ದೇಶದಲ್ಲಿ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ತಡೆಯಲು ಡಾ.ಸ್ವಾಮಿನಾಥನ್ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಆ.31 ರಂದು ಮಸ್ಕಿ ತಾಲೂಕಿನ ಸಂತೆಕಲ್ಲೂರು ಗ್ರಾಮದಲ್ಲಿ ರೈತ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಡಾ.ಎಂ.ಎಸ್.ಸಾಮಿನಾಥ ಆಯೋಗ ವರದಿ ಜಾರಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಹಸಿರು ಕ್ರಾಂತಿ ನಂತರ ದೇಶದ ಆಹಾರ ಉತ್ಪಾದನೆ ಆರು ಪಟ್ಟು ಹೆಚ್ಚಳವಾಗುವ ಜೊತೆಗೆ ಕೃಷಿ ಸಮಸ್ಯೆಗಳು ತಾರಕ್ಕೇರುತ್ತಿವೆ. ರೈತರು ಆದಾಯ ಹೆಚ್ಚಳವಾಗುವ ಬದಲು ಖರ್ಚು ಹೆಚ್ಚಳವಾಗಿ ಕೃಷಿ ಬಿಕ್ಕಟ್ಟಿಗೆ ಕಾರಣವಾಗಿದೆ. ಡಾ.ಸ್ವಾಮಿನಾಥನ್ ವರದಿ ಈಗಾಗಲೇ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೂ ಕೇಂದ್ರ ಸರ್ಕಾರ ಜಾರಿಗೆ ಮುಂದಾಗುತ್ತಿಲ್ಲ. ಕೂಡಲೇ ಆಯೋಗ ವರದಿ ಮಂಡನೆ ಜಾರಿಗೊಳಿಸುವ ಮೂಲಕ ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕಿದೆ ಎಂದರು.
ಮಾರಕವಾಗಿರುವ ಮೂರು ಕಾಯ್ದೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಜಾಗೃತಿ ಸಮಾವೇಶ ನಡೆಯಲಿದೆ. ಆವತ್ತಿನ ದಿನ ಸಂತೆಕಲ್ಲೂರಿನ ಕೃಷಿ ಋಷಿ ಎಂದು ಖ್ಯಾತವಾಗಿರುವ ಘನ ಮಠದ ಕಲ್ಯಾಣ ಮಂಟಪದವರಿಗೆ ರೈತ ಯಾತ್ರೆ ನಡೆಯಲಿದೆ. ಸಮಾವೇಶದ ಸಾನಿಧ್ಯವನ್ನು ಘನಮಠದ ಶ್ರೀ ಗುರುಬಸವ ಮಹಾಸ್ವಾಮಿಗಳು, ಶ್ರೀ ಶಶಿಕಾಂತ ಪಡಸಲಗಿ ಸನ್ಯಾಸಿಗಳು ಇಂಚಗೇರಿಮಠ, ಉಟಕನೂರಿನ ಶ್ರೀ ಮರಿಬಸವ ದೇಶಿಕೇಂದ್ರ ಮಹಾಸ್ವಾಮಿಗಳು, ಮಸ್ಕಿ ಗಚ್ಚಿನಮಠದ ಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತಿನ ಮಠದ ಶ್ರೀ ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯು ವಹಿಸಲಿದ್ದಾರೆ ಎಂದು ಹೇಳಿದರು.
ಸಮಾವೇಶದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜೇರಿ ಉದ್ಘಾಟಿಸಿ, ಅಧ್ಯಕ್ಷತೆಯನ್ನು ಶರಣಪ್ಪ ಮರಳಿ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಪೂವಿತಾ,ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ಞಾಂಗಿರಿ, ಮಹಿಳಾ ರೈತ ಮುಖಂಡರುಗಳಾದ ಎಚ್. ಮೀನಾಕ್ಷಿ, ಶಿವಾನಂದ ಮುಗಳಹಾಳ, ಮಹೇಶಗೌಡ ಸುಬೇದಾರ, ರಾಜುಪವಾರ ,ವಿದ್ಯಾಸಾಗರ ಸೇರಿದಂತೆ ವಿವಿಧ ಜಿಲ್ಲೆ, ರಾಜ್ಯ ಮುಖಂಡರುಗಳು ಭಾಗವಹಿಸಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲೂಕುಗಳ ರೈತ ಬಾಂಧವರು ಭಾಗವಹಿಸುವಂತೆ ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಸಿಂಧನೂರು | ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆ ತಡೆಗೆ ರೈತ ಸಂಘ ಆಗ್ರಹ
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಾಮಯ್ಯ ಜವಳಗೇರಾ, ನರಸಪ್ಪ ದೇವಸೂಗೂರು, ಲಿಂಗಪ್ಪ, ಹನುಮಂತ್ರಾಯ ದೊರೆ, ಚನ್ನಬಸವ ನಾಯಕ, ವೆಂಕಟೇಶ ಮಸ್ಕಿ, ಚನ್ನಪ್ಪ, ಲಾಲಸಾಬ ನಾಡಗೌಡ ಮಸ್ಕಿ ಸೇರಿ ಅನೇಕರಿದ್ದರು.




