ರಾಮದುರ್ಗ | ಗೊಡಚಿ ವೀರಭದ್ರ ಜಾತ್ರೆಯ ಘಮಲು: ಬಳುವಲ ಹಣ್ಣಿನ ಸಿಹಿ ಸಂಭ್ರಮ

Date:

ಬಳುವಲ ಹಣ್ಣು ಗೊಡಚಿ ಜಾತ್ರೆಗೆ ವಿಶಿಷ್ಟ ಗುರುತನ್ನು ನೀಡುವುದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿದ ಪರಂಪರೆಯ ಸಂಕೇತವಾಗಿಯೂ ಉಳಿದಿದೆ. ಇತ್ತ ರಂಗಭೂಮಿ ಕಲಾವಿದರಿಗೆ ವೇದಿಕೆ ನೀಡುವ ಮೂಲಕ ಈ ಜಾತ್ರೆ ಕಲೆಗೂ ಜೀವ ತುಂಬುತ್ತಿದೆ. ಭಕ್ತಿ, ಬದುಕು ಮತ್ತು ಸಂಸ್ಕೃತಿ ಒಂದಾಗಿ ಬೆರೆತಿರುವ ಗೊಡಚಿ ಜಾತ್ರೆ ಉತ್ತರ ಕರ್ನಾಟಕದ ಆತ್ಮವನ್ನು ಪ್ರತಿಬಿಂಬಿಸುವ ಜೀವಂತ ಸಾಂಸ್ಕೃತಿಕ ಹಬ್ಬವಾಗಿದೆ.

ಉತ್ತರ ಕರ್ನಾಟಕದ ಧಾರ್ಮಿಕ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಗೊಡಚಿ ವೀರಭದ್ರೇಶ್ವರ ಜಾತ್ರೆ ಕೇವಲ ಧಾರ್ಮಿಕ ಆಚರಣೆಗಳಿಗಷ್ಟೇ ಸೀಮಿತವಲ್ಲ. ಈ ಜಾತ್ರೆ ಜನಜೀವನ, ನಂಬಿಕೆ ಮತ್ತು ಆಹಾರ ಸಂಸ್ಕೃತಿಯನ್ನು ಒಟ್ಟುಗೂಡಿಸುವ ವಿಶಿಷ್ಟ ಹಬ್ಬವಾಗಿದೆ. ಈ ಜಾತ್ರೆಯ ಆತ್ಮವೇ ಬಳುವಲ ಹಣ್ಣಿನ ಸಿಹಿ.

- Advertisement -

ಹೊಸ್ತಿಲ ಹುಣ್ಣಿಮೆಯಿಂದ ಆರಂಭವಾಗಿ ಐದು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುವ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದೇವರ ದರ್ಶನದ ಜತೆಗೆ ಜಾತ್ರೆಗೆ ಬಂದ ಪ್ರತಿಯೊಬ್ಬರೂ ಬಳುವಲ ಹಣ್ಣನ್ನು ಖರೀದಿಸದೇ ಹಿಂದಿರುಗುವುದಿಲ್ಲ. ಭಕ್ತರ ದೃಷ್ಟಿಯಲ್ಲಿ ಬಳುವಲ ಹಣ್ಣು ಗೊಡಚಿ ವೀರಭದ್ರೇಶ್ವರನ ಪ್ರಸಾದವಾಗಿದ್ದು, ಮನೆಗೆ ಕೊಂಡೊಯ್ಯುವುದು ಆಶೀರ್ವಾದವೆಂದು ಭಾವಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮ್ಯಾಕಲ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

ಘಮಲಿನಿಂದ ಕಂಗೊಳಿಸುವ ಜಾತ್ರಾ ವಾತಾವರಣ

ಜಾತ್ರೆಯ ದಿನಗಳಿಂದಲೇ ಗೊಡಚಿ ಸುತ್ತಮುತ್ತಲ ಪ್ರದೇಶಗಳು ಬಳುವಲ ಹಣ್ಣಿನ ಘಮಲಿನಿಂದ ಕಂಗೊಳಿಸುತ್ತವೆ. ನೂರಾರು ವ್ಯಾಪಾರಸ್ಥರು ಟ್ರ್ಯಾಕ್ಟರ್‌ಗಳಲ್ಲಿ ಸಾವಿರಾರು ಚೀಲಗಳಷ್ಟು ಬಳುವಲ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾರೆ. ಒಂದು ಜಾತ್ರೆಯ ಅವಧಿಯಲ್ಲಿ ಲಕ್ಷಾಂತರ ಹಣ್ಣುಗಳ ಮಾರಾಟವಾಗುವುದು ಇಲ್ಲಿನ ಆರ್ಥಿಕ ಚಟುವಟಿಕೆಯನ್ನೂ ಜೀವಂತಗೊಳಿಸುತ್ತದೆ.

ಬಳುವಲ ಹಣ್ಣಿನ ಪರಿಚಯ

ಭಾರತ ಮೂಲದ ಬಳುವಲ ಹಣ್ಣಿಗೆ ಕನ್ನಡದಲ್ಲಿ ಬೇಲ, ಬ್ಯಾಲ, ಮಳೂರ, ಮನ್ಮಥ ಪುಷ್ಪಫಲ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಸಂಸ್ಕೃತದಲ್ಲಿ ದಾದಿಫಲ, ದಂತಫಲ, ಗಂಧಫಲ ಸೇರಿದಂತೆ ಹಲವಾರು ಹೆಸರುಗಳಿವೆ. ಫೆರೋನಿಯಾ ಉಪವರ್ಗಕ್ಕೆ ಸೇರಿದ ಈ ಮರದ ಗೋಳಾಕಾರದ ಗಟ್ಟಿಯಾದ ಹಣ್ಣಿನಲ್ಲಿ ಸಿಹಿ ಹುಳಿ ರುಚಿಯ ತಿರುಳು ಮತ್ತು ಅನೇಕ ಸಣ್ಣ ಬೀಜಗಳು ಇರುತ್ತವೆ.

ಬಳುವಲ ಹಣ್ಣು 1

ಬಳುವಲ ಹಣ್ಣಿಗೆ ಧಾರ್ಮಿಕ ಮಹತ್ವದ ಜತೆಗೆ ಔಷಧೀಯ ಗುಣವೂ ಅಪಾರವಾಗಿದೆ. ಜೀರ್ಣಕ್ರಿಯೆಗೆ ಸಹಕಾರಿ, ವಾತ ಶಮನಕಾರಿ ಹಾಗೂ ಹೃದಯಕ್ಕೆ ಬಲ ನೀಡುವ ಗುಣಗಳಿಂದ ಇದು ಜನರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಕೆಮ್ಮು, ಗಂಟಲು ನೋವು, ಅತಿಸಾರ, ಪಿತ್ತದ ತೊಂದರೆಗಳಿಗೆ ಇದು ಉಪಯುಕ್ತವೆಂದು ಹಿರಿಯರು ಹೇಳುತ್ತಾರೆ. ಹಣ್ಣಿನ ಸೇವನೆಯು ನರಮಂಡಲವನ್ನು ಬಲಪಡಿಸಿ ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆಯೂ ಇದೆ.

ಬಳುವಲ ಹಣ್ಣು ವ್ಯಾಪಾರಸ್ಥ ಅಡಿಯಪ್ಪ ಮಾತನಾಡಿ, “ಚಿತ್ರದುರ್ಗದಿಂದ ಹಣ್ಣು ತರುತ್ತೇವೆ. ಹುಚ್ಚೆಳು ಅಮವಾಸ್ಯೆಯ ನಂತರ ಜಾತ್ರೆಗೆ ಸುಮಾರು 20 ದಿನಗಳ ಮುಂಚೆ ಹಣ್ಣು ತಂದು ಭೂಮಿಯಲ್ಲಿ ಅಗೆದು ಮುಚ್ಚಿ, ಮಣ್ಣು ಹಾಕಿ ಬೆಂಕಿ ಹಚ್ಚುವ ಮೂಲಕ ಸಂಸ್ಕರಣೆ ಮಾಡಲಾಗುತ್ತದೆ. ಕಳೆದ 30 ವರ್ಷಗಳಿಂದ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದು, ಈ ಬಾರಿ 200 ಚೀಲ ಬಳುವಲ ಹಣ್ಣು ಮಾರಾಟವಾಗಿದೆ. ಒಂದು ಡಜನ್‌ಗೆ ₹100ರಿಂದ ₹200ರವರೆಗೆ ಬೆಲೆ ಇದೆ. ವೈದ್ಯಕೀಯ ಗುಣಗಳಿರುವುದರಿಂದ ವ್ಯಾಪಾರ ಲಾಭದಾಯಕವಾಗಿದೆ” ಎಂದು ಹೇಳಿದರು.

ಬಳುವಲ ಹಣ್ಣು 2

ವ್ಯಾಪಾರಸ್ಥ ಬುಡ್ಡೆಸಾಬ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಶಿಕಾರಿಪುರದಿಂದ ಬಳುವಲ ಕಾಯಿ ತಂದು ಚೀಲಗಳಲ್ಲಿ ಸಂಗ್ರಹಿಸಲಾಗುತ್ತದೆ. ಐದು ದಿನಗಳ ಬಳಿಕ ಹಣ್ಣು ಪಕ್ವವಾಗುತ್ತದೆ. ಜಾತ್ರೆಯಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿದ್ದು, ಈ ಬಾರಿ 50 ಲೋಡ್ ಮಾರಾಟವಾಗಿದೆ” ಎಂದು ಹೇಳಿದರು.

ಅಬ್ದುಲ್ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ದಾವಣಗೆರೆಯಿಂದ ಬಳುವಲ ಹಣ್ಣು ತಂದು ವ್ಯಾಪಾರ ಮಾಡಲಾಗುತ್ತದೆ. ಕಾಯಿ ಒಡೆದು ಬೆಲ್ಲ ಹಾಕಿ ತಿನ್ನುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದು. ಈ ಬಾರಿ 200 ಚೀಲ ಮಾರಾಟ ಮಾಡಿದ್ದೇವೆ. ಭಕ್ತರು ಇದನ್ನು ವಿರಭದ್ರೇಶ್ವರ ಪ್ರಸಾದವೆಂದು ಖರೀದಿಸುತ್ತಾರೆ ಎಂದರು.

ಹುಬ್ಬಳ್ಳಿಯಿಂದ ಬಂದ ಪೂಜಾ ಅವರು, ಈ ದಿನ.ಕಾಮ್ ಜತೆ ಮಾತನಾಡಿ, “ಕಳೆದ 25 ವರ್ಷಗಳಿಂದ ಜಾತ್ರೆಗೆ ಬರುತ್ತಿದ್ದೇನೆ. ಬಳುವಲ ಹಣ್ಣಿಗೆ ಬೆಲ್ಲ ಸೇರಿಸಿ ತಿನ್ನುವ ರುಚಿ ವಿಶೇಷ” ಎಂದು ಹೇಳಿದರು.

ಬೈಲಹೊಂಗಲದ ಶಿವಪ್ರಸಾದ ಅವರು ಈ ದಿನ.ಕಾಮ್ ಜತೆ ಮಾತನಾಡಿ, “ಗೊಡಚಿ ಜಾತ್ರೆಗೆ ಇರುವ ಇತಿಹಾಸದಂತೆ ಬಳುವಲ ಕಾಯಿಗೂ ಇತಿಹಾಸವಿದೆ. ಇದರಲ್ಲಿ ಸಿ ವಿಟಮಿನ್ ಇರುವುದರಿಂದ ಆರೋಗ್ಯಕರ. ಬಳುವಲ ಕಾಯಿ ಖರೀದಿಸಿದರೆ ಜಾತ್ರೆಗೆ ಬಂದ ಸಾರ್ಥಕತೆ ಎಂಬ ನಂಬಿಕೆ ಇದೆ” ಎಂದು ತಿಳಿಸಿದರು.

ರಂಗಭೂಮಿ ಕಲಾವಿದರ ಕೈ ಹಿಡಿಯುವ ಜಾತ್ರೆ

ಗೊಡಚಿ ಶ್ರೀ ವೀರಭದ್ರೇಶ್ವರ ಜಾತ್ರೆ ರಂಗಭೂಮಿ ಕಲಾವಿದರಿಗೆ ವರವಾಗಿ ಪರಿಣಮಿಸಿದೆ. ಜಾತ್ರೆಯ ಅವಧಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ನಾಟಕ ಕಂಪೆನಿಗಳು ಗೊಡಚಿಗೆ ಆಗಮಿಸುತ್ತವೆ.

ಬಳುವಲ ಹಣ್ಣು 4

ಜಾತ್ರೆಗೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರು ಸಾಮಾಜಿಕ ಸಂದೇಶ ಒಳಗೊಂಡ ನಾಟಕಗಳನ್ನು ಹೆಚ್ಚಿನ ಆಸಕ್ತಿಯಿಂದ ವೀಕ್ಷಿಸುವುದರಿಂದ ನಾಟಕ ಕಂಪನಿಗಳಿಗೆ ಉತ್ತಮ ಆದಾಯ ದೊರೆಯುತ್ತಿದೆ. ಇದರಿಂದ ರಂಗಭೂಮಿ ಕಲಾವಿದರಿಗೆ ಉದ್ಯೋಗಾವಕಾಶಗಳ ಜತೆಗೆ ಕಲೆಗೆ ಗೌರವ ಹಾಗೂ ಪ್ರೋತ್ಸಾಹವೂ ಸಿಗುತ್ತಿದೆ.

ಇದನ್ನೂ ಓದಿದ್ದೀರಾ? ಮನರೇಗಾ ಬದಲಿಗೆ ವಿಬಿ-ಜಿ ರಾಮ್‌ ಜಿ ಮಸೂದೆ: ಉದ್ಯೋಗ ಖಾತ್ರಿ ಯೋಜನೆಯ ಬದಲಾವಣೆಗಳೇನು?

ನಾಟಕಗಳ ಮೂಲಕ ಸಮಾಜಕ್ಕೆ ಸಂದೇಶ ನೀಡುವ ಕಲಾವಿದರಿಗೆ ಬೆಂಬಲ ನೀಡುತ್ತಿರುವ ಗೊಡಚಿ ಶ್ರೀ ವೀರಭದ್ರೇಶ್ವರ ಜಾತ್ರೆ, ಕಲಾವಿದರ ಕೈ ಹಿಡಿಯುವ ಜಾತ್ರೆಯಾಗಿ ಗುರುತಿಸಿಕೊಂಡಿದೆ.

ಗೊಡಚಿ ಶ್ರೀ ವಿರಭದ್ರೇಶ್ವರ ಜಾತ್ರೆ ಧಾರ್ಮಿಕ ಆಚರಣೆಯೊಂದರ ಮಿತಿಯನ್ನು ಮೀರಿ, ಜನಜೀವನ, ಆರೋಗ್ಯ, ಆರ್ಥಿಕತೆ ಮತ್ತು ಸಂಸ್ಕೃತಿಯನ್ನು ಒಟ್ಟುಗೂಡಿಸುವ ಮಹತ್ವದ ಹಬ್ಬವಾಗಿ ರೂಪುಗೊಂಡಿದೆ. ಭಕ್ತರ ನಂಬಿಕೆಯ ಕೇಂದ್ರವಾಗಿರುವ ಬಳುವಲ ಹಣ್ಣು ಗೊಡಚಿ ಜಾತ್ರೆಗೆ ವಿಶಿಷ್ಟ ಗುರುತನ್ನು ನೀಡುವುದರ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಸಾಗಿದ ಪರಂಪರೆಯ ಸಂಕೇತವಾಗಿಯೂ ಉಳಿದಿದೆ. ಇತ್ತ ರಂಗಭೂಮಿ ಕಲಾವಿದರಿಗೆ ವೇದಿಕೆ ನೀಡುವ ಮೂಲಕ ಈ ಜಾತ್ರೆ ಕಲೆಗೂ ಜೀವ ತುಂಬುತ್ತಿದೆ. ಭಕ್ತಿ, ಬದುಕು ಮತ್ತು ಸಂಸ್ಕೃತಿ ಒಂದಾಗಿ ಬೆರೆತಿರುವ ಗೊಡಚಿ ಜಾತ್ರೆ ಉತ್ತರ ಕರ್ನಾಟಕದ ಆತ್ಮವನ್ನು ಪ್ರತಿಬಿಂಬಿಸುವ ಜೀವಂತ ಸಾಂಸ್ಕೃತಿಕ ಹಬ್ಬವಾಗಿದೆ.

WhatsApp Image 2025 11 17 at 5.27.06 PM
ಸುನಿಲ್ ಹಂಪನ್ನವರ
+ posts

ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಸುನಿಲ್ ಹಂಪನ್ನವರ
ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮೇಯಲು ಬಿಟ್ಟ ದನ ಟೆಂಪೋದಲ್ಲಿ ಪತ್ತೆ; 24 ಗಂಟೆಯೊಳಗೆ ನಾಲ್ವರು ಪೊಲೀಸ್ ಬಲೆಗೆ!

ಮೇಯಲು ಬಿಟ್ಟಿದ್ದ ದನವನ್ನು ಅಕ್ರಮವಾಗಿ ಟೆಂಪೋದಲ್ಲಿ ಸಾಗಿಸುತ್ತಿದ್ದರೆಂದು ಆರೋಪಿಸಿ ದಾಖಲಾಗಿದ್ದ ಪ್ರಕರಣಕ್ಕೆ...

ಕಸ್ತೂರಿರಂಗನ್ ವರದಿ ವಿರುದ್ಧ ಆಕ್ರೋಶ: ಶೃಂಗೇರಿ ಬಂದ್‌ಗೆ ರೈತ ಸಂಘಟನೆಗಳ ಬೆಂಬಲ

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಕಸ್ತೂರಿರಂಗನ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಇಂದು...

ಚಿಕ್ಕಮಗಳೂರು | ಕುಕ್ಕೂಡಿಗೆ ರವೀಂದ್ರ: ಇಒ ಅಧಿಕಾರಿಗೆ ಹಲ್ಲೆ, ಜೀವ ಬೆದರಿಕೆ; ಪ್ರಕರಣ ದಾಖಲು 

ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರ್ ವ್ಯಾಪ್ತಿಯ ಹೇರೂರು ಬಳಿ ದಿ.19 ರಂದು ಮಾನ್ಯ...

ಕಾಂಗ್ರೆಸ್‌ಗೆ ಸವನಳ್ಳಿ, ಗೊಣಸಗಿ ಗ್ರಾಮದ ಮುಖಂಡರ ಸೇರ್ಪಡೆ; ಗ್ರಾಮಗಳ ಅಭಿವೃದ್ಧಿಗೆ ಎಂ.ಬಿ ಪಾಟೀಲ ಕರೆ

ಹೊಸ ಹಾಗೂ ಹಿರಿಯ ಕಾರ್ಯಕರ್ತರು, ಮುಖಂಡರು ಒಗ್ಗಟ್ಟಾಗಿ ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು...