ಕೇಂದ್ರದ ತಾರತಮ್ಯ ನೋಡಿ ನಾವಿನ್ನೂ ಒಕ್ಕೂಟ ವ್ಯವಸ್ಥೆಯಲ್ಲಿ ಇರಬೇಕಾ: ಶಿವಲಿಂಗೇಗೌಡ ಪ್ರಶ್ನೆ

Date:

  • ನಮ್ಮ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ರಾಜ್ಯಭಾರ ಮಾಡುತ್ತಿಲ್ಲವೇ?
  • ನಾವು ಸಾಮಂತ ರಾಜರು, ಕೇಂದ್ರದವರು ಧೀಮಂತ ರಾಜರಾ?: ಕಿಡಿ

ಕೇಂದ್ರ ಸರ್ಕಾರದ ತಾರತಮ್ಯ ನೋಡಿಕೊಂಡು ಒಕ್ಕೂಟ ವ್ಯವಸ್ಥೆಯಲ್ಲಿ ನಾವು ಇನ್ನೂ ಇರಬೇಕಾ? ನಮ್ಮ ತೆರಿಗೆ ಹಣದಲ್ಲಿ ಕೇಂದ್ರ ಸರ್ಕಾರ ರಾಜ್ಯಭಾರ ಮಾಡುತ್ತಿಲ್ಲವೇ? ನಾವು ಸಾಮಂತ ರಾಜರು, ಅವರು (ಕೇಂದ್ರ ಸರ್ಕಾರ) ಧೀಮಂತ ರಾಜರಾ? ಎಂದು ಅರಸೀಕೆರೆ ಶಾಸಕ ಶಿವಲಿಂಗೇಗೌಡ ತೀವ್ರ ಬೇಸರದ ಮಾತುಗಳನ್ನು ಆಡಿದರು.

- Advertisement -

ಗುರುವಾರದ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಮಾತನಾಡಿ, “ಒಕ್ಕೂಟ ವ್ಯವಸ್ಥೆಯ ಅರ್ಥಕ್ಕೆ ಮಸಿ ಬಳಿಯುವ ರೀತಿ ಕೇಂದ್ರ ಸರ್ಕಾರ ನಡೆದುಕೊಂಡಿದೆ. ಸಾಕಷ್ಟು ಪ್ರಮಾಣದಲ್ಲಿ ಅಕ್ಕಿ ಇದ್ದರೂ ದ್ವೇಷ ರಾಜಕಾರಣಕ್ಕೆ ಅಕ್ಕಿ ನೀಡುತ್ತಿಲ್ಲ. ಬಡವರ ಮೇಲೆ ಕೇಂದ್ರಕ್ಕೆ ಎಷ್ಟು ಅಸಹನೆ ಇದೆ ಎಂಬುದು ಇದರಿಂದ ಅರ್ಥವಾಗುತ್ತದೆ” ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...

ಬೆಳ್ಳಿತೆರೆಯ ಮೇಲಿನ ಬಣ್ಣ: ಚಿತ್ರ ಚೌಕಟ್ಟಿನಲ್ಲಿ ರಂಗಿನಾಟ

ಸಿನೆಮಾ ಪರದೆಯ ಮೇಲಿನ ಬಣ್ಣವು ಸೌಂದರ್ಯಪ್ರಜ್ಞೆಯಷ್ಟೇ ಅಲ್ಲ, ತಾಂತ್ರಿಕ ಮಿತಿ ಮತ್ತು ರಾಜಕೀಯದ ಭಾಗವೂ ಹೌದು. ಆರಂಭದ ಕಪ್ಪು-ಬಿಳುಪಿನ ನೆರಳುಗಳಿಂದ ಇಂದಿನ ಅಲ್ಟ್ರಾ-ಸ್ಯಾಚುರೇಟೆಡ್ ಪರದೆಯವರೆಗೆ, ಸಿನೆಮಾದ ಸೌಂದರ್ಯ, ತಂತ್ರಜ್ಞಾನ ಮತ್ತು ಅಧಿಕಾರ ರಾಜಕಾರಣವನ್ನು...

‘ಪಿತೃಪ್ರಭುತ್ವವನ್ನು ಧ್ವಂಸ ಮಾಡಿ’: ಮನುವಾದ ಮತ್ತು ಫ್ಯಾಸಿಸಂ ವಿರುದ್ಧ...

ಸ್ವತಂತ್ರ ಭಾರತ 80 ವರ್ಷಗಳನ್ನು ಪೂರೈಸುತ್ತಿರುವಾಗ, ನಾವು ಕೇಳಬೇಕಾಗಿದೆ, ಆ ಮನಸ್ಥಿತಿ ಹೋಗಿದೆಯೇ? ಇಲ್ಲ. ಪುಸ್ತಕವನ್ನು ಸುಡಲಾಗಿರಬಹುದು, ಆದರೆ ಮನುಸ್ಮೃತಿಯ ಮನಸ್ಥಿತಿ, ಮನುವಾದ, ಹೆಚ್ಚು ಅತ್ಯಾಧುನಿಕ ಮತ್ತು ಅದೃಶ್ಯ ರೂಪಗಳಲ್ಲಿ ಅಸ್ತಿತ್ವದಲ್ಲಿದೆ.  ಪುಣೆಯಲ್ಲಿ ನಡೆದ...

ಶಿವಲಿಂಗೇಗೌಡ ಮಾತಿಗೆ ಆಕ್ಷೇಪ ಎತ್ತಿದ ಬಿಜೆಪಿ ಸದಸ್ಯರು ಅವರ ಆಡುವ ಪ್ರತಿ ಮಾತಿಗೂ ಅಡ್ಡಿಪಡಿಸಿದರು. ಇದರಿಂದ ಸಿಟ್ಟಾದ ಶಿವಲಿಂಗೇಗೌಡರು, “ನೀವು ವಿರೋಧ ಪಕ್ಷದಲ್ಲಿ ಇರುವವರು. ಪ್ರತಿಮಾತಿಗೂ ಹೀಗೆ ಅಡ್ಡಿಪಡಿಸಿ ಸದನದಲ್ಲಿ ಹೊಸ ಸಂಪ್ರದಾಯ ಆರಂಭಿಸಿದ್ದೀರಿ. ಜನರು ನಿಮ್ಮನ್ನು ಅಧಿಕಾರದಿಂದ ಕೆಳಗೆ ಇಳಿಸಿದರೂ ನಿಮಗೆ ಬುದ್ಧಿ ಬಂದಿಲ್ಲ” ಎಂದು ತರಾಟೆಗೆ ತೆಗೆದುಕೊಂಡರು.

ಮಾಜಿ ಸಚಿವ ಅಶ್ವತ್ಥನಾರಾಯಣ ಮಧ್ಯ ಪ್ರವೇಶಿಸಿ, “ಕಾಂಗ್ರೆಸ್‌ಗೆ ಹೋಗಿ ನೀವೇನು ಸಾಧಿಸಿದ್ರಿ ಮೊದಲು ಅದನ್ನು ಹೇಳಿ?” ಎಂದರು. ತಿರುಗೇಟು ನೀಡಿದ ಶಿವಲಿಂಗೇಗೌಡ, “ನೋಡಿ ಅಶ್ವತ್ಥನಾರಾಯಣ, ನಿಮಗೆ ತಾಕತ್ತು, ಧಮ್ಮು ಇದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ತೋರಿಸಿʼ’ ಎಂದು ಸವಾಲು ಹಾಕಿದರು.

‘ಕೇಂದ್ರದ ನಾಯಕರು ಮಾರ್ಕ್ಸ್‌ ಕೊಡುತ್ತಾರೆ’

ಲಕ್ಷ್ಮಣ ಸವದಿ ಅವರು ಶಿವಲಿಂಗೇಗೌಡ ಬೆಂಬಲಕ್ಕೆ ಎದ್ದು ನಿಂತು, “ಈ ಸದನದಲ್ಲಿ ಕಾಂಗ್ರೆಸ್‌ ಸದಸ್ಯರು ಪ್ರಸ್ತಾಪಿಸುವ ಪ್ರತಿ ವಿಚಾರಗಳಿಗೂ ಬಿಜೆಪಿ ಸದಸ್ಯರು ಗುಂಪಾಗಿ ಎದ್ದು ನಿಂತು ಏರುಧ್ವನಿಯಲ್ಲಿ ಮಾತನಾಡಲು ಹೋಗುತ್ತಾರೆ. ಕಾರಣ ಕೇಂದ್ರದ ನಾಯಕರು ಸದನದ ವಿಡಿಯೋ ನೋಡುತ್ತಿದ್ದು, ಇವರೆಲ್ಲರಿಗೂ ಅಂಕ ನೀಡುತ್ತಿದ್ದಾರೆ. ಇದಕ್ಕಾಗಿ ಇವರು ಈ ರೀತಿ ನಡೆದುಕೊಳ್ಳುತ್ತಿದ್ದಾರೆ” ಎಂದು ಛೇಡಿಸಿದರು.

ಅಶ್ವತ್ಥನಾರಾಯಣ ಮಧ್ಯ ಪ್ರವೇಶಿಸಿ, “ಕಾಂಗ್ರೆಸ್‌ನಲ್ಲಿ ನಿಮಗೆ ಏನು ಸ್ಥಾನಮಾನ ಸಿಕ್ಕಿದೆ ನೋಡಿ” ಎಂದು ವ್ಯಂಗ್ಯ ಮಾಡಿದರು. ಸವದಿ ತಿರುಗೇಟು ನೀಡಿ, “ನೋಡಿ ಅಶ್ವತ್ಥನಾರಾಯಣ, ನಿಮ್ಮ ತರ ಸ್ವಾಭಿಮಾನ ಬಿಟ್ಟು ಬದುಕುವ ರೂಢಿ ನನಗಿಲ್ಲ. ಸ್ವಾಭಿಮಾನಕ್ಕೆ ಪೆಟ್ಟಾಯಿತು. ಅಲ್ಲಿಂದ ಎದ್ದು ಬಂದೆ. ಗುಲಾಮಿ ಮನಸ್ಥಿತಿ ನನಗಿಲ್ಲ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ

ಶಿವಲಿಂಗೇಗೌಡ ಮತ್ತೆ ಭಾಷಣ ಆರಂಭಿಸುತ್ತಿದ್ದಂತೆ ಬಿಜೆಪಿ ಸದಸ್ಯರು ಮತ್ತೊಮ್ಮೆ ಅಡ್ಡಿಪಡಿಸಿದರು. ಕೆಂಡಾಮಂಡಲರಾದ ಶಿವಲಿಂಗೇಗೌಡ, “ನಿಮಗೆ ಇಷ್ಟು ಹೊಟ್ಟೆ ಉರಿ ಇದ್ದರೆ ನಾನಿನ್ನು ಮಾತನಾಡುವುದೇ ಇಲ್ಲ ಬಿಡಿ. ಬಡವರ ಬಗ್ಗೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರಶ್ನಿಸಿದರೆ ನಿಮಗೆ ಸಂಕಟವಾಗುತ್ತದೆ. ನಾನು ರೈತನ ಮಗ. ಈ ಅನ್ಯಾಯ ನೋಡಿಕೊಂಡು ನಿಮ್ಮ ತರ ಕೈಕಟ್ಟಿ ಕುಳಿತುಕೊಳ್ಳಲು ಆಗುವುದಿಲ್ಲ” ಎಂದು ಸಾತ್ವಿಕ ಸಿಟ್ಟಿನಿಂದ ಉತ್ತರಿಸಿದರು.

ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ, “ವಿರೋಧ ಪಕ್ಷದ ಸದಸ್ಯರು ಸದನದ ಮರ್ಯಾದೆ ಹಾಳು ಮಾಡಬಾರದು. ಶಿವಲಿಂಗೇಗೌಡರಿಗೆ ಮಾತನಾಡಲು ಅವಕಾಶ ಕೊಡದೇ ಪ್ರತಿ ಮಾತಿಗೂ ತಡೆಯುತ್ತೀರಿ. ನಿಮಗೂ ಹಕ್ಕು ಇದೆ. ಅವರ ಮಾತುಗಳಲ್ಲಿ ತಪ್ಪು ಇದ್ದರೆ ನಂತರ ಸದನದ ಗಮನಕ್ಕೆ ತನ್ನಿ. ಅದನ್ನು ಬಿಟ್ಟು ಮಧ್ಯ ಮಧ್ಯ ಎದ್ದು ತೊಂದರೆ ಕೊಟ್ಟರೆ ಹೇಗೆ?” ಎಂದು ಬುದ್ಧಿ ಮಾತು ಹೇಳಿದರು.

”ಬಿಜೆಪಿಯವರ ಕ್ಷುಲ್ಲಕ ಬುದ್ಧಿ ನಡುವೆ ಮಾತನಾಡಲೇಬೇಕು ಎನ್ನುವ ಅವಶ್ಯಕತೆ ನನಗಿಲ್ಲ. ನಮಗೂ ಅವರಾಡುವ ಮಾತುಗಳಿಗೆ ಅಡ್ಡಿಪಡಿಸಲು ಬರುತ್ತದೆ. ಸದನದಲ್ಲಿ ಕೆಟ್ಟ ಸಂಪ್ರದಾಯ ಆರಂಭಿಸಿದ್ದಾರೆ. ಯಾವುದೇ ಮಾತು ತಾಳ್ಮೆಯಿಂದ ಕೇಳಿಸಿಕೊಳ್ಳುವ ಗುಣ ಇವರಿಗಿಲ್ಲ. ರಾಜ್ಯದ ಜನ ನೋಡುತ್ತಿದ್ದಾರೆ. ಲೋಕಸಭೆಯಲ್ಲೂ ಇವರಿಗೆ ತಕ್ಕ ಉತ್ತರವನ್ನು ನೀಡಲಿದ್ದಾರೆ” ಎಂದು ಮಾತು ಮುಗಿಸಿ ಕುಳಿತರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಡಾ.ಮೆಹೆವಿಶ್ ಮುಶೀರ್ ಶೇಖ್‌ಗೆ ಪಿಎಚ್‌ಡಿ ಪದವಿ

ಡಾ. ಮಮತಾ ಬಾಲಚಂದ್ರ ಅವರ ಮಾರ್ಗದರ್ಶನದಲ್ಲಿ ಹಾಗೂ ಡಾ. ನರೇಂದ್ರ ವಿ.ಜಿ....

ಯಾದಗಿರಿ | ₹2,500 ಬೆಳೆನಷ್ಟ ಪರಿಹಾರ ರೈತರ ನೋವಿಗೆ ಅವಮಾನ: ಭೀಮರಾಯ ಎಲ್ಹೇರಿ

ರಾಜ್ಯ ಸರ್ಕಾರ ರೈತರ ಬೆಳೆನಷ್ಟಕ್ಕೆ ಕೇವಲ ₹2,500 ಪರಿಹಾರ ಘೋಷಿಸಿರುವುದು ರೈತರ...

ಕಲಬುರಗಿ | ವರದಕ್ಷಿಣೆ ಕಿರುಕುಳ ಆರೋಪ; ಮಹಿಳೆ ಅನುಮಾನಾಸ್ಪದ ಸಾವು!

ವರದಕ್ಷಿಣೆ ಕಿರುಕುಳದ ಆರೋಪದ ನಡುವೆ ಮಹಿಳೆಯೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ನಗರದ...

ಕೊಡಗಿನಲ್ಲಿ ‘SIR’ ಪಬ್ಲಿಕ್ ಹಿಯರಿಂಗ್: ‘ಮತದಾನದ ಹಕ್ಕು ಕಸಿಯುವುದು ಅಷ್ಟು ಸುಲಭವಲ್ಲ’ -ಪ್ರಕಾಶ್ ರಾಜ್

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಎದುರಾಗುತ್ತಿರುವ ಸಮಸ್ಯೆಗಳು,...