ಕೋಲಾರ ಎಸಿಎಫ್ ಆಗಿದ್ದ ಕೆ.ಮಹೇಶ್ ಅವರ ವರ್ಗಾವಣೆ ಎರಡು ತಿಂಗಳ ಹಿಂದೆಯೇ ಆಗಿತ್ತು. ಅವರನ್ನು ಬಂಗಾರಪೇಟೆಗೆ ನಿಯೋಜಿಸಲಾಗಿತ್ತು. ಮಹೇಶ್ ಸ್ಥಾನಕ್ಕೆ ಶಿವಯೋಗಿ ಸ್ವಾಮಿ ಅವರನ್ನು ನಿಯೋಜಿಸಲಾಗಿತ್ತು. ಅವರು ಚಿಕ್ಕಮಗಳೂರಿನಿಂದ ವರ್ಗಾವಣೆ ಆಗಿ ಬಂದಿದ್ದಾರೆ.
ಈ ಮಧ್ಯೆ ಮಹೇಶ್ ಅವರು ವರ್ಗಾವಣೆ ರದ್ದು ಕೋರಿ ಕೆಎಟಿ ಮೊರೆ ಹೋದರು. ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶವಾಗಿದೆ. ಹೀಗಾಗಿ, ಕಚೇರಿ ಫಲಕದಲ್ಲೂ ಮಹೇಶ್ ಹೆಸರು ಇದೆ, ಅವರ ಬಳಿಯೇ ಸರ್ಕಾರಿ ವಾಹನ ಇದೆ. ಈ ನಡುವೆ, ಹೊಸದಾಗಿ ನಿಯೋಜನೆ ಆಗಿರುವ ಶಿವಯೋಗಿಸ್ವಾಮಿ ಕೂಡ ಕುರ್ಚಿ ಬಿಟ್ಟುಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈ ಗೊಂದಲದಲ್ಲಿ ಇಬ್ಬರಿಗೂ ತಿಂಗಳ ವೇತನ ಆಗಿಲ್ಲ.
ಇಬ್ಬರು ಅಧಿಕಾರಿಗಳ ಮುಸುಕಿನ ಕಿತ್ತಾಟದಿಂದ ಕೆಲಸ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಜೈಲ್ ಭರೋ’ ಪ್ರತಿಭಟನೆ : ರಸ್ತೆ ತಡೆದ ಕಾರ್ಯಕರ್ತರು ಪೊಲೀಸ್ ವಶಕ್ಕೆ!
ಮಹೇಶ್ ವಿದೇಶಕ್ಕೆ ಹೋಗಬೇಕೆಂದು ಜುಲೈ 15ಕ್ಕೆ ಇಲಾಖೆಗೆ ಅರ್ಜಿ ಹಾಕಿದ್ದರು. ಅವರ ಮೇಲೆ ದೂರುಗಳಿದ್ದು, ತನಿಖಾ ಮುಗಿಯುವವರೆಗೆ ಅವಕಾಶ ನೀಡಬಾರದೆಂದು 18ಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ, ಆ.15ಕ್ಕೆ ತೆರಳಲು ಜುಲೈ 21ರಂದು ಇಲಾಖೆ ಅನುಮತಿ ನೀಡಿದೆ. ಜೊತೆಗೆ 15 ದಿನಗಳೊಳಗೆ ತನಿಖೆ ಮಾಡಿ ವರದಿ ಕೊಡುವುದಾಗಿ ಆ.4ರಂದು ಸೂಚಿದೆ. ತನಿಖೆ ಪೂರ್ಣಗೊಳ್ಳದ ಕಾರಣ ಅವಕಾಶ ಮಾಡಿಕೊಡಬಾರದು’ ಎಂದು ಭೂಸಂತ್ರಸ್ತ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಹರಟಿ ಪ್ರಕಾಶ್ ಆಗ್ರಹಿಸಿದ್ದಾರೆ.




