ಕೂಡಲಸಂಗಮ | ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ

Date:

ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕೂಡಲಸಂಗಮ ಘಟಕದ ವತಿಯಿಂದ ಪ್ರತಿಭಟನೆ ಮಾಡಲಾಯಿತು.

ಕೃಷ್ಣಾ, ಮಲಪ್ರಭಾ, ಘಟಪ್ರಭಾ ಪುಣ್ಯ ನದಿಗಳ ಸಂಗಮದ ಸುಕ್ಷೇತ್ರವಾಗಿರುವ ವಿಶ್ವಗುರು ಬಸವಣ್ಣನವರ ಐಕ್ಯಸ್ಥಳ ಸುಕ್ಷೇತ್ರ ಕೂಡಲಸಂಗಮದ ಅಭಿವೃದ್ಧಿಗಾಗಿ ಕಾರಣೀಭೂತರಾದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್ ಪಟೇಲರವರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ಹಾಗೂ ಮೂರ್ತಿಗೆ ಯಾವುದೇ ರೀತಿಯ ನೈಸರ್ಗಿಕ ಸಂಚಾರ ರೂಪದಿಂದ ಧಕ್ಕೆಯಾಗದಂತೆ ವೃತ್ತವನ್ನು ಅಗಲೀಕರಣ ಮಾಡುವಂತೆ ಕರವೇ ಆಗ್ರಹಿಸಿತು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ ಮಾತನಾಡಿ, ಈಗಾಗಲೇ ಪ್ರತಿಷ್ಠಾಪನೆಯಾಗಿರುವ ಮೂರ್ತಿಯು ದಿ. ಜೆ.ಎಚ್ ಪಟೇಲರವರನ್ನು ಹೋಲಿಕೆಯಾಗುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ, ಜಿಲ್ಲಾಡಳಿತ ಹಾಗೂ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ಆಗಲಿಕರಣ ಶೀಘ್ರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ವೃತ್ತ ಅಗಲೀಕರಣ ಮಾಡಲು ಕ್ರಮ ತೆಗೆದುಕೊಳ್ಳದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಉಗ್ರರೂಪದ ಬೃಹತ್ ಪ್ರತಿಭಟನೆಗಳನ್ನು ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಜೆ.ಎಚ್ ಪಟೇಲರ ಜನ್ಮ ದಿನಾಂಕವಾದ ಆಕ್ಟೋಬರ್ 1ನೇ ತಾರೀಖು 2024ರೊಳಗಾಗಿ ಬದಲಾವಣೆ ಮಾಡಲು ಗಡುವು ನೀಡಲಾಗುವುದು. ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟವನ್ನು ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ ಎಂದರು.

ಈ ಸಂದರ್ಭದಲ್ಲಿ ರಾಜೇಶ್ವರಿ ಹಿರೇಮಠ್, ಸವಿತಾ ಹಿರೇಮಠ್, ಸಂಗಮೇಶ ಅಂಬಿಗೇರ, ರೋಹಿತ್ ಬಾರೆಕರ, ಮಹಾಂತೇಶ ಒಂಕಲಕುಂಟಿ,ಜಾಹಿರ್ ಸಂಗಮಕರ, ಗಣೇಶ ನಾಯಕ, ಹಸನ್ ಕಲಕಬಂಡಿ, ಪ್ರವೀಣ ವಾಲಿಕಾರ, ಮಂಜು ವಡ್ಡರ, ಸೋಹಿಲಾ ಸುತರಾ, ರವಿ ಕೊಪ್ಪದ, ಸಂಜಯಗೌಡ ಗೌಡರ, ಶ್ರವಣ್ ಹಿರೇಮಠ್, ಶರಣು ಹಾದಿಮನಿ, ಧಶರಥ ವಡ್ಡರ, ಸಂಗಮೇಶ ಗೌಡರ, ಸಂಗಮೇಶ ಬೈಲಕೊರ, ಸದ್ದಾಂ ಕಲಾಲ, ಸಂಗಮೇಶ ಗೌತಗಿ, ಅಲ್ತಾಫ್ ಹಳ್ಳೋರ್ ಇತರರು ಉಪಸ್ಥಿತರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ | ಇಂದೋ-ನಾಳೆಯೋ ಬೀಳುವಂತಿರುವ ಮನೆ: ಈ ಕುಟುಂಬಕ್ಕೆ ಬೇಕಿದೆ ಸರ್ಕಾರದ ಸಹಾಯಹಸ್ತ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕು ಮೊರಬ ದೊಡ್ಡ ಗ್ರಾಮವಾಗಿದೆ. ಸಬಲರಾಗಿ ಸಂಖ್ಯೆ...

ಕೊಪ್ಪಳ | ಗಣಪತಿ ಮೂರ್ತಿ ಇರುವ ಟ್ರಾಕ್ಟರ್‌ಗೆ ಲಾರಿ ಡಿಕ್ಕಿ; ನಾಲ್ವರಿಗೆ ಗಂಭೀರ ಗಾಯ

ಗಣೇಶ ಚತುರ್ಥಿಯ ಅಂಗವಾಗಿ ಗಣಪತಿ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಲಾರಿ...

ಮಂಗಳೂರು | ಶೀಘ್ರದಲ್ಲೇ ‘ಬ್ಯಾರಿ ಭವನ’ಕ್ಕೆ ಶಂಕುಸ್ಥಾಪನೆ: ಸ್ಪೀಕರ್ ಯು ಟಿ ಖಾದರ್

ಆರು ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣವಾಗಲಿದ್ದು, ಶೀಘ್ರದಲ್ಲೇ ಶಂಕುಸ್ಥಾಪನೆ ನೆರವೇರಿಸಲಾಗುವುದು...