ಕವಿತೆಗಳು ಸಮಾಜದ ಅಂಕುಡೊಂಕು ತಿದ್ದುವ ಕನ್ನಡಿಯೂ ಆಗಬೇಕು: ಹಿರಿಯ ಸಾಹಿತಿ ಡಾ. ಚಿಕ್ಕಮರಳಿ

Date:

ಕಾವ್ಯ ಎಂಬುದು ನಿಂತ ನೀರಲ್ಲ, ಅದು ಹರಿಯುವ ನದಿ. ಹಿರಿಯ ಕವಿಗಳ ಅನುಭವದ ಗಾಂಭೀರ್ಯ ಮತ್ತು ಕಿರಿಯ ಕವಿಗಳ ಹೊಸ ಆಲೋಚನೆಗಳ ತುಡಿತ – ಈ ಎರಡೂ ಸೇರಿದಾಗ ಮಾತ್ರ ಸಾಹಿತ್ಯ ಶ್ರೀಮಂತವಾಗುತ್ತದೆ. ಒಬ್ಬ ಕವಿಯ ದೃಷ್ಟಿಕೋನ ಮತ್ತೊಬ್ಬ ಕವಿಯ ಭಾವನೆಗೆ ಪೂರಕವಾಗುವುದೇ ಈ ಗೋಷ್ಠಿಯ ಉದ್ದೇಶ. ಇಂದಿನ ವೇಗದ ಬದುಕಿನಲ್ಲಿ ಭಾವನೆಗಳು ಯಾಂತ್ರಿಕವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕವಿತೆಯು ಮನುಷ್ಯನ ಮನಸ್ಸನ್ನು ತಣಿಸುವ ಮಲ್ಲಿಗೆಯಂತಾಗಬೇಕು. ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕನ್ನಡಿಯೂ ಆಗಬೇಕು ಎಂದು ಹಿರಿಯ ಸಾಹಿತಿ ಡಾ. ಬೋರೇಗೌಡ ಚಿಕ್ಕಮರಳಿ ಅಭಿಪ್ರಾಯಪಟ್ಟರು.

- Advertisement -

ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ವೀರೇಶ ಬಾನುಲಿ ಸ್ವಾಮಿ ವಿವೇಕಾನಂದ ಮಂದಿರ ದಿವ್ಯಾಂಗ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಮನ್ವಯ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನೊಬೆಲ್‌ ಪ್ರಶಸ್ತಿ ಸರಣಿ | ಕಣ ಭೌತವಿಜ್ಞಾನ-ಖಗೋಳವಿಜ್ಞಾನಗಳೆರಡರ ಸಮ್ಮಿಳನದ...

ಫ್ರಾನ್ಸಿಸ್ ಹಾಲ್ಜೆನ್ ಅವರ ಮೂಲ ಆಲೋಚನೆ ಕೇವಲ ಹಿಮದೊಳಗೆ ಸಂವೇದಕಗಳನ್ನು ಇಡುವ ಯೋಜನೆಯಾಗಿರಲಿಲ್ಲ. ಅದು ವಿಶ್ವವನ್ನು ನೋಡುವ ಹೊಸ ವಿಧಾನಕ್ಕೆ ಬಾಗಿಲು ತೆರೆಯುವ ಆಲೋಚನೆಯಾಗಿತ್ತು. ಅಗೋಚರವಾಗಿರುವ ಕಣಗಳನ್ನು ಹಿಡಿಯುವ ಮೂಲಕ, ವಿಶ್ವದ ಅತ್ಯಂತ...

ಡಾ. ಟಿ.ಎಸ್.‌ ಚನ್ನೇಶ್‌ ಸರಣಿ | ವೈದ್ಯಕೀಯ ನೊಬೆಲ್‌...

ನಮ್ಮ ಮೆದುಳು, ಭಾವನೆಗಳನ್ನು, ವರ್ತನೆಗಳನ್ನು ಮತ್ತು ದೈಹಿಕ ಕಾರ್ಯಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ಸಂಶೋಧನೆಯಿಂದ ಬಿಡಿಸಿಟ್ಟು 2026ರ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮೂವರು ಸಂಶೋಧಕರು ಮತ್ತು ಸಂಶೋಧನೆಯ ಸುತ್ತಲಿನ ವಿಶ್ಲೇಷಣಾತ್ಮಕ ಬರಹ ಈ...

ಪೊಲೀಸ್ ಸುಧಾರಣೆ | ಹೈಟೆಕ್ ಪೊಲೀಸಿಂಗ್ Vs ವಾಸ್ತವ:...

ಪೊಲೀಸ್‌ ಇಲಾಖೆಯನ್ನು ಆಧುನೀಕರಿಸಲು AI, ಸೈಬರ್‌ ತಂತ್ರಜ್ಞಾನ, ಡಿಜಿಟಲ್‌ ತನಿಖೆ, ಸಿಸಿಟಿವಿ, ಬಾಡಿ ಕ್ಯಾಮೆರಾ ಸೇರಿದಂತೆ ಹಲವು ತಂತ್ರಜ್ಞಾನಗಳು ಪ್ರವೇಶಿಸುತ್ತಿವೆ. ಆದರೆ ಹೈಟೆಕ್‌ ಆಗುತ್ತಿರುವ ಪೊಲೀಸ್‌ ವ್ಯವಸ್ಥೆ ಜನರ ಬದುಕಿಗೆ ಎಷ್ಟು ಹತ್ತಿರವಾಗುತ್ತಿದೆ?...
WhatsApp Image 2026 04 06 at 3.24.10 AM

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾನಪದ ವಿದ್ವಾಂಸ ಕ್ಯಾತನಹಳ್ಳಿ ರಾಮಣ್ಣ ಮಾತನಾಡಿ, “ಕವಿಗಳಿಗೆ ಜಾತಿ, ಧರ್ಮಗಳ ಹಂಗಿಲ್ಲ. ಮಾನವೀಯತೆಯೇ ಕವಿಯ ಧರ್ಮ. ಇಲ್ಲಿ ಹಿರಿಯರಿಂದ ಕಿರಿಯರು ಕಾವ್ಯದ ಮೌಲ್ಯಗಳನ್ನು ಕಲಿಯಬೇಕಿದೆ. ಹಾಗೆಯೇ ಕಿರಿಯರಿಂದ ಹಿರಿಯರು ಬದಲಾಗುತ್ತಿರುವ ಜಗತ್ತಿನ ನಾಡಿಮಿಡಿತವನ್ನು ಅರಿಯಬೇಕಿದೆ. ಇದೇ ನಿಜವಾದ ಸಮನ್ವಯ. ಈ ಸುಂದರ ವೇದಿಕೆಯಲ್ಲಿ ಅಕ್ಷರಗಳ ಸಂತೆ ನಡೆಯಲಿ, ಭಾವನೆಗಳ ಬೆಳೆ ಬೆಳೆಯಲಿ” ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಸಿ ಹರೀಶ್, ಎಸ್ ಎಂ ಶಿವಕುಮಾರ್, ಸಾ ವೆ ರಾ ಸ್ವಾಮಿ, ಕೆ ಶೆಟ್ಟಹಳ್ಳಿ ಅಪ್ಪಾಜಿ, ಜಯಶಂಕರ್ ಕಡತನಾಳು, ಚಂದ್ರಶೇಖರಯ್ಯ ಕುಂತಿಬೆಟ್ಟ, ಶ್ವೇತ ಪ್ರಕಾಶ್, ಕಲ್ಕುಣಿ ಲೋಕೇಶ್, ಕ್ಯಾತನಹಳ್ಳಿ ಶ್ರೀನಿವಾಸ್, ಧನಂಜಯ ಪಾಂಡವಪುರ, ಗಾನಸುಮಾ ಪಟ್ಟ ಸೋಮನಹಳ್ಳಿ, ಸೇರಿದಂತೆ ಸುಮಾರು 25 ಕವಿಗಳು ಕಾವ್ಯ ವಾಚಿಸಿದರು.

ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ ಅಧ್ಯಕ್ಷ ಮುಡಿಗೆರೆ ರಮೇಶ್ ಕುಮಾರ್, ಬೆಳಗೊಳ ಮೌಂಟ್ ಪೋರ್ಟ್ ಅಂಗವಿಕಲರ ಶಾಲೆ ಶಿಕ್ಷಕಿ ಶಕುಂತಲಾ ಹಾಗೂ ಮೈಸೂರು ಎನ್ ಎ ಬಿ ವೃತ್ತಿ ಬೋಧಕರಾದ ಕೆ ಎಂ ಪುಟ್ಟರಾಜು ರವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ: ಮಂಡ್ಯ | ವಿದ್ಯಾನಗರದಲ್ಲಿ ಟಿಪ್ಪು ಕಾಲದ ಸ್ಮಾರಕ; 73 ಅಡಿ ಎತ್ತರದ ಮೆಮೋರಿಯಲ್ ಪಿಲ್ಲರ್‌ಗೆ ಬೇಕಿದೆ ರಕ್ಷಣೆ

ಕಾರ್ಯಕ್ರಮದಲ್ಲಿ ದಿವ್ಯಾಂಗ ಸೇವಾ ಚಾರಿಟಬಲ್ ಟ್ರಸ್ಟ್ ನ ಅಧ್ಯಕ್ಷ ರಂಗನಾಥ್, ಕ್ಯಾತನಹಳ್ಳಿ ಡಿವೈನ್ ಸ್ಟಾರ್ಕ್ ಅಧ್ಯಕ್ಷ ಎಂ ಪಿ ಗಂಗಾಧರ್, ವಿ ಎ ಪಾಟೀಲ್, ಬನಶಂಕರಿ ಡಯಾಗ್ನೋಸ್ಟಿಕ್, ಶ್ರೀರಂಗಪಟ್ಟಣ, ಆರತಿ ಉಕ್ಕಡ ಅಹಲ್ಯಾದೇವಿ ಟ್ರಸ್ಟ್ ಅಧ್ಯಕ್ಷ ಎಂ ಚಂದ್ರು, ಸಾಂಸ್ಕೃತಿಕ ಸಂಘಟಕರು ಕೆ ಎo ಕೃಷ್ಣೇಗೌಡ ಕಿಲಾರ, ಮೈಸೂರು ಶ್ರವಣ ದೋಷವುಳ್ಳ ಮಕ್ಕಳ ಶಿಕ್ಷಕರ ಸಂಘದ ಗೌರವಾಧ್ಯಕ್ಷ ನಟರಾಜು, ಬೆಂಗಳೂರು ವಕೀಲರು ಕೆ ಜ್ಞಾನೇಶ್ ಶ್ರೀಧರ್ ಹಳೇಬೀಡು, ಶಿವರಾಜ್ ಮುಂತಾದವರು ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಅಂಬೇಡ್ಕರ್ ಅವಹೇಳನ ಆರೋಪ: ವೇದಮೂರ್ತಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೊಲೀಸ್ ಇಲಾಖೆಯ ಬಗ್ಗೆ ಅವಹೇಳನಕಾರಿ ಹೇಳಿಕೆ...

ತಮಿಳು ಕಾಲೊನಿ ನಿವಾಸಿಗಳನ್ನು ‘ಭಯೋತ್ಪಾದಕರು’ ಎಂದಿರುವ ಆರೋಪ: ರವೀಂದ್ರ ವಿರುದ್ಧ FIR ದಾಖಲಿಸಲು ಆಗ್ರಹ

ಮಂಡ್ಯ ನಗರದ ತಮಿಳು ಕಾಲೊನಿ ನಿವಾಸಿಗಳನ್ನು ‘ತಮಿಳುನಾಡಿನಿಂದ ಬಂದವರು’, ‘ಭಯೋತ್ಪಾದಕರು’ ಎಂದು...

ಮಂಡ್ಯದ ನ್ಯೂ ತಮಿಳು ಕಾಲೊನಿಯಲ್ಲಿ ‘SIR’ ಗೊಂದಲ: 207 ಮತದಾರರು ಎಲ್ಲಿ ಹೋದರು?

ವಿಶೇಷ ತೀವ್ರ ಪರಿಷ್ಕರಣೆ (Special Intensive Revision–SIR) ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯ...

ಬರದ ನೆರಳಲ್ಲಿ 101 ತಾಲ್ಲೂಕುಗಳು; ಮೈಸೂರು-ಚಾಮರಾಜನಗರ-ಮಂಡ್ಯದಲ್ಲಿ ರೈತರ ಬದುಕಿಗೆ ಕಠಿಣ ಸವಾಲು

ಕರ್ನಾಟಕದಲ್ಲಿ 101 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವುದು ಕೇವಲ ಮಳೆ ಕಡಿಮೆಯಾಗಿದೆ...