ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ದುಬಾರೆಯಲ್ಲಿ ನಡೆದ ದಾರುಣ ಘಟನೆಯಲ್ಲಿ ಪ್ರವಾಸಕ್ಕೆ ಬಂದಿದ್ದ ಚೆನ್ನೈ ಮೂಲದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ಸಾಕಾನೆಗಳಾದ ಕಂಜನ್ ಹಾಗೂ ಜಯಮಾರ್ತಾಂಡ ಆನೆಗಳಿಗೆ ಸ್ನಾನ ಮಾಡಿಸುವ ಸ್ಥಳದಲ್ಲಿ ಏಕಾಏಕಿ ಕಾದಾಟ ಆರಂಭಗೊಂಡಿತು. ಈ ವೇಳೆ ಸ್ಥಳದಲ್ಲಿ ಪ್ರವಾಸಿಗರು ಕೂಡ ಇದ್ದರು ಎನ್ನಲಾಗಿದೆ.
ಆನೆಗಳ ಕಾದಾಟದ ವೇಳೆ ನಿಯಂತ್ರಣ ತಪ್ಪಿದ ಆನೆಯೊಂದು ಚೆನ್ನೈ ಮೂಲದ ಕುಟುಂಬದ ಮಹಿಳೆಯ ಮೇಲೆ ಬಿದ್ದ ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡರು. ತಕ್ಷಣ ಸ್ಥಳೀಯರು ಹಾಗೂ ಕುಟುಂಬದ ಸದಸ್ಯರು ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಘಟನೆ ವೇಳೆ ಮಹಿಳೆಯ ಪತಿ ತಮ್ಮ ಮಗುವನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತಿತ್ತು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಈ ಸುದ್ದಿ ಓದಿದ್ದೀರಾ?ಕುಶಾಲನಗರ | ಕೊಡಗಿನ ಆದಿವಾಸಿಗಳ ಹಿತಚಿಂತಕ ವಿ.ಎಸ್. ರಾಯ್ ಡೇವಿಡ್ ನಿಧನ
ಘಟನೆ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.




