ತುಮಕೂರು | ಆದಾಯ ಗಳಿಕೆಗೆ ಡಿಜಿಟಲ್ ಮಾಧ್ಯಮ ಬಳಸಿ : ಗಿರೀಶ್ ಕನಕಪುರ

Date:

ಯೂಟ್ಯೂಬ್ ಒಂದು ನಾವೆಲ್ಲ ದಿನನಿತ್ಯ ಬಳಸುವ ಟೂಲ್. ಪ್ರಪಂಚದಾದ್ಯಂತ 2ನೇ ಸರ್ಚ್ ಇಂಜಿನ್ ಆಗಿ ಕೆಲಸ ಮಾಡ್ತಾ ಇದೆ. ಯೂಟ್ಯೂಬ್ ನಿಂದ ನಾವು ಆದಾಯವನ್ನು ಗಳಿಸಬಹುದು ಎಂದು ರಾಮ್ ಜಿ ಪ್ರೋಡಕ್ಷನ್ ಕ್ರಿಯೆಟೀವ್ ಹೆಟ್ ಗಿರೀಶ್ ಕನಕಪುರ ಅಭಿಪ್ರಾಯಪಟ್ಟರು

- Advertisement -

ತುಮಕೂರು ನಗರದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದಲ್ಲಿ ರೇಡಿಯೋ ಸಿದ್ಧಾರ್ಥ 90.8 ಎಫ್. ಎಂ, ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘ (ರಿ), ತುಮಕೂರು ಇವರ ವತಿಯಿಂದ ಮಾಧ್ಯಮಗಳ ಸವಾಲು ಮತ್ತು ಬರವಣಿಗೆ ಕುರಿತು ಎರೆಡು ದಿನಗಳ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಯೂಟ್ಯೂಬ್ ನ ಉದ್ಯಮವಾಗಿ ನೋಡಿದಾಗ, 2005 ರಲ್ಲಿ ಯೂಟ್ಯೂಬ್ ಸ್ಥಾಪನೆಯಾಯಿತು. 2006 ರಲ್ಲಿ ಗೂಗಲ್ ಸ್ವಾಧೀನಕ್ಕೆ ಯೂಟ್ಯೂಬ್ ಬರುತ್ತೇ ನಂತರ 2007ರಲ್ಲಿ ಪಾರ್ಟ್ನರ್ಸ್ ಪ್ರೋಗ್ರಾಂ, 2015 ರಿಂದ ಮೊಬೈಲ್ ಕ್ರಾಂತಿ ಆಗುತ್ತೇ, ಯೂಟ್ಯೂಬ್ ಇವತ್ತು ಹೆಚ್ಚು ರೆವಿನ್ಯೂ ಆಗಿ ಸಂಪಾದಿಸುವ ಸಂಸ್ಥೆಯಾಗಿದೆ. ಯಾವುದೇ ಬಂಡವಾಳ ಹಾಕದೆ, ಆದಾಯ ತೆಗೆಯುವ ಏಕೈಕ ವೇದಿಕೆ ಯೂಟ್ಯೂಬ್ ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ ಮತ್ತೊಮ್ಮೆ ಯೋಚಿಸಬೇಕಾಗುತ್ತದೆ. ಮತ್ತೊಬ್ಬರ ಹಸಿವು ನಮ್ಮ ಮನಸ್ಸಿನಲ್ಲಿ ಸಂವೇದನೆ ಮೂಡಿಸದಿದ್ದರೆ, ನಮ್ಮ ಮಾನವೀಯತೆಯ ಸ್ವರೂಪವನ್ನೇ ಪರಿಶೀಲಿಸಬೇಕಾಗುತ್ತದೆ. ಆಧುನಿಕ ನಗರಗಳೆಂದರೆ ನೆನಪಾಗುವುದು ಸಿಲಿಕಾನ್...

ಲೈಂಗಿಕ ಕಿರುಕುಳ ಆರೋಪಕ್ಕೆ ಜಾತಿದೌರ್ಜನ್ಯ ಗುರಾಣಿಯೇ? ಸಂತ್ರಸ್ತೆಯ ವಿರುದ್ಧ...

ಸಿಇಸಿ ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಜಂತರ್ ಮಂತರ್ ಸಮೀಪ ನಡೆದ ಪ್ರತಿಭಟನೆಯಲ್ಲಿ ಮೂವರು ಮಹಿಳಾ ಪತ್ರಕರ್ತೆಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಎದುರಿಸುತ್ತಿರುವ ದೆಹಲಿ ಪೊಲೀಸ್ ಸಹಾಯಕ ಆಯುಕ್ತ (ಎಸಿಪಿ)...

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ: ಶಾಸಕ ಪ್ರದೀಪ್ ಈಶ್ವರ್...

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಾವು ರಾಜಕೀಯಕ್ಕೆ ಬರಲು ಮತ್ತು ಟಿಕೆಟ್ ಪಡೆಯಲು ಚಿಂತಾಮಣಿ ಶಾಸಕ ಹಾಗೂ ಮಾಜಿ ಸಚಿವ ಡಾ. ಎಂ.ಸಿ. ಸುಧಾಕರ್ ಅವರೇ ಕಾರಣ ಎಂದು ಬಹಿರಂಗವಾಗಿ ಹಲವಾರು...

3 ಕೋಟಿ ಜಾಗತಿಕ ಸಕ್ರಿಯ ಬಳಕೆದಾರರನ್ನು ಇಂದು ಯೂಟ್ಯೂಬ್ ಹೊಂದಿದೆ. ಕಡಿಮೆ ಬಂಡವಾಳದಲ್ಲಿ ವೈಯಕ್ತಿಕ ಬ್ರಾಂಡ್ ಕ್ರಿಯೇಟ್ ಮಾಡಬಹುದು  ಯುಟ್ಯೂಬ್ ನಲ್ಲಿ ಬ್ರ್ಯಾಂಡ್ ಖಾತೆಯ ಸೃಷ್ಟಿ, ದೃಶ್ಯ ಆಕರ್ಷಕವಾಗಿರಬೇಕು, ಕೀ ವರ್ಡ್ಸ್ ಬಳಕೆ ಮುಖ್ಯ. ಕಡ್ಡಾಯವಾಗಿ ಯುಟ್ಯೂಬ್ ನಲ್ಲಿ ಸುಧಾರಿತ ಫೀಚರ್ಸ್, ದ್ವಿ – ಹಂತದ ಸುರಕ್ಷತೆ, ಅಪ್ಲೋಡ್ ಡೀಫಾಲ್ಟ್ ಈ ಸೆಟ್ಟಿಂಗ್ ಗಳನ್ನು ಮಾಡಬೇಕು ಎಂದರು

ಯುಟ್ಯೂಬ್ ನಿಂದ ಆದಾಯ ಗಳಿಸುವ ಮಾರ್ಗಗಳೆಂದರೆ, ಗೂಗಲ್ ಆಡ್ಸ್ , ಬ್ರಾಂಡ್ ಸ್ಪಾನ್ಸರ್ಡ್, ಸ್ವಂತ ಡಿಜಿಟಲ್ ಕೋರ್ಸ್ ಮೂಲಕ ಆದಾಯಗಳಿಸಬಹುದು. ಚಾನೆಲ್ ನ ಯಶಸ್ವಿ ಸುವರ್ಣ ಸೂತ್ರಗಳೆಂದರೆ, ವಿಡಿಯೋ ಅಪ್ಲೋಡ್ ಸಿದ್ಧತೆ, ಸ್ಪಷ್ಟ ಧ್ವನಿಗೆ ಪ್ರಥಮ ಆದ್ಯತೆ, ಕಮ್ಯೂನಿಟಿ ಸಂಪರ್ಕ ಹೊಂದಿರಬೇಕು. ಯೂಟ್ಯೂಬ್ ನಲ್ಲಿ 60% ವಿಡಿಯೋಗಿಂತ ಶಬ್ಧಕ್ಕೆ ಹೆಚ್ಚು ಪ್ರಾಮುಖ್ಯತೆ. 

ಪ್ರೇಕ್ಷಕರನ್ನು ಆಕರ್ಷಿಸುವ ಕಲೆ ಹೊಂದಿರಬೇಕು. ಮೊದಲ 15 ಸೆಕೆಂಡ್ ವೀಡಿಯೊ ಕ್ರಿಯೇಟಿವ್ ಆಗಿರಬೇಕು. ವಿಷಯ ವಿಂಗಡಣೆ ಮಾಡಬೇಕು, ಸ್ಪಷ್ಟ ನಿರ್ದೇಶನ ಮಾಡಬೇಕು ಎಂದರು

1003388189

ಬೇಡಿಕೆ ಇರುವ ಶೈಕ್ಷಣಿಕ ಕ್ಷೇತ್ರಗಳೆಂದರೆ, ಕಾರ್ಪೊರೇಟೆಡ್ ಕೇಸ್ ಸ್ಟಡಿಗಳು, ತಾಂತ್ರಿಕ ಹಾಗೂ ಪ್ರೋಗ್ರಾಮಿಂಗ್ ಗಳು ಇವುಗಳಿಗೆ ಯುಟ್ಯೂಬ್ ನಲ್ಲಿ ಅತಿ ಹೆಚ್ಚು ಬೇಡಿಕೆ ಇವೆ. ಯಾವುದೇ ಅಂಶವನ್ನು ಕೃತಿಚೋರ ಮಾಡಬಾರದು, ಸ್ವತಃ ಬುದ್ಧಿವಂತಿಯಿಂದ ಕಂಟೆಂಟ್ ತಯಾರಿಸಬೇಕು. ಯೂಟ್ಯೂಬ್ ನಿಂದ ಬರುವ ಆದಾಯಕ್ಕೂ ತೆರಿಗೆ ಬೀಳುತ್ತವೆ ಎಂದರು

ಪತ್ರಕರ್ತ ಪ್ರೇಮ್ ಸಾಗರ್ ವಿ ಮಾತನಾಡಿ ದಿನನಿತ್ಯದ ಬಳಕೆಯಲ್ಲಿ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚಾಗಿದೆ. ಹಾಗೂ ಅತಿ ಹೆಚ್ಚಾಗಿ ಜನರೊಂದಿಗೆ ಬೆರೆಯಲು ಸೋಶಿಯಲ್ ಮೀಡಿಯಾದ ಮೂಲಕ ಸಂಪರ್ಕ ಬೆಳೆಸಬಹುದು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ತುಂಬಾ ದೊಡ್ಡ ಇಂಪ್ಯಾಕ್ಟ್ ಆಗಿ ಬದಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ತುಂಬ ಎಂಗೇಜ್ ಆಗಿರಬೇಕು ಎಂದರು

ಪತ್ರಕರ್ತರಿಗೂ , ಜನರಿಗೂ ಸೇತುವೆಯಾಗಿ ಸಾಮಾಜಿಕ ಜಾಲತಾಣ ಕೆಲಸ ಮಾಡುತ್ತಿದೆ. ಜನರ ಅಭಿಪ್ರಾಯ ಸಂಗ್ರಹಿಸಲು ನೆರವಾಗಿದೆ. ಜನರು ಬದಲಾದಂತೆ ನಾವು ಬದಲಾಗಬೇಕು, ವಿಷಯವನ್ನು ಕಡಿಮೆ ಪದ ಬಳಕೆ ಮಾಡಿ, ಹೆಚ್ಚಿನ ಪರಿಣಾಮ ಬೀರುವಂತೆ ಮಾಹಿತಿ ನೀಡಬೇಕು ಎಂದು ಹೇಳಿದರು

ಯಾಕೆ ಪತ್ರಕರ್ತರು ಸಾಮಾಜಿಕ ಜಾಲತಾಣ ಬಳಸಬೇಕು ಅಂದರೆ, ತಕ್ಷಣ ಮಾಹಿತಿ ಪಡೆಯಲು ಹಾಗೂ ಪ್ರಸ್ತುತ ವಿದ್ಯುಮಾನಗಳು ಬಗ್ಗೆ ತಿಳಿಯಲು.  ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯವಾಗಿ ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಮ್, ಯೂಟ್ಯೂಬ್, ಲಿಂಕ್ಡಿನ್, ವಾಟ್ಸಪ್, ಥ್ರೆಡ್, ಇತ್ಯಾದಿ ಆ್ಯಪ್ ಗಳ ಬಳಕೆ ಮಾಡ್ತಾರೆ ಇವುಗಳಲ್ಲಿ ಸದಾ ಆಕ್ಟಿವ್ ಆಗಿರಬೇಕು, ಹಾಗೂ ಇದರಲ್ಲಿ ಮುಖ್ಯವಾಗಿ ಕಂಟೆಂಟ್ ಮತ್ತು ಚಿತ್ರಗಳ ಬಳಕೆ ಮುಖ್ಯ. ಚಿತ್ರಗಳ ಮೂಲಕ ಹೆಚ್ಚಿನ ಜನರ ಗಮನ ಸೆಳೆಯಬಹುದು ಎಂದರು

ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಕೆಲಸ ಮಾಡಬೇಕು, ಸುದ್ದಿಯನ್ನು ತಕ್ಷಣ ತಪ್ಪಿಲದ್ದಂತೆ, ಅಪ್ಲೋಡ್ ಮಾಡಬೇಕು. ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ನೈಜವಾಗಿದಿಯ ಎಂದು ಮುಖ್ಯವಾಗಿ ತಿಳಿದು, ಪ್ರಸಾರ ಮಾಡಬೇಕು. ಫ್ಯಾಕ್ಟ್ ಚೆಕ್ ಮತ್ತು ವೆರಿಫಿಕೇಶನ್ ಮಾಡಬೇಕು. ಅಧಿಕೃತ ಆದೇಶ ಬರುವ ತನಕ ಸುದ್ದಿ ಪ್ರಚಾರ ಮಾಡಬಾರದು. ನಿರಂತರವಾಗಿ ವಿಷಯವನ್ನು ಜನರೊಂದಿಗೆ ಹಂಚಿಕೊಳ್ಳಬೇಕು. ಸ್ಥಳಕ್ಕೆ ಭೇಟಿ ನೀಡಿ ಸ್ವತಃ ಚಿತ್ರಗಳ ಸೆರೆ ಹಿಡಿಯುವುದು, ನಡೆದಿರುವ ಘಟನೆ ಆಧರಿಸಿ ಮಾಹಿತಿ ಬಿತ್ತರಿಸುವುದು. ವಿಶ್ವಾಸ ಹಾಗೂ ನಂಬಿಕೆ, ಬಾಂಧವ್ಯವನ್ನು ಸಾರ್ವಜನಿಕರೊಂದಿಗೆ ಬೆಳೆಸಿಕೊಳ್ಳಬೇಕು ಎಂದರು

ಭಾಷಾ ಬಳಕೆ ಸರಿಯಾಗಿರಬೇಕು, ಪ್ರತಿದಿನ ಕನಿಷ್ಠ 5-3 ಪೋಸ್ಟ್ 2 ವೀಡಿಯೊ ಗಳನ್ನೂ ಪೋಸ್ಟ್ ಮಾಡಬೇಕು, ಎಐ ಬಳಕೆ ಕಡಿಮೆ ಮಾಡಿ, ಜನರ ಅಭಿಪ್ರಾಯ ಸಂಗ್ರಹಿಸಿ, ಕೃತಕ ಬುದ್ಧಿಮತ್ತೆಯಿಂದ ವಿಷಯ ಸಂಗ್ರಹಿಸಿದರು ನಾವು ಮತ್ತೆ ತಿದ್ದುಪಡಿ ಮಾಡಿ ಬರೆಯಬೇಕು. ಹಲವಾರು ವೃತ್ತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೇ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಿ, ಪತ್ರಿಕೋದ್ಯಮ ತತ್ವಗಳನ್ನು ಅಳವಡಿಸಿಕೊಳ್ಳಿ, ಆದಷ್ಟು ಕಡಿಮೆ ಪೋಸ್ಟ್ ಮಾಡಿ,  ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಆಸಕ್ತರಿರಬೇಕು, ಹೆಚ್ಚಿನ ಸಂಪರ್ಕ ಬೆಳೆಸಿಕೊಳ್ಳಿ, ತಂತ್ರಜ್ಞಾನದಲ್ಲಿ ಹೆಚ್ಚಿನ ಕೌಶಲ್ಯಗಳನ್ನು ಹೊಂದಿರಬೇಕು ಎಂದರು

ಗೋಷ್ಠಿಯ ಕೊನೆಯಲ್ಲಿ, ಸಂಪನ್ಮೂಲ ವ್ಯಕ್ತಿಗಳೊಂದಿಗೆ ಯೂಟ್ಯೂಬ್ ಪ್ರವೃತ್ತಿಗಳು ಹಾಗೂ ಸಾಮಾಜಿಕ ಜಾಲತಾಣಗಳ ಕುರಿತು ಸಂವಾದ ನಡೆಯಿತು. ಹಾಗೂ ಗೌರವಾನ್ವಿತರಿಗೆ ಸನ್ಮಾನಿಸಲಾಯಿತು. 

ನೆನ್ನೆಯ ಗೋಷ್ಠಿಯ ಬಗ್ಗೆ ಪ್ರಿಂಟ್ ಮೀಡಿಯಾ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದವರು ವಿಷಯದ ಕುರಿತು ಅನಿಸಿಗಳನ್ನು ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಸಿ.ಡಿ.ಕೃಷ್ಣಮೂರ್ತಿ, ಸಹಾಯಕ ಪ್ರಾಧ್ಯಾಪಕರಾದ ಡಾ,ಜ್ಯೋತಿ, ನವೀನ್ ಎನ್.ಜಿ. ರೇಡಿಯೋ ವಿಭಾಗದ ಗೌತಮ್, ಹರೀಶ್ ಸೇರಿದಂತೆ ಪ್ರಿಂಟ್ ಮೀಡಿಯ ಮತ್ತು ಸೋಶಿಯಲ್ ಮೀಡಿಯಾ ಪತ್ರಕರ್ತರ ಸಂಘದ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಜಾಗತಿಕ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ನಾಲ್ವರಿಗೆ ಸ್ಥಾನ

 ಜಾಗತಿಕ ಶೈಕ್ಷಣಿಕ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಮತ್ತೊಂದು ಮಹತ್ವದ...

ತುಮಕೂರು ದಸರಾ | ಬೆಳಕಿನ ಹಬ್ಬದ ಹಿಂದೆ ಕತ್ತಲ ಲೆಕ್ಕ!

 ನಾಡಹಬ್ಬ ದಸರಾಕ್ಕೆ ತುಮಕೂರು ನಗರ ಸಜ್ಜಾಗುತ್ತಿದೆ. ನಗರದ ಪ್ರಮುಖ ರಸ್ತೆಗಳು, ವೃತ್ತಗಳು...

ತುಮಕೂರು | ನಕಲಿ ವೈದ್ಯರ ವಿರುದ್ಧ ಕ್ರಮಕ್ಕೆ ಜನಪ್ರತಿನಿಧಿಗಳ ಸಹಕಾರ ಅಗತ್ಯ : ಆರೋಗ್ಯ ಸಚಿವ ಯು.ಟಿ. ಖದರ್

 ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ.95ರಷ್ಟು ಅಗತ್ಯ ಸವಲತ್ತುಗಳು ಲಭ್ಯವಿದ್ದು, ಯಾವುದೇ ಕೊರತೆಗಳಿದ್ದರೆ...

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...