ಗುಬ್ಬಿ | ಸಿಸಿ ರಸ್ತೆ ಕಾಮಗಾರಿಗೆ ರೈಲ್ವೆ ಮೇಲ್ಸೇತುವೆ ಕೆಲಸ ಅಡ್ಡಿ

Date:

ಒಂದು ಕೋಟಿ ರೂಗಳ ಸಿಸಿ ರಸ್ತೆಗೆ ಸರ್ಕಾರ ಎಸ್ ಸಿಪಿ ಯೋಜನೆ ಮೂಲಕ ಮಂಜೂರು ಮಾಡಿ ವರ್ಷದ ಬಳಿಕ ಕಾಮಗಾರಿ ಆರಂಭಿಸಿದ್ದಾರೆ. ಆದರೆ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅವಶ್ಯ ಬೀಮ್ ಗಳ ತಯಾರಿ ಈ ರಸ್ತೆಯಲ್ಲಿ ನಡೆದಿದ್ದು ಹೊಸ ಸಿಸಿ ರಸ್ತೆ ಕೆಲ ದಿನದಲ್ಲೇ ಕಿತ್ತುಹೋಗುವ ಕಾರಣ ಸಿಸಿ ರಸ್ತೆ ಕಾಮಗಾರಿ ಮುಂದೂಡುವಂತೆ ಬೆಲವತ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರನಹಳ್ಳಿ ಗೇಟ್ ಬಳಿಯ ದಲಿತ ಕಾಲೋನಿಯ ಸ್ಥಳೀಯರು ಒತ್ತಾಯಿಸಿದರು.

- Advertisement -

ಕಳೆದ ವರ್ಷ ಸರ್ಕಾರದ ಎಸ್ ಸಿಪಿ ಯೋಜನೆಯಲ್ಲಿ ಒಂದು ಕೋಟಿ ರೂಗಳು ವಿಶೇಷ ಅನುದಾನವಾಗಿ ನೀಡಿ 185 ಮೀಟರ್ ಉದ್ದದ ಸಿಸಿ ರಸ್ತೆ ಎರಡೂ ಬದಿಯಲ್ಲಿ ಬಾಕ್ಸ್ ಚರಂಡಿ ನಿರ್ಮಿಸಿ ಮಾಡಲು ಭೂಮಿ ಪೂಜೆ ನಡೆಸಲಾಗಿತ್ತು. ಆದರೆ ಇದೇ ಕಾಲೋನಿ ರಸ್ತೆಯು ಹಾರನಹಳ್ಳಿ ಸಂಪರ್ಕದ ರಸ್ತೆಯಾಗಿದೆ. ರಸ್ತೆಯ ಮತ್ತೊಂದು ತುದಿಯಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಅವಶ್ಯ ಬೀಮ್ ತಯಾರಿಕಾ ಘಟಕ ಆರು ತಿಂಗಳಿಂದ ಚಾಲ್ತಿಯಲ್ಲಿದೆ. ಇಲ್ಲಿಗೆ ಬರುವ ಕಚ್ಚಾ ವಸ್ತುಗಳು ಟನ್ ಲೆಕ್ಕದಲ್ಲಿ ಬೃಹತ್ ವಾಹನಗಳು ಓಡಾಡುತ್ತಿವೆ. ಈ ಸಮಯದಲ್ಲಿ ಹೊಸ ಸಿಸಿ ರಸ್ತೆ ಹಾಕಿದ್ದಲ್ಲಿ ಸಂಪೂರ್ಣ ಹಾಳಾಗುತ್ತದೆ. ಈ ಕಾರಣ ಸಿಸಿ ರಸ್ತೆ ಕಾಮಗಾರಿ ಮುಂದೂಡುವಂತೆ ಸ್ಥಳೀಯರು ಆಗ್ರಹಿಸಿ ನಡೆದಿದ್ದ ಕಾಮಗಾರಿ ಸ್ಥಗಿತ ಗೊಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಸಾಕ್ಷ್ಯ ಚಿತ್ರಗಳಿರದ ದೇಶವು ಚರಿತ್ರೆ ಇರದ ರಾಷ್ಟ್ರದಂತೆ ಎಂದಿದ್ದ...

ಚಿಲಿ ದೇಶದ ಜನರ ಸಾಮಾಜಿಕ ಬದುಕು ಹಾಗೂ ರಾಜಕೀಯ ಬೆಳವಣಿಗೆಗಳು ಹೆಣೆದುಕೊಂಡ ಘನವಾದ ಚರಿತ್ರೆಯ ಸಂಪುಟವಾಗಿ ಕಟ್ಟಿದ ಧೀಮಂತ ಸಿನೆಮಾ ಕಲಾವಿದ ಪ್ಯಾಟ್ರಿಷಿಯೊ ಗುಜ್ಮಾನ್, ಇತ್ತೀಚಿಗೆ ಇಲ್ಲವಾದರು. ಅವರ ಸೃಜನಶೀಲತೆ, ತುಡಿತ ಮತ್ತು...

ಸೂಕ್ತ ಸಮಯಕ್ಕಾಗಿ ಕಾಯುತ್ತಲೇ ಇರುವ ಕುಮಾರಸ್ವಾಮಿ!

“ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ" ಎಂದಿದ್ದಾರೆ ಕುಮಾರಸ್ವಾಮಿ. ಈ ಬಾರಿಯಾದರೂ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಾರೆಯೇ? ‘ಸ್ಪೋಟಕ ಹೇಳಿಕೆ’,...

ಹಬ್ಬ ಅಂದ್ರ ಕೂಡಿಸಬೇಕ್ರಿ, ರಾಜಕೀಯದ ವಿಷ ಬೀಜ ಬಿತ್ತೋದಲ್ಲ…

ಹಬ್ಬಗಳು ಬಾಲ್ಯದ ಆ ಎತ್ತಿನ ಬಂಡಿಯ ನೆನಪಿನಂತೆ ಎಲ್ಲರನ್ನೂ ಮುಗ್ಧವಾಗಿ ಕೂಡಿಸಬೇಕೇ ಹೊರತು, ಮತ್ತೊಬ್ಬರ ಧರ್ಮವನ್ನು ಕೆಣಕಿ, ರಾಜಕೀಯ ಲಾಭಕ್ಕಾಗಿ ಬೀದಿಯಲ್ಲಿ ಬೆಂಕಿ ಹಚ್ಚುವ ಪ್ರವೃತ್ತಿ ಧರ್ಮವೂ ಅಲ್ಲ, ಭಾರತೀಯ ಸಂಸ್ಕೃತಿಯೂ ಅಲ್ಲ....
IMG 20260617 WA0324

ಗ್ರಾಮೀಣ ಭಾಗಕ್ಕೆ ನಿರ್ಮಿಸುವ ಸಿಸಿ ರಸ್ತೆ ಲಘು ವಾಹನ ಸಂಚಾರಕ್ಕೆ ಯೋಗ್ಯವಾಗಿರುತ್ತದೆ. ವರ್ಷದಿಂದ ಸಿದ್ದವಾಗದ ಸಿಸಿ ರಸ್ತೆ ದಿಡೀರ್ ಎಂದು ಕಳೆದೆರಡು ದಿನದಿಂದ ಆರಂಭಿಸಿದ ಬೇಸರ ತಂದಿದೆ. ನಿಟ್ಟೂರು ಪುರ ರೈಲ್ವೆ ಗೇಟ್ ಬಳಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿಗೆ ಅವಶ್ಯ ಸಿಮೆಂಟ್ ಬೀಮ್ ಗಳು ಈ ಕಾಲೋನಿ ಸಮೀಪದಲ್ಲಿ ಪ್ಲಾಂಟ್ ನಿರ್ಮಿಸಿಕೊಂಡು ಸಿದ್ಧಪಡಿಸುತ್ತಿದ್ದಾರೆ. ಸುಮಾರು 285 ಬೀಮ್ ಗಳ ಸಾಗಾಣಿಕೆಗೆ ಹತ್ತಾರು ಚಕ್ರದ ಬೃಹತ್ ವಾಹನಗಳು ಜೊತೆಗೆ ಕ್ರೇನ್ ಗಳು ನಿತ್ಯ ಓಡಾಡುತ್ತವೆ. ಇಂತಹ ವಾಹನ ಸಂಚಾರಕ್ಕೆ ಹೊಸದಾಗಿ ಸಿದ್ಧಗೊಳ್ಳುವ ಸಿಸಿ ರಸ್ತೆ ಒಂದು ತಿಂಗಳಲ್ಲಿ ಸಂಪೂರ್ಣ ಹಾಳಾಗಿ ಕಿತ್ತು ಹೋಗುತ್ತದೆ ಎಂದು ಸ್ಥಳೀಯ ಗಂಗಣ್ಣ ಆರೋಪಿಸಿದರು.

ಆರೇಳು ಇಂಚಿನ ಸಿಸಿ ರಸ್ತೆಗೆ ಯಾವುದೇ ಕಬ್ಬಿಣ ಮ್ಯಾಟ್ ಅಳವಡಿಕೆ ಮಾಡಿರುವುದಿಲ್ಲ. ಇಂತಹ ರಸ್ತೆಯಲ್ಲಿ ಬಾರಿ ವಾಹನಗಳು, ಟ್ರಕ್ ಗಳು, ಕ್ರೇನ್ ಗಳು ಓಡಾಟ ಎಷ್ಟು ಸೂಕ್ತ ಎಂಬುದು ಕಾಮಗಾರಿಯ ಗುತ್ತಿಗೆದಾರರು, ಸಂಬಂಧಪಟ್ಟ ನಿರ್ಮಿತಿ ಕೇಂದ್ರದ ಅಧಿಕಾರಿಗಳು, ಮೇಲ್ಸೇತುವೆ ಎಂಜಿನಿಯರ್ ಗಳು ಪರಿಶೀಲನೆ ನಡೆಸಬೇಕಿದೆ. ನಿರ್ಮಿತಿ ಕೇಂದ್ರ ಟಾಕ್ಸ್ ಫೋರ್ಸ್ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ದಲಿತರ ಕಾಲೋನಿಗೆ ಬಂದು ಸ್ಥಳ ಪರಿಶೀಲಿಸಿ ಈ ಹೊಸ ಸಿಸಿ ರಸ್ತೆಯನ್ನು ರೈಲ್ವೆ ಮೇಲ್ಸೇತುವೆ ನಿರ್ಮಾಣ ನಂತರ ಮಾಡಬೇಕು ಎಂದು ಸ್ಥಳೀಯ ಜಗದೀಶ್ ಮನವಿ ಮಾಡಿದರು.

“ಹಾರನಹಳ್ಳಿ ಗೇಟ್ ಬಳಿಯ ಕಾಲೋನಿ ರಸ್ತೆಗೆ ಒಂದು ಕೋಟಿ ರೂಗಳ ಸಿಸಿರಸ್ತೆ ಕಾಮಗಾರಿ ತಡವಾಗದಂತೆ ಬೇಗ ಕೆಲಸ ಮುಗಿಸಲು ಸೂಚನೆ ನೀಡಿದ್ದು, ತಕ್ಷಣ ಕೆಲಸ ಆರಂಭಿಸಿದ್ದಾರೆ. ಆದರೆ ರೈಲ್ವೆ ಸೇತುವೆ ಕಾಮಗಾರಿಯ ಬೀಮ್ ತಯಾರಿಕೆ ಈ ರಸ್ತೆಯಲ್ಲಿ ನಡೆದಿದ್ದು ಬೃಹತ್ ವಾಹನ ಓಡಾಟದ ಬಗ್ಗೆ ಗ್ರಾಮಸ್ಥರ ದೂರು ಬಂದಿದೆ. ಈ ಹಿನ್ನಲೆ ಪರ್ಯಾಯ ರಸ್ತೆಯ ಹುಡುಕಾಟ ನಡೆಸಿದ್ದೇವೆ. ಜೊತೆಗೆ ರಸ್ತೆಯ ಅರ್ಧ ಭಾಗ ಸಿಸಿ ಅಳವಡಿಸಿ ಮತ್ತೂಂದು ಅರ್ಧ ಭಾಗ ತಡವಾಗಿ ಮಾಡುವ ಆಲೋಚನೆ ಮಾಡಿದ್ದೇವೆ. ಎಲ್ಲದಕ್ಕೂ ಮೇಲ್ಸೇತುವೆ ಎಂಜಿನಿಯರ್ ಗಳು ಸ್ಥಳಕ್ಕೆ ಬಂದ ನಂತರ ಸೂಕ್ತ ಪರಿಹಾರ ಸಿಗಲಿದೆ ಎಂದು ತುಮಕೂರು  ನಿರ್ಮಿತಿ ಕೇಂದ್ರ ಸಹಾಯಕ ಇಂಜಿನಿಯರ್ ಸಿದ್ದೇಶ್ ಮಾಹಿತಿ ನೀಡಿದರು 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ ಸಮೀಪ ಚಿರತೆ ಓಡಾಟ: ಆತಂಕದಲ್ಲಿ ನಾಗರಿಕರು

ಗುಬ್ಬಿ ಪಟ್ಟಣದ ಹೊರವಲಯದ ರಾಯವಾರ ಗ್ರಾಮದ ಮನೆಯೊಂದರ ಬಳಿ ಚಿರತೆ ಓಡಾಡಿರುವ...

ತುಮಕೂರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಯಾರಿಗೆ?: ಹೈಕಮಾಂಡ್ ಮುಂದೆ ಬಣ, ಸಾಮಾಜಿಕ ಸಮೀಕರಣದ ಸವಾಲು

ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಸಂಘಟನಾ ಭವಿಷ್ಯ, ಸಾಮಾಜಿಕ ಸಮೀಕರಣ, ಮಹಿಳಾ ಪ್ರಾತಿನಿಧ್ಯ...

ಮಧುಗಿರಿ | ಪಿಎಚ್‌ಡಿ ಪದವಿ ಪಡೆದ ಕೃಷ್ಣಮೂರ್ತಿಗೆ ಅಭಿನಂದನೆ

ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಮಂಡ್ಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಚಿತ್ತಪ್ಪ...