ಲಿಂಗಸುಗೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಸುರಿದ ಮಳೆ ವೇಳೆ ಸಂಭವಿಸಿದ ಸಿಡಿಲು ಬಡಿತದಿಂದ ಮೂರು ಎತ್ತು, ಒಂದು ಆಕಳು ಹಾಗೂ ಎಮ್ಮೆ ಮೃತಪಟ್ಟ ಘಟನೆ ನಡೆದಿದೆ.
ಲಿಂಗಸುಗೂರು ತಾಲ್ಲೂಕಿನ ಗುಂತಗೋಳ್ ಗ್ರಾಮದಲ್ಲಿ ಹನುಮಂತ ಎಂಬ ರೈತನ ಒಂದು ಎತ್ತು ಸಿಡಿಲು ಬಡಿದು ಮೃತಪಟ್ಟಿದೆ. ಇದೇ ವೇಳೆ ಶೀಲಹಳ್ಳಿ ಗ್ರಾಮದಲ್ಲಿ ದುರಗಮ್ಮ ಪತಿ ಮೈಲಾರಪ್ಪ ಅವರಿಗೆ ಸೇರಿದ ಒಂದು ಎತ್ತು, ಒಂದು ಆಕಳು ಹಾಗೂ ಒಂದು ಎಮ್ಮೆ ಮೃತಪಟ್ಟಿವೆ. ಮತ್ತೊಂದೆಡೆ ಹೊಸೂರು ಗ್ರಾಮದಲ್ಲಿ ಬುಡ್ಡಪ್ಪ ಪತಿ ಸೋಮಪ್ಪ ಅವರಿಗೆ ಸೇರಿದ ಒಂದು ಎತ್ತು ಸಿಡಿಲು ಬಡಿದು ಸಾವನ್ನಪ್ಪಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಸರ್ಕಾರಿ ಕಚೇರಿಯಲ್ಲಿ ಪಾರ್ಟಿ; ಪಂಚಾಯತ್ ರಾಜ್ ಉಪ ವಿಭಾಗದ ಎಇಇ ಸೇರಿ ಮೂವರು ಅಮಾನತು
ಘಟನೆ ಕುರಿತು ಮಾಹಿತಿ ತಿಳಿದ ಗ್ರಾಮ ಆಡಳಿತಾಧಿಕಾರಿಗಳಾದ ಬಸವರಾಜ್ (ವಿಎಒ, ಹಟ್ಟಿ) ಹಾಗೂ ದುರಗಪ್ಪ (ವಿಎಒ, ಗೊನವಾಟ್ಲಾ) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರೈತರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.




