ಶಿರಸಿ ನಗರಸಭೆಯಲ್ಲಿ ಇಂದೋರ್ ಮಾದರಿಯ ‘ಕಮಾಂಡ್ ರೂಮ್’!

Date:

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶಿರಸಿ ನಗರವನ್ನು ಸ್ವಚ್ಛತೆಯತ್ತ ಮುನ್ನಡೆಸುವ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನಗರಸಭೆಯ ಕಚೇರಿಯಲ್ಲಿ ಇಂದೋರ್‌ ಮಾದರಿಯ ‘ಕಮಾಂಡ್ ರೂಮ್’ ಅನ್ನು ಉದ್ಘಾಟಿಸಲಾಯಿತು. ಈ ವ್ಯವಸ್ಥೆಯ ಮೂಲಕ ನಗರಸಭೆಯ ಕಸ ವಿಲೇವಾರಿ ವಾಹನಗಳ ಚಲನವಲನವನ್ನು ನೈಜ ಸಮಯದಲ್ಲಿ (ರಿಯಲ್ ಟೈಮ್) ನಿಗಾವಹಿಸಲು ಸಾಧ್ಯವಾಗಲಿದೆ.

- Advertisement -

ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಕಮಾಂಡ್ ರೂಮ್ ಉದ್ಘಾಟಿಸಿ ಮಾತನಾಡಿ, “ಈ ಹೊಸ ವ್ಯವಸ್ಥೆಯು ನಗರದಾದ್ಯಂತ ಕಸ ಸಂಗ್ರಹಣಾ ವಾಹನಗಳ ಕಾರ್ಯಕ್ಷಮತೆ ಹಾಗೂ ನಿಗದಿತ ಮಾರ್ಗಗಳ ಮೇಲ್ವಿಚಾರಣೆಗೆ ನೆರವಾಗುತ್ತದೆ. ಕಸ ವಿಲೇವಾರಿ ಪ್ರಕ್ರಿಯೆ ಯಾವುದೇ ಅಸಮರ್ಪಕತೆ ಇಲ್ಲದೆ ನಡೆಯುವಂತೆ ಖಚಿತಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಸ್ವಚ್ಛ ಮತ್ತು ಆರೋಗ್ಯಕರ ಶಿರಸಿ ನಿರ್ಮಾಣಕ್ಕೆ ನಗರಸಭೆ ಬದ್ಧವಾಗಿದೆ” ಎಂದು ಹೇಳಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಪ್ಪತಗುಡ್ಡದ ಮಡಿಲಲ್ಲಿ ಗಾಂಧಿ ತತ್ವಗಳ ಪ್ರೇರಣಾ ಕೇಂದ್ರ ‘ಸಬರಮತಿ...

ಗದಗ ನಗರದ ಕಪ್ಪತಗುಡ್ಡದ ಸೆರಗಿನಲ್ಲಿರುವ 'ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ'ದ ಆವರಣದಲ್ಲಿ ನಿರ್ಮಿಸಲಾಗಿರುವ ಸಬರಮತಿ ಆಶ್ರಮವು ಗಾಂಧೀಜಿಯವರ ತತ್ವ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ತಲುಪಿಸುವ ಪ್ರೇರಣಾ ಕೇಂದ್ರವಾಗಿ...

ಸ್ಮರಣೆ | ʼಗಾಂಧಿ ನೀ ನಮ್ಮೆಲ್ಲರೊಳಗೂ ಇರುವೆʼ

ನಿನ್ನ ಚಾಳೀಸಿನೊಳಗೆ ತೂರಿಕೊಂಡ ಸ್ವಚ್ಚ ಭಾರತವಿನ್ನೂ ಚರಂಡಿಯಲ್ಲಿ ಹೊರಳಾಡುತ್ತಿದೆ. ಕಪ್ಪು ಹಣದ ಕತ್ತಲೆ ಗಾಢವಾಗಿ, ಸೂತ್ರಧಾರಿಗಳು ಉಳ್ಳವರಾಗಿ ಕೈಲಾಸದಲ್ಲಿನ ಭವ್ಯ ಶಿವಾಲಯದಲ್ಲಿದ್ದಾರೆ. ಊರ ಹೊರಗಣ ಕೇರಿಯವರಿಗೆ ಕೊಳಕು ಬಳಿಯುವ ಕಾಯಕ ಮತ್ತು ಕೊಳಗೇರಿ...

ಸುದ್ದಿ ವಿವರ | ಇವಿಎಂ vs ಬ್ಯಾಲೆಟ್‌ ಪೇಪರ್‌:...

ಇವಿಎಂ ಮೇಲಿನ ವಿಶ್ವಾಸದ ಪ್ರಶ್ನೆ ಮತ್ತೆ ದೇಶದ ಚುನಾವಣಾ ಚರ್ಚಾ ಕೇಂದ್ರವಾಗಿದೆ. ಪಾರದರ್ಶಕತೆ ಮತ್ತು ಮತದಾರರ ನಂಬಿಕೆಯನ್ನು ಮುಂದಿಟ್ಟುಕೊಂಡು, ಬ್ಯಾಲೆಟ್‌ ಪೇಪರ್ ವ್ಯವಸ್ಥೆಗೆ ಮರಳಬೇಕೆಂಬ ಬೇಡಿಕೆಯನ್ನು ವಿಪಕ್ಷಗಳು ಮುಂದೆ ತಂದಿವೆ. ಬುಧವಾರ (ಸೆ.30), ದೆಹಲಿಯಲ್ಲಿ...

ಇಂದೋರ್ ಮಾದರಿಯಲ್ಲಿ ಸ್ಥಾಪಿಸಲಾದ ಈ ಕಮಾಂಡ್ ರೂಮ್‌ನಿಂದ ಕಸ ಸಂಗ್ರಹಣಾ ಕಾರ್ಯ ಇನ್ನಷ್ಟು ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಶಿರಸಿ | ಮಳೆ ಬಂದರೆ ಹೊಂಡ, ಬಿಸಿಲಾದ್ರೆ ಧೂಳು: ಭೀಮಘರ್ಜನೆಯ ವಿಡಿಯೋ ವೈರಲ್

ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ವಿಶ್ವೇಶ್ವರ ಶೆಟ್ಟಿ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಶಿವರಾಜ ಕನಕಪ್ಪನವರ ಸೇರಿದಂತೆ ಸದಸ್ಯರಾದ ಶಮಿಮ್ ಬಾನು, ರುಬೆಕಾ ಫರ್ನಾಂಡಿಸ್, ಶಾರದಾ ಶೇಟ್, ಶ್ರೀಕಾಂತ ಬಳ್ಳಾರಿ, ವನಿತಾ ಶೇಟ್, ಮುಕ್ತಾ ಶೆಟ್ಟಿ, ತಾರಾ ನಾಯ್ಕ ಮತ್ತು ಗೀತಾ ಶೆಟ್ಟಿಯವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಂಡಗೋಡ | ಆರೋಗ್ಯ ವ್ಯವಸ್ಥೆ ಸುಧಾರಣೆಗೆ ಸಚಿವರಿಗೆ ಮನವಿ

ಮುಂಡಗೋಡ: ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಹಾಗೂ...

ಯಾದಗಿರಿ | ಎಕರೆಗೆ ₹25 ಸಾವಿರ ಬರ ಪರಿಹಾರ, ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡುವಂತೆ ರೈತ ಸಂಘ ಆಗ್ರಹ

ಯಾದಗಿರಿ ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಪ್ರತಿ ರೈತರ...

ಕುಮಟಾ | ದೇವಿಮನೆ ಘಟ್ಟದಲ್ಲಿ KSRTC ಬಸ್ ಕಂದಕಕ್ಕೆ; 18 ಮಂದಿಗೆ ಗಾಯ

ಕುಮಟಾ: ತಾಲೂಕಿನ ದೇವಿಮನೆ ಘಟ್ಟದ 2ನೇ ತಿರುವಿನ ಬಳಿ ಗುರುವಾರ ರಾತ್ರಿ...

ಯಾದಗಿರಿ | ಸಮರ್ಪಕ ಕೂಲಿ ಪಾವತಿಗೆ ಆಗ್ರಹ: ರಸ್ತಾಪುರ ಗ್ರಾಪಂ ಕಚೇರಿ ಎದುರು ರೈತ ಸಂಘ ಧರಣಿ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಿರುವ...