ ದುರಾಸೆ ಒಂದೆಡೆಯಾದರೆ, ಇನ್ನೊಂದೆಡೆ ಅದರ ಬಗ್ಗೆ ನಿಷ್ಕಾಳಜಿ. ಪರಿಸರ ಉಳಿಸಿಕೊಳ್ಳುವಲ್ಲಿ ನಿರ್ಲಕ್ಷತನವೇ ಕಾರಣವಾಗಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದಲ್ಲಿ ಮುಂಬರುವ ದಿನಗಳಲ್ಲಿ ಹಸಿರು ಮಾಯವಾಗಿ ಮನುಷ್ಯ ಸಂಕಲವೂ ನಾಶವಾಗುವುದು ನಿಶ್ಚಿತ. ಪರಿಸರ ಉಳಿಸಿ, ಪರಿಸರ ಬೆಳೆಸಿ. ಕಾಡು ಉಳಿಸಿ, ಕಾಡು ಬೆಳೆಸುದು ನಮ್ಮೆಲ್ಲರ ನಮ್ಮೆಲ್ಲರ ಹೊಣೆಯಾಗಿದೆ” ಎಂದರು.
ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಅಬ್ದುಲ್ ರಷೀದ್ ಮರ್ಜಣ್ಣನವರ ಮಾತನಾಡಿ, “ನಮ್ಮ ಪರಿಸರಕ್ಕೆ ಪರ್ಯಾಯ ವಾತಾವರಣ ಸೃಷ್ಟಿಸಲು ಸಾಧ್ಯವಿಲ್ಲ. ನಮ್ಮ ಪರಿಸರ ಉಳಿಸಲು ಮುಂದಾಗಬೇಕಿದೆ. ಹೆಚ್ಚು ಗಿಡ ಮರಗಳನ್ನು ಬೆಳೆಸೋಣ. ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಉಪಯೋಗಿಸೋಣ. ಶುದ್ಧ ನೀರು ಅತ್ಯಮೂಲ್ಯ ನೀರನ್ನು ನ್ಯಾಯಯುತವಾಗಿ ಬಳಸೋಣ. ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳ ಉಪಯೋಗವನ್ನು ಸಂಪೂರ್ಣ ತ್ಯಜಿಸೋಣ. ಗೃಹ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಿಸಿ ವಿಲೇವಾರಿ ಮಾಡೋಣ” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗೌಸ್ ಪೀರ್ ಕೊಡದ್, ಪ್ರಜ್ವಲ್ ಎಲ್, ಅಸೀಫ್, ಶಬೀರ್ ಜಿ, ರಾಘು ಬಿ, ಇಮ್ರಾನ್ ಎ, ಪ್ರದೀಪ್ ಎಸ್, ಜೀವನ್ ಹೊಮ್ಮರಡಿ, ಚಿದಾನಂದ ಓಲೆಕಾರ್, ಇಸ್ಮಾಯಿಲ್ ನದಾಫ್, ಕಬೀರ್ ಖಾನ್, ಸೀಮಾ ಮಾಸುರ್, ಮುಸ್ಕಾನ್ ಮುಜಾವರ್, ಜಾನಿಯಾ ನಾಯ್ಕ್, ವಿದ್ಯಾ ಎನ್, ಸುಮನ್ ಡಿ, ಅರ್ಪಿತ ಎನ್, ಪೂರ್ಣಿಮಾ ಹೊಲಗಿ, ಶ್ರೇಯಾ ಪಾಟೀಲ್, ನಾನಿಕೇರಿ ಮೆಹಕ್, ಅಂಕಿತಾ ಹೊನ್ನಪ್ಪನವರ್, ಹಸಿಯಾ ಬಾನು ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





