ಶಿವಮೊಗ್ಗ | ಐದನೇ ಬಾರಿ ಭರ್ತಿಯಾದ ಮಾಣಿ ಡ್ಯಾಂ

Date:

ಶಿವಮೊಗ್ಗ, ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಒಂದಾದ, ‘ಪರ್ವತಗಳ ಬಟ್ಟಲು’ ಎಂದು ಖ್ಯಾತಿ ಪಡೆದಿರುವ ಮಾಣಿ ಜಲಾಶಯ ಏಳು ವರ್ಷಗಳ ನಂತರ ಸಂಪೂರ್ಣವಾಗಿ ಭರ್ತಿಯಾಗಿದೆ.

- Advertisement -

ಈ ಹಿನ್ನೆಲೆಯಲ್ಲಿ ಜಲಾಶಯದ ಮೂರು ಕ್ರೆಸ್ಟ್‌ ಗೇಟ್‌ಗಳಿಂದ 2063 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗಿದ್ದು, ತೀರ ಪ್ರದೇಶದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕತ್ತಲೆಯಿಂದ ಬೆಳಕಿನತ್ತ ಸೌಜನ್ಯ ಹೋರಾಟ: ಸುಪ್ರೀಂ ಆದೇಶದೊಂದಿಗೆ ಮೂಡಿದ...

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣವು ಕೇವಲ ಒಂದು ಕಾನೂನು ಪ್ರಕ್ರಿಯೆಯಾಗಿ ಉಳಿಯದೆ, ಸಾರ್ವಜನಿಕ ಜಾಗೃತಿ ಮತ್ತು ನ್ಯಾಯದ ಪರವಾದ ಗಟ್ಟಿಯಾದ ಧ್ವನಿಯಾಗಿ ಮಾರ್ಪಟ್ಟಿದೆ. ಸುಪ್ರೀಂ ಕೋರ್ಟ್‌ನ ಈ ಹೊಸ ಆದೇಶವು ಸೌಜನ್ಯ ಕುಟುಂಬಕ್ಕೆ...

ವಿಜಯಪುರ | ಮಳೆ ಕೊರತೆಯಿಂದ ಮೇವಿಗೂ ಬರ: ಜಾನುವಾರು...

ಹಸಿರು ಮೇವು ಕಡಿಮೆಯಾಗಿ, ಸಂಗ್ರಹಿತ ಒಣಮೇವು ಖಾಲಿಯಾಗುತ್ತಿರುವುದರಿಂದ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಾಣಿಕೆ ಅವಲಂಬಿತ ಕುಟುಂಬಗಳ ಆದಾಯಕ್ಕೆ ಹೊಡೆತ ಬೀಳುವ ಭೀತಿ ಎದುರಾಗಿದೆ. ಬೋರ್‌ವೆಲ್‌ಗಳಲ್ಲಿನ ನೀರಿನ ಮಟ್ಟ ಕುಸಿತ ಮತ್ತು ಹೊರ ಜಿಲ್ಲೆ/ರಾಜ್ಯಗಳಿಂದ...

ತುಳುವಿಗೆ ಅಧಿಕೃತ ಮಾನ್ಯತೆ | ಭಾಷಾ ಬೆಳವಣಿಗೆಗೆ ಇಷ್ಟೇ...

ತುಳು ಭಾಷೆಗೆ ಸಿಗುವ ಹೊಸ ಸ್ಥಾನಮಾನ ಭಾಷಾ ಹೋರಾಟದ ಅಂತಿಮ ಗುರಿಯಾಗಬಾರದು. ಬದಲಾಗಿ ಅದೊಂದು ಹೊಸ ಅಧ್ಯಾಯದ ಆರಂಭವಾಗಬೇಕು. ಸರ್ಕಾರಿ ಯೋಜನೆಗಳು, ಶೈಕ್ಷಣಿಕ ಪೋಷಣೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಂಬಲ ಸಿಕ್ಕಾಗ ಮಾತ್ರವೇ...

ರಾಜ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಡ್ಯಾಂ ಭರ್ತಿಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಕುಂದಾಪುರ ತಾಲೂಕಿನ ಹಾಲಾಡಿ ಬಳಿ ಅರಬ್ಬಿ ಸಮುದ್ರ ಸೇರುತ್ತಿದ್ದ ವರಾಹಿ ನದಿಗೆ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಸಮೀಪದಲ್ಲಿ, ಬೆಟ್ಟಗಳ ನಡುವೆ ಈ ಜಲಾಶಯವನ್ನು ಕಟ್ಟಲಾಗಿದೆ.

ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಪಶ್ಚಿಮಘಟ್ಟ ಪ್ರದೇಶದ ಕಣಿವೆಗಳಲ್ಲಿರುವ ಒಟ್ಟು 11 ಗುಡ್ಡಗಳಿಗೆ ತಡೆಗೋಡೆಗಳನ್ನು ನಿರ್ಮಿಸಲಾಗಿದೆ.

ಇವುಗಳನ್ನು ಸ್ಥಳೀಯವಾಗಿ ‘ಪಲ್ಲಣಕಟ್ಟೆ’ಗಳು ಎಂದು ಕರೆಯುತ್ತಾರೆ.

ಎತ್ತರದ ಪ್ರದೇಶದಲ್ಲಿನ ಬೆಟ್ಟಗಳನ್ನು ಕೂಡಿಸಿ ನಿರ್ಮಿಸಿರುವುದರಿಂದ, ಮಾಣಿ ಡ್ಯಾಂಗೆ ‘ಪರ್ವತಗಳ ಮೇಲಿನ ಬಟ್ಟಲು’ ಎಂದು ಕರೆಯಲಾಗುತ್ತದೆ.

ಜಲಾಶಯದೊಳಗೆ ವರಾಹಿ ನದಿ ಮುಳುಗಿ ಹೋಗಿದ್ದು, ಕಣಿವೆ ಸುತ್ತಮುತ್ತಲ ಮಳೆ ನೀರೇ ಇದರ ಮುಖ್ಯ ಆಧಾರವಾಗಿದೆ. ಹೀಗಾಗಿ, ಧಾರಾಕಾರ ಮಳೆ ಸುರಿದರೂ ಒಳಹರಿವು ಅಪರೂಪವಾಗಿ 10 ಸಾವಿರ ಕ್ಯೂಸೆಕ್ ದಾಟುತ್ತದೆ.31.13 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ 29 ಟಿಎಂಸಿ ನೀರು ಸಂಗ್ರಹಗೊಂಡಿದೆ. ಗರಿಷ್ಠ 954.36 ಮೀಟರ್ ನೀರಿನ ಮಟ್ಟ ಹೊಂದಿರುವ ಮಾಣಿ ಡ್ಯಾಂನಲ್ಲಿ ಈ ಬಾರಿ 594.19 ಅಡಿ ನೀರು ಸಂಗ್ರಹಗೊಂಡಿದ್ದು, ಬಹುತೇಕ ಭರ್ತಿಯಾಗಿದೆ.

ಡ್ಯಾಂನಲ್ಲಿ ಸಂಗ್ರಹಗೊಂಡ ನೀರನ್ನು ಬಳಸಿ ಅಣೆಕಟ್ಟೆ ವಿದ್ಯುದಾಗಾರದ ಬಳಿ 9 ಮೆಗಾವ್ಯಾಟ್ ಮತ್ತು ಉಡುಪಿ ತಾಲೂಕಿನ ಹೊಸಂಗಡಿ ಭೂಗರ್ಭ ವಿದ್ಯುದಾಗಾರದಲ್ಲಿ 460 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.

ಐದನೇ ಬಾರಿಗೆ ಭರ್ತಿಯಾದ ಡ್ಯಾಂ 1978 ರಲ್ಲಿ ನಿರ್ಮಿಸಿದಾಗಿನಿಂದ, ಇದುವರೆಗೆ ಮಾಣಿ ಡ್ಯಾಂ ಕೇವಲ ಐದು ಬಾರಿ ಮಾತ್ರ ಸಂಪೂರ್ಣ ಭರ್ತಿಯಾಗಿದೆ.

ಈ ಹಿಂದೆ 1994, 2006, 2007, 2013 ಮತ್ತು 2018ರಲ್ಲಿ ಜಲಾಶಯ ಭರ್ತಿಯಾಗಿತ್ತು. ಈ ಬಾರಿ ಜಲಾನಯನ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಮಾಣಿ ಜಲಾಶಯ ಭರ್ತಿಯಾಗಿದೆ. ಈ ಮೂಲಕ ರಾಜ್ಯದ ವಿದ್ಯುತ್ ಸಮಸ್ಯೆಯನ್ನು ನೀಗಿಸಲು ಸಹಕಾರಿಯಾಗಿದೆ. ಜಲಾಶಯದ ವ್ಯಾಪ್ತಿಯಲ್ಲಿ ಇನ್ನಷ್ಟು ಮಳೆಯಾದರೆ, ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲು ಅಧಿಕಾರಿಗಳು ನಿರ್ಧರಿಸಿದ್ದು, ಈಗಾಗಲೇ ಮುನ್ನೆಚ್ಚರಿಕೆ ನೀಡಲಾಗಿದೆ.

ಸೆಪ್ಟೆಂಬರ್ 3 ರಂದು ಮುಖ್ಯ ಅಭಿಯಂತರರಾದ ಮಾದೇಶ್ ಅವರು ಪೂಜೆಯಲ್ಲಿ ಪಾಲ್ಗೊಂಡು ಬಾಗಿನ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಹೇಶ್, ಪ್ರಕಾಶ್, ಶಿವಕುಮಾರ್, ಪ್ರದೀಪ್, ಬಾಲಕೃಷ್ಣ ಶಾಸ್ತ್ರಿ, ಲೋಹಿತ್ ಸೇರಿದಂತೆ ಅನೇಕ ಅಧಿಕಾರಿಗಳು, ನೌಕರರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು. ನಂತರ ಡ್ಯಾಂ ಗೇಟ್‌ಗಳನ್ನು ತೆರೆದು ನೀರನ್ನು ಪಿಕಪ್ ಅಣೆಕಟ್ಟೆಗೆ ಹರಿಸಲಾಯಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ರೇಬೀಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಅಗತ್ಯ ಡಾ.ಗುರುಶಾಂತಪ್ಪ 

ರೇಬೀಸ್ ಖಾಯಿಲೆ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಕಾಣಸಿಗುವಂತಹದ್ದು. ಜಗತ್ತಿನಲ್ಲಿ ಸುಮಾರು 60,000...

ಚಿಕ್ಕಮಗಳೂರು | ಶಿಕ್ಷಣದೊಂದಿಗೆ ಸಂಸ್ಕಾರವನ್ನು ಮೈಗೂಡಿಸಿಕೊಳ್ಳಿ; ಡಾ.ಭೀಮೇಶ್ವರ ಜೋಷಿ

ಕಳಸ ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ...

ಚಿಕ್ಕಮಗಳೂರು | ಕುಡಿತ ಚಟ: ಹೆತ್ತ ತಂದೆಯನ್ನೇ ಹತ್ಯೆಗೈದ ಮಗ 

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ತರೀಕೆರೆ ತಾಲೂಕಿನ ವಡ್ಡರದಿಬ್ಬ ಗ್ರಾಮದಲ್ಲಿ ಕುಡಿತದ...