78ನೇ ಸ್ವಾಂತಂತ್ರ್ಯ ದಿನಾಚರಣೆ ಅಂಗವಾಗಿ ಹಲಗೂರು ಲಯನ್ಸ್ ಕ್ಲಬ್, ನ್ಯೂ ಡಯಾಕೇರ್ ಸೆಂಟರ್ ಹಾಗೂ ನವಯುಗ ಕೇರ್ ಸೆಂಟರ್ ಸಹಯೋಗದಲ್ಲಿ ಆ.15ರ ಗುರುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 1 ಗಂಟೆವರೆಗೆ ಉಚಿತ ಮಧುಮೇಹ ಮತ್ತು ರಕ್ತದೊತ್ತಡ ತಪಾಸಣಾ ಶಿಬಿರವನ್ನು ಮಳವಳ್ಳಿಯಲ್ಲಿ ಆಯೋಜಿಸಲಾಗಿದೆ.
ಮಳವಳ್ಳಿ ತಾಲೂಕಿನ ಹಲಗೂರು ಗ್ರಾಮದ ಚನ್ನಪಟ್ಟಣ ರಸ್ತೆಯಲ್ಲಿರುವ ಲಯನ್ಸ್ ಭವನದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಲಯನ್ ಸುಭ್ರಮಣ್ಯ ಎನ್ ಚಾಲನೆ ನೀಡಲಿದ್ದಾರೆ.
ಶಿಬಿರದಲ್ಲಿ ಮಧುಮೇಹ ತಜ್ಞರಾದ ಡಾ.ರೇಣುಕಾ ಪ್ರಸಾದ್ ಎ.ಆರ್ ಹಾಗೂ ಡಾ.ನವ್ಯಾ ಪ್ರಸಾದ್ ಭಾಗವಹಿಸಲಿದ್ದು, ಲಯನ್ ರಾಜಶೇಖರ್ ಕೆ.ಎಲ್ ಹಾಗೂ ಲಯನ್ ಡಾ.ಶಿವಕುಮಾರ್ ವೈ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಸತ್ತ ಮೇಲೆ ದೇಹವನ್ನು ಮಣ್ಣು ಮಾಡುವ ಬದಲು ದಾನ ಮಾಡಿ: ಶ್ರೀಧರ್
ಶಿಬಿರಕ್ಕೆ ಬರುವವರು ಈ ಹಿಂದೆ ಚಿಕಿತ್ಸೆ ಪಡೆದಿರುವ ದಾಖಲಾತಿಗಳೊಂದಿಗೆ, ಖಾಲಿ ಹೊಟ್ಟೆಯಲ್ಲಿ ಶಿಬಿರಕ್ಕೆ ಹಾಜರಾಗಬೇಕು ಎಂದು ಲಯನ್ ಕ್ಲಬ್ ಅಧ್ಯಕ್ಷ ಕುಮಾರ್, ಕಾರ್ಯದರ್ಶಿ ಮಾರೇಗೌಡ ಹಾಗೂ ಖಜಾಂಚಿ ಶಿವರಾಜ್ ತಿಳಿಸಿದ್ದಾರೆ.