ತುಮಕೂರು | ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸಿಲ್ಲ : ಡಾ. ಗಂಗಾಧರ್ ಬಾಣಸಂದ್ರ ಆರೋಪ

Date:

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಮೀಸಲಾತಿ ನಿಯಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ ಎಂದು ಮಾದರ ಮಹಾಸಭಾ ಜಿಲ್ಲಾ ವಿದ್ಯಾರ್ಥಿ ಘಟಕದ ಅಧ್ಯಕ್ಷ ಡಾ. ಗಂಗಾಧರ್ ಬಾಣಸಂದ್ರ ಆರೋಪಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಲೇಜು ಶಿಕ್ಷಣ ಇಲಾಖೆಯು ಜೂನ್ 19, 2026ರ ಸರ್ಕಾರದ ಆದೇಶ ಹಾಗೂ ಜುಲೈ 18ರಂದು ಹೊರಡಿಸಿದ ಅಧಿಸೂಚನೆಯಲ್ಲಿ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರದ ಜಾರಿಯಲ್ಲಿರುವ ಮೀಸಲಾತಿ ನಿಯಮಗಳನ್ನು ಅನುಸರಿಸುವುದಾಗಿ ಸ್ಪಷ್ಟಪಡಿಸಿತ್ತು. ಆದರೆ ಕೌನ್ಸೆಲಿಂಗ್ ಹಂತಕ್ಕೆ ಬಂದಾಗ ಮೀಸಲಾತಿ ಅನುಷ್ಠಾನಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ದೂರಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಮೀಸಲಾತಿ ಅನುಸರಿಸದಿರುವುದು ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿದೆ. ಸರ್ಕಾರವೇ ಹೊರಡಿಸಿದ ಆದೇಶ ಮತ್ತು ಜಾರಿಯಲ್ಲಿರುವ ಒಳಮೀಸಲಾತಿಯನ್ನು ನೇಮಕಾತಿ ಪ್ರಕ್ರಿಯೆಯಲ್ಲಿ ಅಳವಡಿಸಿಕೊಳ್ಳದಿರುವುದು ಸರ್ಕಾರದ ಧೋರಣೆಯನ್ನು ಪ್ರಶ್ನಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ.

ಕಾಲೇಜು ಶಿಕ್ಷಣ ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಒಟ್ಟು ಬೋಧನಾ ಕಾರ್ಯಭಾರ ಸುಮಾರು 2.45 ಲಕ್ಷ ಗಂಟೆಗಳಿದ್ದು, ಖಾಯಂ ಅಧ್ಯಾಪಕರಿಗೆ ಸುಮಾರು 39ರಷ್ಟು ಕಾರ್ಯಭಾರ ಹಂಚಿಕೆಯಾಗಿದೆ. ಉಳಿದ ಸುಮಾರು 61ರಷ್ಟು ಕಾರ್ಯಭಾರವನ್ನು ಅತಿಥಿ ಉಪನ್ಯಾಸಕರ ಮೂಲಕ ನಿರ್ವಹಿಸಲಾಗುತ್ತಿದೆ. ಸುಮಾರು 6,500 ಖಾಯಂ ಅಧ್ಯಾಪಕರಿದ್ದರೂ, ಉಳಿದ ಬೋಧನಾ ಕಾರ್ಯಭಾರಕ್ಕೆ ಸುಮಾರು 11,500 ಅತಿಥಿ ಉಪನ್ಯಾಸಕರನ್ನು ಅವಲಂಬಿಸಿರುವ ಪರಿಸ್ಥಿತಿ ಇದೆ. ಇಂತಹ ದೊಡ್ಡ ಪ್ರಮಾಣದ ನೇಮಕಾತಿಯಲ್ಲಿ ಮೀಸಲಾತಿ ಅನುಷ್ಠಾನಗೊಳ್ಳದಿರುವುದು ವಿವಿಧ ಸಮುದಾಯಗಳ ಪ್ರಾತಿನಿಧ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಶೇಷವಾಗಿ ವಿಶೇಷ ಚೇತನ ಅತಿಥಿ ಉಪನ್ಯಾಸಕರಿಗೆ ಪ್ರಸಕ್ತ ಆಯ್ಕೆ ಪ್ರಕ್ರಿಯೆಯಿಂದ ಅನ್ಯಾಯವಾಗಿದೆ ಎಂದು ಡಾ. ಗಂಗಾಧರ ಆರೋಪಿಸಿದ್ದಾರೆ. 2024 ಮತ್ತು 2025ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಗಳಲ್ಲಿ ವಿಶೇಷ ಚೇತನರಿಗೆ ಅವರ ದೈಹಿಕ ಹಾಗೂ ಭೌಗೋಳಿಕ ಸವಾಲುಗಳನ್ನು ಪರಿಗಣಿಸಿ ಹುದ್ದೆ ಮತ್ತು ಸ್ಥಳೀಯ ಪ್ರಾತಿನಿಧ್ಯದಲ್ಲಿ ಆದ್ಯತೆ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಪ್ರಕ್ರಿಯೆಯಲ್ಲಿ ಆ ಆದ್ಯತೆಯನ್ನು ತೆಗೆದುಹಾಕಿ 10 ಅಂಕಗಳ ಕೃಪಾಂಕ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಸ್ಥಳೀಯ ಪ್ರಾತಿನಿಧ್ಯದ ಅವಕಾಶ ಇಲ್ಲದಿರುವುದರಿಂದ ವಿಶೇಷ ಚೇತನ ಅಭ್ಯರ್ಥಿಗಳು ತಮ್ಮ ತವರು ಜಿಲ್ಲೆ ಹಾಗೂ ಕುಟುಂಬದ ಆಸರೆಯನ್ನು ತೊರೆದು ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ. ಸಾರಿಗೆ ಮತ್ತು ಮೂಲಸೌಕರ್ಯಗಳ ಕೊರತೆಯ ನಡುವೆ ಇಂತಹ ಅಭ್ಯರ್ಥಿಗಳಿಗೆ ಇದು ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿ ಹೆಚ್ಚಿನ ಸಂಕಷ್ಟ ಉಂಟುಮಾಡಬಹುದು ಎಂದು ಅವರು ಹೇಳಿದ್ದಾರೆ.

ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಆರಂಭಿಕ ಆದೇಶದಲ್ಲಿ ತಿಳಿಸಿರುವಂತೆ ಒಳಮೀಸಲಾತಿ ಸೇರಿದಂತೆ ಸಮಗ್ರ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ವಿಶೇಷ ಚೇತನ ಅಭ್ಯರ್ಥಿಗಳಿಗೆ ಹಿಂದಿನ ಮಾನದಂಡಗಳಂತೆ ಕೌನ್ಸೆಲಿಂಗ್‌ನಲ್ಲಿ ಪ್ರಥಮ ಆದ್ಯತೆ ನೀಡಿ, ಸಾಧ್ಯವಾದಷ್ಟು ಅವರ ತವರು ಜಿಲ್ಲೆಯ ಕಾಲೇಜುಗಳಲ್ಲೇ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಡಾ. ಗಂಗಾಧರ್ ಬಾಣಸಂದ್ರ ಒತ್ತಾಯಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ತಂದೆ-ತಾಯಂದಿರ ಹಾರೈಕೆಯೇ ನಿಜವಾದ ಆರಾಧನೆ : ಶಾರದಾಂಬ ಟ್ರಸ್ಟ್ ನಲ್ಲಿ ಗಾಂಧಿ ಜಯಂತಿ

ತುಮಕೂರು ನಗರದ ದೇವರಾಯಪಟ್ಟಣದಲ್ಲಿರುವ ಶ್ರೀ ಶಾರದಾಂಬ ಟ್ರಸ್ಟ್ ವೃದ್ಧಾಶ್ರಮದಲ್ಲಿ ಮಹಾತ್ಮಾ ಗಾಂಧೀಜಿ...

ಮೇವು ಬ್ಯಾಂಕ್‌ಗಾಗಿ ರೈತರ ರಣಕಹಳೆ: ಗೋವುಗಳೊಂದಿಗೆ ತುಮಕೂರಿನತ್ತ ರೈತರ ಜಾಥಾ!

ಬರದ ಬರೆಗೆ ಬೆಂದ ಜಾನುವಾರುಗಳಿಗೆ ಮೇವು ಕೊಡಿ ಎಂದು ಆಗ್ರಹಿಸಿ ತಿಪಟೂರಿನಿಂದ...

ಮಧುಗಿರಿ | ಎಚ್.ರಂಗಸ್ವಾಮಯ್ಯ ಗೆ ಪಿ.ಎಚ್ ಡಿ ಪ್ರದಾನ

ತುಮಕೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪ್ರಾಧ್ಯಾಪಕ ಡಾ.ಸುರೇಶ.ಕೆ.ಸಿ....

ತುಮಕೂರು | ಗಾಂಧೀಜಿಯವರ ಸತ್ಯ, ಅಹಿಂಸೆ ಮಾರ್ಗ ವಿಶ್ವಕ್ಕೇ ಮಾದರಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ಭಾರತಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಅನುಸರಿಸಿದ ಸತ್ಯ ಮತ್ತು...